ಏಕದಿನ ವಿಶ್ವಕಪ್ನ 22ನೇ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ಅಫ್ಘಾನಿಸ್ತಾನ್ ಭರ್ಜರಿ ಜಯ ಸಾಧಿಸಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಝಂ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 282 ರನ್ ಕಲೆಹಾಕಿತು. 283 ರನ್ಗಳ ಗುರಿ ಅಫ್ಘಾನಿಸ್ತಾನ್ ತಂಡ 49 ಓವರ್ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 286 ರನ್ ಬಾರಿಸುವ ಮೂಲಕ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಏಕದಿನ ಕ್ರಿಕೆಟ್ನಲ್ಲಿ ಪಾಕಿಸ್ತಾನ್ ಹಾಗೂ ಅಫ್ಘಾನಿಸ್ತಾನ್ ತಂಡಗಳು 8 ಬಾರಿ ಮುಖಾಮುಖಿಯಾಗಿವೆ. ಈ ವೇಳೆ 7 ಬಾರಿ ಪಾಕಿಸ್ತಾನ್ ತಂಡ ಜಯ ಸಾಧಿಸಿತ್ತು. ಇದೀಗ 8ನೇ ಬಾರಿಯ ಸೆಣಸಾಟದಲ್ಲಿ ಪಾಕ್ ಪಡೆಯನ್ನು ಬಗ್ಗು ಬಡಿದು ಅಫ್ಘಾನ್ ಚೊಚ್ಚಲ ಜಯ ಸಾಧಿಸಿರುವುದು ವಿಶೇಷ.
ಪಾಕಿಸ್ತಾನ (ಪ್ಲೇಯಿಂಗ್ XI): ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಬಾಬರ್ ಆಝಂ (ನಾಯಕ), ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಉಸಾಮಾ ಮಿರ್, ಶಾಹೀನ್ ಅಫ್ರಿದಿ, ಹಸನ್ ಅಲಿ, ಹ್ಯಾರಿಸ್ ರೌಫ್.
ಅಫ್ಘಾನಿಸ್ತಾನ್ (ಪ್ಲೇಯಿಂಗ್ XI): ರಹಮಾನುಲ್ಲಾ ಗುರ್ಬಾಝ್, ಇಬ್ರಾಹಿಂ ಝದ್ರಾನ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ(ನಾಯಕ), ಅಝ್ಮತುಲ್ಲಾ ಒಮರ್ಜಾಯ್, ಇಕ್ರಮ್ ಅಲಿಖಿಲ್ (ವಿಕೆಟ್ ಕೀಪರ್), ಮೊಹಮ್ಮದ್ ನಬಿ, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನವೀನ್-ಉಲ್-ಹಕ್, ನೂರ್ ಅಹ್ಮದ್.
ಶಾಹೀನ್ ಅಫ್ರಿದಿ ಎಸೆದ 49ನೇ ಓವರ್ನ ಕೊನೆಯ ಎಸೆತದಲ್ಲಿ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ಅಫ್ಘಾನ್ ತಂಡದ ನಾಯಕ ಹಶ್ಮತ್ ಶಾಹಿದಿ.
ಈ ಫೋರ್ನೊಂದಿಗೆ ಪಾಕಿಸ್ತಾನ್ ವಿರುದ್ಧ ಗೆದ್ದು ಬೀಗಿದ ಅಫ್ಘಾನಿಸ್ತಾನ್ ತಂಡ.
ಹಸನ್ ಅಲಿ ಎಸೆದ 48ನೇ ಓವರ್ನ 3ನೇ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ರಹಮತ್ ಶಾ.
ಅಫ್ಘಾನಿಸ್ತಾನ್ ತಂಡಕ್ಕೆ ಗೆಲ್ಲಲು 12 ಎಸೆತಗಳಲ್ಲಿ ಕೇವಲ 4 ರನ್ಗಳ ಅವಶ್ಯಕತೆ.
ಕ್ರೀಸ್ನಲ್ಲಿ ರಹಮತ್ ಶಾ ಹಾಗೂ ಹಶ್ಮತ್ ಶಾಹಿದಿ ಬ್ಯಾಟಿಂಗ್.
ಉಸಾಮ ಮಿರ್ ಎಸೆದ 46ನೇ ಓವರ್ನ 2ನೇ ಎಸೆತದಲ್ಲಿ ಹಿಂಬದಿಯತ್ತ ಫೋರ್ ಬಾರಿಸಿದ ಹಶ್ಮತ್ ಶಾಹಿದಿ.
46 ಓವರ್ಗಳ ಮುಕ್ತಾಯದ ವೇಳೆಗೆ 264 ರನ್ ಕಲೆಹಾಕಿದ ಅಫ್ಘಾನಿಸ್ತಾನ್.
ಕೊನೆಯ 4 ಓವರ್ಗಳಲ್ಲಿ ಕೇವಲ 19 ರನ್ಗಳ ಅವಶ್ಯಕತೆ.
ಕ್ರೀಸ್ನಲ್ಲಿ ರಹಮತ್ ಶಾ ಹಾಗೂ ಹಶ್ಮತ್ ಶಾಹಿದಿ ಬ್ಯಾಟಿಂಗ್.
45 ಓವರ್ಗಳಲ್ಲಿ 253 ರನ್ ಕಲೆಹಾಕಿರುವ ಅಫ್ಘಾನಿಸ್ತಾನ್ ತಂಡ.
ಹಶ್ಮತ್ ಶಾಹಿದಿ ಹಾಗೂ ರಹಮತ್ ಶಾ ಉತ್ತಮ ಬ್ಯಾಟಿಂಗ್.
ಕೊನೆಯ 5 ಓವರ್ಗಳಲ್ಲಿ ಅಫ್ಘಾನಿಸ್ತಾನ್ ತಂಡಕ್ಕೆ ಗೆಲ್ಲಲು 30 ರನ್ಗಳ ಅವಶ್ಯಕತೆ.
ಶಾದಾಬ್ ಖಾನ್ ಎಸೆದ 43ನೇ ಓವರ್ನ 2ನೇ ಎಸೆತದಲ್ಲಿ ರಿವರ್ಸ್ ಸ್ವೀಪ್ ಶಾಟ್ ಮೂಲಕ ಫೋರ್ ಬಾರಿಸಿದ ಎಡಗೈ ದಾಂಡಿಗ ಹಶ್ಮತ್ ಶಾಹಿದಿ.
43 ಓವರ್ಗಳ ಮುಕ್ತಾಯದ ವೇಳೆಗೆ ಅಫ್ಘಾನಿಸ್ತಾನ್ ತಂಡದ ಸ್ಕೋರ್ 239 ರನ್ಗಳು.
ಕ್ರೀಸ್ನಲ್ಲಿ ರಹಮತ್ ಶಾ ಹಾಗೂ ಹಶ್ಮತ್ ಶಾಹಿದಿ ಬ್ಯಾಟಿಂಗ್.
40 ಓವರ್ಗಳಲ್ಲಿ 221 ರನ್ ಕಲೆಹಾಕಿದ ಅಫ್ಘಾನಿಸ್ತಾನ್.
ಅಫ್ಘಾನಿಸ್ತಾನ್ ತಂಡಕ್ಕೆ ಗೆಲ್ಲಲು ಕೊನೆಯ 10 ಓವರ್ಗಳಲ್ಲಿ 62 ರನ್ಗಳ ಅವಶ್ಯಕತೆ.
ಕ್ರೀಸ್ನಲ್ಲಿ ನಾಯಕ ಹಶ್ಮತ್ ಶಾಹಿದಿ ಹಾಗೂ ರಹಮತ್ ಶಾ ಬ್ಯಾಟಿಂಗ್.
ಶಾದಾಬ್ ಖಾನ್ ಎಸೆದ 37ನೇ ಓವರ್ನ ಮೂರನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ಹಶ್ಮತ್ ಶಾಹಿದಿ.
ಈ ಫೋರ್ನೊಂದಿಗೆ ದ್ವಿಶತಕ ಪೂರೈಸಿದ ಅಫ್ಘಾನಿಸ್ತಾನ್ ತಂಡ.
ಕ್ರೀಸ್ನಲ್ಲಿ ರಹಮತ್ ಶಾ ಹಾಗೂ ಹಶ್ಮತ್ ಶಾಹಿದಿ ಬ್ಯಾಟಿಂಗ್.
35 ಓವರ್ಗಳಲ್ಲಿ 195 ರನ್ ಕಲೆಹಾಕಿರುವ ಅಫ್ಘಾನ್ ಬ್ಯಾಟರ್ಗಳು.
2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರುವ ಪಾಕಿಸ್ತಾನ್ ಬೌಲರ್ಗಳು.
ಅಫ್ಘಾನಿಸ್ತಾನ್ ತಂಡಕ್ಕೆ 90 ಎಸೆತಗಳಲ್ಲಿ 88 ರನ್ಗಳ ಅವಶ್ಯಕತೆ.
ಕ್ರೀಸ್ನಲ್ಲಿ ರಹಮತ್ ಶಾ ಹಾಗೂ ಹಶ್ಮತ್ ಬ್ಯಾಟಿಂಗ್.
ಹಸನ್ ಅಲಿ ಎಸೆದ 34ನೇ ಓವರ್ನ 3ನೇ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಇಬ್ರಾಹಿಂ.
113 ಎಸೆತಗಳಲ್ಲಿ 87 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಅಫ್ಘಾನಿಸ್ತಾನ್ ತಂಡದ ಆರಂಭಿಕ ಆಟಗಾರ ಇಬ್ರಾಹಿಂ ಝದ್ರಾನ್.
ಕ್ರೀಸ್ನಲ್ಲಿ ರಹಮತ್ ಶಾ ಹಾಗೂ ಹಶ್ಮತ್ ಬ್ಯಾಟಿಂಗ್.
32 ಓವರ್ಗಳ ಮುಕ್ತಾಯದ ವೇಳೆಗೆ ಅಫ್ಘಾನಿಸ್ತಾನ್ ತಂಡದ ಸ್ಕೋರ್ 184 ರನ್ಗಳು.
108 ಎಸೆತಗಳಲ್ಲಿ ಅಫ್ಘಾನಿಸ್ತಾನ್ ತಂಡಕ್ಕೆ 99 ರನ್ಗಳ ಗುರಿ.
ಕ್ರೀಸ್ನಲ್ಲಿ ರಹಮತ್ ಶಾ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್.
30 ಓವರ್ಗಳ ಮುಕ್ತಾಯದ ವೇಳೆಗೆ 175 ರನ್ ಕಲೆಹಾಕಿದ ಅಫ್ಘಾನಿಸ್ತಾನ್.
ವಿಕೆಟ್ ಪಡೆಯಲು ಪಾಕ್ ಬೌಲರ್ಗಳ ಹರಸಾಹಸ.
ಅಫ್ಘಾನಿಸ್ತಾನ್ ತಂಡಕ್ಕೆ ಗೆಲ್ಲಲು 120 ಎಸೆತಗಳಲ್ಲಿ 108 ರನ್ಗಳ ಅವಶ್ಯಕತೆ
ಕ್ರೀಸ್ನಲ್ಲಿ ರಹಮತ್ ಶಾ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್.
ಉಸಾಮ ಮಿರ್ ಎಸೆದ 29ನೇ ಓವರ್ನ 5ನೇ ಮತ್ತು 6ನೇ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ರಹಮತ್ ಶಾ
ಕ್ರೀಸ್ನಲ್ಲಿ ರಹಮತ್ ಶಾ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್.
25 ಓವರ್ಗಳಲ್ಲಿ 152 ರನ್ ಕಲೆಹಾಕಿದ ಅಫ್ಘಾನಿಸ್ತಾನ್ ತಂಡ.
ರಹಮಾನುಲ್ಲಾ ಗುರ್ಬಾಝ್ (65) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರುವ ಶಾಹೀನ್ ಅಫ್ರಿದಿ.
ಅಫ್ಘಾನಿಸ್ತಾನ್ ತಂಡದಿಂದ ಭರ್ಜರಿ ಬ್ಯಾಟಿಂಗ್.
ಕ್ರೀಸ್ನಲ್ಲಿ ರಹಮತ್ ಶಾ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್.
ಅಫ್ಘಾನಿಸ್ತಾನ್ ತಂಡಕ್ಕೆ 283 ರನ್ಗಳ ಗುರಿ ನೀಡಿರುವ ಪಾಕಿಸ್ತಾನ್.
ಶಾಹೀನ್ ಶಾ ಅಫ್ರಿದಿ ಎಸೆದ 22ನೇ ಓವರ್ನ ಮೊದಲ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ ರಹಮಾನುಲ್ಲಾ ಗುರ್ಬಾಝ್.
53 ಎಸೆತಗಳಲ್ಲಿ 65 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಅಫ್ಘಾನ್ ಆರಂಭಿಕ ಬ್ಯಾಟರ್ ರಹಮಾನುಲ್ಲಾ ಗುರ್ಬಾಝ್.
ಇಫ್ತಿಕರ್ ಅಹ್ಮದ್ ಎಸೆದ 20ನೇ ಓವರ್ನ 2ನೇ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ಗುರ್ಬಾಝ್.
20 ಓವರ್ಗಳ ಮುಕ್ತಾಯದ ವೇಳೆಗೆ 128 ರನ್ ಕಲೆಹಾಕಿದ ಅಫ್ಘಾನಿಸ್ತಾನ್ ಆರಂಭಿಕರು.
ಕ್ರೀಸ್ನಲ್ಲಿ ರಹಮಾನುಲ್ಲಾ ಗುರ್ಬಾಝ್ (64) ಹಾಗೂ ಇಬ್ರಾಹಿಂ ಝದ್ರಾನ್ (61) ಬ್ಯಾಟಿಂಗ್.
ಅಫ್ಘಾನಿಸ್ತಾನ್ ತಂಡಕ್ಕೆ 283 ರನ್ಗಳ ಗುರಿ ನೀಡಿರುವ ಪಾಕಿಸ್ತಾನ್.
ಶಾದಾಬ್ ಖಾನ್ ಎಸೆತದಲ್ಲಿ ಲೆಗ್ ಸೈಡ್ನತ್ತ ಆಕರ್ಷಕ ಫೋರ್ ಬಾರಿಸಿದ ಗುರ್ಬಾಝ್.
ಈ ಫೋರ್ನೊಂದಿಗೆ 38 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರಹಮಾನುಲ್ಲಾ ಗುರ್ಬಾಝ್.
16 ಓವರ್ಗಳಲ್ಲಿ ಶತಕದ ಗಡಿದಾಟಿದ ಅಫ್ಘಾನಿಸ್ತಾನ್ ತಂಡದ ಸ್ಕೋರ್.
ಉಸಾಮ ಮಿರ್ ಎಸೆದ 15ನೇ ಓವರ್ನ 2ನೇ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ಇಬ್ರಾಹಿಂ ಝದ್ರಾನ್.
ಈ ಫೋರ್ನೊಂದಿಗೆ 54 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಇಬ್ರಾಹಿಂ ಝದ್ರಾನ್.
15 ಓವರ್ಗಳ ಮುಕ್ತಾಯದ ವೇಳೆಗೆ ಅಫ್ಗಾನಿಸ್ತಾನ್ ತಂಡದ ಸ್ಕೋರ್ 98 ರನ್ಗಳು.
ಕ್ರೀಸ್ನಲ್ಲಿ ರಹಮಾನುಲ್ಲಾ ಗುರ್ಬಾಝ್ (46) ಹಾಗೂ ಇಬ್ರಾಹಿಂ ಝದ್ರಾನ್ (50) ಬ್ಯಾಟಿಂಗ್.
ಹ್ಯಾರಿಸ್ ರೌಫ್ ಎಸೆದ 12ನೇ ಓವರ್ನ 4ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ರಹಮಾನುಲ್ಲಾ ಗುರ್ಬಾಝ್.
ಅಫ್ಘಾನಿಸ್ತಾನ್ ಆರಂಭಿಕರಿಂದ ಭರ್ಜರಿ ಬ್ಯಾಟಿಂಗ್.
ಕ್ರೀಸ್ನಲ್ಲಿ ರಹಮಾನುಲ್ಲಾ ಗುರ್ಬಾಝ್ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್.
10 ಓವರ್ಗಳ ಮುಕ್ತಾಯದ ವೇಳೆಗೆ 60 ರನ್ ಕಲೆಹಾಕಿದ ಅಫ್ಘಾನಿಸ್ತಾನ್ ತಂಡ.
ಕ್ರೀಸ್ನಲ್ಲಿ ರಹಮಾನುಲ್ಲಾ ಗುರ್ಬಾಝ್ (32) ಹಾಗೂ ಇಬ್ರಾಹಿಂ ಝದ್ರಾನ್ (28) ಬ್ಯಾಟಿಂಗ್.
ಅಫ್ಘಾನಿಸ್ತಾನ್ ತಂಡಕ್ಕೆ 283 ರನ್ಗಳ ಗುರಿ ನೀಡಿರುವ ಪಾಕಿಸ್ತಾನ್ ತಂಡ.
ಹ್ಯಾರಿಸ್ ರೌಫ್ ಎಸೆದ 8ನೇ ಓವರ್ನ 2ನೇ ಮತ್ತು 3ನೇ ಎಸೆತಗಳಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ರಹಮಾನುಲ್ಲಾ ಗುರ್ಬಾಝ್.
5ನೇ ಮತ್ತು 6ನೇ ಎಸೆತಗಳಲ್ಲಿ ಮತ್ತೆರಡು ಫೋರ್ಗಳನ್ನು ಸಿಡಿಸಿದ ಗುರ್ಬಾಝ್.
ಈ ಫೋರ್ಗಳೊಂದಿಗೆ ಅರ್ಧಶತಕ ಪೂರೈಸಿದ ಅಫ್ಘಾನಿಸ್ತಾನ್ ತಂಡ.
ಹಸನ್ ಅಲಿ ಎಸೆದ 6ನೇ ಓವರ್ನ ಕೊನೆಯ ಎಸೆತದಲ್ಲಿ ಆಕರ್ಷಕ ಕವರ್ ಡ್ರೈವ್ ಬಾರಿಸಿದ ಇಬ್ರಾಹಿಂ ಝದ್ರಾನ್
ಕ್ರೀಸ್ನಲ್ಲಿ ರಹಮಾನುಲ್ಲಾ ಗುರ್ಬಾಝ್ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್.
5 ಓವರ್ಗಳಲ್ಲಿ 28 ರನ್ ಕಲೆಹಾಕಿದ ಅಫ್ಘಾನಿಸ್ತಾನ್ ತಂಡದ ಆರಂಭಿಕರು.
ಕ್ರೀಸ್ನಲ್ಲಿ ರಹಮಾನುಲ್ಲಾ ಗುರ್ಬಾಝ್ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್.
ಅಫ್ಘಾನಿಸ್ತಾನ್ ತಂಡಕ್ಕೆ 283 ರನ್ಗಳ ಗುರಿ ನೀಡಿರುವ ಪಾಕಿಸ್ತಾನ್
ಹಸನ್ ಅಲಿ ಎಸೆದ 2ನೇ ಓವರ್ನ 4ನೇ ಮತ್ತು 5ನೇ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಇಬ್ರಾಹಿಂ ಝದ್ರಾನ್.
ಕ್ರೀಸ್ನಲ್ಲಿ ರಹಮಾನುಲ್ಲಾ ಗುರ್ಬಾಝ್ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್.
ಶಾಹೀನ್ ಅಫ್ರಿದಿ ಎಸೆದ ಮೊದಲ ಓವರ್ನ ಮೊದಲ ಎಸೆತದಲ್ಲೇ ಫೋರ್ ಬಾರಿಸಿದ ರಹಮಾನುಲ್ಲಾ ಗುರ್ಬಾಝ್.
5ನೇ ಎಸೆತದಲ್ಲಿ ಮತ್ತೊಂದು ಫೋರ್ ಬಾರಿಸಿದ ಇಬ್ರಾಹಿಂ ಝದ್ರಾನ್.
ಮೊದಲ ಓವರ್ನಲ್ಲೇ 10 ರನ್ ಕಲೆಹಾಕಿದ ಅಫ್ಘಾನಿಸ್ತಾನ್ ತಂಡ.
ನವೀನ್ ಉಲ್ ಹಕ್ ಎಸೆದ ಕೊನೆಯ ಓವರ್ನ 2ನೇ ಎಸೆತದಲ್ಲಿ ಡೀಪ್ ಎಕ್ಸ್ಟ್ರಾ ಕವರ್ನತ್ತ ಕ್ಯಾಚ್ ನೀಡಿದ ಇಫ್ತಿಕರ್ ಅಹ್ಮದ್ (40).
ಅಂತಿಮ ಎಸೆದಲ್ಲಿ ಲಾಂಗ್ ಆನ್ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ ಶಾದಾಬ್ ಖಾನ್ (40).
ಕೊನೆಯ ಓವರ್ನಲ್ಲಿ ಕೇವಲ 3 ರನ್ ನೀಡಿ 2 ವಿಕೆಟ್ ಕಬಳಿಸಿದ ನವೀನ್ ಉಲ್ ಹಕ್.
ಅಫ್ಘಾನಿಸ್ತಾನ್ ತಂಡಕ್ಕೆ 283 ರನ್ಗಳ ಗುರಿ.
ಅಝ್ಮತ್ ಒಮರ್ಝಾಹಿ ಎಸೆದ 49ನೇ ಓವರ್ನ 4ನೇ ಎಸೆತದಲ್ಲಿ ಲಾಂಗ್ ಆಫ್ನತ್ತ ಆಕರ್ಷಕ ಸಿಕ್ಸ್ ಬಾರಿಸಿದ ಇಫ್ತಿಕರ್ ಅಹ್ಮದ್.
49 ಓವರ್ಗಳ ಮುಕ್ತಾಯದ ವೇಳೆಗೆ 279 ರನ್ ಕಲೆಹಾಕಿದ ಅಫ್ಘಾನಿಸ್ತಾನ್.
ಕ್ರೀಸ್ನಲ್ಲಿ ಇಫ್ತಿಕರ್ ಅಹ್ಮದ್ ಹಾಗೂ ಶಾದಾಬ್ ಖಾನ್ ಬ್ಯಾಟಿಂಗ್.
ಅಝ್ಮತ್ ಎಸೆದ 47ನೇ ಓವರ್ನ 2ನೇ ಎಸೆತದಲ್ಲಿ ಲಾಂಗ್ ಆನ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಶಾದಾಬ್ ಖಾನ್.
47 ಓವರ್ಗಳ ಮುಕ್ತಾಯದ ವೇಳೆಗೆ 250 ರನ್ ಕಲೆಹಾಕಿದ ಪಾಕಿಸ್ತಾನ್.
ಕ್ರೀಸ್ನಲ್ಲಿ ಇಫ್ತಿಕರ್ ಅಹ್ಮದ್ ಹಾಗೂ ಶಾದಾಬ್ ಖಾನ್ ಬ್ಯಾಟಿಂಗ್.
ರಶೀದ್ ಖಾನ್ ಎಸೆದ 45ನೇ ಓವರ್ನ 5ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಇಫ್ತಿಕರ್ ಅಹ್ಮದ್.
ಕ್ರೀಸ್ನಲ್ಲಿ ಇಫ್ತಿಕರ್ ಅಹ್ಮದ್ ಹಾಗೂ ಶಾದಾಬ್ ಖಾನ್ ಬ್ಯಾಟಿಂಗ್.
ನೂರ್ ಅಹ್ಮದ್ ಎಸೆದ 42ನೇ ಓವರ್ನ ಐದನೇ ಎಸೆತದಲ್ಲಿ ಆಫ್ ಸೈಡ್ ಫ್ರಂಟ್ ಫೀಲ್ಡರ್ಗೆ ಕ್ಯಾಚ್ ನೀಡಿದ ಬಾಬರ್ ಆಝಂ.
92 ಎಸೆತಗಳಲ್ಲಿ 74 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಪಾಕ್ ತಂಡದ ನಾಯಕ ಬಾಬರ್.
ಅಫ್ಘಾನಿಸ್ತಾನ್ ತಂಡಕ್ಕೆ 5ನೇ ಯಶಸ್ಸು ತಂದುಕೊಟ್ಟ ಎಡಗೈ ಸ್ಪಿನ್ನರ್ ನೂರ್ ಅಹ್ಮದ್.
40 ಓವರ್ಗಳ ಮುಕ್ತಾಯದ ವೇಳೆಗೆ 191 ರನ್ ಕಲೆಹಾಕಿದ ಪಾಕಿಸ್ತಾನ್ ತಂಡ.
ಕೇವಲ 4 ವಿಕೆಟ್ಗಳನ್ನು ಮಾತ್ರ ಪಡೆಯುವಲ್ಲಿ ಯಶಸ್ವಿಯಾಗಿರುವ ಅಫ್ಘಾನ್ ಬೌಲರ್ಗಳು.
ಕ್ರೀಸ್ನಲ್ಲಿ ಬಾಬರ್ ಆಝಂ ಹಾಗೂ ಶಾದಾಬ್ ಖಾನ್ ಬ್ಯಾಟಿಂಗ್.
ಮುಜೀಬ್ ಉರ್ ರೆಹಮಾನ್ ಎಸೆದ 39ನೇ ಓವರ್ನ 5ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಫೋರ್ ಬಾರಿಸಿದ ಬಾಬರ್ ಆಝಂ.
ಕ್ರೀಸ್ನಲ್ಲಿ ಬಾಬರ್ ಆಝಂ ಹಾಗೂ ಶಾದಾಬ್ ಖಾನ್ ಬ್ಯಾಟಿಂಗ್.
69 ಎಸೆತಗಳಲ್ಲಿ 3 ಫೋರ್ಗಳೊಂದಿಗೆ ಅರ್ಧಶತಕ ಪೂರೈಸಿದ ಬಾಬರ್ ಆಝಂ.
37 ಓವರ್ಗಳಲ್ಲಿ 4.81 ಸರಾಸರಿಯಲ್ಲಿ ರನ್ ಪೇರಿಸಿರುವ ಪಾಕಿಸ್ತಾನ್ ಬ್ಯಾಟರ್ಗಳು.
ಕ್ರೀಸ್ನಲ್ಲಿ ಬಾಬರ್ ಆಝಂ ಹಾಗೂ ಶಾದಾಬ್ ಖಾನ್ ಬ್ಯಾಟಿಂಗ್.
ಮೊಹಮ್ಮದ್ ನಬಿ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿದ ಸೌದ್ ಶಕೀಲ್.
34 ಎಸೆತಗಳಲ್ಲಿ 25 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಎಡಗೈ ದಾಂಡಿಗ ಸೌದ್ ಶಕೀಲ್.
32 ಓವರ್ಗಳಲ್ಲಿ 151 ರನ್ ಕಲೆಹಾಕಿದ ಪಾಕಿಸ್ತಾನ್ ತಂಡ.
ಕ್ರೀಸ್ನಲ್ಲಿ ಬಾಬರ್ ಆಝಂ ಹಾಗೂ ಸೌದ್ ಶಕೀಲ್ ಬ್ಯಾಟಿಂಗ್.
ಔಟಾದವರ ಪಟ್ಟಿ:
ಇಮಾಮ್ ಉಲ್ ಹಕ್
ಅಬ್ದುಲ್ಲ ಶಫೀಕ್
ಮೊಹಮ್ಮದ್ ರಿಝ್ವಾನ್
25 ಓವರ್ಗಳಲ್ಲಿ 120 ರನ್ ಕಲೆಹಾಕಿದ ಪಾಕಿಸ್ತಾನ್ ತಂಡ.
ಮೂರು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರುವ ಅಫ್ಘಾನಿಸ್ತಾನ್ ಬೌಲರ್ಗಳು.
ಕ್ರೀಸ್ನಲ್ಲಿ ಬಾಬರ್ ಆಝಂ ಹಾಗೂ ಸೌದ್ ಶಕೀಲ್ ಬ್ಯಾಟಿಂಗ್.
ಇಮಾಮ್ ಉಲ್ ಹಕ್, ಅಬ್ದುಲ್ಲ ಶಫೀಕ್ ಹಾಗೂ ಮೊಹಮ್ಮದ್ ರಿಝ್ವಾನ್ ಔಟ್.
ಸ್ಪಿನ್ನರ್ ನೂರ್ ಅಹ್ಮದ್ ಎಸೆದ 23ನೇ ಓವರ್ನ 3ನೇ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರ ನಡೆದ ಅಬ್ದುಲ್ಲ ಶಫೀಕ್.
75 ಎಸೆತಗಳಲ್ಲಿ 58 ರನ್ ಬಾರಿಸಿ ನಿರ್ಗಮಿಸಿದ ಆರಂಭಿಕ ಬ್ಯಾಟರ್ ಅಬ್ದುಲ್ಲ ಶಫೀಕ್.
ಕ್ರೀಸ್ನಲ್ಲಿ ಬಾಬರ್ ಆಝಂ ಹಾಗೂ ಮೊಹಮ್ಮದ್ ರಿಝ್ವಾನ್ ಬ್ಯಾಟಿಂಗ್.
ಮುಜೀಬ್ ಉರ್ ರೆಹಮಾನ್ ಎಸೆದ 22ನೇ ಓವರ್ನ ಮೊದಲ ಎಸೆತದಲ್ಲಿ ಅಬ್ದುಲ್ ಶಫೀಕ್ ಬ್ಯಾಟ್ ಎಡ್ಜ್ ಆಗಿ ಹಿಂಬದಿತ್ತ ಬೌಂಡರಿ ದಾಟಿದ ಚೆಂಡು.
ಈ ಫೋರ್ನೊಂದಿಗೆ ಅರ್ಧಶತಕದ ಜೊತೆಯಾಟ ಪೂರೈಸಿದ ಬಾಬರ್ ಆಝಂ ಹಾಗೂ ಅಬ್ದುಲ್ಲ ಶಫೀಕ್.
20 ಓವರ್ಗಳಲ್ಲಿ ನೂರು ರನ್ ಪೂರೈಸಿದ ಪಾಕಿಸ್ತಾನ್ ತಂಡ.
ಬಾಬರ್ ಆಝಂ (30) ಹಾಗೂ ಅಬ್ದುಲ್ಲ ಶಫೀಕ್ (51) ಉತ್ತಮ ಜೊತೆಯಾಟದ ಬ್ಯಾಟಿಂಗ್.
ಇಮಾಮ್ ಉಲ್ ಹಕ್ (17) ವಿಕೆಟ್ ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿರುವ ಅಝ್ಮತ್ ಒಮರ್ಝಾಹಿ.
60 ಎಸೆತಗಳಲ್ಲಿ 2 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ ಅರ್ಧಶತಕ ಪೂರೈಸಿದ ಆರಂಭಿಕ ಆಟಗಾರ ಅಬ್ದುಲ್ಲ ಶಫೀಕ್.
ಕ್ರೀಸ್ನಲ್ಲಿ ಬಾಬರ್ ಆಝಂ ಹಾಗೂ ಅಬ್ದುಲ್ಲ ಶಫೀಕ್ ಬ್ಯಾಟಿಂಗ್.
ಪಾಕಿಸ್ತಾನ್ ತಂಡದಿಂದ ಉತ್ತಮ ಬ್ಯಾಟಿಂಗ್.
ಕ್ರೀಸ್ನಲ್ಲಿ ಬಾಬರ್ ಆಝಂ ಹಾಗೂ ಅಬ್ದುಲ್ಲ ಶಫೀಕ್ ಬ್ಯಾಟಿಂಗ್.
18 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 90 ರನ್ ಕಲೆಹಾಕಿದ ಪಾಕಿಸ್ತಾನ್ ತಂಡ.
ವಿಕೆಟ್ ಕಬಳಿಸಲು ಅಫ್ಘಾನ್ ಬೌಲರ್ಗಳ ಹರಸಾಹಸ.
15 ಓವರ್ಗಳು ಮುಕ್ತಾಯದ ವೇಳೆಗೆ 78 ರನ್ ಕಲೆಹಾಕಿದ ಪಾಕಿಸ್ತಾನ್.
ಇಮಾಮ್ ಉಲ್ ಹಕ್ (17) ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿರುವ ಅಝ್ಮತ್ ಒಮರ್ಝಾಹಿ.
ಕ್ರೀಸ್ನಲ್ಲಿ ಬಾಬರ್ ಆಝಂ ಹಾಗೂ ಅಬ್ದುಲ್ಲ ಶಫೀಕ್ ಬ್ಯಾಟಿಂಗ್.
ಅಝ್ಮತ್ ಒಮರ್ಝಾಹಿ 13ನೇ ಓವರ್ನ ಕೊನೆಯ ಎಸೆತದಲ್ಲಿ ಆಕರ್ಷಕ ಕವರ್ ಡ್ರೈವ್ ಫೋರ್ ಬಾರಿಸಿದ ಬಾಬರ್ ಆಝಂ.
ಕ್ರೀಸ್ನಲ್ಲಿ ಬಾಬರ್ ಆಝಂ ಹಾಗೂ ಅಬ್ದುಲ್ಲ ಶಫೀಕ್ ಬ್ಯಾಟಿಂಗ್.
ಅಝ್ಮತ್ ಒಮರ್ಝಾಹಿ ಎಸೆದ 11ನೇ ಓವರ್ನ ಮೊದಲ ಎಸೆತದಲ್ಲೇ ಪುಲ್ ಶಾಟ್ ಬಾರಿಸಲು ಯತ್ನಿಸಿ ಕ್ಯಾಚ್ ನೀಡಿದ ಇಮಾಮ್ ಉಲ್ ಹಕ್.
22 ಎಸೆತಗಳಲ್ಲಿ 17 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಎಡಗೈ ದಾಂಡಿಗ ಇಮಾಮ್ ಉಲ್ ಹಕ್.
10 ಓವರ್ಗಳ ಮುಕ್ತಾಯದ ವೇಳೆಗೆ 66 ರನ್ ಕಲೆಹಾಕಿದ ಟೀಮ್ ಇಂಡಿಯಾ.
ಕ್ರೀಸ್ನಲ್ಲಿ ಎಡಗೈ ದಾಂಡಿಗ ಇಮಾಮ್ ಉಲ್ ಹಕ್ (17) ಹಾಗೂ ಬಲಗೈ ಬ್ಯಾಟರ್ ಅಬ್ದುಲ್ಲ ಶಫೀಕ್ (38) ಬ್ಯಾಟಿಂಗ್.
ನಾಲ್ವರು ಬೌಲರ್ಗಳನ್ನು ಬಳಸಿಕೊಂಡರೂ ಮೊದಲ ಯಶಸ್ಸು ಪಡೆದ ಅಫ್ಘಾನಿಸ್ತಾನ್.
ಮುಜೀಬ್ ಉರ್ ರೆಹಮಾನ್ ಎಸೆದ 8ನೇ ಓವರ್ನ 3ನೇ ಎಸೆತದಲ್ಲಿ ಲಾಂಗ್ ಆನ್ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಅಬ್ದುಲ್ಲ ಶಫೀಕ್.
ಈ ಸಿಕ್ಸ್ನೊಂದಿಗೆ ಅರ್ಧಶತಕ ಪೂರೈಸಿದ ಪಾಕಿಸ್ತಾನ್.
ಕ್ರೀಸ್ನಲ್ಲಿ ಇಮಾಮ್ ಉಲ್ ಹಕ್ ಹಾಗೂ ಅಬ್ದುಲ್ಲ ಶಫೀಕ್ ಬ್ಯಾಟಿಂಗ್.
ಮುಜೀಬ್ ಉರ್ ರೆಹಮಾನ್ ಎಸೆದ 6ನೇ ಓವರ್ನ ಕೊನೆಯ ಎಸೆತದಲ್ಲಿ ಲೆಗ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಅಬ್ದುಲ್ಲ ಶಫೀಕ್.
ಕ್ರೀಸ್ನಲ್ಲಿ ಇಮಾಮ್ ಉಲ್ ಹಕ್ ಹಾಗೂ ಅಬ್ದುಲ್ಲ ಶಫೀಕ್ ಬ್ಯಾಟಿಂಗ್.
ನವೀನ್ ಉಲ್ ಹಕ್ ಎಸೆದ 5ನೇ ಓವರ್ನ 2ನೇ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಫೋರ್ ಬಾರಿಸಿದ ಅಬ್ದುಲ್ಲ ಶಫೀಕ್.
3ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಅಬ್ದುಲ್ಲ ಶಫೀಕ್.
5 ಓವರ್ಗಳ ಮುಕ್ತಾಯದ ವೇಳೆಗೆ 26 ರನ್ ಕಲೆಹಾಕಿದ ಪಾಕಿಸ್ತಾನ್.
3 ಓವರ್ಗಳಲ್ಲಿ 13 ರನ್ ಕಲೆಹಾಕಿದ ಪಾಕಿಸ್ತಾನ್ ತಂಡ.
ಕ್ರೀಸ್ನಲ್ಲಿ ಇಮಾಮ್ ಉಲ್ ಹಕ್ ಹಾಗೂ ಅಬ್ದುಲ್ಲ ಶಫೀಕ್ ಬ್ಯಾಟಿಂಗ್.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಪಾಕಿಸ್ತಾನ್.
ನವೀನ್ ಉಲ್ ಹಕ್ ಎಸೆದ ಮೊದಲ ಓವರ್ನ ಕೊನೆಯ ಎಸೆತದಲ್ಲಿ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ಇಮಾಮ್ ಉಲ್ ಹಕ್.
ಕ್ರೀಸ್ನಲ್ಲಿ ಇಮಾಮ್ ಉಲ್ ಹಕ್ ಹಾಗೂ ಅಬ್ದುಲ್ಲ ಶಫೀಕ್ ಬ್ಯಾಟಿಂಗ್.
ರಾಯಚೂರು: ವಿಜಯ ದಶಮಿಯ ಆಯುಧ ಪೂಜೆ ಹಿನ್ನೆಲೆಯಲ್ಲಿ ಮಂತ್ರಾಲಯದ ರಾಯರ ಮಠದಲ್ಲಿ ಆಯುಧ ಪೂಜೆ ನೆರವೇರಿತು. ಆಯುಧ ಪೂಜೆ ಜೊತೆ ವಿವಿಧ ಪೂಜೆ ಪುನಸ್ಕಾರಗಳನ್ನ
ಮಂತ್ರಾಲಯ ಪೀಠಾಧಿಪತಿ ಸುಬುದೇಂದ್ರ ತೀರ್ಥರು ನೆರವೇರಿಸಿದರು. ನರಸಿಂಹ ದೇವರ ಸಾಲಿಗ್ರಾಮಕ್ಕೆ “ಮನ್ಯುಸೂಕ್ತ ಪುನಹಚರಣೆ” ಅಭಿಷೇಕ ಮಾಡಲಾಯಿತು. ನಂತರ ಉಂಜಾಳ ಮಂಟಪದಲ್ಲಿ ಶ್ರೀನಿವಾಸ ಕಲ್ಯಾಣ ಪ್ರವಚನ ಮಂಗಲ ಕಾರ್ಯಕ್ರಮ ಜರುಗಿತು. ಶ್ರೀ ಮಠದ ವಾಹನಗಳನ್ನು ಪೂಜೆ ಮಾಡಲಾಯಿತು.
ಅಫ್ಘಾನಿಸ್ತಾನ್ (ಪ್ಲೇಯಿಂಗ್ XI): ರಹಮಾನುಲ್ಲಾ ಗುರ್ಬಾಝ್, ಇಬ್ರಾಹಿಂ ಝದ್ರಾನ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ(ನಾಯಕ), ಅಝ್ಮತುಲ್ಲಾ ಒಮರ್ಜಾಯ್, ಇಕ್ರಮ್ ಅಲಿಖಿಲ್ (ವಿಕೆಟ್ ಕೀಪರ್), ಮೊಹಮ್ಮದ್ ನಬಿ, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನವೀನ್-ಉಲ್-ಹಕ್, ನೂರ್ ಅಹ್ಮದ್.
ಪಾಕಿಸ್ತಾನ (ಪ್ಲೇಯಿಂಗ್ XI): ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಬಾಬರ್ ಆಝಂ (ನಾಯಕ), ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಉಸಾಮಾ ಮಿರ್, ಶಾಹೀನ್ ಅಫ್ರಿದಿ, ಹಸನ್ ಅಲಿ, ಹ್ಯಾರಿಸ್ ರೌಫ್.
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದ ಟಾಸ್ ಗೆದ್ದಿರುವ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಝಂ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
Published On - 1:34 pm, Mon, 23 October 23