AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕ್ ತಂಡದ ಹೆಡ್ ಕೋಚ್ ‘ಭಾರತದ ಏಜೆಂಟ್’; ಮಾಜಿ ಆಟಗಾರನ ಗಂಭೀರ ಆರೋಪ

ಪಾಕಿಸ್ತಾನ ಕ್ರಿಕೆಟ್ ತಂಡದ ಮುಖ್ಯ ಕೋಚ್ ಮೈಕ್ ಹೆಸನ್ ಭಾರತದ ಏಜೆಂಟ್ ಎಂದು ಮಾಜಿ ಕ್ರಿಕೆಟಿಗ ರಶೀದ್ ಲತೀಫ್ ಗಂಭೀರ ಆರೋಪ ಮಾಡಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿ ತಂಡದ ಕಳಪೆ ಪ್ರದರ್ಶನದ ನಡುವೆಯೇ ಈ ಹೇಳಿಕೆ ಬಂದಿದೆ. ಹೆಸನ್ ಐಪಿಎಲ್‌ನಲ್ಲಿ ಕೆಲಸ ಮಾಡಿದ್ದ ಕಾರಣ ಅವರಿಗೆ ಭಾರತದೊಂದಿಗೆ ನಂಟಿದೆ, ಪಾಕ್ ಕ್ರಿಕೆಟ್ ನಾಶಮಾಡಲು ಅವರನ್ನು ಕಳುಹಿಸಲಾಗಿದೆ ಎಂದು ಲತೀಫ್ ಹೇಳಿದ್ದಾರೆ.

ಪಾಕ್ ತಂಡದ ಹೆಡ್ ಕೋಚ್ ‘ಭಾರತದ ಏಜೆಂಟ್’; ಮಾಜಿ ಆಟಗಾರನ ಗಂಭೀರ ಆರೋಪ
ಪಾಕಿಸ್ತಾನ ತಂಡ
ಪೃಥ್ವಿಶಂಕರ
|

Updated on:Sep 10, 2026 | 5:20 PM

Share

ಪಾಕಿಸ್ತಾನ ಕ್ರಿಕೆಟ್​ಗೆ ಸಂಬಂಧಿಸಿದಂತೆ ದಿನಕ್ಕೊಂದು ವಿವಾದಗಳು ಹುಟ್ಟುತ್ತಲೇ ಇರುತ್ತವೆ. ಇಂಗ್ಲೆಂಡ್‌ ಪ್ರವಾಸದಲ್ಲಿ ಹೀನಾಯ ಪ್ರದರ್ಶನ ನೀಡುತ್ತಿರುವ ಪಾಕ್ ತಂಡದ ಮೇಲೆ ಟೀಕೆಗಳ ಮಳೆ ಸುರಿಸಲಾಗುತ್ತಿದೆ. ಅಭಿಮಾನಿಗಳಿಂದ ಹಿಡಿದು ಮಾಜಿ ಆಟಗಾರರವರೆಗೆ ಎಲ್ಲರೂ ಇಡೀ ತಂಡದ ಬಗ್ಗೆ ಒಂದಿಲ್ಲೊಂದು ಆರೋಪಗಳನ್ನು ಮಾಡುತ್ತಿದ್ದಾರೆ. ಇದೀಗ ತಂಡದ ಮಾಜಿ ಆಟಗಾರ ರಶೀದ್ ಲತೀಫ್, ಪಾಕ್ ತಂಡದ ಹೆಡ್ ಕೋಚ್ ಮೈಕ್ ಹೆಸನ್​ ಬಗ್ಗೆ ಗಂಭೀರ ಆರೋಪವನ್ನು ಮಾಡಿದ್ದಾರೆ. ಪಾಕ್ ತಂಡದ ಈ ಕಳಪೆ ಪ್ರದರ್ಶನಕ್ಕೆ ಕೋಚ್ ಮೇಲೆ ಗೂಬೆ ಕೂರಿಸಿರುವ ರಶೀದ್ ಲತೀಫ್, ಹೆಡ್ ಕೋಚ್ ಮೈಕ್ ಹೆಸನ್ ಭಾರತದ ಏಜೆಂಟ್, ಅವರು ಪಾಕ್ ತಂಡದಲ್ಲಿದ್ದುಕೊಂಡು ಪಾಕ್ ತಂಡವನ್ನು ಮುಳುಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮೈಕ್ ಹೆಸನ್ ‘ಭಾರತೀಯ ಏಜೆಂಟ್’

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಶೀದ್ ಲತೀಫ್ ಅವರು, ತಂಡದ ಹೆಡ್ ಕೋಚ್ ಮೈಕ್ ಹೆಸನ್ ಅವರನ್ನು ಭಾರತೀಯ ಏಜೆಂಟ್ ಎಂದು ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಂಚಲನ ಮೂಡಿಸಿದೆ. ಡಾ. ನೌಮನ್ ನಿಯಾಜ್ ಅವರೊಂದಿಗಿನ ಸಂಭಾಷಣೆಯಲ್ಲಿ ಈ ಬಗ್ಗೆ ಮಾತನಾಡಿರುವ ರಶೀದ್ ಲತೀಫ್, ‘ಮೈಕ್ ಹೆಸನ್ ಪಾಕ್ ತಂಡವನ್ನು ಕೂಡಿಕೊಳ್ಳುವ ಮುನ್ನ ಐಪಿಎಲ್​ನಲ್ಲಿ ಹೆಡ್ ಕೋಚ್ ಆಗಿ ಕೆಲಸ ಮಾಡಿದ್ದರು. ಹೀಗಾಗಿ ಅವರಿಗೆ ಭಾರತದೊಂದಿಗೆ ನಂಟಿದೆ. ಹೇಸನ್ ಭಾರತದಲ್ಲಿ ಸಾಕಷ್ಟು ಸಮಯ ಕಳೆದಿದ್ದಾರೆ. ಇದರ ಆಧಾರದ ಮೇಲೆ, ಅವರನ್ನು ನಿರ್ದಿಷ್ಟ ಉದ್ದೇಶಕ್ಕಾಗಿ ಪಾಕಿಸ್ತಾನಕ್ಕೆ ಕಳುಹಿಸಿರಬಹುದು. ಹೆಸನ್ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ನಾಶಮಾಡಲು ಬಂದಿರುವ ಭಾರತೀಯ ಏಜೆಂಟ್ ಆಗಿರಬಹುದು’ ಎಂದಿದ್ದಾರೆ.

ಸರ್ಫರಾಜ್ ಬದಲಿಗೆ ಹೆಸನ್​ ನೇಮಕ

ಮೈಕ್ ಹೆಸನ್ ವಿರುದ್ಧ ರಶೀದ್ ಲತೀಫ್ ಮಾಡಿರುವ ಆರೋಪಗಳಿಗೆ ಪ್ರಸ್ತುತ ಯಾವುದೇ ಆಧಾರವಿಲ್ಲ. ಇದಕ್ಕೆ ಯಾವುದೇ ದೃಢವಾದ ಪುರಾವೆಗಳಿಲ್ಲ. ಪರಿಣಾಮವಾಗಿ, ಅವರು ‘ಭಾರತೀಯ ಏಜೆಂಟ್’ ಎಂಬ ಪದವನ್ನು ಬಳಸಿರುವುದು ವಿವಾದಕ್ಕೆ ಕಾರಣವಾಗಿದೆ. ಇಂಗ್ಲೆಂಡ್ ಪ್ರವಾಸದ ಮಧ್ಯದಲ್ಲಿ ಮೈಕ್ ಹೆಸನ್ ಪಾಕಿಸ್ತಾನ ಟೆಸ್ಟ್ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡರು. ಹೆಸನ್​ಗೂ ಮೊದಲು ಸರ್ಫರಾಜ್ ಅಹ್ಮದ್ ಪಾಕ್ ಟೆಸ್ಟ್ ತಂಡದ ಹೆಡ್ ಕೋಚ್ ಆಗಿದ್ದರು. ಆದರೆ ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್‌ಗಳಲ್ಲಿ ಪಾಕ್ ತಂಡ ಹೀನಾಯ ಪ್ರದರ್ಶನ ನೀಡಿದ ಬಳಿಕ ಪಿಸಿಬಿ, ಸರ್ಫರಾಜ್ ಅಹ್ಮದ್ ಬದಲಿಗೆ ಹೆಸನ್ ಅವರನ್ನು ಟೆಸ್ಟ್ ತಂಡದ ತರಬೇತುದಾರರನ್ನಾಗಿ ತರಾತುರಿಯಲ್ಲಿ ನೇಮಿಸಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:16 pm, Thu, 10 September 26

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
4 ಎಮ್​ಎಲ್ಸಿ ಸ್ಥಾನಗಳಿಗೆ ಇಂದು ಮತದಾನ ಆರಂಭ
4 ಎಮ್​ಎಲ್ಸಿ ಸ್ಥಾನಗಳಿಗೆ ಇಂದು ಮತದಾನ ಆರಂಭ
ಆಸಿಯಾ-ಸೌಂದರ್ಯಾ ಪೈಕಿ ಯಾರಾಗ್ತಾರೆ ಮುಂದಿನ ಕ್ಯಾಪ್ಟನ್?
ಆಸಿಯಾ-ಸೌಂದರ್ಯಾ ಪೈಕಿ ಯಾರಾಗ್ತಾರೆ ಮುಂದಿನ ಕ್ಯಾಪ್ಟನ್?
ಅಬ್ಬಾ, ಗೊತ್ತೇ ಇಲ್ಲದೆ ತಲೆದಿಂಬಿನಡಿ ಸೇರಿತ್ತು ಭಾರಿ ಗಾತ್ರದ ನಾಗರ ಹಾವು!
ಅಬ್ಬಾ, ಗೊತ್ತೇ ಇಲ್ಲದೆ ತಲೆದಿಂಬಿನಡಿ ಸೇರಿತ್ತು ಭಾರಿ ಗಾತ್ರದ ನಾಗರ ಹಾವು!
ಮೋದಿ ಭೇಟಿ ಬಳಿಕ ಬೆಂಗಳೂರಿಗೆ ಆಗಮಿಸಿದ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್
ಮೋದಿ ಭೇಟಿ ಬಳಿಕ ಬೆಂಗಳೂರಿಗೆ ಆಗಮಿಸಿದ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್
ಇಂದು ಈ ರಾಶಿಯವರು ವಿರೋಧಿಗಳೊಂದಿಗೆ ವಿವಾದಕ್ಕಿಳಿಯಬೇಡಿ
ಇಂದು ಈ ರಾಶಿಯವರು ವಿರೋಧಿಗಳೊಂದಿಗೆ ವಿವಾದಕ್ಕಿಳಿಯಬೇಡಿ
ಸರಸ್ವತಿ ದೇವಾಲಯದಲ್ಲಿ ಮಕ್ಕಳ ಕೈಹಿಡಿದು ವಿದ್ಯಾರಂಭ ಮಾಡಿಸಿದ ಶಶಿ ತರೂರ್
ಸರಸ್ವತಿ ದೇವಾಲಯದಲ್ಲಿ ಮಕ್ಕಳ ಕೈಹಿಡಿದು ವಿದ್ಯಾರಂಭ ಮಾಡಿಸಿದ ಶಶಿ ತರೂರ್
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!