Indian economy: ಸಮಸ್ಯೆ ದೂರವಾಗಿಲ್ಲ, ಆದರೆ ಹಣದುಬ್ಬರ ಇಳಿಕೆ, ಹಬ್ಬದ ಚಟುವಟಿಕೆ ಸಕಾರಾತ್ಮಕ ಅಂಶ: ಆರ್ಬಿಐ
RBI November Bulletin: ಈ ಹಣಕಾಸು ವರ್ಷದ ಮೂರನೇ ಕ್ವಾರ್ಟರ್ನಲ್ಲಿ, ಅಂದರೆ ಅಕ್ಟೋಬರ್ನಿಂದ ಡಿಸೆಂಬರ್ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಹೆಚ್ಚಾಗಬಹುದು ಎಂದು ಆರ್ಬಿಐ ನಿರೀಕ್ಷಿಸಿದೆ. ಈ ಕ್ವಾರ್ಟರ್ನಲ್ಲಿ ಹಬ್ಬದ ಚಟುವಟಿಕೆ ಪ್ರಬಲವಾಗಿದ್ದು ಒಂದು ಕಾರಣವಾಗಿದೆ. ಭಾರತದ ಹಣಕಾಸು ಸಮಸ್ಯೆ ಇನ್ನೂ ದೂರವಾಗಿಲ್ಲ. ಆದರೆ, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಹಣದುಬ್ಬರ ಇಳಿಕೆ ಆಗಿರುವುದು ಮತ್ತು ಹಬ್ಬದ ಚಟುವಟಿಕೆ ಪ್ರಬಲವಾಗಿರುವುದು ನಿರಾಳತೆ ತಂದಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.
ನವದೆಹಲಿ, ನವೆಂಬರ್ 17: ಭಾರತದ ಹಣಕಾಸು ಸಮಸ್ಯೆ ಇನ್ನೂ ದೂರವಾಗಿಲ್ಲ. ಆದರೆ, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಹಣದುಬ್ಬರ (inflation) ಇಳಿಕೆ ಆಗಿರುವುದು ಮತ್ತು ಹಬ್ಬದ ಚಟುವಟಿಕೆ ಪ್ರಬಲವಾಗಿರುವುದು ನಿರಾಳತೆ ತಂದಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ. ನಿನ್ನೆ ಗುರುವಾರ ಬಿಡುಗಡೆ ಮಾಡಲಾದ ನವೆಂಬರ್ 2023ರ ಬುಲೆಟಿನ್ನಲ್ಲಿ (RBI bulletin) ಹಲವು ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ.
ಈ ಹಣಕಾಸು ವರ್ಷದ ಮೂರನೇ ಕ್ವಾರ್ಟರ್ನಲ್ಲಿ, ಅಂದರೆ ಅಕ್ಟೋಬರ್ನಿಂದ ಡಿಸೆಂಬರ್ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಹೆಚ್ಚಾಗಬಹುದು ಎಂದು ಆರ್ಬಿಐ ನಿರೀಕ್ಷಿಸಿದೆ. ಈ ಕ್ವಾರ್ಟರ್ನಲ್ಲಿ ಹಬ್ಬದ ಚಟುವಟಿಕೆ ಪ್ರಬಲವಾಗಿದ್ದು ಒಂದು ಕಾರಣವಾಗಿದೆ. ಇನ್ಫ್ರಾಸ್ಟ್ರಕ್ಚರ್ಗೆ ಸರ್ಕಾರ ಮಾಡುತ್ತಿರುವ ವೆಚ್ಚ, ಖಾಸಗಿ ಬಂಡವಾಳ ಹೂಡಿಕೆಯಲ್ಲಿ ಹೆಚ್ಚಳ, ದೇಶೀಯವಾಗಿ ಉತ್ಪಾದನೆ ಹೆಚ್ಚಳ, ಡಿಜಿಟಲೀಕರಣ, ಆಟೋಮೇಶನ್ ಇತ್ಯಾದಿ ಸಂಗತಿಗಳು ಜಿಡಿಪಿಗೆ ಪುಷ್ಟಿ ಕೊಡಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: RBI: ಬಿಗಿಗೊಂಡ ಆರ್ಬಿಐ ನಿಯಮಗಳು; ಸಾಲಕ್ಕೆ ಬಡ್ಡಿದರ ಹೆಚ್ಚಳವಾಗುವ ಸಾಧ್ಯತೆ
ಅಕ್ಟೋಬರ್ನಿಂದ ಡಿಸೆಂಬರ್ವರೆಗಿನ ಕ್ವಾರ್ಟರ್ನಲ್ಲಿ ಜಾಗತಿಕ ಆರ್ಥಿಕತೆ ನಿಧಾನಗೊಳ್ಳುವ ಸೂಚನೆ ಇದೆ. ಜಾಗತಿಕವಾಗಿ ಉತ್ಪಾದನಾ ಕ್ಷೇತ್ರಕ್ಕೆ ಹಿನ್ನಡೆಯಾಗಿದೆ. ಸರ್ವಿಸ್ ಸೆಕ್ಟರ್ನಲ್ಲಿ ಏರುಗತಿ ಇಲ್ಲ. ಬಿಗಿ ಹಣಕಾಸು ಸ್ಥಿತಿ ಜಾಗತಿಕ ಆರ್ಥಿಕತೆಗೆ ಆಶಾದಾಯಕ ಚಿತ್ರಣ ನೀಡುತ್ತಿಲ್ಲ ಎಂದು ಆರ್ಬಿಐ ತನ್ನ ನವೆಂಬರ್ ತಿಂಗಳ ಬುಲೆಟಿನ್ನಲ್ಲಿ ಅಭಿಪ್ರಾಯಪಟ್ಟಿದೆ.
ಇನ್ನು, ಭಾರತದ ತೊಡಕುಗಳು ನಿವಾರಣೆ ಆಗದೇ ಹೋಗಿದ್ದರೂ ಕೆಲ ಆಶಾದಾಯಕ ಸಂಗತಿಗಳನ್ನು ಆರ್ಬಿಐ ಗುರುತಿಸಿದೆ. ಭಾರತದಲ್ಲಿ ಬೆಳವಣಿಗೆ ಗರಿಗೆದರಿದೆ. ಕೋವಿಡ್ ಮುಂಚೆ ಇದ್ದ ಸ್ಥಿತಿಗಿಂತ ಜಿಡಿಪಿ ಹೆಚ್ಚಿದೆ. ಮಾರುಕಟ್ಟೆ ವಿನಿಮಯ ದರಗಳಲ್ಲಿ ಭಾರತ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಆಗಿದೆ ಎಂದು ಆರ್ಬಿಐ ತನ್ನ ‘ಸ್ಟೇಟ್ ಆಫ್ ಎಕನಾಮಿ’ ಲೇಖನದಲ್ಲಿ ತಿಳಿಸಿದೆ.
ಇದನ್ನೂ ಓದಿ: LPG Cylinder Price: ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ; ಬೆಂಗಳೂರಿನಲ್ಲಿ ಈಗೆಷ್ಟಿದೆ ಗ್ಯಾಸ್ ಬೆಲೆ?
ಭಾರತದ ಆರ್ಥಿಕತೆ ಇನ್ನೂ ಮೂರ್ನಾಲ್ಕು ವರ್ಷ ಕಾಲ ಶೇ. 6ಕ್ಕಿಂತಲೂ ಹೆಚ್ಚಿನ ದರದಲ್ಲಿ ಬೆಳೆಯಬಹುದು ಎಂದು ಬಹುತೇಕ ಎಲ್ಲಾ ಅಂತಾರಾಷ್ಟ್ರೀಯ ಹಣಕಾಸು ವಿಶ್ಲೇಷಕ ಸಂಸ್ಥೆಗಳು ಅಂದಾಜು ಮಾಡಿವೆ. 2023-24, 2024-25, ಮತ್ತು 2025-26 ಹಣಕಾಸು ವರ್ಷಗಳಲ್ಲಿ ಜಿಡಿಪಿ ಶೇ. 6ರಿಂದ ಶೇ. 7.1ರ ದರದಲ್ಲಿ ಬೆಳೆಯಬಹುದು ಎಂದು ಎಸ್ ಅಂಡ್ ಪಿ ಗ್ಲೋಬಲ್ ರೇಟಿಂಗ್ಸ್ ಅಭಿಪ್ರಾಯಪಟ್ಟಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:59 am, Fri, 17 November 23