‘ಅಪ್ಪಂಗೆ ಹುಟ್ಟಿದ್ರೆ..’ ಹಾಡಿನ ಬಗ್ಗೆ ತಕರಾರು: ಸುದೀಪ್ ಕೊಟ್ಟ ಸ್ಪಷ್ಟನೆ ಏನು?
‘ಅಪ್ಪಂಗೆ ಹುಟ್ಟಿದ್ರೆ ತೊಡೆ ತಟ್ಟಿ ಬಾರೋ’ ಎಂಬ ಸಾಲು ‘ಮ್ಯಾಕ್ಸ್’ ಸಿನಿಮಾದ ಹಾಡಿನಲ್ಲಿ ಇದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆ ಎದುರಾಯಿತು. ಅದಕ್ಕೆ ಸುದೀಪ್ ಅವರು ಸ್ಪಷ್ಟನೆ ನೀಡಿದ್ದಾರೆ. ಬಿಗ್ ಬಾಸ್ನಲ್ಲಿ ನಡೆದ ಘಟನೆಗೂ ಈ ಸಿನಿಮಾದ ಸನ್ನಿವೇಶಕ್ಕೂ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ.
‘ಪ್ರಪಂಚದಲ್ಲಿ ಲೋಫರ್ಗಳು ಇರುತ್ತಾರೆ. ಹೆಣ್ಮಕ್ಕಳನ್ನು ಎತ್ತಾಕಿಕೊಂಡು ಹೋಗಿ ಡಿಕ್ಕಿಯಲ್ಲಿ ಹಾಕಿಕೊಳ್ತಾರೆ. ಅಂಥವರಿಗೆ ಹೇಳಿದ್ದು ಅಪ್ಪಂಗೆ ಹುಟ್ಟಿದ್ರೆ ಬಾರೋ ಅಂತ. ಒಳ್ಳೆಯವರಿಗೆ ಆ ಮಾತು ಹೇಳಿಲ್ಲ. ಮಿಸ್ಟೇಕ್ ಮಾಡಿಕೊಳ್ಳಬೇಕು. ಬೇರೆ ಹೀರೋಗಳಿಗೆ ಟಾಂಟ್ ಕೊಟ್ಟಿದ್ದಲ್ಲ. ಸಿನಿಮಾದಲ್ಲಿನ ವಿಲನ್ ಪಾತ್ರಕ್ಕೆ ಹೇಳಿದ್ದು. ನಿಮ್ಮ ಮನೆಯ ಹೆಣ್ಮಕ್ಕಳಿಗೆ ರಸ್ತೆಯಲ್ಲಿ ಯಾರಾದರೂ ತೊಂದರೆ ಕೊಟ್ಟರೆ ಶುದ್ಧ ಕನ್ನಡಲ್ಲಿ ಮಾತನಾಡುತ್ತೇವಾ? ಬಿಗ್ ಬಾಸ್ ಸಂದರ್ಭ ಬೇರೆ. ಇದು ಬೇರೆ’ ಎಂದಿದ್ದಾರೆ ಕಿಚ್ಚ ಸುದೀಪ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Dec 30, 2024 11:09 PM
Latest Videos