ಏಷ್ಯಾಕಪ್ (Asia Cup 2023) ಉದ್ಘಾಟನಾ ಪಂದ್ಯಕ್ಕಾಗಿ ಪಾಕಿಸ್ತಾನದ ಮುಲ್ತಾನ್‌ನಲ್ಲಿ ರಣರಂಗ ಸಿದ್ಧವಾಗಿದೆ. ಈ ಟೂರ್ನಿಯ ಮೊದಲ ಪಂದ್ಯ ನೇಪಾಳ ಮತ್ತು ಪಾಕಿಸ್ತಾನ (Nepal vs Pakistan) ನಡುವೆ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನದ ನಾಯಕ ಬಾಬರ್ ಆಝಮ್ (Babar Azam) ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ನೇಪಾಳ ತಂಡ ಮೊದಲು ಬೌಲಿಂಗ್ ಮಾಡಲಿದೆ.ಟಾಸ್ ಗೆದ್ದ ಬಳಿಕ ಮಾತನಾಡಿದ ಬಾಬರ್, ಪಿಚ್ ಶುಷ್ಕವಾಗಿದ್ದು, ಮೊದಲು ಬ್ಯಾಟಿಂಗ್ ಮಾಡಲು ಸಹಕಾರಿಯಾಗಿದೆ. ಹೀಗಾಗಿ ಮೊದಲು ಬ್ಯಾಟ್ ಮಾಡಲಿದ್ದೇವೆ ಎಂದಿದ್ದಾರೆ. ನೇಪಾಳದ ನಾಯಕ ರೋಹಿತ್ ಪೌಡೆಲ್ ಕೂಡ ಪಿಚ್ ಮೊದಲು ಬ್ಯಾಟಿಂಗ್ ಮಾಡಲು ಸೂಕ್ತ ಎಂದು ಬಣ್ಣಿಸಿದರು.ಇನ್ನು ಈ ಪಂದ್ಯಕ್ಕೆ ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಕೂಡ ಪ್ರಕಟವಾಗಿದ್ದು, ಉದ್ಘಾಟನಾ ಪಂದ್ಯಕ್ಕೆ ಉಭಯ ತಂಡಗಳು ಹೇಗಿವೆ ಎಂಬುದರ ವಿವರ ಇಲ್ಲಿದೆ.
ವಾಸ್ತವವಾಗಿ ಏಷ್ಯಾಕಪ್ ಆರಂಭಕ್ಕೆ ಒಂದು ದಿನ ಮೊದಲೇ ಅಂದರೆ, ಆಗಸ್ಟ್ 29 ರಂದೇ ಪಾಕಿಸ್ತಾನ ತಂಡ ತನ್ನ ಉದ್ಘಾಟನಾ ಪಂದ್ಯಕ್ಕೆ ತನ್ನ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಿತ್ತು. ಆದರೆ ನೇಪಾಳ ಮಾತ್ರ ಟಾಸ್ವರೆಗೂ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಿರಲಿಲ್ಲ, ಇದೀಗ ಉಭಯ ತಂಡಗಳ ಆಡುವ ಹನ್ನೊಂದರ ಬಳಗದ ಬಗ್ಗೆ ಸ್ಪಷ್ಟತೆ ಸಿಕ್ಕಿದೆ.
ಪಾಕಿಸ್ತಾನ ತಂಡ: ಫಖರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಆಝಮ್ (ನಾಯಕ), ಮೊಹಮ್ಮದ್ ರಿಜ್ವಾನ್, ಸಲ್ಮಾನ್ ಅಘಾ, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್ ಮತ್ತು ನಸೀಮ್ ಶಾ.
Pakistan won the all-important toss and have elected to bat first!
Will Pakistan’s opening batsmen weather the storm and set a formidable total? Or will Nepal’s bowlers shine brightly in their maiden Asia Cup outing? 🤩💪#AsiaCup2023 #PAKvNEP pic.twitter.com/E9Zf1zzddN
— AsianCricketCouncil (@ACCMedia1) August 30, 2023
ನೇಪಾಳ ತಂಡ: ಕುಶಾಲ್ ಭುರ್ಟೈಲ್, ಆಸಿಫ್ ಶೇಖ್, ರೋಹಿತ್ ಪೌಡೆಲ್, ಆರಿಫ್ ಶೇಖ್, ಕುಶಾಲ್ ಮಲ್ಲಾ, ದೀಪೇಂದ್ರ ಏರಿ, ಗುಲ್ಶನ್ ಝಾ, ಸೋಂಪಾಲ್ ಕಾಮಿ, ಕರಣ್ ಕೆಸಿ, ಸಂದೀಪ್ ಲಮಿಶಾನೆ ಮತ್ತು ಲಲಿತ್ ರಾಜವಂಶಿ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಟಾಸ್ ಗೆದ್ದ ಪಾಕಿಸ್ತಾನದ ನಾಯಕ ಬಾಬರ್ ಆಝಮ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ನೇಪಾಳ ತಂಡ ಮೊದಲು ಬೌಲಿಂಗ್ ಮಾಡಲಿದೆ.
ಎಸ್ಸಿ, ಎಸ್ಟಿ, ಬಡವರಿಗೆ, ಹಿಂದುಳಿದವರ ಬಾಳು ಹಸನಾಗುತ್ತಿರುವುದು ಸಂವಿಧಾನದಿಂದ. ಸಾವಿಧಾನ ಉಳಿಸುವ ಕೆಲಸವನ್ನು ನಾವು ಮಾಡಬೇಕು. ಗ್ರಾ.ಪ. ಮುನ್ಸಿಪಾಲಿಟಿಗಳಲ್ಲಿ ಇವತ್ತು ಹೆಣ್ಣು ಮಕ್ಕಳಿಗೆ ಮತದಾನ ಕೊಟಬೇಕು ಎಂದು ಮಾಡಿದ್ದು ನಾವು. ಮೊದಲು ರೈತರಿಗೆ, ಕಸ ಗುಡಿಸುವವರಿಗೆ ಮತದಾನ ಬೇಡ ಅಂದಿದ್ದರು. ಆಗ ನಮ್ಮ ನೆಹರು, ಅಂಬೇಡ್ಕರ್ ಹೋರಾಡಿ ಎಲ್ಲರೂ ಸಮ ಎಲ್ಲರಿಗೂ ಮತದಾನದ ಹಕ್ಕನ್ನು ತಂದುಕೊಟ್ಟರು. ನಾವು ದೇಶ ಜೋಡೋ ಎನ್ನುತ್ತೇವೆ. ಅವರು ತೋಡೋ ಎನ್ನುತ್ತಾರೆ. ಇಲ್ಲಿ ಧರ್ಮ ಪಾಲಿಟಿಕ್ಸ್ನ್ನು ದೇಶದಿಂದ ಓಡಿಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಕರೆ ಕೊಟ್ಟರು. ಜೈ ಹಿಂದ್ ಎಂದು ಘೋಷಣೆ ಕೂಗಿ ಜನರನ್ನು ಹುರಿದುಂಬಿಸಿದರು.
ಭಾರತೀಯ ಕಾಲಮಾನದ ಪ್ರಕಾರ ಇಂದು ಮಧ್ಯಾಹ್ನ 2.30ಕ್ಕೆ ಮುಲ್ತಾನ್‌ನಲ್ಲಿ ಏಷ್ಯಾಕಪ್‌ನ ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಈ ವರ್ಷದ ಏಷ್ಯಾಕಪ್‌ನ ಉದ್ಘಾಟನಾ ಸಮಾರಂಭದಲ್ಲಿ ಪಾಕಿಸ್ತಾನಿ ಗಾಯಕಿ ಐಮಾ ಬೇಗ್ ಮತ್ತು ನೇಪಾಳದ ಗಾಯಕಿ ತ್ರಿಶಾಲಾ ಗುರುಂಗ್ ಕಾರ್ಯಕ್ರಮ ನೀಡಲಿದ್ದಾರೆ.
ಮುಲ್ತಾನ್‌ನಲ್ಲಿ ನಡೆಯಲಿರುವ ಏಷ್ಯಾಕಪ್‌ನ ಉದ್ಘಾಟನಾ ಸಮಾರಂಭದಲ್ಲಿ ಐಮಾ ಬೇಗ್ ಮತ್ತು ತ್ರಿಶಾಲಾ ಗುರುಂಗ್ ಪ್ರದರ್ಶನ ನೀಡಲಿದ್ದಾರೆ.
Virat Kohli and team India leave for Sri Lanka. pic.twitter.com/9uXPS2vRpq
— Mufaddal Vohra (@mufaddal_vohra) August 30, 2023
As the #AsiaCup2023 kicks off! Sending my best wishes to all the teams gearing up to showcase their cricketing prowess. May the tournament be a celebration of skill, sportsmanship, and unforgettable moments. Let's celebrate the spirit of cricket together. @ACCMedia1 pic.twitter.com/OQKolRT5CS
— Jay Shah (@JayShah) August 30, 2023
2023ರ ಏಷ್ಯಾಕಪ್‌ನ ನಾಲ್ಕು ಪಂದ್ಯಗಳಿಗೆ ಪಾಕಿಸ್ತಾನ ಆತಿಥ್ಯ ವಹಿಸಲಿದ್ದು, ಸೂಪರ್ ಫೋರ್ ಮತ್ತು ಏಷ್ಯಾಕಪ್ 2023ರ ಫೈನಲ್ ಸೇರಿದಂತೆ ಉಳಿದ 9 ಪಂದ್ಯಗಳಿಗೆ ಶ್ರೀಲಂಕಾ ಆತಿಥ್ಯ ವಹಿಸಲಿದೆ.
Ready. Steady. Asia Cup! 🔥
The quest to conquer the Asian Glory begins with a star studded #Pakistan taking on a spirited #Nepal! 💪🏻
Tune-in to #PAKvNEP on #AsiaCupOnStar
Today | 2 PM | Star Sports Network#Cricket pic.twitter.com/MGWvZbyd5P— Star Sports (@StarSportsIndia) August 30, 2023
ಅನಾರೋಗ್ಯದಿಂದ ಬಳಲುತ್ತಿರುವ ಬಾಂಗ್ಲಾ ತಂಡದ ಸ್ಟಾರ್ ವಿಕೆಟ್ ಕೀಪಿಂಗ್- ಬ್ಯಾಟರ್ ಲಿಟ್ಟನ್ ದಾಸ್ ಅವರನ್ನು ಏಷ್ಯಾಕಪ್ ತಂಡದಿಂದ ಹೊರಗಿಡಲಾಗಿದೆ. ಅವರ ಬದಲಿಗೆ ಅನಾಮುಲ್ ಹಕ್ ಬಾಂಗ್ಲಾದೇಶ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಬಾಬರ್ ಆಝಮ್ (ನಾಯಕ), ಶಾದಾಬ್ ಖಾನ್, ಫಖರ್ ಜಮಾನ್, ಇಮಾಮ್-ಉಲ್-ಹಕ್, ಸಲ್ಮಾನ್ ಅಲಿ ಅಘಾ, ಇಫ್ತಿಕರ್ ಅಹ್ಮದ್, ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ನಸೀಮ್ ಶಾ, ಶಾಹೀನ್ ಶಾ ಆಫ್ರಿದಿ, ಹ್ಯಾರಿಸ್ ರೌಫ್.
ಇಂಜುರಿ ಬಳಿಕ ತಂಡಕ್ಕೆ ಮರಳುತ್ತಿರುವ ರಾಹುಲ್, ಏಷ್ಯಾಕಪ್‌ನ ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ. ಹೀಗಾಗಿ ಅವರ ಸ್ಥಾನದಲ್ಲಿ ಇಶಾನ್ ಕಿಶನ್ ಆಡುವ ಸಾಧ್ಯತೆಗಳಿವೆ.
Star Boy Tilak Varma with a selfie..!!!
– Maiden ODI tour in his career. pic.twitter.com/uhnb86CubH
— Johns. (@CricCrazyJohns) August 30, 2023
ಖ್ಯಾತ ಕಲಾವಿದರಾದ ಎಆರ್ ರೆಹಮಾನ್ ಮತ್ತು ಅತೀಫ್ ಅಸ್ಲಾಂ ಉದ್ಘಾಟನಾ ಸಮಾರಂಭದಲ್ಲಿ ಕಾರ್ಯಕ್ರಮ ನೀಡಲಿದ್ದಾರೆ. ಸಾಂಪ್ರದಾಯಿಕ ಏಷ್ಯನ್ ಸಂಗೀತ ಮತ್ತು ನೃತ್ಯ ಪ್ರದರ್ಶನಗಳೂ ಇರುತ್ತವೆ.
ಇಂದಿನಿಂದ ಆರಂಭವಾಗಲಿರುವ ಏಷ್ಯಾಕಪ್ಗೆ ರೋಹಿತ್ ನೇತೃತ್ವದ ಟೀಂ ಇಂಡಿಯಾ ಇಂದು ಬೆಳಿಗ್ಗೆ ಬೆಂಗಳೂರಿನಿಂದ ಶ್ರೀಲಂಕಾಗೆ ಪ್ರಯಾಣ ಬೆಳೆಸಿದೆ.ಇಂದು ಮಧ್ಯಾಹ್ನ 12:45 ಕ್ಕೆ ಕೊಲಂಬೊಗೆ ಬಂದಿಳಿಯಲಿರುವ ಟೀಂ ಇಂಡಿಯಾ ಆ ನಂತರ ಅಲ್ಲಿಂದ ಕ್ಯಾಂಡಿಗೆ ತೆರಳಲಿದೆ.
ಏಷ್ಯಾಕಪ್ ಉದ್ಘಾಟನಾ ಸಮಾರಂಭವು ಮಧ್ಯಾಹ್ನ 1 ಗಂಟೆಗೆ ಮುಲ್ತಾನ್ನ ಮುಲ್ತಾನ್ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಲಿದೆ.
Published On - 12:42 pm, Wed, 30 August 23