Migraine Killer: ಮೈಗ್ರೇನ್ ಇದೆಯಾ? ಕೈಗೆ ಈ ಪಟ್ಟಿ ಕಟ್ಟಿಕೊಳ್ಳಿ ಸಾಕು; ಭಾರತದಲ್ಲಿ ನೆರಿವಿಯೋ ಸಾಧನ ಬಿಡುಗಡೆ

Dr Reddy's Lab Releases Migraine Device: ಮೈಗ್ರೇನ್ ತಲೆನೋವು ಶಮನಕ್ಕೆ ಸಹಾಯವಾಗುವ ನೆರಿವಿಯೋ ಸಾಧನವನ್ನು ಡಾಕ್ಟರ್ ರೆಡ್ಡೀಸ್ ಲ್ಯಾಬೊರೇಟರೀಸ್ ಸಂಸ್ಥೆ ಇಂದು ಗುರುವಾರ ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಔಷಧರಹಿತವಾಗಿ ಮೈಗ್ರೇನ್​ಗೆ ಚಿಕಿತ್ಸೆ ನೀಡುವ ಸಾಧನವಾಗಿದ್ದು, ಅಮೆರಿಕದ ಔಷಧ ಆಡಳಿತ ಪ್ರಾಧಿಕಾರವಾದ ಯುಎಸ್​ಎಫ್​ಡಿಎಯಿಂದ ಅನುಮೋದನೆ ಪಡೆದಿದೆ. ನೆರಿವಿಯೋವನ್ನು ಮೈಗ್ರೇನ್ ನಿಯಂತ್ರಣಕ್ಕೂ ಬಳಸಬಹುದು, ಮೈಗ್ರೇನ್ ನೋವು ಶಮನಕ್ಕೂ ಬಳಸಬಹುದು. 12 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರಿಗೆ ಈ ಸಾಧನ ಇದೆ.

Migraine Killer: ಮೈಗ್ರೇನ್ ಇದೆಯಾ? ಕೈಗೆ ಈ ಪಟ್ಟಿ ಕಟ್ಟಿಕೊಳ್ಳಿ ಸಾಕು; ಭಾರತದಲ್ಲಿ ನೆರಿವಿಯೋ ಸಾಧನ ಬಿಡುಗಡೆ
ನೆರಿವಿಯೋ ಸಾಧನ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 16, 2023 | 7:06 PM

ನವದೆಹಲಿ, ನವೆಂಬರ್ 16: ಮೈಗ್ರೇನ್ ತಲೆನೋವು ಶಮನಕ್ಕೆ ಸಹಾಯವಾಗುವ ನೆರಿವಿಯೋ ಸಾಧನವನ್ನು ಡಾಕ್ಟರ್ ರೆಡ್ಡೀಸ್ ಲ್ಯಾಬೊರೇಟರೀಸ್ ಸಂಸ್ಥೆ (Dr Reddy’s Laboratories) ಇಂದು ಗುರುವಾರ ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಔಷಧರಹಿತವಾಗಿ ಮೈಗ್ರೇನ್​ಗೆ ಚಿಕಿತ್ಸೆ ನೀಡುವ ಸಾಧನವಾಗಿದ್ದು, ಅಮೆರಿಕದ ಔಷಧ ಆಡಳಿತ ಪ್ರಾಧಿಕಾರವಾದ ಯುಎಸ್​ಎಫ್​ಡಿಎಯಿಂದ ಅನುಮೋದನೆ ಪಡೆದಿದೆ. ನೆರಿವಿಯೋವನ್ನು (Nerivio device) ಮೈಗ್ರೇನ್ ನಿಯಂತ್ರಣಕ್ಕೂ (Migrane Management) ಬಳಸಬಹುದು, ಮೈಗ್ರೇನ್ ನೋವು ಶಮನಕ್ಕೂ ಬಳಸಬಹುದು. 12 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರಿಗೆ ಈ ಸಾಧನ ಇದೆ.

ಮೈಗ್ರೇನ್ ಸಮಸ್ಯೆ ಇರುವವರು ತಮ್ಮ ತೋಳಿಗೆ ಈ ಪಟ್ಟಿಯನ್ನು ಕಟ್ಟಿಕೊಳ್ಳಬಹುದು. ಮೈಗ್ರೇನ್ ಬಂದು ಒಂದು ಗಂಟೆಯೊಳಗೆ ಇದನ್ನು ಧರಿಸಬೇಕು. ಮೈಗ್ರೇನ್ ಬರದಂತೆ ತಡೆಯಲೂ ಇದನ್ನು ಬಳಕೆ ಮಾಡಬಹುದು. ಅದಕ್ಕಾಗಿ ದಿನ ಬಿಟ್ಟು ದಿನ ಇದನ್ನು 45 ನಿಮಿಷ ಕಾಲ ಧರಿಸಬೇಕಾಗುತ್ತದೆ.

ಈ ಸಾಧನವು ರಿಮೋಟ್ ಎಲೆಕ್ಟ್ರಿಕಲ್ ನ್ಯೂರೋ ಮಾಡ್ಯುಲೇಶನ್ ತಂತ್ರವನ್ನು ಬಳಸುತ್ತದೆ. ನಿರ್ದಿಷ್ಟವಾಗಿ ನರವನ್ನು ಉದ್ದೀಪನಗೊಳಿಸಿ ಸಹಜ ನೋವು ನಿವಾರಕ ಪ್ರಕ್ರಿಯೆ ಆರಂಭಿಸುತ್ತದೆ. ಇದರಿಂದ ಮೈಗ್ರೇನ್ ನೋವಿನ ಸಿಗ್ನಲ್ ಮಿದುಳಿಗೆ ರವಾನೆಯಾಗುವುದಿಲ್ಲ. ಈ ಸಾಧನದಿಂದ ಯಾವ ಅಡ್ಡ ಪರಿಣಾಮ ಇರುವುದು ಕಂಡುಬಂದಿಲ್ಲ. ಈ ಸಾಧನವನ್ನು ಸ್ಮಾರ್ಟ್​ಫೋನ್​ಗೆ ಲಿಂಕ್ ಕೂಡ ಮಾಡಬಹುದು. ಸ್ಮಾರ್ಟ್​ಫೋನ್ ಮೂಲಕವೇ ಇದನ್ನು ನಿಯಂತ್ರಿಸಬಹುದು.

ಇದನ್ನೂ ಓದಿ: ಸಫಾರಿಯಲ್ಲಿ ಸರ್ಚ್​ನಿಂದ ಆದಾಯ; ಆ್ಯಪಲ್​ಗೆ ಒಂದು ವರ್ಷದಲ್ಲಿ ಗೂಗಲ್ ಕೊಡೋ ಹಣ ಎಷ್ಟು?

ಅಮೆರಿಕದಲ್ಲಿ ನೆರಿವಿಯೋ ಸಾಧನದ 12 ಯೂನಿಟ್​ಗಳ ಒಂದು ಸೆಟ್​ಗೆ 599 ಡಾಲರ್ ಬೆಲೆ ಇದೆ. ಅಂದರೆ 50,000 ರೂ ಇದೆ. ಭಾರತದಲ್ಲಿ ಇದಕ್ಕೆ ಎಷ್ಟು ಬೆಲೆ ನಿಗದಿ ಪಡಿಸಿ ಬಿಡುಗಡೆ ಮಾಡಲಾಗಿದೆ ಎಂಬ ಮಾಹಿತಿ ಗೊತ್ತಾಗಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್