Asia Cup 2025: ಏಷ್ಯಾಕಪ್‌ನಲ್ಲಿ ಪಾಕಿಸ್ತಾನಕ್ಕೆ ಮೊದಲ ಪಂದ್ಯ; ಎದುರಾಳಿ ಯಾರು?

Asia Cup 2025: ಏಷ್ಯಾಕಪ್ 2025 ರಲ್ಲಿ ಪಾಕಿಸ್ತಾನ ತಂಡವು ತನ್ನ ಅಭಿಯಾನವನ್ನು ಸೆಪ್ಟೆಂಬರ್ 12 ರಂದು ಒಮಾನ್ ವಿರುದ್ಧ ಆರಂಭಿಸಲಿದೆ. ದುಬೈನಲ್ಲಿ ನಡೆಯುವ ಈ ಪ್ರಮುಖ ಪಂದ್ಯದ ನೇರಪ್ರಸಾರವನ್ನು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದು. ಭಾರತದ ವಿರುದ್ಧದ ಮುಂದಿನ ಪಂದ್ಯಕ್ಕೂ ಮುನ್ನ ಈ ಪಂದ್ಯವನ್ನು ಗೆಲ್ಲುವುದು ಪಾಕಿಸ್ತಾನಕ್ಕೆ ಅತ್ಯಗತ್ಯ. ಯುಎಇ ತ್ರಿಕೋನ ಸರಣಿಯಲ್ಲಿನ ಗೆಲುವಿನ ನಂತರ ಪಾಕಿಸ್ತಾನದ ಆತ್ಮವಿಶ್ವಾಸ ಹೆಚ್ಚಾಗಿದೆ.

Asia Cup 2025: ಏಷ್ಯಾಕಪ್‌ನಲ್ಲಿ ಪಾಕಿಸ್ತಾನಕ್ಕೆ ಮೊದಲ ಪಂದ್ಯ; ಎದುರಾಳಿ ಯಾರು?
Pakistan Team

Updated on: Sep 11, 2025 | 10:40 PM

ಪಾಕಿಸ್ತಾನ ತಂಡವು ಸೆಪ್ಟೆಂಬರ್ 12, ಶುಕ್ರವಾರದಂದು ಒಮಾನ್ ವಿರುದ್ಧ ಏಷ್ಯಾಕಪ್‌ನಲ್ಲಿ (Asia Cup 2025) ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಈ ಗ್ರೂಪ್-ಎ ಪಂದ್ಯವು ದುಬೈನಲ್ಲಿ ನಡೆಯಲಿದೆ. ಸೆಪ್ಟೆಂಬರ್ 14 ರಂದು ಭಾರತ ವಿರುದ್ಧದ ಪಂದ್ಯಕ್ಕೂ ಮೊದಲು, ಪಾಕಿಸ್ತಾನ ತಂಡವು ಈ ಪಂದ್ಯವನ್ನು ಯಾವುದೇ ಬೆಲೆ ತೆತ್ತಾದರೂ ಗೆಲ್ಲಲು ಬಯಸುತ್ತದೆ. ಯುಎಇಯಲ್ಲಿ ನಡೆದ ತ್ರಿಕೋನ ಸರಣಿಯನ್ನು ಗೆದ್ದುಕೊಂಡಿರುವ ಪಾಕಿಸ್ತಾನದ ನೈತಿಕ ಸ್ಥೈರ್ಯ ಹೆಚ್ಚಾಗಿದ್ದು, ಈ ಪಂದ್ಯಾವಳಿಯಲ್ಲಿ ಅದೇ ಗೆಲುವಿನ ಓಟವನ್ನು ಮುಂದುವರೆಸುವ ಇರಾದೆಯಲ್ಲಿದೆ. ತ್ರಿಕೋನ ಸರಣಿಯ ಫೈನಲ್‌ನಲ್ಲಿ ಅಫ್ಘಾನಿಸ್ತಾನವನ್ನು ಸೋಲಿಸುವ ಮೂಲಕ ಪಾಕಿಸ್ತಾನ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದೀಗ ಒಮಾನ್ ವಿರುದ್ಧದ ಪಂದ್ಯದೊಂದಿಗೆ ಏಷ್ಯಾಕಪ್‌ನಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.

ಪಂದ್ಯ ಎಷ್ಟು ಗಂಟೆಗೆ ಪ್ರಾರಂಭ?

ಪಾಕಿಸ್ತಾನ ಮತ್ತು ಒಮಾನ್ ನಡುವೆ ನಡೆಯಲಿರುವ ಏಷ್ಯಾಕಪ್‌ನ ನಾಲ್ಕನೇ ಪಂದ್ಯವು ದುಬೈನಲ್ಲಿ ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8 ಗಂಟೆಗೆ ಪ್ರಾರಂಭವಾಗಲಿದೆ. ಈ ಮೊದಲು ಈ ಪಂದ್ಯಗಳು ಸಂಜೆ 7:30 ಕ್ಕೆ ಆರಂಭವಾಗಬೇಕಿತ್ತು. ಆದರೆ ಬಿಸಿಲಿನ ಕಾರಣ, ಈ ಪಂದ್ಯಾವಳಿಯ ಎಲ್ಲಾ ಪಂದ್ಯಗಳ ಸಮಯವನ್ನು ಬದಲಾಯಿಸಲಾಯಿತು.

ಪಂದ್ಯವನ್ನು ನೇರಪ್ರಸಾರ ವೀಕ್ಷಿಸುವುದು ಹೇಗೆ?

ಏಷ್ಯಾಕಪ್‌ನ ಎಲ್ಲಾ ಪಂದ್ಯಗಳನ್ನು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರ ಮಾಡಲಾಗುತ್ತಿದೆ. ಅಭಿಮಾನಿಗಳು ಈ ಪಂದ್ಯಗಳನ್ನು ಸೋನಿ ಸ್ಪೋರ್ಟ್ಸ್‌ನ ವಿವಿಧ ಚಾನೆಲ್‌ಗಳಲ್ಲಿ ವಿವಿಧ ಭಾಷೆಗಳಲ್ಲಿ ವೀಕ್ಷಿಸಲು ಸಾಧ್ಯವಾಗುತ್ತದೆ. ಪಾಕಿಸ್ತಾನ ಮತ್ತು ಒಮಾನ್ ನಡುವಿನ ಈ ಪಂದ್ಯವನ್ನು ಅಭಿಮಾನಿಗಳು ಸೋನಿ ಲೈವ್ ಅಪ್ಲಿಕೇಶನ್‌ನಲ್ಲಿ ನೇರಪ್ರಸಾರ ವೀಕ್ಷಿಸಲು ಸಾಧ್ಯವಾಗುತ್ತದೆ. ಅಲ್ಲದೆ ಭಾರತದಲ್ಲೂ ಸಹ ಪಾಕಿಸ್ತಾನದ ಪಂದ್ಯವನ್ನು ನೇರ ಪ್ರಸಾರ ಮಾಡಲಾಗುತ್ತಿದೆ.

ಎರಡೂ ತಂಡಗಳು

ಪಾಕಿಸ್ತಾನ ತಂಡ: ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫಖರ್ ಜಮಾನ್, ಹಾರಿಸ್ ರೌಫ್, ಹಸನ್ ಅಲಿ, ಹಸನ್ ನವಾಜ್, ಹುಸೇನ್ ತಲತ್, ಖುಷ್ದಿಲ್ ಶಾ, ಮೊಹಮ್ಮದ್ ಹ್ಯಾರಿಸ್, ಮೊಹಮ್ಮದ್ ನವಾಜ್, ಮೊಹಮ್ಮದ್ ವಸೀಮ್ ಜೂನಿಯರ್, ಸಾಹಿಬ್ಜಾದಾ ಫರ್ಹಾನ್, ಸೈಮ್ ಅಯೂಬ್, ಸಲ್ಮಾನ್ ಮಿರ್ಜಾ, ಶಾಹೀನ್ ಅಫ್ರಿದಿ, ಸುಫ್ಯಾನ್ ಮೊಕಿಮ್.

ಒಮಾನ್ ತಂಡ: ಜತೀಂದರ್ ಸಿಂಗ್ (ನಾಯಕ), ವಿನಾಯಕ್ ಶುಕ್ಲಾ, ಮೊಹಮ್ಮದ್ ನದೀಮ್, ಹಮ್ಮದ್ ಮಿರ್ಜಾ, ಅಮೀರ್ ಕಲೀಮ್, ಸುಫಿಯಾನ್ ಮಹಮೂದ್, ಆಶಿಶ್ ಒಡೆದ್ರಾ, ಶಕೀಲ್ ಅಹ್ಮದ್, ಆರ್ಯನ್ ಬಿಶ್ತ್, ಸಮಯ್ ಶ್ರೀವಾಸ್ತವ, ಸುಫಿಯಾನ್ ಯೂಸುಫ್, ನದೀಮ್ ಖಾನ್, ಜಿಕ್ರಿಯಾ ಇಸ್ಲಾಂ, ಫೈಸಲ್ ಶಾಹ್, ಕರಣ್ ಮುಹಮ್ಮದ್ ಎ ಮತ್ತು ಕರಣ್ ಸೋನಾವಲೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:36 pm, Thu, 11 September 25