LPG Cylinder Price: ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ; ಬೆಂಗಳೂರಿನಲ್ಲಿ ಈಗೆಷ್ಟಿದೆ ಗ್ಯಾಸ್ ಬೆಲೆ?

Commercial LPG Cylinder Price Updates: ನಾಲ್ಕು ಮಹಾನಗರಿಗಳಲ್ಲಿ 19 ಕಿಲೋ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆಗಳನ್ನು 57.50 ರೂಗಳಷ್ಟು ಇಳಿಕೆ ಮಾಡಲಾಗಿದೆ. ಮುಂಬೈನಲ್ಲಿ 1,728 ರೂ ಬೆಲೆಗೆ ಇಳಿದಿದೆ. ಬೆಂಗಳೂರಿನಲ್ಲಿ 19 ಕಿಲೋ ಕಮರ್ಷಿಯಲ್ ಎಲ್​ಪಿಜಿ ಸಿಲಿಂಡರ್ ಬೆಲೆ 1,857 ರೂ ಇದೆ. ಗೃಹಬಳಕೆಯದ್ದು ಸೇರಿದಂತೆ ವಿವಿಧ ಎಲ್​ಪಿಜಿ ಸಿಲಿಂಡರ್ ಬೆಲೆ ಬೆಂಗಳೂರಿನಲ್ಲಿ ಎಷ್ಟಿದೆ, ವಿವರ ಇಲ್ಲಿದೆ...

LPG Cylinder Price: ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ; ಬೆಂಗಳೂರಿನಲ್ಲಿ ಈಗೆಷ್ಟಿದೆ ಗ್ಯಾಸ್ ಬೆಲೆ?
19 ಕಿಲೋ ವಾಣಿಜ್ಯ ಎಲ್​ಪಿಜಿ ಸಿಲಿಂಡರ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 17, 2023 | 10:39 AM

ನವದೆಹಲಿ, ನವೆಂಬರ್ 17: ಆಯಿಲ್ ಮಾರ್ಕೆಟಿಂಗ್ ಕಂಪನಿಗಳು 19 ಕಿಲೋ ಕಮರ್ಷಿಯಲ್ ಎಲ್​ಪಿಜಿ ಸಿಲಿಂಡರ್​ಗಳ ಬೆಲೆ (19 KG Commercial LPG Cylinder Price) ಇಳಿಕೆ ಮಾಡಿವೆ. ಆದರೆ, ಸದ್ಯಕ್ಕೆ ಎಲ್ಲಾ ನಗರಗಳಲ್ಲೂ ಬೆಲೆ ಇಳಿಕೆಯಾಗಿಲ್ಲ. ನಾಲ್ಕು ಮೆಟ್ರೋ ನಗರಗಳಲ್ಲಿ ಕಮರ್ಷಿಯಲ್ ಗ್ಯಾಸ್ ಬೆಲೆ ಪ್ರತೀ ಸಿಲಿಂಡರ್​ಗೆ 57.50 ರೂನಷ್ಟು ಕಡಿಮೆ ಆಗಿದೆ. ನವದೆಹಲಿ, ಮುಂಬೈ, ಕೋಲ್ಕತಾ ಮತ್ತು ಚೆನ್ನೈ ಮಹಾನಗರಿಗಳಲ್ಲಿ ಸದ್ಯ ಈ ಬೆಲೆ ಇಳಿಕೆ ಆಗಿರುವುದನ್ನು ಪ್ರಕಟಿಸಲಾಗಿದೆ. ನವೆಂಬರ್ 16, ಅಂದರೆ ನಿನ್ನೆ ಗುರುವಾರದಿಂದಲೇ ಹೊಸ ದರ ಜಾರಿಗೆ ಬಂದಿದೆ. ದೀಪಾವಳಿಗೆ ಮುನ್ನ ಸಿಲಿಂಡರ್​ಗೆ 101.5 ರೂನಷ್ಟು ಬೆಲೆ ಏರಿಕೆಯ ಬಿಸಿ ಕಂಡಿದ್ದ ಜನರಿಗೆ ಈಗ ತುಸು ನಿರಾಳ ತರಬಹುದು.

19 ಕಿಲೋ ವಾಣಿಜ್ಯ ಎಲ್​ಪಿಜಿ ಸಿಲಿಂಡರ್ ಹೊಸ ಬೆಲೆ

  • ದೆಹಲಿ: 1,775.5 ರೂ
  • ಕೋಲ್ಕತಾ: 1,885.5 ರೂ
  • ಮುಂಬೈ: 1,728 ರೂ
  • ಚೆನ್ನೈ: 1,942 ರೂ

ಇದನ್ನೂ ಓದಿ: ಸಫಾರಿಯಲ್ಲಿ ಸರ್ಚ್​ನಿಂದ ಆದಾಯ; ಆ್ಯಪಲ್​ಗೆ ಒಂದು ವರ್ಷದಲ್ಲಿ ಗೂಗಲ್ ಕೊಡೋ ಹಣ ಎಷ್ಟು?

ಗೃಹಬಳಕೆ ಎಲ್​ಪಿಜಿ ಸಿಲಿಂಡರ್ ಬೆಲೆ ಇಳಿಕೆ ಇಲ್ಲ

ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಇವತ್ತು ಪ್ರಕಟಿಸಿರುವ ಗ್ಯಾಸ್ ಬೆಲೆ ಇಳಿಕೆ ಕೇವಲ 19 ಕಿಲೋ ಕಮರ್ಷಿಯಲ್ ಎಲ್​ಪಿಜಿ ಸಿಲಿಂಡರ್​ಗಳದ್ದು ಮಾತ್ರ. ಗೃಹಬಳಕೆಯ ಎಲ್​ಪಿಜಿ ಸಿಲಿಂಡರ್​ಗಳ ಬೆಲೆಯಲ್ಲಿ ಯಾವ ಬದಲಾವಣೆ ಆಗಿಲ್ಲ. ಬೆಂಗಳೂರಿನಲ್ಲಿ ಡೊಮೆಸ್ಟಿಕ್ ಗ್ಯಾಸ್ ಬೆಲೆ 14.2 ಕಿಲೋ ಸಿಲಿಂಡರ್​ಗೆ 905.50 ರೂ ಇದೆ.

ಬೆಂಗಳೂರಿನಲ್ಲಿ ಎಲ್​ಪಿಜಿ ಬೆಲೆಗಳು ಪ್ರಸ್ತುತ ಎಷ್ಟಿವೆ?

  • ಗೃಹಬಳಕೆಯ 14.2 ಕಿಲೋ ಎಲ್​ಪಿಜಿ ಸಿಲಿಂಡರ್: 905.50 ರೂ
  • ಗೃಹಬಳಕೆಯ 5 ಕಿಲೋ ಎಲ್​ಪಿಜಿ ಸಿಲಿಂಡರ್: 336 ರೂ
  • 19 ಕಿಲೋ ಕಮರ್ಷಿಯಲ್ ಎಲ್​ಪಿಜಿ ಸಿಲಿಂಡರ್: 1,857 ರೂ
  • 47.5 ಕಿಲೋ ಕಮರ್ಷಿಯಲ್ ಎಲ್​ಪಿಜಿ ಸಿಲಿಂಡರ್: 4,638 ರೂ

ಇದನ್ನೂ ಓದಿ: ಜಿಯೋ ಫೈನಾನ್ಷಿಯಲ್ ಸರ್ವಿಸಸ್ ನಿರ್ದೇಶಕರಾಗಿ ಇಶಾ ಅಂಬಾನಿ ಸೇರಿದಂತೆ ಮೂವರ ನೇಮಕಕ್ಕೆ ಆರ್​ಬಿಐ ಸಮ್ಮತಿ

ಸತತ ಎರಡು ತಿಂಗಳ ಬೆಲೆ ಏರಿಕೆ ಬಿಸಿ

ತೈಲ ಮಾರುಕಟ್ಟೆ ಕಂಪನಿಗಳು ಪ್ರತೀ ತಿಂಗಳು 1ನೇ ತಾರೀಖು ವಿವಿಧ ಎಲ್​ಪಿಜಿ ಬೆಲೆಗಳನ್ನು ಪರಿಷ್ಕರಿಸುತ್ತವೆ. ಸತತ ಎರಡು ತಿಂಗಳು ಕಮರ್ಷಿಯಲ್ ಗ್ಯಾಸ್ ಬೆಲೆಗಳನ್ನು ಹೆಚ್ಚಿಸಿದ್ದವು. ಅಕ್ಟೋಬರ್ 1ರಂದು 19 ಕಿಲೋ ಕಮರ್ಷಿಯಲ್ ಗ್ಯಾಸ್ ಬೆಲೆಗಳನ್ನು 209 ರೂಗಳಷ್ಟು ಹೆಚ್ಚಿಸಲಾಗಿತ್ತು. ನವೆಂಬರ್ 1ರಂದು ಸುಮಾರು ನೂರು ರೂಗಳಿಗೂ ಹೆಚ್ಚು ಬೆಲೆ ಏರಿಕೆ ಮಾಡಲಾಗಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್