
ಬೆಂಗಳೂರು (ಮೇ. 09): ಪಾಕಿಸ್ತಾನ (Pakistan) ಇತ್ತೀಚೆಗೆ ಚಾಂಪಿಯನ್ಸ್ ಟ್ರೋಫಿ 2025 ಅನ್ನು ಆಯೋಜಿಸಿತ್ತು, ಇದಕ್ಕೆ ಅವರು ಹಣವನ್ನು ನೀರಿನಂತೆ ಖರ್ಚು ಮಾಡಿದರು. ಆದಾಗ್ಯೂ, ಆತಿಥೇಯ ತಂಡ ಪಾಕಿಸ್ತಾನವು ಲೀಗ್ ಸಂದರ್ಭದಲ್ಲೇ ಪಂದ್ಯಾವಳಿಯಿಂದ ಹೊರಬಿತ್ತು. ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನ ತನ್ನ ಕ್ರೀಡಾಂಗಣಗಳ ನವೀಕರಣಕ್ಕಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಿತು. 1996 ರ ನಂತರ ಮೊದಲ ಬಾರಿಗೆ ಪಾಕಿಸ್ತಾನದಲ್ಲಿ ಐಸಿಸಿ ಟೂರ್ನಮೆಂಟ್ ನಡೆಯಿತು. ಈ ಮೂಲಕ ಪಾಕ್ಗೆ ಕ್ರಿಕೆಟ್ ಮರಳುವಂತೆ ಕಂಡುಬಂತು. ಆದರೀಗ ಪಾಕಿಸ್ತಾನ ಕ್ರಿಕೆಟ್ಗೆ ಮತ್ತೆ ಹಿನ್ನಡೆಯಾಗಿದೆ.
2009 ರಲ್ಲಿ, ಪಾಕಿಸ್ತಾನದ ಲಾಹೋರ್‌ನಲ್ಲಿರುವ ಗಡಾಫಿ ಕ್ರೀಡಾಂಗಣದಲ್ಲಿ ಶ್ರೀಲಂಕಾ ತಂಡದ ಮೇಲೆ ಭಯೋತ್ಪಾದಕ ದಾಳಿ ನಡೆದಿತ್ತು, ನಂತರ ಪಾಕಿಸ್ತಾನದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಅನ್ನು ದೀರ್ಘಕಾಲದವರೆಗೆ ನಿಷೇಧಿಸಲಾಯಿತು. ಪಾಕಿಸ್ತಾನ ತನ್ನ ಎಲ್ಲಾ ಪಂದ್ಯಗಳನ್ನು ದುಬೈ ಅಥವಾ ಯುಎಇಯಲ್ಲಿ ಆಡುತ್ತಿತ್ತು.
ಪಾಕಿಸ್ತಾನದಲ್ಲಿ ಹಲವು ಕ್ರಿಕೆಟ್ ಕ್ರೀಡಾಂಗಣಗಳಿವೆ. ಆದರೆ ಕನಿಷ್ಠ ಒಂದು ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದ 20 ಕ್ರೀಡಾಂಗಣಗಳಿವೆ. ಪಾಕಿಸ್ತಾನದ ಕೆಲವು ದೊಡ್ಡ ಕ್ರೀಡಾಂಗಣಗಳ ಬಗ್ಗೆ ನೋಡುವುದಾದರೆ…
ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಭಯೋತ್ಪಾದಕ ದಾಳಿ ನಡೆಸಿ 26 ಭಾರತೀಯ ಪ್ರವಾಸಿಗರನ್ನು ಅವರ ಧರ್ಮ ಕೇಳಿದ ಕಾರಣಕ್ಕಾಗಿ ಗುಂಡಿಕ್ಕಿ ಕೊಂದಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ, ಆಪರೇಷನ್ ಸಿಂಧೂರ್ ಅಡಿಯಲ್ಲಿ, ಭಾರತವು ಭಯೋತ್ಪಾದಕ ಸಂಘಟನೆಗಳ ಕೇಂದ್ರಗಳನ್ನು ನಾಶಪಡಿಸಿತು. ಪಾಕಿಸ್ತಾನ ಭಾರತದ ಕೆಲವು ನಗರಗಳನ್ನು ಗುರಿಯಾಗಿಸಲು ಪ್ರಯತ್ನಿಸಿದಾಗ, ಭಾರತೀಯ ಸೇನೆಯು ಅವರ ದುಷ್ಟ ಉದ್ದೇಶಗಳನ್ನು ವಿಫಲಗೊಳಿಸಿತು ಮತ್ತು ನಂತರ ಪ್ರತೀಕಾರವಾಗಿ, ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆಯನ್ನು ಒಂದೇ ಏಟಿಗೆ ನಾಶಪಡಿಸಿತು.
IPL 2025: ಐಪಿಎಲ್ 2025 ಭವಿಷ್ಯ ಇಂದು ನಿರ್ಧಾರ: ಟೂರ್ನಿ ಮುಂದುವರೆಯುತ್ತ ಅಥವಾ ಅರ್ಧಕ್ಕೆ ನಿಲ್ಲುತ್ತ?
ಭಾರತದ ದಾಳಿಯ ನಂತರ ಪಾಕಿಸ್ತಾನದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ವಿದೇಶಿ ಆಟಗಾರರು ಪಾಕಿಸ್ತಾನ ಸೂಪರ್ ಲೀಗ್ ತೊರೆದು ತಕ್ಷಣ ಮನೆಗೆ ಮರಳಲು ಬಯಸುತ್ತಿದ್ದಾರೆ. ಏತನ್ಮಧ್ಯೆ, ಕ್ರೀಡಾಂಗಣದ ಬಳಿ ಡ್ರೋನ್ ಹಾನಿಗೊಳಗಾದ ನಂತರ ಪಾಕಿಸ್ತಾನ ಸರ್ಕಾರ ಆಟಗಾರರು ರಾವಲ್ಪಿಂಡಿಯನ್ನು ತೊರೆಯುವಂತೆ ಆದೇಶಿಸಿದೆ. ಅಲ್ಲಿನ ವಾತಾವರಣವನ್ನು ನೋಡಿದರೆ, ಇತರೆ ತಂಡಗಳು ಪಾಕಿಸ್ತಾನಕ್ಕೆ ಬರಲು ಹಿಂಜರಿಯಬಹುದು.
2009 ರಲ್ಲಿ ಶ್ರೀಲಂಕಾ ತಂಡದ ಮೇಲೆ ನಡೆದ ಭಯೋತ್ಪಾದಕ ದಾಳಿಯ ನಂತರ ಇಡೀ ಕ್ರಿಕೆಟ್ ಜಗತ್ತು ಬೆಚ್ಚಿಬಿದ್ದಿತು. ಈ ಕಾರಣದಿಂದಾಗಿ, ಪಾಕಿಸ್ತಾನವು 2011 ರ ವಿಶ್ವಕಪ್ ಆತಿಥ್ಯದ ಹಕ್ಕನ್ನು ಕಳೆದುಕೊಂಡಿತು. 2019 ರಿಂದ, ಅಂತರರಾಷ್ಟ್ರೀಯ ಕ್ರಿಕೆಟ್ ನಿಧಾನವಾಗಿ ಪಾಕಿಸ್ತಾನಕ್ಕೆ ಮರಳಲು ಪ್ರಾರಂಭಿಸಿತು. ಆದರೀಗ ಈ ಘಟನೆಯಿಂದ ಮುಂದಿನ 10 ವರ್ಷ ಪಾಕಿಸ್ತಾನದಲ್ಲಿ ಅಂತರರಾಷ್ಟ್ರೀಯ ಪಂದ್ಯಗಳು ನಡೆಯುವುದು ಅನುಮಾನ ಎನ್ನಲಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ