ಸಫಾರಿಯಲ್ಲಿ ಸರ್ಚ್​ನಿಂದ ಆದಾಯ; ಆ್ಯಪಲ್​ಗೆ ಒಂದು ವರ್ಷದಲ್ಲಿ ಗೂಗಲ್ ಕೊಡೋ ಹಣ ಎಷ್ಟು?

Google vs Apple: ಆ್ಯಪಲ್ ಸಂಸ್ಥೆಗೆ ಗೂಗಲ್ ಒಂದು ವರ್ಷದಲ್ಲಿ ಸರ್ಚ್ ಆದಾಯ ಹಂಚಿಕೆ 10 ಬಿಲಿಯನ್ ಡಾಲರ್​ಗೂ ಹೆಚ್ಚಂತೆ. ಗೂಗಲ್​ನ ಮಾತೃ ಸಂಸ್ಥೆ ಆಲ್ಫಬೆಟ್​ನ ಸಿಇಒ ಸುಂದರ್ ಪಿಚೈ ಅವರೇ ಖುದ್ದಾಗಿ ಈ ಮಾಹಿತಿ ನೀಡಿದ್ದಾರೆ. ಆ್ಯಪಲ್​ನ ಸಫಾರಿ ಬ್ರೌಸರ್​ನಲ್ಲಿ ಡೀಫಾಲ್ಟ್ ಸರ್ಚ್ ಎಂಜಿನ್ ಆಗಿ ಗೂಗಲ್ ಸರ್ಚ್ ಅನ್ನು ಇರಿಸುವುದಕ್ಕೆ ಈ ಹಣ ನೀಡಲಾಗುತ್ತದೆ. ಆ್ಯಪಲ್ ಮಾತ್ರವಲ್ಲ ಎಲ್ಲಾ ಮೊಬೈಲ್ ತಯಾರಕರ ಜೊತೆಗೂ ಗೂಗಲ್ ಈ ರೀತಿ ಒಪ್ಪಂದ ಮಾಡಿಕೊಳ್ಳುತ್ತದೆ.

ಸಫಾರಿಯಲ್ಲಿ ಸರ್ಚ್​ನಿಂದ ಆದಾಯ; ಆ್ಯಪಲ್​ಗೆ ಒಂದು ವರ್ಷದಲ್ಲಿ ಗೂಗಲ್ ಕೊಡೋ ಹಣ ಎಷ್ಟು?
ಗೂಗಲ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 16, 2023 | 5:27 PM

ವಾಷಿಂಗ್ಟನ್, ನವೆಂಬರ್ 16: ಗೂಗಲ್​ಗೆ ಹೆಚ್ಚಿನ ಆದಾಯ ಬರುವುದು ಅದರ ಸರ್ಚ್ ಎಂಜಿನ್​ನಿಂದ. ಈ ಆದಾಯದಲ್ಲಿ ಬೇರೆ ಬೇರೆ ಸಂಬಂಧಿತ ವ್ಯಕ್ತಿ, ಕಂಪನಿಗಳಿಗೆ ಪಾಲು ಹಂಚಿಕೆ ಮಾಡುತ್ತದೆ. ಹಾಗೆಯೇ, ಆ್ಯಪಲ್ ಸಂಸ್ಥೆಗೆ ಗೂಗಲ್ ಒಂದು ವರ್ಷದಲ್ಲಿ ಮಾಡುವ ಆದಾಯ ಹಂಚಿಕೆ (revenue sharing) 10 ಬಿಲಿಯನ್ ಡಾಲರ್​ಗೂ (ಸುಮಾರು 83,000 ಕೋಟಿರೂ) ಹೆಚ್ಚಂತೆ. ಗೂಗಲ್​ನ ಮಾತೃ ಸಂಸ್ಥೆ ಆಲ್ಫಬೆಟ್​ನ ಸಿಇಒ ಸುಂದರ್ ಪಿಚೈ (Sundar Pichai) ಅವರೇ ಖುದ್ದಾಗಿ ಈ ಮಾಹಿತಿ ನೀಡಿದ್ದಾರೆ. ಅಮೆರಿಕದಲ್ಲಿ ಗೂಗಲ್ ವಿರುದ್ಧ ಕೋರ್ಟ್​ನಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆಯಲ್ಲಿ ಸುಂದರ್ ಪಿಚೈ ತಮ್ಮ ಸಂಸ್ಥೆ ಪ್ರತೀ ವರ್ಷ ಆ್ಯಪಲ್​ಗೆ ಸರ್ಚ್ ಆದಾಯ ಎಷ್ಟು ಹಂಚಿಕೆ ಮಾಡುತ್ತದೆ ಎಂಬ ವಿವರ ಬಹಿರಂಗಪಡಿಸಿದ್ದಾರೆ. ಆ್ಯಪಲ್​ನ ಸಫಾರಿ ಬ್ರೌಸರ್​ನಿಂದ ಗೂಗಲ್​ಗೆ ಬರುವ ಆದಾಯದಲ್ಲಿ ಶೇ. 36ರಷ್ಟು ಪಾಲನ್ನು ಆ್ಯಪಲ್​ಗೆ ಕೊಡುತ್ತಿರುವುದಾಗಿ ಗೂಗಲ್ ಸಿಇಒ ಹೇಳಿದ್ದಾರೆ.

ಗೂಗಲ್ ವಿರುದ್ಧ ಮೊಕದ್ದಮೆ ಸಲ್ಲಿರುವ ಎಪಿಕ್ ಗೇಮ್ಸ್ (Epic Games) ಮಾಧ್ಯಮ ಸಂಸ್ಥೆ ಪ್ರಕಾರ ಗೂಗಲ್ ಸಂಸ್ಥೆ ಆ್ಯಪಲ್​ಗೆ ಒಂದು ವರ್ಷದಲ್ಲಿ ಕೊಡುವ ಹಣ 18 ಬಿಲಿಯನ್ ಡಾಲರ್ (1.5 ಲಕ್ಷ ಕೋಟಿ ರೂ) ಅಂತೆ.

ಇದನ್ನೂ ಓದಿ: ಮುಂದಿನ ವರ್ಷ ಭಾರತದ ಆರ್ಥಿಕತೆಗೆ ಈ ಮೂರು ವಿದ್ಯಮಾನಗಳಿಂದ ಅಪಾಯ ಸಾಧ್ಯತೆ: ಮಾರ್ಗನ್ ಸ್ಟಾನ್ಲೀ

ಆ್ಯಪಲ್​ಗೆ ಗೂಗಲ್ ಇಷ್ಟು ಹಣ ಯಾಕೆ ಕೊಡುತ್ತದೆ?

ಆ್ಯಪಲ್​ನ ಸಫಾರಿ ಬ್ರೌಸರ್​ನಲ್ಲಿ ಡೀಫಾಲ್ಟ್ ಸರ್ಚ್ ಎಂಜಿನ್ ಆಗಿ ಗೂಗಲ್ ಸರ್ಚ್ ಅನ್ನು ಇರಿಸುವುದಕ್ಕೆ ಈ ಹಣ ನೀಡಲಾಗುತ್ತದೆ. ಆ್ಯಪಲ್ ಮಾತ್ರವಲ್ಲ ಎಲ್ಲಾ ಮೊಬೈಲ್ ತಯಾರಕರ ಜೊತೆಗೂ ಗೂಗಲ್ ಈ ರೀತಿ ಒಪ್ಪಂದ ಮಾಡಿಕೊಳ್ಳುತ್ತದೆ. ಡೀಫಾಲ್ಟ್ ಸರ್ಚ್ ಎಂಜಿನ್ ಆಗಿದ್ದರೆ ಹೆಚ್ಚಿನ ಜನರು ಅದನ್ನು ಬಳಸುತ್ತಾರೆ. ಅದರಿಂದ ಗೂಗಲ್​ಗೆ ಸಾಕಷ್ಟು ಜಾಹೀರಾತು ಆದಾಯ ಸಿಗುತ್ತದೆ. ಇದರಲ್ಲಿ ಶೇ. 36ರಷ್ಟು ಪಾಲನ್ನು ಆ್ಯಪಲ್ ಕಂಪನಿಗೆ ಒದಗಿಸುತ್ತದೆ.

ಆ್ಯಪಲ್ ಬೇರೆ ಆರೆಂಜ್ ಬೇರೆ

ವಾಷಿಂಗ್ಟನ್​ನಲ್ಲಿ ನಡೆಯುತ್ತಿರುವ ಗೂಗಲ್ ವಿರುದ್ಧದ ಮೊಕದ್ದಮೆಯ ವಿಚಾರಣೆಯಲ್ಲಿ ಎಪಿಕ್ ಗೇಮ್ಸ್ ಸಂಸ್ಥೆಯ ವಕೀಲರು, ಸ್ಯಾಮ್ಸುಂಗ್ ವಿಚಾರವನ್ನು ಪ್ರಸ್ತಾಪಿಸಿ ಗೂಗಲ್​ನಿಂದ ಅನ್ಯಾಯ ಆಗುತ್ತಿದೆ ಎಂದು ಆರೋಪಿಸಿದ್ದಾರೆ. ಆ್ಯಪಲ್​ಗೆ ಕೊಡುತ್ತಿರುವಷ್ಟು ಆದಾಯ ಪಾಲನ್ನು ಸ್ಯಾಮ್ಸುಂಗ್​ಗೆ ಕೊಡುತ್ತಿಲ್ಲ ಎಂಬುದು ಆಕ್ಷೇಪ. ಇದಕ್ಕೆ ಗೂಗಲ್ ಸಮಜಾಯಿಷಿ ಕೊಟ್ಟಿದ್ದು, ಆ್ಯಪಲ್ ಮತ್ತು ಆಜೆಂಜ್ ಅನ್ನು ಒಂದೇ ತಕ್ಕಡಿಗೆ ಹಾಕಲು ಆಗುವುದಿಲ್ಲ. ಎರಡಕ್ಕೂ ಬೇರೆ ಮಾನದಂಡಗಳನ್ನು ಬಳಸಲಾಗುತ್ತದೆ ಎಂದು ಹೇಳಿದೆ.

ಇದನ್ನೂ ಓದಿ: RBI: ಈ ಎರಡು ಬಜಾಜ್ ಫೈನಾನ್ಸ್ ಸ್ಕೀಮ್ ಅಡಿಯಲ್ಲಿ ಸಾಲ ನೀಡದಂತೆ ಆರ್​ಬಿಐನಿಂದ ನಿರ್ಬಂಧ

ಸ್ಯಾಮ್ಸುಂಗ್​ಗೆ ಗೂಗಲ್ ಯಾಕೆ ಕಡಿಮೆ ಹಣ ಕೊಡುತ್ತದೆ?

ಸ್ಯಾಮ್ಸುಂಗ್ ಹ್ಯಾಂಡ್​ಸೆಟ್​ಗಳು ಆಂಡ್ರಾಯ್ಡ್ ತಂತ್ರಾಂಶ ಬಳಸುತ್ತವೆ. ಆಂಡ್ರಾಯ್ಡ್ ಲೈಸೆನ್ಸ್ ಗೂಗಲ್ ಬಳಿ ಇದೆ. ಆಂಡ್ರಾಯ್ಡ್ ಬಳಕೆಗೆ ಪ್ರತಿಯಾಗಿ ಸ್ಯಾಮ್ಸಂಗ್ ಮೊಬೈಲ್​ಗಳಲ್ಲಿ ಗೂಗಲ್​ನದ್ದು ಡೀಫಾಲ್ಟ್ ಸರ್ಚ್ ಎಂಜಿನ್ ಆಗಿರಬೇಕು, ಡೀಫಾಲ್ಟ್ ಪ್ಲೇ ಸ್ಟೋರ್ ಆಗಿರಬೇಕು ಎಂಬಿತ್ಯಾದಿ ಷರತ್ತುಗಳಿರುತ್ತವೆ. ಗೂಗಲ್ ಈ ಕಾರಣಕ್ಕೆ ಆ್ಯಪಲ್​ಗೆ ಕೊಡುವಷ್ಟು ಆದಾಯ ಪಾಲನ್ನು ಸ್ಯಾಮ್ಸುಂಗ್ ಕಂಪನಿಗೆ ಕೊಡುವುದಿಲ್ಲ. ಗೂಗಲ್ ಸಿಇಒ ಸುಂದರ್ ಪಿಚೈ ಈ ವಿಚಾರವನ್ನೂ ನ್ಯಾಯಾಲಯದಲ್ಲಿ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ