RBI: ಈ ಎರಡು ಬಜಾಜ್ ಫೈನಾನ್ಸ್ ಸ್ಕೀಮ್ ಅಡಿಯಲ್ಲಿ ಸಾಲ ನೀಡದಂತೆ ಆರ್​ಬಿಐನಿಂದ ನಿರ್ಬಂಧ

Bajaj Finance: ಭಾರತೀಯ ರಿಸರ್ವ್ ಬ್ಯಾಂಕ್ ನಿಗದಿಪಡಿಸಿದ ಕೆಲ ನಿಯಮಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಬಜಾಜ್ ಫೈನಾನ್ಸ್ ಸಂಸ್ಥೆಯ ಕೆಲ ಸಾಲಗಳ ವಿತರಣೆಗೆ ನಿರ್ಬಂಧ ಹೇರಲಾಗಿದೆ. ಬಜಾಜ್ ಫೈನಾನ್ಸ್ ಸಂಸ್ಥೆಯ ಇಕಾಮ್ ಮತ್ತು ಇನ್​​ಸ್ಟಾ ಇಎಂಐ ಕಾರ್ಡ್ ಅಡಿಯಲ್ಲಿ ಹಣ ನೀಡುವುದನ್ನು ನಿಲ್ಲಿಸುವಂತೆ ಆರ್​ಬಿಐ ಸೂಚಿಸಿದೆ. ಈ ನಿರ್ದೇಶನ ನಿನ್ನೆ ನವೆಂಬರ್ 15ರಂದು ನೀಡಲಾಗಿದ್ದು, ತತ್​ಕ್ಷಣದಿಂದಲೇ ಜಾರಿಗೆ ಬರುತ್ತದೆ.

RBI: ಈ ಎರಡು ಬಜಾಜ್ ಫೈನಾನ್ಸ್ ಸ್ಕೀಮ್ ಅಡಿಯಲ್ಲಿ ಸಾಲ ನೀಡದಂತೆ ಆರ್​ಬಿಐನಿಂದ ನಿರ್ಬಂಧ
ಬಜಾಜ್ ಫೈನಾನ್ಸ್
Follow us
|

Updated on: Nov 16, 2023 | 11:36 AM

ನವದೆಹಲಿ, ನವೆಂಬರ್ 16: ಭಾರತೀಯ ರಿಸರ್ವ್ ಬ್ಯಾಂಕ್ ನಿಗದಿಪಡಿಸಿದ ಕೆಲ ನಿಯಮಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಬಜಾಜ್ ಫೈನಾನ್ಸ್ ಸಂಸ್ಥೆಯ (Bajaj Finance) ಕೆಲ ಸಾಲಗಳ ವಿತರಣೆಗೆ ನಿರ್ಬಂಧ ಹೇರಲಾಗಿದೆ. ಬಜಾಜ್ ಫೈನಾನ್ಸ್ ಸಂಸ್ಥೆಯ ಇಕಾಮ್ ಮತ್ತು ಇನ್​​ಸ್ಟಾ ಇಎಂಐ ಕಾರ್ಡ್ (Insta EMI) ಅಡಿಯಲ್ಲಿ ಹಣ ನೀಡುವುದನ್ನು ನಿಲ್ಲಿಸುವಂತೆ ಆರ್​ಬಿಐ ಸೂಚಿಸಿದೆ. ಈ ನಿರ್ದೇಶನ ನಿನ್ನೆ ನವೆಂಬರ್ 15ರಂದು ನೀಡಲಾಗಿದ್ದು, ತತ್​ಕ್ಷಣದಿಂದಲೇ ಜಾರಿಗೆ ಬರುತ್ತದೆ. ಈ ಎರಡು ಸ್ಕೀಮ್ ವಿಚಾರದಲ್ಲಿ ಸಂಸ್ಥೆಯು ಆರ್​ಬಿಐನ ಡಿಜಿಟಲ್ ಸಾಲ ಮಾರ್ಗಸೂಚಿಯ ಕೆಲ ನಿಯಮಗಳನ್ನು ಪಾಲಿಸಿಲ್ಲದಿರುವುದು ಈ ಕ್ರಮಕ್ಕೆ ಕಾರಣ ಎನ್ನಲಾಗಿದೆ.

ಈ ಎರಡು ವಿಭಾಗದಲ್ಲಿ ಸಾಲ ಪಡೆಯುವ ಗ್ರಾಹಕರಿಗೆ ಕೆಲ ಪ್ರಮುಖ ಮಾಹಿತಿಯನ್ನು ಬಜಾಜ್ ಫೈನಾನ್ಸ್ ಸಂಸ್ಥೆ ನೀಡಿಲ್ಲ. ಇದು ಪ್ರಮುಖ ನಿಯಮ ಉಲ್ಲಂಘನೆಗಳಲ್ಲಿ ಒಂದು. ಲೋಪದೋಷಗಳನ್ನು ಸರಿಪಡಿಸಿಕೊಂಡ ಬಳಿಕ ನಿರ್ಬಂಧಗಳನ್ನು ತೆರವುಗೊಳಿಸುವ ಬಗ್ಗೆ ಮರುಪರಿಶೀಲನೆ ನಡೆಸಲಾಗುವುದು ಎಂದೂ ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.

ಬಜಾಜ್ ಫೈನಾನ್ಸ್ ಸಂಸ್ಥೆಯ ಇನ್ಸ್​ಟಾ ಇಎಂಐ ಸ್ಕೀಮ್​ನಲ್ಲಿ ಕ್ರೆಡಿಟ್ ಕಾರ್ಡ್ ನೀಡಲಾಗುತ್ತದೆ. ಅದರಲ್ಲಿ ಶಾಪಿಂಗ್ ಮಾಡಿದರೆ ಬಡ್ಡಿರಹಿತ ಇಎಂಐ ಆಗಿ ಪರಿವರ್ತಿಸಬಹುದು.

ಇದನ್ನೂ ಓದಿ: ಈ ಶಿಕ್ಷಕರಿಗೆ 83 ಲಕ್ಷ ಸಂಬಳ ಕೊಡಿ; 10 ಸಾವಿರ ರಿಟೈರ್ಡ್ ಟೀಚರ್​ಗಳನ್ನು ಟ್ರೈನರುಗಳಾಗಿ ನೇಮಿಸುವಂತೆ ನಾರಾಯಣಮೂರ್ತಿ ಸಲಹೆ

ತನ್ನ ವ್ಯಾಪ್ತಿಯಲ್ಲಿರುವ ಬ್ಯಾಂಕು ಮತ್ತು ಹಣಕಾಸು ಸಂಸ್ಥೆಗಳಿಗೆ ಆರ್​ಬಿಐ ಹಲವು ಮಾರ್ಗಸೂಚಿಗಳನ್ನು ನೀಡಿರುತ್ತದೆ. ಇವುಗಳನ್ನು ಸರಿಯಾಗಿ ಪಾಲಿಸದೇ ಇದ್ದರೆ ಲೈಸೆನ್ಸ್ ರದ್ದು ಮಾಡುವುದು, ದಂಡ ಇತ್ಯಾದಿ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಈ ಹಿಂದೆ ಸಾಕಷ್ಟು ಸಂದರ್ಭದಲ್ಲಿ ಆರ್​ಬಿಐ ಇಂಥ ಕ್ರಮ ಕೈಗೊಂಡಿರುವುದಿದೆ.

ಇತ್ತೀಚೆಗೆ, ಪಂಜಾಬ್ ನ್ಯಾಷನಲ್ ಬ್ಯಾಂಕ್​ಗೆ 72 ಲಕ್ಷ ರೂ ದಂಡ ಹಾಕಲಾಗಿತ್ತು. ಫೆಡರಲ್ ಬ್ಯಾಂಕ್​ಗೆ 30 ಲಕ್ಷ ರೂ ದಂಡ ಬಿದ್ದಿತ್ತು. ಕೇರಳದ ಕೋಸಮಟ್ಟಂ ಫೈನಾನ್ಸ್ ಸಂಸ್ಥೆಗೂ 13.38 ಲಕ್ಷ ರೂ ದಂಡ ವಿಧಿಸಲಾಗಿತ್ತು. ಆರ್​ಬಿಐನ ನಿಯಮ ಉಲ್ಲಂಘನೆ ಕಾರಣಕ್ಕೆ ಇವುಗಳ ಮೇಲೆ ಆ ಕ್ರಮಗಳನ್ನು ಜರುಗಿಸಲಾಗಿತ್ತು.

ಇದನ್ನೂ ಓದಿ: ಭಾರತದ ಆರ್ಥಿಕತೆ ನಾಲ್ಕು ವರ್ಷದಲ್ಲಿ ಜಪಾನ್, ಜರ್ಮನಿಯನ್ನು ಮೀರಿಸಲಿದೆ: ನಿರ್ಮಲಾ ಸೀತಾರಾಮನ್

ಇದಲ್ಲದೇ, ಕೆವೈಸಿಯ ಕೆಲ ನಿಯಮಗಳನ್ನು ಪಾಲಿಸದೇ ಇದ್ದ ಕಾರಣಕ್ಕೆ ಎರಡು ವಾರದ ಹಿಂದೆ ಮರ್ಸಿಡೆಸ್ ಬೆಂಜ್ ಫೈನಾನ್ಷಿಯಲ್ ಸರ್ವಿಸಸ್ ಇಂಡಿಯಾ ಪ್ರೈ ಲಿ ಸಂಸ್ಥೆಗೆ ಆರ್​ಬಿಐ 10 ಲಕ್ಷ ರೂ ದಂಡ ಹಾಕಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ