ಕಡುಬಡವರಿಗೆ ಹಣಕಾಸು ವ್ಯವಸ್ಥೆ ತಲುಪುವಂತೆ ಮಾಡಿತು 2016ರ ಆಧಾರ್ ಕಾಯ್ದೆ: ವಿಕ್ರಮ್ಜಿತ್ ಬ್ಯಾನರ್ಜಿ
Gamechangers brought By government: ಆಧಾರ್ ಕಾಯ್ಕೆ ಭರ್ಜರಿ ಯಶಸ್ಸು ತಂದಿತು. ಆಧಾರ್ ಯೋಜನೆಗೆ ಅದು ಮಾನ್ಯತೆ ಕಲ್ಪಿಸಿತು. ಭಾರತೀಯ ಸಮಾಜವನ್ನು ಮೂಲಭೂತವಾಗಿ ಬದಲಾಯಿಸಿತು. ನಾಗರಿಕರಿಗೆ ಸಬ್ಸಿಡಿಗಳನ್ನು ತಲುಪಿಸುವಾಗ ಆಗುತ್ತಿದ್ದ ಸೋರಿಕೆಯನ್ನು ಇದು ತಡೆಯಿತು ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ವಿಕ್ರಮ್ಜಿತ್ ಬ್ಯಾನರ್ಜಿ ಹೇಳಿದ್ದಾರೆ.

ನವದೆಹಲಿ, ನವೆಂಬರ್ 16: ಭಾರತದ ಆಧಾರ್ ವ್ಯವಸ್ಥೆ ವಿಶ್ವದ ಗಮನ ಸೆಳೆದಿದೆ. ಹಲವು ರಾಷ್ಟ್ರಗಳು ಆಧಾರ್ ಮಾದರಿಯಲ್ಲಿ ನಾಗರಿಕರ ಗುರುತು ಯೋಜನೆ ಮಾಡಲು ಭಾರತ ಸರ್ಕಾರದ ನೆರವು ಯಾಚಿಸುತ್ತಿವೆ. 2010-11ರಲ್ಲೇ ಭಾರತದಲ್ಲಿ ಆಧಾರ್ ಯೋಜನೆ (Aadhaar Project) ಜಾರಿಗೆ ಬಂದಿತಾದರೂ ಅದು ಜನಸಾಮಾನ್ಯರಿಗೆ ಹಣಕಾಸು ವ್ಯವಸ್ಥೆ ತಲುಪಲು ಪುಷ್ಟಿ ಸಿಕ್ಕಿದ್ದು 2016ರಲ್ಲಿ. ಆ ವರ್ಷ ಸರ್ಕಾರ ರೂಪಿಸಿದ ಆಧಾರ್ ಕಾಯ್ದೆ ಭರ್ಜರಿ ಯಶಸ್ಸು ಕಂಡಿತು. ಹೆಚ್ಚುವರಿ ಸಾಲಿಸಿಟರ್ ಜನರಲ್ (ASG) ಆದ ವಿಕ್ರಮ್ಜಿತ್ ಬ್ಯಾನರ್ಜಿ ಈ ಬಗ್ಗೆ ಮನಿಕಂಟ್ರೋಲ್ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಆ ಆಧಾರ್ ಕಾಯ್ದೆಯಿಂದಾಗಿ ಹಣದ ಹರಿವು ಮತ್ತು ಮುಕ್ತ ಮಾರುಕಟ್ಟೆಯು (free market) ತಳಮಟ್ಟದ ಆರ್ಥಿಕ ವರ್ಗಗಗಳನ್ನು ತಲುಪಲು ಸಾಧ್ಯವಾಯಿತು ಎಂದು ಬ್ಯಾನರ್ಜಿ ಹೇಳಿದ್ದಾರೆ.
‘ಆಧಾರ್ ಕಾಯ್ಕೆ ಭರ್ಜರಿ ಯಶಸ್ಸು ತಂದಿತು. ಆಧಾರ್ ಯೋಜನೆಗೆ ಅದು ಮಾನ್ಯತೆ ಕಲ್ಪಿಸಿತು. ಭಾರತೀಯ ಸಮಾಜವನ್ನು ಮೂಲಭೂತವಾಗಿ ಬದಲಾಯಿಸಿತು. ನಾಗರಿಕರಿಗೆ ಸಬ್ಸಿಡಿಗಳನ್ನು ತಲುಪಿಸುವಾಗ ಆಗುತ್ತಿದ್ದ ಸೋರಿಕೆಯನ್ನು ಇದು ತಡೆಯಿತು. ಇದರಿಂದ ಉಳಿತಾಯವಾದ ಹಣವನ್ನು ಇತರ ಸ್ಕೀಮ್ಗಳಿಗೆ ಉಪಯೋಗಿಸಲು ಸಾಧ್ಯವಾಯಿತು,’ ಎಂದು ಅಡಿಶನಲ್ ಸಾಲಿಸಿಟರ್ ಜನರಲ್ ಅಭಿಪ್ರಾಯಪಟ್ಟಿದ್ದಾರೆ.
ಆಧಾರ್ ಕಾಯ್ದೆಯ ವಿಶೇಷತೆ ಏನೆಂದರೆ ಸರ್ಕಾರದ ಹಲವು ಕಲ್ಯಾಣ ಯೋಜನೆಗಳು ಮತ್ತು ಸಬ್ಸಿಡಿ ಸ್ಕೀಮ್ಗಳಿಗೆ ಆಧಾರ್ ಕಾರ್ಡ್ ದಾಖಲೆ ಒದಗಿಸುವುದನ್ನು ಕಡ್ಡಾಯ ಮಾಡಲಾಯಿತು. ಇದರಲ್ಲಿ ಮನ್ರೇಗಾ ಸೇರಿದಂತೆ ಹಲವು ಯೋಜನೆಗಳಿಗೂ ಈ ಕಾಯ್ದೆ ಅನ್ವಯ ಮಾಡಲಾಯಿತು. ಆಧಾರ್ ಅನ್ನು ಕಡ್ಡಾಯಗೊಳಿಸಿದ್ದಕ್ಕೆ ಕೆಲ ವರ್ಗಗಳಿಂದ ಆಕ್ಷೇಪಗಳು ವ್ಯಕ್ತವಾದರೂ ಸುಪ್ರೀಂಕೋರ್ಟ್ ಸಂವಿಧಾನ ಪೀಠ ಆಧಾರ್ ಕಾಯ್ದೆ ಪರವಾಗಿ 2018ರಲ್ಲಿ ತೀರ್ಪು ನೀಡಿತ್ತು.
ಇದನ್ನೂ ಓದಿ: ಆನ್ಲೈನ್ನಲ್ಲಿ ಹಂದಿ ಕಡಿಯುವ ಹಗರಣ ಟ್ರೆಂಡಿಂಗ್; ನಿತಿನ್ ಕಾಮತ್ ಉಲ್ಲೇಖಿಸಿದ ಈ ಸ್ಕ್ಯಾಮ್ ಏನು? ಯಾಕೆ ಇದು ಡೆಡ್ಲಿ?
ವಿಕ್ರಮ್ಜಿತ್ ಬ್ಯಾನರ್ಜಿ ಅವರು 2014ರಿಂದಲೂ ಸರ್ಕಾರಕ್ಕೆ ಎಎಸ್ಜಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ, ಅವರು ಈಗಿನ ಸರ್ಕಾರ ವಿವಿಧ ಯೋಜನೆಗಳನ್ನು ಹೇಗೆ ಜಾರಿಗೆ ತರಲಾಯಿತು ಎಂದು ಹತ್ತಿರದಿಂದ ಬಲ್ಲವರಾಗಿದ್ದಾರೆ. ಅವರ ಪ್ರಕಾರ ಕಳೆದ 9 ವರ್ಷದಲ್ಲಿ ಸರ್ಕಾರ ತಂದಿರುವ ಯೋಜನೆಗಳಲ್ಲಿ ಕೆಲ ಗೇಮ್ಚೇಂಜರ್ಗಳಿವೆ. ಅವುಗಳಲ್ಲಿ ಆಧಾರ್ ಕಾಯ್ದೆಯೂ ಒಂದು.
2014ರಿಂದ ಜಾರಿಗೆ ಬಂದ ಕೆಲ ಗೇಮ್ಚೇಂಜರ್ ಕ್ರಮಗಳು
- 2016ರ ಆಧಾರ್ ಕಾಯ್ದೆ
- 2016ರ ದಿವಾಳಿ ತಡೆ ಕಾಯ್ದೆ (IBC- Insolvency and Bankruptcy Code)
- 1996ರ ಆರ್ಬಿಟ್ರೇಶನ್ ಕಾಯ್ದೆಗೆ ತಿದ್ದುಪಡಿ
ಇದನ್ನೂ ಓದಿ: RBI: ಈ ಎರಡು ಬಜಾಜ್ ಫೈನಾನ್ಸ್ ಸ್ಕೀಮ್ ಅಡಿಯಲ್ಲಿ ಸಾಲ ನೀಡದಂತೆ ಆರ್ಬಿಐನಿಂದ ನಿರ್ಬಂಧ
ವಿಕ್ರಮ್ಜಿತ್ ಬ್ಯಾನರ್ಜಿ ಪ್ರಕಾರ ದಿವಾಳಿ ತಡೆ ಕಾಯ್ದೆ ಐಬಿಸಿ ಬಹಳ ಮುಖ್ಯ. ಐಬಿಸಿ ಬರುವ ಮುನ್ನ 1985ರ ಸಿಕ್ ಇಂಡಸ್ಟ್ರಿಯಲ್ ಕಂಪನೀಸ್ ಆ್ಯಕ್ಟ್ ಜಾರಿಯಲ್ಲಿತ್ತು. ಅದು ಪೂರ್ಣ ವೈಫಲ್ಯ ಕಂಡಿತ್ತು. ಸರ್ಕಾರ 2016ರಲ್ಲಿ ತಂದ ದಿವಾಳಿ ತಡೆ ಕಾಯ್ದೆಯಿಂದಾಗಿ ನೂರಾರು ಕಾರ್ಪೊರೇಟ್ ಕಂಪನಿಗಳು ದಿವಾಳಿ ಬೀಳುವುದು ತಪ್ಪಿದೆಯಂತೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ