ಜಿಯೋ ಫೈನಾನ್ಷಿಯಲ್ ಸರ್ವಿಸಸ್ ನಿರ್ದೇಶಕರಾಗಿ ಇಶಾ ಅಂಬಾನಿ ಸೇರಿದಂತೆ ಮೂವರ ನೇಮಕಕ್ಕೆ ಆರ್​ಬಿಐ ಸಮ್ಮತಿ

RBI Approves Appointment of Isha Ambani: ಇಶಾ ಅಂಬಾನಿ, ಅಂಶುಮಾನ್ ಠಾಕೂರ್ ಮತ್ತು ಹಿತೇಶ್ ಕುಮಾರ್ ಸೇಥಿಯಾ ಅವರನ್ನು ಜೆಎಫ್​ಎಸ್​ಎಲ್​ನ ನಿರ್ದೇಶಕರನ್ನಾಗಿ ನೇಮಕ ಮಾಡುವ ಪ್ರಸ್ತಾಪಕ್ಕೆ ಆರ್​ಬಿಐ ಅನುಮತಿ ನೀಡಿದೆ. ಆರ್​ಬಿಐನ ಈ ಅನುಮೋದನೆ 6 ತಿಂಗಳವರೆಗೆ ಮಾನ್ಯವಾಗಿರುತ್ತದೆ. ಅಷ್ಟರೊಳಗೆ ಜೆಎಫ್​ಎಸ್​ಎಲ್ ಸಂಸ್ಥೆ ಈ ಮೂವರನ್ನು ನಿರ್ದೇಶಕರನ್ನಾಗಿ ನೇಮಿಸಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಳಿಸಬೇಕು.

ಜಿಯೋ ಫೈನಾನ್ಷಿಯಲ್ ಸರ್ವಿಸಸ್ ನಿರ್ದೇಶಕರಾಗಿ ಇಶಾ ಅಂಬಾನಿ ಸೇರಿದಂತೆ ಮೂವರ ನೇಮಕಕ್ಕೆ ಆರ್​ಬಿಐ ಸಮ್ಮತಿ
ಇಶಾ ಅಂಬಾನಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 16, 2023 | 6:09 PM

ನವದೆಹಲಿ, ನವೆಂಬರ್ 16: ರಿಲಾಯನ್ಸ್ ಸಾಮ್ರಾಜ್ಯದ ಯುವರಾಣಿ ಇಶಾ ಅಂಬಾನಿ (Isha Ambani) ಸೇರಿದಂತೆ ಮೂವರನ್ನು ಜಿಯೋ ಫೈನಾನ್ಷಿಯಲ್ ಸರ್ವಿಸಸ್​ನ ನಿರ್ದೇಶಕರನ್ನಾಗಿ ನೇಮಕ ಮಾಡುವುದಕ್ಕೆ ಆರ್​ಬಿಐ ನಿನ್ನೆ (ನ. 15) ಅನುಮೋದನೆ ನೀಡಿದೆ. ಇಶಾ ಅಂಬಾನಿ, ಅಂಶುಮಾನ್ ಠಾಕೂರ್ ಮತ್ತು ಹಿತೇಶ್ ಕುಮಾರ್ ಸೇಥಿಯಾ ಅವರನ್ನು ಜೆಎಫ್​ಎಸ್​ಎಲ್​ನ (Jio Financial Services) ನಿರ್ದೇಶಕರನ್ನಾಗಿ ನೇಮಕ ಮಾಡುವ ಪ್ರಸ್ತಾಪಕ್ಕೆ ಆರ್​ಬಿಐ ನೀಡಿರುವ ಅನುಮತಿ ಇದು. ಆರ್​ಬಿಐನ ಈ ಅನುಮತಿ 6 ತಿಂಗಳವರೆಗೆ ಮಾನ್ಯವಾಗಿರುತ್ತದೆ. ಅಷ್ಟರೊಳಗೆ ಜೆಎಫ್​ಎಸ್​ಎಲ್ ಸಂಸ್ಥೆ ಈ ಮೂವರನ್ನು ನಿರ್ದೇಶಕರನ್ನಾಗಿ ನೇಮಿಸಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಇಲ್ಲವಾದರೆ, ಯಾಕೆ ನೇಮಕಾತಿ ಆಗಿಲ್ಲ ಎಂದು ಕಾರಣ ತಿಳಿಸಿ ಮತ್ತೊಮ್ಮೆ ಅನುಮೋದನೆಗೆ ಅರ್ಜಿ ಸಲ್ಲಿಸಬೇಕು ಎಂದು ಆರ್​ಬಿಐ ತನ್ನ ಪತ್ರದಲ್ಲಿ ತಿಳಿಸಿದೆ.

ಇಶಾ ಅಂಬಾನಿ ಅವರು ಮುಕೇಶ್ ಅಂಬಾನಿಯ ಹಿರಿಯ ಮಗಳು. 32 ವರ್ಷದ ಅವರು ಮತ್ತು ಆಕಾಶ್ ಅಂಬಾನಿ ಇಬ್ಬರೂ ಕೂಡ ಅವಳಿಜವಳಿ. ಅನಂತ್ ಅಂಬಾನಿ ಮೂರನೇ ಮಗ. ಈ ಮೂವರೂ ಕೂಡ ಕಳೆದ ತಿಂಗಳು ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಮಂಡಳಿ ಸದಸ್ಯರಾಗಿ ನೇಮಕವಾಗಿದ್ದರು.

ಇದನ್ನೂ ಓದಿ: ಅಂಬಾನಿ ಮಕ್ಕಳಿಗೆ ಸಂಬಳ ಬೇಡ; ಮಂಡಳಿ ಸಭೆಯಲ್ಲಿ ಪಾಲ್ಗೊಂಡರೆ ಸಂಭಾವನೆ: ಆರ್​ಐಎಲ್ ನಿರ್ಣಯ

ಆಕಾಶ್ ಅಂಬಾನಿ ಅವರು ಜಿಯೋ ಇನ್ಫೋಕಾಮ್​ನ ಛೇರ್ಮನ್ ಆಗಿ ಜವಾಬ್ದಾರಿ ಪಡೆದಿದ್ದಾರೆ. ಇಶಾ ಅಂಬಾನಿ ರಿಲಾಯನ್ಸ್ ರೀಟೇಲ್ ಸಂಸ್ಥೆಯ ಚುಕ್ಕಾಣಿ ಹಿಡಿದಿದ್ದಾರೆ.

ಪಿರಾಮಲ್ ಕುಟುಂಬದ ಸೊಸೆಯಾಗಿರುವ ಇಶಾ ಅಂಬಾನಿ ಅಮೆರಿಕದ ಯಾಲೆ ಯೂನಿವರ್ಸಿಟಿ ಮತ್ತು ಸ್ಟಾನ್​ಫೋರ್ಡ್ ಯೂನಿವರ್ಸಿಟಿಯಲ್ಲಿ ಓದಿದವರು. 2016ರಲ್ಲಿ ಭಾರತದ ಟೆಲಿಕಾಂ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದ ಜಿಯೋದ ಪೂರ್ಣ ಕಾರ್ಯತಂತ್ರವನ್ನು ಇಶಾ ಅಂಬಾನಿ ರೂಪಿಸಿದ್ದರು ಎನ್ನಲಾಗುತ್ತಿದೆ. ಇದೀಗ ರಿಲಾಯನ್ಸ್ ರೀಟೇಲ್ ಸಂಸ್ಥೆಗೆ ಅವರು ಹೊಸ ಕಾಯಕಲ್ಪ ತರುವ ಪ್ರಯತ್ನದಲ್ಲಿದ್ದಾರೆ.

ಇದನ್ನೂ ಓದಿ: ಇಟಲಿಗೆ ಅಡಿ ಇಟ್ಟ ಅಂಬಾನಿ ಮಾಲಕತ್ವದ ಹ್ಯಾಮ್ಲೀಸ್; ಜಿಯೋಚಿ ಪ್ರೆಜಿಯೋಸಿ ಜೊತೆ ರಿಲಾಯನ್ಸ್ ಒಪ್ಪಂದ

ಇದೇ ವೇಳೆ, ಜಿಯೋ ಫೈನಾನ್ಷಿಯಲ್ ಸರ್ವಿಸಸ್ ಸಂಸ್ಥೆಯ ನಿರ್ದೇಶಕರಾಗಿರುವ ಇತರ ಇಬ್ಬರೆಂದರೆ ಅಂಶುಮಾನ್ ಠಾಕೂರ್ ಮತ್ತು ಹಿತೇಶ್ ಸೇಥಿಯಾ. ಅಂಶುಮಾನ್ ಠಾಕೂರ್ ಅವರು 2014ರಿಂದ ರಿಲಾಯನ್ಸ್ ಗ್ರೂಪ್​ನಲ್ಲಿದ್ದಾರೆ. ಅದಕ್ಕೆ ಮುನ್ನ ಅವರು ಮಾರ್ಗನ್ ಸ್ಟಾನ್ಲೀ, ಎರ್ನ್ಸ್ಟ್ ಅಂಡ್ ಯಂಗ್ ಮತ್ತು ಆರ್ಥರ್ ಆಂಡರ್ಸನ್ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ಒಟ್ಟು 24 ವರ್ಷದ ಕೆಲಸದ ಅನುಭವ ಹೊಂದಿದ್ದಾರೆ.

ಇನ್ನು, ಹಿತೇಶ್ ಸೇಠಿಯಾ ಅವರು ಸಿಎ ಓದಿದ್ದು ಹಾರ್ವರ್ಡ್ ಬಿಸಿನೆಸ್ ಸ್ಕೂಲ್​ನಲ್ಲೂ ಶಿಕ್ಷಣ ಪಡೆದಿದ್ದಾರೆ. ಐಸಿಐಸಿಐ ಬ್ಯಾಂಕ್​ನಲ್ಲಿ ಹೆಚ್ಚಿನ ಕೆಲಸದ ಅನುಭವ ಪಡೆದಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ