Sign In

By signing in or creating an account, you agree with Associated Broadcasting Company's Terms & Conditions and Privacy Policy.

Greg Chappell: ಭಾರತದ ಕೋಚ್ ಆಗಿದ್ದ ಲೆಜೆಂಡರಿ ಕ್ರಿಕೆಟಿಗ ಗ್ರೆಗ್ ಚಾಪೆಲ್ ಗೆ ಆರ್ಥಿಕ ಸಂಕಷ್ಟ, ನಿಧಿ ಸಂಗ್ರಹ ಅಭಿಯಾನದಲ್ಲಿ ತೊಡಗಿದ ಹಿತೈಷಿಗಳು

Greg Chappell facing financial problems: ಭಾರತದ ಕೋಚ್ ಆಗಿದ್ದ ಕ್ರಿಕೆಟ್ ದಿಗ್ಗಜ ಈಗ ಆರ್ಥಿಕ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ. ಕ್ರಿಕೆಟ್ ದಂತಕಥೆ, ಆ ಕಾಲದ ಅತ್ಯುತ್ತಮ ಬ್ಯಾಟ್ಸ್​​ಮನ್​ ಗ್ರೆಗ್ ಚಾಪೆಲ್ ಅವರ ಸ್ನೇಹಿತರು ಆನ್‌ಲೈನ್ ಮೂಲಕ ನಿಧಿ ಸಂಗ್ರಹಣೆ ವೇದಿಕೆ ಸ್ಥಾಪಿಸಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ಚಾಪೆಲ್ ಗಾಗಿ ಅವರೆಲ್ಲಾ ನಿಧಿ ಸಂಗ್ರಹದಲ್ಲಿ ತೊಡಗಿರುವುದಾಗಿ ವರದಿಯೊಂದು ತಿಳಿಸಿದೆ.

Greg Chappell: ಭಾರತದ ಕೋಚ್ ಆಗಿದ್ದ ಲೆಜೆಂಡರಿ ಕ್ರಿಕೆಟಿಗ ಗ್ರೆಗ್ ಚಾಪೆಲ್ ಗೆ ಆರ್ಥಿಕ ಸಂಕಷ್ಟ, ನಿಧಿ ಸಂಗ್ರಹ ಅಭಿಯಾನದಲ್ಲಿ ತೊಡಗಿದ ಹಿತೈಷಿಗಳು
ಲೆಜೆಂಡರಿ ಕ್ರಿಕೆಟಿಗ ಗ್ರೆಗ್ ಚಾಪೆಲ್ ಆರ್ಥಿಕ ಸಂಕಷ್ಟ
Follow us
ಸಾಧು ಶ್ರೀನಾಥ್​
|

Updated on:Oct 27, 2023 | 5:18 PM

ಕ್ರಿಕೆಟ್ ದಂತಕಥೆ, ಆ ಕಾಲದ ಅತ್ಯುತ್ತಮ ಬ್ಯಾಟ್ಸ್​​ಮನ್​ ಗ್ರೆಗ್ ಚಾಪೆಲ್ (Cricket legend Greg Chappell)  ಅವರ ಸ್ನೇಹಿತರು ಆನ್‌ಲೈನ್ ಮೂಲಕ ನಿಧಿ ಸಂಗ್ರಹಣೆ ವೇದಿಕೆ ಸ್ಥಾಪಿಸಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ (financial struggle) ಚಾಪೆಲ್ ಗಾಗಿ ಅವರೆಲ್ಲಾ ನಿಧಿ ಸಂಗ್ರಹದಲ್ಲಿ (fundraising campaign) ತೊಡಗಿರುವುದಾಗಿ ವರದಿಯೊಂದು (News Corp) ತಿಳಿಸಿದೆ. 75 ವರ್ಷದ ಆಸ್ಟ್ರೇಲಿಯಾದ (Australia) ಮಾಜಿ ನಾಯಕ, ತಾನು ಆರ್ಥಿಕವಾಗಿ ಉತ್ತಮವಾಗಿದ್ದೇನೆ. ಆದರೆ ತನ್ನ ಕ್ರಿಕೆಟ್‌ನಿಂದಾಗಿ ಐಷಾರಾಮಿ ಜೀವನ ನಡೆಸುತ್ತಿಲ್ಲ ಎಂದಿದ್ದಾರೆ.

2005-2007ರ ಅವಧಿಯಲ್ಲಿ ಭಾರತ ತಂಡದ ಮುಖ್ಯ ಕೋಚ್‌ ಆಗಿದ್ದ, ತುಸು ವಿವಾದಾತ್ಮಕವೆನಿಸಿದ್ದ ಪ್ರಸ್ತುತ 75 ವರ್ಷದ ಆಸ್ಟ್ರೇಲಿಯದ ಮಾಜಿ ನಾಯಕ, ತಾನು ಆರ್ಥಿಕವಾಗಿ ಉತ್ತಮವಾಗಿದ್ದೇನೆ. ಆದರೆ ತನ್ನ ಕ್ರಿಕೆಟ್‌ನಿಂದಾಗಿ ಐಷಾರಾಮಿ ಜೀವನ ನಡೆಸುತ್ತಿಲ್ಲ ಎಂದು ಒಪ್ಪಿಕೊಂಡಿದ್ದಾರೆ.

“ನಾನು ಹತಾಶೆ, ಸಂಕಟದಲ್ಲಿರುವಂತೆ ಧ್ವನಿಸುವುದನ್ನು ನಾನು ಖಂಡಿತವಾಗಿಯೂ ಬಯಸುವುದಿಲ್ಲ, ಆದರೆ ನಾವು ಐಷಾರಾಮಿಯಾಗಿಯೇನೂ ಬದುಕುತ್ತಿಲ್ಲ. ಕ್ರಿಕೆಟ್ ಆಡಿದ ನಾವುಗಳೆಲ್ಲರೂ ಐಷಾರಾಮಿ ಮಡಿಲಲ್ಲಿ ಬದುಕುತ್ತಿದ್ದೇನೆ ಎಂದು ಹೆಚ್ಚಿನ ಜನರು ಭಾವಿಸುತ್ತಾರೆ. ಆದರೂ ನಾನೇನೂ ಬಡವ ಎಂದು ಖಂಡಿತವಾಗಿಯು ಅಳುತ್ತಿಲ್ಲ. ಆದರೆ ಇಂದಿನ ಆಟಗಾರರು ಕ್ರಿಕೆಟ್​​ ಆಟದಿಂದ ಲಾಭ ಮಾಡಿಕೊಳ್ಳುತ್ತಿರುವುದನ್ನು ನೋಡಿದರೆ ಹಳಬರು ನಾವೇನು ಅಷ್ಟೊಂದು ಪ್ರಯೋಜನ ಪಡೆದುಕೊಂಡಿಲ್ಲ ಎಂದು ಅವರು ವಿಷಾದದ ದನಿಯಲ್ಲಿ ಹೇಳಿದರು.

ವರದಿಯ ಪ್ರಕಾರ ಕಳೆದ ವಾರ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (MCG) ನಲ್ಲಿ ತಮ್ಮ ಗೌರವಾರ್ಥ ನಡೆದ ಪ್ರಶಂಸಾ ಊಟದ ವೇಳೆ ತನಗಾಗಿ GoFundMe ಪುಟವನ್ನು ಸ್ಥಾಪಿಸಲು ಚಾಪೆಲ್ ಅವರು ತಮಗೆ “ಇಷ್ಟವಿಲ್ಲದೆ” ಒಪ್ಪಿಕೊಂಡರಂತೆ. ಎಡ್ಡಿ ಮೆಕ್‌ಗುಯಿರ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಾಪೆಲ್ ಸಹೋದರರಾದ ಇಯಾನ್ ಚಾಪೆಲ್ ಮತ್ತು ಟ್ರವರ್​ ಚಾಪೆಲ್ ಸೇರಿದಂತೆ ಕೆಲ ಕ್ರಿಕೆಟ್ ದಿಗ್ಗಜರು ಭಾಗವಹಿಸಿದ್ದರು.

ತಮ್ಮ ನಿವೃತ್ತಿಯ ನಂತರ ವೃತ್ತಿಪರ ಕ್ರಿಕೆಟ್‌ ಆಳ-ಅಗಲ ಬಹಳ ದೂರ ಸಾಗಿದ್ದರೂ ಸಹ, ತಮ್ಮ ಯುಗದಿಂದ ಬಂದಂತಹವರ ಪೈಕಿ ಆರ್ಥಿಕ ತೊಂದರೆಗಳನ್ನು ಅನುಭವಿಸಿದ ಏಕೈಕ ಆಟಗಾರ ತಾನಲ್ಲ ಎಂದು ಚಾಪೆಲ್ ಹೇಳಿದರು.

ಇದನ್ನೂ ಓದಿ: ‘ನಾಯಕತ್ವ ನೀಡುವುದಾಗಿ ನಂಬಿಸಿ ತಂಡದಿಂದ ಹೊರಹಾಕಿದ್ರು’; ಶಾಕಿಂಗ್ ಹೇಳಿಕೆ ನೀಡಿದ ವೀರೇಂದ್ರ ಸೆಹ್ವಾಗ್

“ನಮ್ಮ ಕಾಲದ ಆಟಗಾರರಿಗೆ ಹೆಚ್ಚು ಸಿಗಲಿಲ್ಲ. ಹಾಗಾಗಿ ನಿವೃತ್ತಿಯ ನಂತರ ನನ್ನ ಪತ್ನಿ ಜೂಡಿ ಮತ್ತು ನಾನು ಆರಾಮ ದಾಯಕವಾಗಿದ್ದೇವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನನ್ನ ಸ್ನೇಹಿತರು ‘ಅರ್ಥ’ಮಾಡಿಕೊಂಡು ತಮಗಾಗಿ ನಿಧಿ ಸಂಗ್ರಹದಲ್ಲಿ ತೊಡಗಿದ್ದಾರೆ ಎಂದು ಚಾಪೆಲ್ ಸ್ಪಷ್ಟನೆಯ ರೂಪದಲ್ಲಿ ಹೇಳಿದರು.

“ನಿಜವಾಗಿ ಹೇಳಬೇಕೆಂದರೆ ನಮ್ಮ ಯುಗದ ಇತರರು ಆರ್ಥಿಕವಾಗಿ ಹೆಚ್ಚು ವಿಷಮ ಪರಿಸ್ಥಿತಿಯಲ್ಲಿದ್ದಾರೆ. ಆ ಯುಗದ ಆಟಗಾರರಿಗೆ ಆಟವು ಸಾಕಷ್ಟು ಮಾಡಿದೆ ಎಂದೇನೂ ನಾನು ಭಾವಿಸುವುದಿಲ್ಲ. ನಿರ್ದಿಷ್ಟವಾಗಿ ಇಂದಿನ ಯುಗಕ್ಕೆ ಅದನ್ನು ಹೋಲಿಕೆ ಮಾಡುವಂತೆಯೇ ಇಲ್ಲ. ಆದರೆ ಅಂದು ನಾವು ಕ್ರಿಕೆಟ್​ ಆಡಿ ಅದಕ್ಕೆ ತಕ್ಕ ಸ್ಥಾನಮಾನ ದೊರಕಿಸಿಕೊಡುವಲ್ಲಿ ನಾವು ಹಾಕಿರುವ ಶ್ರಮವನ್ನು ಇಂದಿನ ಆಟಗಾರರು ಮನಗಾಣಬೇಕು ಎಂದು ನಾನು ಆಶಿಸುತ್ತೇನೆ ಎಂದು ಚಾಪೆಲ್ ಅಭಿಪ್ರಾಯಪಟ್ಟಿದ್ದಾರೆ.

ವೇಗಿ ಡೆನ್ನಿಸ್ ಲಿಲ್ಲಿ, ವಿಕೆಟ್‌ಕೀಪರ್ ರಾಡ್ ಮಾರ್ಷ್ ಮತ್ತು ಚಾಪೆಲ್ 1970 ರ ದಶಕದ ಅಂತ್ಯದಲ್ಲಿ ಕೆರ್ರಿ ಪ್ಯಾಕರ್ ಅವರ ವಿಶ್ವ ಸರಣಿ ಕ್ರಿಕೆಟ್‌ಗೆ ಪಕ್ಷಾಂತರಗೊಂಡ ಅಪ್ರತಿಮ ಮೂವರು ಆಟಗಾರರು. ಆದರೆ ಲಿಲ್ಲಿ ಮತ್ತು ಮಾರ್ಷ್‌ನಂತಲ್ಲದೆ, ಚಾಪೆಲ್ ತಮ್ಮ ವೃತ್ತಿಜೀವನದ ಕೊನೆಗೆ ಕ್ರಿಕೆಟ್‌ ನಿವೃತ್ತಿಯ ನಂತರ ನಿಧಿಸಂಗ್ರಹಣೆ ಪತ್ರವನ್ನು ಸ್ವೀಕರಿಸಿರಲಿಲ್ಲ.

ಚಾಪೆಲ್ 1970 ಮತ್ತು 80 ರ ದಶಕದಲ್ಲಿ 87 ಟೆಸ್ಟ್‌ಗಳಲ್ಲಿ 24 ಶತಕಗಳನ್ನು ಗಳಿಸಿದರು ಮತ್ತು ಆಸ್ಟ್ರೇಲಿಯಾವನ್ನು 48 ಬಾರಿ ಮುನ್ನಡೆಸಿದರು. ಅವರು ಜನವರಿ 1984 ರಲ್ಲಿ ಆಸ್ಟ್ರೇಲಿಯನ್ ಟೆಸ್ಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ (7110) ಸರ್ ಡೊನಾಲ್ಡ್ ಬ್ರಾಡ್‌ಮನ್ ಅವರ 6996 ರನ್‌ಗಳ ದಾಖಲೆಯನ್ನು ಮೀರಿಸುವ ಮೂಲಕ ಟೆಸ್ಟ್‌ನಿಂದ ನಿವೃತ್ತರಾದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:27 pm, Fri, 27 October 23

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ