ಏಕದಿನ ವಿಶ್ವಕಪ್ನಲ್ಲಿ ಇಂದು ನಡೆದ 26ನೇ ಪಂದ್ಯದಲ್ಲಿ ಬಾಬರ್ ಅಝಂ ನಾಯಕತ್ವದ ಪಾಕಿಸ್ತಾನ ತಂಡ, ಟೆಂಬಾ ಬವುಮಾ ನೇತೃತ್ವದ ದಕ್ಷಿಣ ಆಫ್ರಿಕಾ ತಂಡದ ಎದುರು ರೋಚಕ ಸೋಲು ಅನುಭವಿಸಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಈ ಹೈವೋಲ್ಟೇಜ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 1 ವಿಕೆಟ್‌ಗಳ ಗೆಲುವು ಸಾಧಿಸಿ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ 46.4 ಓವರ್‌ಗಳಲ್ಲಿ 270 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 9 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.
ಪಾಕಿಸ್ತಾನ ವಿರುದ್ಧ ದಕ್ಷಿಣ ಆಫ್ರಿಕಾ ಭರ್ಜರಿ ಜಯ ಸಾಧಿಸಿದೆ. 271 ರನ್‌ಗಳ ಗುರಿ ಬೆನ್ನತ್ತಿದ ಪ್ರೋಟೀಸ್ 1 ವಿಕೆಟ್‌ನಿಂದ ಜಯ ಸಾಧಿಸಿತು.
ದಕ್ಷಿಣ ಆಫ್ರಿಕಾ 250 ರನ್‌ಗಳಿಗೆ ಎಂಟನೇ ಹಿನ್ನಡೆ ಅನುಭವಿಸಿದೆ. ಐಡೆನ್ ಮಾರ್ಕ್ರಾಮ್ ನಂತರ, ಕೊಯೆಟ್ಜಿ ಕೂಡ ಪೆವಿಲಿಯನ್‌ಗೆ ಮರಳಿದರು. ಪಾಕಿಸ್ತಾನ ಗೆಲುವಿಗೆ 2 ವಿಕೆಟ್‌ಗಳ ಅಗತ್ಯವಿದೆ.
250 ರನ್‌ಗಳಾಗುವಷ್ಟರಲ್ಲಿ ದಕ್ಷಿಣ ಆಫ್ರಿಕಾದ ಏಳನೇ ವಿಕೆಟ್ ಪತನಗೊಂಡಿದೆ. ಏಡೆನ್ ಮಾರ್ಕ್ರಾಮ್ 93 ಎಸೆತಗಳಲ್ಲಿ 91 ರನ್ ಗಳಿಸಿ ಔಟಾದರು. ದಕ್ಷಿಣ ಆಫ್ರಿಕಾ ಗೆಲುವಿಗೆ 21 ರನ್‌ಗಳ ಅಂತರದಲ್ಲಿದ್ದು, ಪಾಕಿಸ್ತಾನ ಗೆಲುವಿಗೆ 3 ವಿಕೆಟ್‌ಗಳ ಅಗತ್ಯವಿದೆ.
ಪ್ರೋಟೀಸ್ ತಂಡದ 5ನೇ ವಿಕೆಟ್ ಪತನಗೊಂಡಿದೆ. ಶಾಹಿಬ್ ಶಾ ಆಫ್ರಿದಿ ಬೌಲಿಂಗ್ನಲ್ಲಿ ಮಿಲ್ಲರ್ ವಿಕೆಟ್ ಒಪ್ಪಿಸಿದರು.
ಏಡನ್ ಮಾರ್ಕ್ರಾಮ್ ಮತ್ತೊಂದು ಅರ್ಧಶತಕ ಸಿಡಿಸಿದ್ದಾರೆ. 33ನೇ ಓವರ್‌ನಲ್ಲಿ ಮಿಲ್ಲರ್ ಜೊತೆಗೂಡಿ ಮಾರ್ಕ್ರಾಮ್ ತಂಡವನ್ನು 200 ರನ್‌ಗಳ ಗಡಿ ದಾಟಿಸಿದರು.
ದಕ್ಷಿಣ ಆಫ್ರಿಕಾ ಇನ್ನಿಂಗ್ಸ್‌ನ 30 ಓವರ್‌ಗಳು ಮುಗಿದಿವೆ. ಈ 30 ಓವರ್‌ಗಳಲ್ಲಿ ಆಫ್ರಿಕಾ 4 ವಿಕೆಟ್ ಕಳೆದುಕೊಂಡು 193 ರನ್ ಕಲೆಹಾಕಿದೆ.
136 ರನ್‌ಗಳಾಗುವಷ್ಟರಲ್ಲಿ ದಕ್ಷಿಣ ಆಫ್ರಿಕಾದ ನಾಲ್ಕನೇ ವಿಕೆಟ್ ಪತನವಾಯಿತು. ಹೆನ್ರಿಕ್ ಕ್ಲಾಸೆನ್ 10 ಎಸೆತಗಳಲ್ಲಿ 12 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದ್ದಾರೆ.ಈಗ ಡೇವಿಡ್ ಮಿಲ್ಲರ್, ಮಾರ್ಕ್ರಾಮ್ ಜೊತೆ ಕ್ರೀಸ್‌ನಲ್ಲಿದ್ದಾರೆ.
ಉಸಾಮಾ ಮಿರ್, ವ್ಯಾನ್ ಡೆರ್ ಡ್ಯುಸೆನ್ ಅವರ ವಿಕೆಟ್ ಪಡೆದರು. ಡುಸೆನ್ 21 ರನ್ ಗಳಿಸಿ ಮೈದಾನದಿಂದ ನಿರ್ಗಮಿಸಿದರು.
ಪ್ರೋಟೀಸ್ ಇನ್ನಿಂಗ್ಸ್‌ನ ಪವರ್ ಪ್ಲೇ ಕೊನೆಗೊಂಡಿದೆ. 10 ಓವರ್‌ಗಳ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ 67 ರನ್ ಗಳಿಸಿದೆ. ಏಡೆನ್ ಮಾರ್ಕ್‌ಬೀಮ್ ಮತ್ತು ರೋಸ್ಸಿ ವ್ಯಾನ್ ಡೆರ್ ಡ್ಯುಸೆನ್ ಕ್ರೀಸ್‌ನಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ಗೆಲುವಿಗೆ ಉಳಿದ 40 ಓವರ್‌ಗಳಲ್ಲಿ 204 ರನ್ ಗಳಿಸಬೇಕಿದೆ.
ಮೊಹಮ್ಮದ್ ವಾಸಿಮ್ ದಕ್ಷಿಣ ಆಫ್ರಿಕಾದ ನಾಯಕ ಟೆಂಬಾ ಬವುಮಾ ಅವರ ವಿಕೆಟ್ ಪಡೆದರು. ಬವುಮಾ 27 ಎಸೆತಗಳಲ್ಲಿ 28 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ದಕ್ಷಿಣ ಆಫ್ರಿಕಾ ಮೊದಲ 6 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 39 ರನ್ ಗಳಿಸಿದೆ.
ಟೆಂಬಾ ಬವುಮಾ (5) ಮತ್ತು ರೊಸ್ಸಿ ವ್ಯಾನ್ ಡೆರ್ ಡುಸೆನ್ (4) ಕ್ರೀಸ್‌ನಲ್ಲಿದ್ದಾರೆ.
ಇನ್ನು ದಕ್ಷಿಣ ಆಫ್ರಿಕಾ ಗೆಲುವಿಗೆ ಇನ್ನುಳಿದ 44 ಓವರ್‌ಗಳಲ್ಲಿ 232 ರನ್ ಗಳಿಸಬೇಕಿದೆ.
ಶಾಹೀನ್ ಶಾ ಆಫ್ರಿದಿ ಪ್ರೋಟೀಸ್‌ಗೆ ದೊಡ್ಡ ಹೊಡೆತ ನೀಡಿದರು. ಶಾಹೀನ್ ಕ್ವಿಂಟನ್ ಡಿ ಕಾಕ್ ವಿಕೆಟ್ ಪಡೆದರು. ಶಾಹೀನ್ ಅಫ್ರಿದಿ 14 ಎಸೆತಗಳಲ್ಲಿ 24 ರನ್ ಗಳಿಸಿ ಮೈದಾನದಿಂದ ನಿರ್ಗಮಿಸಿದರು.
ಪ್ರೋಟೀಸ್ ತಂಡ 271 ರನ್ ಬೆನ್ನಟ್ಟಲು ಆರಂಭಿಸಿದೆ. ಕ್ವಿಂಟನ್ ಡಿ ಕಾಕ್ ಮತ್ತು ಟೆಂಬಾ ಬವುಮಾ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ.
ಪಾಕಿಸ್ತಾನ ತಂಡ 46.4 ಓವರ್‌ಗಳಲ್ಲಿ 270 ರನ್‌ಗಳಿಗೆ ಆಲೌಟ್ ಆಯಿತು. ದಕ್ಷಿಣ ಆಫ್ರಿಕಾ ಗೆಲುವಿಗೆ 271 ರನ್‌ಗಳ ಗುರಿ ಇದೆ.
ಪಾಕಿಸ್ತಾನದ ಇನಿಂಗ್ಸ್‌ನ 45 ಓವರ್‌ಗಳು ಮುಗಿದಿವೆ.
ಈ 45 ಓವರ್‌ಗಳಲ್ಲಿ ಪಾಕಿಸ್ತಾನ 8 ವಿಕೆಟ್ ಕಳೆದುಕೊಂಡು 265 ರನ್ ಕಲೆಹಾಕಿದೆ.
ಮೊಹಮ್ಮದ್ ವಾಸಿಂ ಮತ್ತು ಮೊಹಮ್ಮದ್ ನವಾಜ್ ಕ್ರೀಸ್‌ನಲ್ಲಿದ್ದಾರೆ.
ಪಾಕ್ ಸ್ಟಾರ್ ಸೌದ್ ಶಕೀಲ್ 50 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈಗ ಅವರ ಪಾಲುದಾರ ಮೊಹಮ್ಮದ್ ನವಾಜ್ ಕೂಡ ಅರ್ಧಶತಕದ ಹೊಸ್ತಿಲಿನಲ್ಲಿದ್ದಾರೆ.
ಪಾಕಿಸ್ತಾನದ ಇನಿಂಗ್ಸ್‌ನ 30 ಓವರ್‌ಗಳು ಮುಗಿದಿವೆ. ಈ 30 ಓವರ್‌ಗಳಲ್ಲಿ ಪಾಕಿಸ್ತಾನ 5 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿದೆ. ಸೌದ್ ಶಕೀಲ್ (14*) ಮತ್ತು ಶಾದಾಬ್ ಖಾನ್ (3*) ಕ್ರೀಸ್‌ನಲ್ಲಿದ್ದಾರೆ.
ಅರ್ಧಶತಕ ಸಿಡಿಸಿದ ಬೆನ್ನಲ್ಲೇ ಪಾಕ್ ನಾಯಕ ಬಾಬರ್ ವಿಕೆಟ್ ಒಪ್ಪಿಸಿದ್ದಾರೆ. ಶಮ್ಸಿ ಬೌಲಿಂಗ್ನಲ್ಲಿ ಬಾಬರ್ ಕೀಪರ್ ಕೈಗೆ ಕ್ಯಾಚಿತ್ತು ಔಟಾದರಯ.
ಪಾಕ್ 141/5
ಬಾಬರ್ 50 (67)
ಪಾಕ್ ತಂಡದ ಇನ್ನಿಂಗ್ಸ್ ಜವಬ್ದಾರಿ ಹೊತ್ತಿರುವ ನಾಯಕ ಬಾಬರ್ 64 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದ್ದಾರೆ.
ತಬ್ರೈಜ್ ಶಮ್ಸಿ ಇಫ್ತಿಕರ್ ಅಹ್ಮದ್ ವಿಕೆಟ್ ಪಡೆದರು. ಇಫ್ತಿಕಾರ್ 31 ಎಸೆತಗಳಲ್ಲಿ 21 ರನ್ ಗಳಿಸಿ ಮೈದಾನದಿಂದ ನಿರ್ಗಮಿಸಿದರು.
ಪಾಕ್ ಇನ್ನಿಂಗ್ಸ್‌ನ 25 ಓವರ್‌ಗಳು ಮುಗಿದಿವೆ. ಈ 25 ಓವರ್‌ಗಳಲ್ಲಿ ಪಾಕಿಸ್ತಾನ ತಂಡ 3 ವಿಕೆಟ್ ಕಳೆದುಕೊಂಡು 129 ರನ್ ಕಲೆಹಾಕಿದೆ.
ಬಾಬರ್ ಅಜಮ್ 47* (60)
ಇಫ್ತಿಕರ್ ಅಹ್ಮದ್ 21* (30)
ಪಾಕ್ ತಂಡದ 100 ರನ್ ಪೂರ್ಣಗೊಂಡಿದೆ. 20ನೇ ಓವರ್‌ನಲ್ಲಿ ಪಾಕ್ ತಂಡ ಶತಕ ಪೂರೈಸಿತು. ಇದಕ್ಕಾಗಿ ತಂಡ 3 ವಿಕೆಟ್ ಕೂಡ ಕಳೆದುಕೊಂಡಿದೆ. ಸದ್ಯ ಬಾಬರ್ ಹಾಗೂ ಇಫ್ತಿಕರ್ ಕ್ರೀಸ್‌ನಲ್ಲಿದ್ದಾರೆ.
ಮೊಹಮ್ಮದ್ ರಿಜ್ವಾನ್ ರೂಪದಲ್ಲಿ ಪಾಕಿಸ್ತಾನಕ್ಕೆ ಮೂರನೇ ಹೊಡೆತ ಬಿದ್ದಿದೆ. ಜೆರಾಲ್ಡ್ ಕೊಯೆಟ್ಜಿ ಅವರ ಬೌಲಿಂಗ್ನಲ್ಲಿ ರಿಜ್ವಾನ್ ವಿಕೆಟ್ ಕೀಪರ್ಗೆ ಕ್ಯಾಚಿತ್ತು ಔಟಾದರು. ಪಾಕಿಸ್ತಾನದ ಸ್ಕೋರ್ 16 ಓವರ್‌ಗಳಲ್ಲಿ 86/3, ಇಫ್ತಿಕರ್ ಅಹ್ಮದ್ ಮತ್ತು ಬಾಬರ್ ಅಜಮ್ ಕ್ರೀಸ್‌ನಲ್ಲಿದ್ದಾರೆ.
ಪಾಕಿಸ್ತಾನದ ಇನ್ನಿಂಗ್ಸ್‌ನ ಪವರ್ ಪ್ಲೇ ಮುಗಿದಿದೆ. ಮೊದಲ 10 ಓವರ್‌ಗಳಲ್ಲಿ ಪಾಕಿಸ್ತಾನ 2 ವಿಕೆಟ್ ಕಳೆದುಕೊಂಡು 58 ರನ್ ಗಳಿಸಿತು. ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಕ್ರೀಸ್‌ನಲ್ಲಿದ್ದಾರೆ.
ಪಾಕ್ ತಂಡದ 50 ರನ್ ಪೂರ್ಣಗೊಂಡಿದೆ. 9ನೇ ಓವರ್‌ನಲ್ಲಿ ಪಾಕ್ ತಂಡ ಅರ್ಧಶತಕ ಪೂರೈಸಿತು. ಈ ಹಂತದಲ್ಲಿ ತಂಡ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
ಯಾನ್ಸೆನ್ಗೆ 2ನೇ ವಿಕೆಟ್ ಸಿಕ್ಕಿದೆ. ಪಾಕ್ ತಂಡದ ಮತ್ತೊಬ್ಬ ಆರಂಭಿಕ ಇಮಾಮ್ ಉಲ್ ಹಕ್ ಸ್ಲಿಪ್ನಲ್ಲಿ ಕ್ಯಾಚಿತ್ತು ಔಟಾಗಿದ್ದಾರೆ.
ಪಾಕಿಸ್ತಾನ 38/2
ಇಮಾಮ್- 12 (18)
ಅಬ್ದುಲ್ಲಾ ವಿಕೆಟ್ ಬಳಿಕ ಇಮಾಮ್ ಉಲ್ ಹಕ್ ಮತ್ತು ಬಾಬರ್ ಅಜಮ್ ಕ್ರೀಸ್‌ನಲ್ಲಿದ್ದಾರೆ.
ಪಾಕ್ ತಂಡದ ಮೊದಲ ವಿಕೆಟ್ ಪತನವಾಗಿದೆ. ಯಾನ್ಸೆನ್ ಬೌಲ್ ಮಾಡಿದ 5ನೇ ಓವರ್ನ ಮೂರನೇ ಎಸೆತವನ್ನು ಸಿಕ್ಸರ್ಗಟ್ಟುವ ಯತ್ನದಲ್ಲಿ ಶಫೀಕ್ ಕ್ಯಾಚಿತ್ತು ಔಟಾಗಿದ್ದಾರೆ
ಲುಂಗಿ ಎನ್‌ಗಿಡಿ ಬೌಲ್ ಮಾಡಿದ 4ನೇ ಓವರ್ನ ಮೊದಲ ಲೆಂಗ್ತ್ ಬಾಲ್ ಅನ್ನು ಶಫೀಕ್ ಕವರ್ ಕಡೆ ಬಾರಿಸಿ ಬೌಂಡರಿ ಕಲೆಹಾಕಿದರು.
ಸ್ಕೋರ್‌ಬೋರ್ಡ್‌ನಲ್ಲಿ ದೊಡ್ಡ ರನ್ ಗಳಿಸುವ ಗುರಿಯೊಂದಿಗೆ ಪಾಕಿಸ್ತಾನ ಇನ್ನಿಂಗ್ಸ್ ಆರಂಭಿಸಿದೆ. ಅಬ್ದುಲ್ಲಾ ಶಫೀಕ್ ಮತ್ತು ಇಮಾಮ್ ಉಲ್ ಹಕ್ ಓಪನಿಂಗ್ ಮಾಡಿದ್ದಾರೆ. ಮಾರ್ಕೊ ಯಾನ್ಸೆನ್ ಮೊದಲ ಓವರ್ ಬೌಲ್ ಮಾಡಿ ಯಾವುದೇ ರನ್ ನೀಡಲಿಲ್ಲ.
ವಿಜಯಪುರ ಜಿಲ್ಲೆಗೆ ಬಸವೇಶ್ವರ ಜಿಲ್ಲೆ ಎಂದು ನಾಮಕರಣ ವಿಚಾರ ಸಂಬಂಧ ಬೆಂಗಳೂರಿನಲ್ಲಿ ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ವಿಜಯಪುರ ಜಿಲ್ಲೆ ಬಸವೇಶ್ವರ ಜಿಲ್ಲೆಯಾಗಲಿ ಯಾವುದೇ ತಪ್ಪಿಲ್ಲ. ಸಿಎಂ ಜೊತೆ ಚರ್ಚಿಸಿ ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ. ಮೆಟ್ರೋಗೆ ಬಸವೇಶ್ವರರ ಹೆಸರು ಇಡುವುದಕ್ಕೆ ಚರ್ಚೆ ನಡೆಯುತ್ತಿದೆ ಎಂದರು.
ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್, ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ಮೊಹಮ್ಮದ್ ವಾಸಿಮ್, ಹ್ಯಾರಿಸ್ ರೌಫ್.
ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಯಾನ್ಸೆನ್, ಜೆರಾಲ್ಡ್ ಕೊಯೆಟ್ಜಿ, ತಬ್ರೆಜ್ ಶಮ್ಸಿ, ಕೇಶವ್ ಮಹಾರಾಜ್, ಲುಂಗಿ ಎನ್ಗಿಡಿ.
ಈ ಪಂದ್ಯದ ಟಾಸ್ ಕೂಡ ನಡೆದಿದ್ದು, ಟಾಸ್ ಗೆದ್ದ ಪಾಕ್ ತಂಡದ ನಾಯಕ ಬಾಬರ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.
Published On - 1:34 pm, Fri, 27 October 23