AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

AUS vs PAK: ಪರ್ತ್​ ಟೆಸ್ಟ್ ಸೋತ ಪಾಕ್ ತಂಡಕ್ಕೆ ಡಬಲ್ ಶಾಕ್ ನೀಡಿದ ಐಸಿಸಿ..!

AUS vs PAK: ನಿದಾನಗತಿಯ ಬೌಲಿಂಗ್ ಮಾಡಿದ ಪಾಕಿಸ್ತಾನದ ಆಟಗಾರರಿಗೆ ಐಸಿಸಿ ಪಂದ್ಯ ಶುಲ್ಕದ ಶೇಕಡಾ 10ರಷ್ಟು ದಂಡ ವಿಧಿಸಿದೆ. ಇದಲ್ಲದೆ, ಐಸಿಸಿ ಡಬ್ಲ್ಯುಟಿಸಿ 2025 ರ ಪಾಯಿಂಟ್‌ಗಳ ಪಟ್ಟಿಯಲ್ಲಿ ಪಾಕಿಸ್ತಾನದ 2 ಅಂಕಗಳನ್ನು ಕಡಿಮೆ ಮಾಡಿದೆ.

AUS vs PAK: ಪರ್ತ್​ ಟೆಸ್ಟ್ ಸೋತ ಪಾಕ್ ತಂಡಕ್ಕೆ ಡಬಲ್ ಶಾಕ್ ನೀಡಿದ ಐಸಿಸಿ..!
ಪಾಕ್ ಟೆಸ್ಟ್ ತಂಡ
ಪೃಥ್ವಿಶಂಕರ
|

Updated on: Dec 18, 2023 | 7:00 PM

Share

ಪರ್ತ್​ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಹೀನಾಯ ಸೋಲು ಅನುಭವಿಸಿದ್ದ ಪಾಕಿಸ್ತಾನ Australia vs Pakistan) ತಂಡಕ್ಕೆ ಐಸಿಸಿ (ICC) ಇದೀಗ ಡಬಲ್ ಆಘಾತ ನೀಡಿದೆ. 2025 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ದೃಷ್ಟಿಕೋನದಿಂದ ಆಸ್ಟ್ರೇಲಿಯಾ ವಿರುದ್ಧದ ಗೆಲುವು ಪಾಕಿಸ್ತಾನಕ್ಕೆ ಅತ್ಯಗತ್ಯವಾಗಿತ್ತು. ಆದರೆ ಈ ಪಂದ್ಯದಲ್ಲಿ ಪಾಕ್ ತಂಡಕ್ಕೆ ನಿರೀಕ್ಷಿತ ಪ್ರದರ್ಶನ ನೀಡಲಾಗಿರಲಿಲ್ಲ. ಇದೀಗ ಸೋಲಿನ ಶಾಕ್​ನಲ್ಲಿರುವ ಶಾನ್ ಮಸೂದ್​ ಪಡೆಗೆ ಐಸಿಸಿ ದಂಡ ವಿಧಿಸಿರುವುದಲ್ಲದೆ, 2 ಅಂಕಗಳನ್ನು ಸಹ ಕಡಿತಗೊಳಿಸಿದೆ. ಇದರಿಂದಾಗಿ ಪಾಕಿಸ್ತಾನ ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ.

ಶೇಕಡಾ 10ರಷ್ಟು ದಂಡ

ಆಸ್ಟ್ರೇಲಿಯಾ ವಿರುದ್ಧ 360 ರನ್‌ಗಳ ಸೋಲಿನ ನಂತರ, ಪಾಕಿಸ್ತಾನ ಡಬ್ಲ್ಯುಟಿಸಿ ಪಾಯಿಂಟ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದೆ. ಇದರ ಲಾಭ ಪಡೆದ ಭಾರತ ತಂಡ ಮೊದಲ ಸ್ಥಾನಕ್ಕೇರಿತು. ಇದೀಗ ಪಾಕಿಸ್ತಾನಕ್ಕೆ ಮತ್ತೊಂದು ತೀವ್ರ ಹೊಡೆತ ಬಿದ್ದಿದೆ. ನಿದಾನಗತಿಯ ಬೌಲಿಂಗ್ ಮಾಡಿದ ಪಾಕಿಸ್ತಾನದ ಆಟಗಾರರಿಗೆ ಐಸಿಸಿ ಪಂದ್ಯ ಶುಲ್ಕದ ಶೇಕಡಾ 10ರಷ್ಟು ದಂಡ ವಿಧಿಸಿದೆ. ಇದಲ್ಲದೆ, ಐಸಿಸಿ ಡಬ್ಲ್ಯುಟಿಸಿ 2025 ರ ಪಾಯಿಂಟ್‌ಗಳ ಪಟ್ಟಿಯಲ್ಲಿ ಪಾಕಿಸ್ತಾನದ 2 ಅಂಕಗಳನ್ನು ಕಡಿಮೆ ಮಾಡಿದೆ.

AUS vs PAK: ಆಸೀಸ್ ಮಾರಕ ದಾಳಿಗೆ ಪಾಕ್ ತತ್ತರ; ಮೊದಲ ಟೆಸ್ಟ್ ಸೋತ ಶಾನ್ ಮಸೂದ್ ಪಡೆ

2 ಪಾಯಿಂಟ್ಸ್ ಕಡಿತ

ಐಸಿಸಿಯ ಈ ಕ್ರಮ ಪಾಕಿಸ್ತಾನಕ್ಕೆ ದೊಡ್ಡ ಹೊಡೆತ ನೀಡಿದೆ. ಮೊದಲಿಗೆ ಆಸ್ಟ್ರೇಲಿಯ ವಿರುದ್ಧದ ಸೋಲಿನಿಂದ ಪಾಯಿಂಟ್ಸ್ ಪಟ್ಟಿಯಲ್ಲಿ ಸೋಲನುಭವಿಸಿದ್ದು, ಇದೀಗ 2 ಪ್ರಮುಖ ಪಾಯಿಂಟ್ಸ್ ಕೂಡ ಕಡಿಮೆಯಾಗಿದೆ. ಈ ಪೆನಾಲ್ಟಿಯೊಂದಿಗೆ, ಪಾಯಿಂಟ್ ಪಟ್ಟಿಯಲ್ಲಿ ಪಾಕಿಸ್ತಾನದ ಅಂಕಗಳು ಶೇಕಡಾ 66.67 ರಿಂದ 61.11 ಕ್ಕೆ ಕುಸಿದಿದೆ.

ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22ರ ಪ್ರಕಾರ ತಂಡವು ಒಂದು ಓವರ್‌ಗೆ ನಿಗದಿತ ಸಮಯಕ್ಕಿಂತ ಹೆಚ್ಚಿನ ಸಮಯವನ್ನು ತೆಗೆದುಕೊಂಡರೆ, ಆ ತಂಡದ ಎಲ್ಲಾ ಆಟಗಾರರಿಗೆ ಪ್ರತಿ ಓವರ್‌ಗೆ ಶೇಕಡಾ 5 ರಂತೆ ದಂಡ ವಿಧಿಸಲಾಗುತ್ತದೆ. ಪಾಕಿಸ್ತಾನ ಎರಡು ಓವರ್‌ಗಳನ್ನು ವಿಳಂಬಗೊಳಿಸಿದ್ದು, ಈ ಕಾರಣದಿಂದಾಗಿ ಆಟಗಾರರಿಗೆ ಶೇಕಡಾ 10 ರಷ್ಟು ದಂಡವನ್ನು ವಿಧಿಸಲಾಗಿದೆ.

ಇದಲ್ಲದೆ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಆರ್ಟಿಕಲ್ 16.11.2 ರ ಪ್ರಕಾರ, ಪ್ರತಿ ತಡವಾದ ಓವರ್‌ಗೆ ಪಾಯಿಂಟ್‌ಗಳ ಪಟ್ಟಿಯಿಂದ ಒಂದು ಅಂಕವನ್ನು ಕಡಿತಗೊಳಿಸಲಾಗುತ್ತದೆ. ಪಾಕಿಸ್ತಾನ ಎರಡು ಓವರ್‌ಗಳನ್ನು ತಡವಾಗಿ ಬೌಲ್ ಮಾಡಿದ್ದರಿಂದ ಅವರಿಗೆ 2 ಅಂಕಗಳನ್ನು ದಂಡವಾಗಿ ವಿಧಿಸಲಾಗಿದೆ.

ಶಿಕ್ಷೆ ಪ್ರಕಟಿಸಿದ ಜಾವಗಲ್ ಶ್ರೀನಾಥ್

ಐಸಿಸಿ ಎಲೈಟ್ ಪ್ಯಾನೆಲ್ ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ಅವರು ಸಮಯ ಮಿತಿಯನ್ನು ಗಮನದಲ್ಲಿಟ್ಟುಕೊಂಡು ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಈ ಶಿಕ್ಷೆ ನೀಡಿದ್ದಾರೆ. ಆನ್-ಫೀಲ್ಡ್ ಅಂಪೈರ್‌ಗಳಾದ ರಿಚರ್ಡ್ ಇಲ್ಲಿಂಗ್‌ವರ್ತ್ ಮತ್ತು ಜೋಯಲ್ ವಿಲ್ಸನ್ ಮತ್ತು ಮೂರನೇ ಅಂಪೈರ್ ಮೈಕೆಲ್ ಗೋಫ್ ಮತ್ತು ನಾಲ್ಕನೇ ಅಂಪೈರ್ ಡೊನೊವನ್ ಕೋಚ್ ಅವರು ಪಾಕ್ ತಂಡ ತಡವಾಗಿ ಓವರ್‌ ಮಾಡಿದೆ ಎಂಬ ಆರೋಪ ಹೊರಿಸಿದ್ದರು. ಇದಾದ ಬಳಿಕ ರೆಫರಿ ಈ ಬಗ್ಗೆ ಕ್ರಮ ಕೈಗೊಂಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ದಿಲೀಪ್ ರಾಜ್​​ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ
ದಿಲೀಪ್ ರಾಜ್​​ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ