ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಮತ್ತೊಂದು ಸಾವು, ಅಣ್ಣನ ಸಾವಿನಿಂದ ಕಂಗೆಟ್ಟು ರೋದಿಸುತ್ತಿರುವ ತಂಗಿ
ನಮ್ಮ ಹುಬ್ಬಳ್ಳಿ ವರದಿಗಾರ ನೀಡುವ ಮಾಹಿತಿ ಪ್ರಕಾರ ಪ್ರಕಾಶ ಬಾರಕೇರ ಇಸ್ಕಾನ್ ನಲ್ಲಿ ಉದ್ಯೋಗಿಯಾಗಿದ್ದರು ಮತ್ತು ಅವರ ದುರಂತ ಸಾವಿನ ಹಿನ್ನೆಲೆಯಲ್ಲಿ ಸಂಸ್ಥೆಯು ಮೃತನ ಕುಟುಂಬಕ್ಕೆ ಪರಿಹಾರದ ರೂಪದಲ್ಲಿ ರೂ. 3 ಲಕ್ಷ ನೀಡಲು ಮುಂದಾಗಿದೆ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಸಹ ಪ್ರಕಾಶ್ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗುವ ಭರವಸೆಯನ್ನು ನೀಡಿದ್ದಾರೆ.
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಶೇಕಡ 80-90 ರಷ್ಟು ಸುಟ್ಟಗಾಯಗಳೊಂದಿಗೆ ನಗರದ ಕಿಮ್ಸ್ ಆಸ್ಪತ್ರೆ ಸೇರಿದ್ದ ಅಯ್ಯಪ್ಪ ಮಾಲೆಧಾರಿಗಳ ಪೈಕಿ ಪ್ರಕಾಶ್ ಬಾರಕೇರ ಎನ್ನುವವರು ಇಂದು ಬೆಳಗ್ಗೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಆಸ್ಪತ್ರೆಯ ಅವರಣದಲ್ಲಿ ಪ್ರಕಾಶ್ ಸಹೋದರಿ ಮತ್ತು ಇತರ ಸಂಬಂಧಿಕರು ದುಃಖದಲ್ಲಿ ರೋದಿಸುತ್ತಿದ್ದ ದೃಶ್ಯ ಮನ ಕಲಕುವಂತಿತ್ತು. ನಂಬಿದ ದೇವರು ಮೋಸ ಮಾಡಿಬಿಟ್ಟ ತಂದೆಯಂತಿದ್ದ ತನ್ನಣ್ಣನನ್ನು ಕಸಿದುಕೊಂಡು ಬಿಟ್ಟ ಎನ್ನುತ್ತ ಸಹೋದರಿ ಅಳುತ್ತಿದ್ದರು. ಪ್ರಕಾಶ್ ಬಾರಕೇರ ಅವರ ಸಾವಿನೊಂದಿಗೆ ಸಿಲಿಂಡರ್ ಸ್ಫೋಟಕ್ಕೆ ಬಲಿಯಾದವರ ಸಂಖ್ಯೆ ಎಂಟಕ್ಕೇರಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಸಿಲಿಂಡರ್ ಸ್ಫೋಟ: ಚಿಕಿತ್ಸೆ ಫಲಿಸದೆ ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ ಸಾವು
Latest Videos