PAK vs SL ICC World Cup 2023: ಲಂಕಾ ತಂಡಕ್ಕೆ ಸೋಲುಣಿಸಿದ ಪಾಕ್ ಪಡೆ

| Updated By: ಝಾಹಿರ್ ಯೂಸುಫ್

Updated on: Oct 10, 2023 | 10:31 PM

Pakistan vs Sri Lanka: ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಪರ ಕುಸಾಲ್ ಮೆಂಡಿಸ್ (122) ಹಾಗೂ ಸದೀರ ಸಮರವಿಕ್ರಮ (108) ಶತಕ ಸಿಡಿಸಿದರು. ಈ ಶತಕಗಳೊಂದಿಗೆ ಲಂಕಾ ತಂಡವು 50 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 344 ರನ್ ಕಲೆಹಾಕಿತು. 345 ರನ್​ಗಳ ಬೃಹತ್ ಗುರಿ ಬೆನ್ನತ್ತಿದ ಪಾಕಿಸ್ತಾನ್ ತಂಡದ ಪರ ಆರಂಭಿಕ ಆಟಗಾರ ಅಬ್ದುಲ್ಲ ಶಫೀಕ್ (113) ಭರ್ಜರಿ ಶತಕ ಬಾರಿಸಿದರು.

PAK vs SL ICC World Cup 2023: ಲಂಕಾ ತಂಡಕ್ಕೆ ಸೋಲುಣಿಸಿದ ಪಾಕ್ ಪಡೆ
Abdulla - Rizwan

ಏಕದಿನ ವಿಶ್ವಕಪ್​ನ 8ನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನ್ ಭರ್ಜರಿ ಜಯ ಸಾಧಿಸಿದೆ. ಹೈದರಾಬಾದ್​ನ ರಾಜೀವ್ ಗಾಂಧಿ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ದಸುನ್ ಶಾನಕ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಪರ ಕುಸಾಲ್ ಮೆಂಡಿಸ್ (122) ಹಾಗೂ ಸದೀರ ಸಮರವಿಕ್ರಮ (108) ಶತಕ ಸಿಡಿಸಿದರು. ಈ ಶತಕಗಳೊಂದಿಗೆ ಲಂಕಾ ತಂಡವು 50 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 344 ರನ್ ಕಲೆಹಾಕಿತು.

345 ರನ್​ಗಳ ಬೃಹತ್ ಗುರಿ ಬೆನ್ನತ್ತಿದ ಪಾಕಿಸ್ತಾನ್ ತಂಡದ ಪರ ಆರಂಭಿಕ ಆಟಗಾರ ಅಬ್ದುಲ್ಲ ಶಫೀಕ್ (113) ಭರ್ಜರಿ ಶತಕ ಸಿಡಿಸಿದರು. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮೊಹಮ್ಮದ್ ರಿಝ್ವಾನ್ ಅಜೇಯ 134 ರನ್ ಬಾರಿಸುವ ಮೂಲಕ 48.2 ಓವರ್​ಗಳಲ್ಲಿ ಪಾಕಿಸ್ತಾನ್ ತಂಡವನ್ನು ಗುರಿ ಮುಟ್ಟಿಸಿದರು. ಈ ಮೂಲಕ ಬಾಬರ್ ಆಝಂ ಪಡೆ ಶ್ರೀಲಂಕಾ ವಿರುದ್ಧ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಶ್ರೀಲಂಕಾ (ಪ್ಲೇಯಿಂಗ್ XI): ಪಾತುಮ್ ನಿಸ್ಸಾಂಕ, ಕುಸಾಲ್ ಪೆರೇರಾ, ಕುಸಾಲ್ ಮೆಂಡಿಸ್(ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ದಸುನ್ ಶಾನಕ (ನಾಯಕ), ದುನಿತ್ ವೆಲ್ಲಲಾಗೆ, ಮಹೀಶ್ ತೀಕ್ಷಣ, ಮತೀಶ ಪತಿರಣ, ದಿಲ್ಶನ್ ಮಧುಶಂಕ.

ಪಾಕಿಸ್ತಾನ್ (ಪ್ಲೇಯಿಂಗ್ XI): ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಬಾಬರ್ ಆಝಂ (ನಾಯಕ), ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಮೊಹಮ್ಮದ್ ನವಾಜ್, ಶಾದಾಬ್ ಖಾನ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್.

ಶ್ರೀಲಂಕಾ ತಂಡ: ದಸುನ್ ಶಾನಕ (ನಾಯಕ), ಕುಸಾಲ್ ಮೆಂಡಿಸ್ (ಉಪನಾಯಕ), ಪಾತುಮ್ ನಿಸ್ಸಾಂಕ, ಕುಸಾಲ್ ಪೆರೆರಾ (ವಿಕೆಟ್ ಕೀಪರ್), ದಿಮುತ್ ಕರುಣಾರತ್ನೆ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ಸದೀರ ಸಮರವಿಕ್ರಮ (ವಿಕೆಟ್ ಕೀಪರ್), ದುಶನ್ ಹೇಮಂತ, ಮಹೀಶ್ ತೀಕ್ಷಣ , ದುನಿತ್ ವೆಲ್ಲಲಾಗೆ, ಕಸುನ್ ರಜಿತ, ದಿಲ್ಶನ್ ಮಧುಶಂಕ, ಮತೀಶ ಪತಿರಾಣ, ಲಹಿರು ಕುಮಾರ.

ಪಾಕಿಸ್ತಾನ್ ತಂಡ: ಬಾಬರ್ ಆಝಂ (ನಾಯಕ), ಫಖರ್ ಜಮಾನ್, ಇಮಾಮ್-ಉಲ್-ಹಕ್, ಅಬ್ದುಲ್ಲಾ ಶಫೀಕ್, ಮೊಹಮ್ಮದ್ ರಿಝ್ವಾನ್, ಇಫ್ತಿಕರ್ ಅಹ್ಮದ್, ಸೌದ್ ಶಕೀಲ್, ಸಲ್ಮಾನ್ ಅಲಿ ಅಘಾ, ಶಾದಾಬ್ ಖಾನ್, ಮೊಹಮ್ಮದ್ ನವಾಝ್, ಉಸಾಮಾ ಮಿರ್, ಶಾಹೀನ್ ಶಾ ಆಫ್ರಿದಿ, ಹಸನ್ ಅಲಿ, ಹಾರಿಸ್ ರೌಫ್, ಮೊಹಮ್ಮದ್ ವಾಸಿಂ.

LIVE Cricket Score & Updates

The liveblog has ended.
  • 10 Oct 2023 10:26 PM (IST)

    PAK vs SL ICC World Cup 2023 Live Score: ಪಾಕಿಸ್ತಾನ್ ತಂಡಕ್ಕೆ ಭರ್ಜರಿ ಜಯ

    ದಿಲ್ಶನ್ ಮಧುಶಂಕ ಎಸೆತದಲ್ಲಿ ಆಫ್​ ಸೈಡ್​ನತ್ತ ಫೋರ್ ಬಾರಿಸಿದ ರಿಝ್ವಾನ್.

    ಈ ಫೋರ್​ನೊಂದಿಗೆ ಗೆಲುವಿನ ಗುರಿ ಮುಟ್ಟಿದ ಪಾಕಿಸ್ತಾನ್.

    ಶ್ರೀಲಂಕಾ– 344/9 (50)

    ಪಾಕಿಸ್ತಾನ್– 348/4 (48.2)

    ಪಾಕಿಸ್ತಾನ್ ತಂಡಕ್ಕೆ 6 ವಿಕೆಟ್​ಗಳ ಭರ್ಜರಿ ಜಯ.

     

      

  • 10 Oct 2023 10:23 PM (IST)

    PAK vs SL ICC World Cup 2023 Live Score: ಹ್ಯಾಟ್ರಿಕ್ ಫೋರ್

    ಮತೀಶ ಪತಿರಾಣ ಎಸೆದ 48ನೇ ಓವರ್​ನ ಮೊದಲ ಮೂರು ಎಸೆತಗಳಲ್ಲೂ ಫೋರ್ ಬಾರಿಸಿದ ಇಫ್ತಿಕರ್ ಅಹ್ಮದ್.

    ಐದನೇ ಎಸೆತದಲ್ಲಿ ಲೆಗ್ ಸೈಡ್​ನತ್ತ ಬೌಂಡರಿ ಬಾರಿಸಿದ ಮೊಹಮ್ಮದ್ ರಿಝ್ವಾನ್.

    ಪಾಕಿಸ್ತಾನ್ ತಂಡಕ್ಕೆ ಗೆಲ್ಲಲು ಕೇವಲ 1 ರನ್​ ಅವಶ್ಯಕತೆ.

    SL 344/9 (50)

    PAK 344/4 (48)

      


  • 10 Oct 2023 10:18 PM (IST)

    PAK vs SL ICC World Cup 2023 Live Score: ಕೊನೆಯ 3 ಓವರ್​ಗಳು ಬಾಕಿ

    47 ಓವರ್​ಗಳ ಮುಕ್ತಾಯದ ವೇಳೆಗೆ ಪಾಕಿಸ್ತಾನ್ ತಂಡದ ಸ್ಕೋರ್ 325 ರನ್​ಗಳು.

    ಕ್ರೀಸ್​ ನಲ್ಲಿ ಮೊಹಮ್ಮದ್ ರಿಝ್ವಾನ್ ಹಾಗೂ ಇಫ್ತಿಕರ್ ಅಹ್ಮದ್ ಬ್ಯಾಟಿಂಗ್.

    ಇನ್ನು ಪಾಕಿಸ್ತಾನ್ ತಂಡಕ್ಕೆ 18 ಎಸೆತಗಳಲ್ಲಿ ಕೇವಲ 20 ರನ್ ​ಗಳ ಅವಶ್ಯಕತೆ.

    SL 344/9 (50)

    PAK 325/4 (47)

      

  • 10 Oct 2023 10:11 PM (IST)

    PAK vs SL ICC World Cup 2023 Live Score: ಪಾಕ್ ತಂಡದ 4ನೇ ವಿಕೆಟ್ ಪತನ

    ಮಹೀಶ್ ತೀಕ್ಷಣ ಎಸೆದ 45ನೇ ಓವರ್​ನ 3ನೇ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿದ ಸೌದ್ ಶಕೀಲ್.

    30 ಎಸೆತಗಳಲ್ಲಿ 31 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಎಡಗೈ ದಾಂಡಿಗ ಸೌದ್​.

    ಕ್ರೀಸ್​ನಲ್ಲಿ ರಿಝ್ವಾನ್ ಹಾಗೂ ಇಫ್ತಿಕರ್ ಬ್ಯಾಟಿಂಗ್.

    PAK 314/4 (45)

     

  • 10 Oct 2023 10:04 PM (IST)

    PAK vs SL ICC World Cup 2023 Live Score: ತ್ರಿಶತಕ ಪೂರೈಸಿದ ಪಾಕಿಸ್ತಾನ್

    ದುನಿಲ್ ವೆಲ್ಲಲಾಗೆ ಎಸೆದ 44ನೇ ಓವರ್​ನ 4ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಸಿಕ್ಸ್ ಬಾರಿಸಿದ ಮೊಹಮ್ಮದ್ ರಿಝ್ವಾನ್.

    ಕ್ರೀಸ್​ನಲ್ಲಿ ಸೌದ್ ಶಕೀಲ್ ಹಾಗೂ ಮೊಹಮ್ಮದ್ ರಿಝ್ವಾನ್ ಬ್ಯಾಟಿಂಗ್.

    36 ಎಸೆತಗಳಲ್ಲಿ 39 ರನ್​ಗಳ ಅವಶ್ಯಕತೆ.

    PAK 306/3 (44)

     

     

  • 10 Oct 2023 10:01 PM (IST)

    PAK vs SL ICC World Cup 2023 Live Score: ಸೌದ್ ಸ್ವೀಪ್ ಶಾಟ್ ಫೋರ್

    ಮಹೀಶ್ ತೀಕ್ಷಣ ಎಸೆದ 43ನೇ ಓವರ್​ನ ಕೊನೆಯ ಎಸೆತದಲ್ಲಿ ಸ್ವೀಪ್ ಶಾಟ್ ಮೂಲಕ ಲೆಗ್​ ಸೈಡ್​ನತ್ತ ಫೋರ್ ಬಾರಿಸಿದ ಸೌದ್ ಶಕೀಲ್.

    ಕ್ರೀಸ್​ನಲ್ಲಿ ಸೌದ್ ಶಕೀಲ್ ಹಾಗೂ ರಿಝ್ವಾನ್ ಬ್ಯಾಟಿಂಗ್.

    ಕೊನೆಯ 7 ಓವರ್​ಗಳಲ್ಲಿ 51 ರನ್​ಗಳ ಅವಶ್ಯಕತೆ

    PAK 294/3 (43)

     

  • 10 Oct 2023 09:51 PM (IST)

    PAK vs SL ICC World Cup 2023 Live Score: ಶತಕ ಸಿಡಿಸಿದ ರಿಝ್ವಾನ್

    97 ಎಸೆತಗಳಲ್ಲಿ ಶತಕ ಪೂರೈಸಿದ ಮೊಹಮ್ಮದ್ ರಿಝ್ವಾನ್.

    ಕ್ರೀಸ್​ನಲ್ಲಿ ರಿಝ್ವಾನ್ ಹಾಗೂ ಸೌದ್ ಶಕೀಲ್ ಬ್ಯಾಟಿಂಗ್.

    ಪಾಕ್ ತಂಡಕ್ಕೆ ಗೆಲ್ಲಲು 53 ಎಸೆತಗಳಲ್ಲಿ 69 ರನ್​ ಗಳ ಅವಶ್ಯಕತೆ.

    PAK 276/3 (41.1)

     

  • 10 Oct 2023 09:32 PM (IST)

    PAK vs SL ICC World Cup 2023 Live Score: ಭರ್ಜರಿ ಸಿಕ್ಸ್ ಸಿಡಿಸಿದ ರಿಝ್ವಾನ್

    ಧನಂಜಯ ಡಿಸಿಲ್ವಾ ಎಸೆದ 37ನೇ ಓವರ್​ನ 3ನೇ ಎಸೆತದಲ್ಲಿ ಲಾಂಗ್ ಆನ್​ನತ್ತ ಭರ್ಜರಿ ಸಿಕ್ಸ್​​ ಸಿಡಿಸಿದ ಮೊಹಮ್ಮದ್ ರಿಝ್ವಾನ್.

    37 ಓವರ್​ಗಳ ಮುಕ್ತಾಯದ ವೇಳೆಗೆ 251 ರನ್ ಕಲೆಹಾಕಿದ ಪಾಕಿಸ್ತಾನ್.

    78 ಎಸೆತಗಳಲ್ಲಿ 94 ರನ್​ಗಳ ಅವಶ್ಯಕತೆ.

    ಕ್ರೀಸ್​ನಲ್ಲಿ ರಿಝ್ವಾನ್ ಹಾಗೂ ಸೌದ್ ಶಕೀಲ್ ಬ್ಯಾಟಿಂಗ್.

    PAK 251/3 (37)

      

  • 10 Oct 2023 09:14 PM (IST)

    PAK vs SL ICC World Cup 2023 Live Score: ಪಾಕ್ ತಂಡದ 3ನೇ ವಿಕೆಟ್ ಪತನ

    ಪತಿರಾಣ ಎಸೆತದಲ್ಲಿ ಸ್ಕ್ವೇರ್​ನತ್ತ ಬಾರಿಸಿದ ಅಬ್ದುಲ್ಲ ಶಫೀಕ್…ಅದ್ಭುತ ಡೈವಿಂಗ್ ಕ್ಯಾಚ್ ಹಿಡಿದ ಹೇಮಂತ.

    103 ಎಸೆತಗಳಲ್ಲಿ 113 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಅಬ್ದುಲ್ಲ ಶಫೀಕ್.

    ಕ್ರೀಸ್​ನಲ್ಲಿ ಮೊಹಮ್ಮದ್ ರಿಝ್ವಾನ್ ಹಾಗೂ ಸೌದ್ ಶಕೀಲ್ ಬ್ಯಾಟಿಂಗ್

    PAK 223/3 (34)

      

  • 10 Oct 2023 08:58 PM (IST)

    PAK vs SL ICC World Cup 2023 Live Score: ಶತಕ ಸಿಡಿಸಿದ ಅಬ್ದುಲ್ಲ ಶಫೀಕ್

    ದಿಲ್ಶನ್ ಮಧುಶಂಕ ಎಸೆದ 32ನೇ ಓವರ್​ನ 2ನೇ ಎಸೆತದಲ್ಲಿ ಲೆಗ್​ ಸೈಡ್​ನತ್ತ ಫೋರ್ ಬಾರಿಸಿದ ಶಫೀಕ್.

    ಈ ಫೋರ್​ನೊಂದಿಗೆ 97 ಎಸೆತಗಳಲ್ಲಿ ಶತಕ ಪೂರೈಸಿದ ಅಬ್ದುಲ್ಲ ಶಫೀಕ್.

    ಇದು ಏಕದಿನ ಕ್ರಿಕೆಟ್​ನಲ್ಲಿ ಅಬ್ದುಲ್ಲ ಶಫೀಕ್ ಅವರ ಮೊದಲ ಶತಕ.

    PAK 207/2 (32)

      

  • 10 Oct 2023 08:48 PM (IST)

    PAK vs SL ICC World Cup 2023 Live Score: 30 ಓವರ್​ಗಳು ಮುಕ್ತಾಯ

    30 ಓವರ್​ಗಳ ಮುಕ್ತಾಯದ ವೇಳೆಗೆ 182 ರನ್ ಕಲೆಹಾಕಿದ ಪಾಕಿಸ್ತಾನ್.

    ಇನ್ನು 20 ಓವರ್​ಗಳಲ್ಲಿ ಪಾಕಿಸ್ತಾನ್ ತಂಡಕ್ಕೆ ಗೆಲ್ಲಲು 163 ರನ್​ಗಳ ಅವಶ್ಯಕತೆ.

    ಕ್ರೀಸ್​ನಲ್ಲಿ ಅಬ್ದುಲ್ಲ ಶಫೀಕ್ (96) ಹಾಗೂ ಮೊಹಮ್ಮದ್ ರಿಝ್ವಾನ್ (55) ಬ್ಯಾಟಿಂಗ್.

    PAK 182/2 (30)

      

  • 10 Oct 2023 08:42 PM (IST)

    PAK vs SL ICC World Cup 2023 Live Score: ಅರ್ಧಶತಕ ಪೂರೈಸಿದ ರಿಝ್ವಾನ್

    ಮತೀಶ ಪತಿರಾಣ ಎಸೆದ 29ನೇ ಓವರ್​ನ ಮೊದಲ ಎಸೆತದಲ್ಲೇ ಆಫ್ ಸೈಡ್​ನತ್ತ ಫೋರ್ ಬಾರಿಸಿದ ಮೊಹಮ್ಮದ್ ರಿಝ್ವಾನ್.

    ಈ ಫೋರ್​ನೊಂದಿಗೆ 58 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರಿಝ್ವಾನ್.

    ಕ್ರೀಸ್​ನಲ್ಲಿ ಮೊಹಮ್ಮದ್ ರಿಝ್ವಾನ್ ಹಾಗೂ ಅಬ್ದುಲ್ಲ ಶಫೀಕ್ ಬ್ಯಾಟಿಂಗ್.

    PAK 170/2 (29)

      

  • 10 Oct 2023 08:26 PM (IST)

    PAK vs SL ICC World Cup 2023 Live Score: ಪಾಕಿಸ್ತಾನ್ ಉತ್ತಮ ಬ್ಯಾಟಿಂಗ್

    25 ಓವರ್​ಗಳಲ್ಲಿ 138 ರನ್ ಕಲೆಹಾಕಿದ ಪಾಕಿಸ್ತಾನ್ ತಂಡ.

    ಇನ್ನು 25 ಓವರ್​ಗಳಲ್ಲಿ ಪಾಕ್ ತಂಡಕ್ಕೆ ಗೆಲ್ಲಲು 207 ರನ್​ಗಳ ಅವಶ್ಯಕತೆ.

    ಕ್ರೀಸ್​ನಲ್ಲಿ ಅಬ್ದುಲ್ಲ ಶಫೀಕ್ (68) ಹಾಗೂ ಮೊಹಮ್ಮದ್ ರಿಝ್ವಾನ್ (39) ಉತ್ತಮ ಬ್ಯಾಟಿಂಗ್.

    ಇಮಾಮ್ ಉಲ್ ಹಕ್ (12) ಹಾಗೂ ಬಾಬರ್ ಆಝಂ (10) ಔಟ್.

    ಪಾಕಿಸ್ತಾನ್- 138/2 (25)

    ಶ್ರೀಲಂಕಾ- 344/9 (50)

      

  • 10 Oct 2023 08:07 PM (IST)

    PAK vs SL ICC World Cup 2023 Live Score: 20 ಓವರ್​ಗಳು ಮುಕ್ತಾಯ

    20 ಓವರ್​ಗಳ ಮುಕ್ತಾಯದ ವೇಳೆಗೆ 110 ರನ್ ಕಲೆಹಾಕಿದ ಪಾಕಿಸ್ತಾನ್.

    59 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅಬ್ದುಲ್ಲ ಶಫೀಕ್ ಉತ್ತಮ ಬ್ಯಾಟಿಂಗ್.

    ಇನ್ನು 30 ಓವರ್​ಗಳಲ್ಲಿ ಪಾಕಿಸ್ತಾನ್ ತಂಡಕ್ಕೆ  235 ರನ್​ಗಳ ಅವಶ್ಯಕತೆ.

    ಕ್ರೀಸ್​ನಲ್ಲಿ ಅಬ್ದುಲ್ಲ ಶಫೀಕ್ (51) ಹಾಗೂ ಮೊಹಮ್ಮದ್ ರಿಝ್ವಾನ್ (28) ಬ್ಯಾಟಿಂಗ್.

    PAK 110/2 (20)

      

  • 10 Oct 2023 07:45 PM (IST)

    PAK vs SL ICC World Cup 2023 Live Score: 15 ಓವರ್​ಗಳು ಮುಕ್ತಾಯ

    15 ಓವರ್​ಗಳಲ್ಲಿ 71 ರನ್ ಕಲೆಹಾಕಿದ ಪಾಕಿಸ್ತಾನ್ ಬ್ಯಾಟರ್​ಗಳು.

    ಇಮಾಮ್ ಉಲ್ ಹಕ್ (12) ಹಾಗೂ ಬಾಬರ್ ಆಝಂ (10) ವಿಕೆಟ್ ಪಡೆದ ಶ್ರೀಲಂಕಾ ತಂಡ.

    2 ವಿಕೆಟ್ ಕಬಳಿಸಿ ಮಿಂಚಿರುವ ಎಡಗೈ ವೇಗಿ ದಿಲ್ಶನ್ ಮಧುಶಂಕ.

    ಕ್ರೀಸ್​ನಲ್ಲಿ ಮೊಹಮ್ಮದ್ ರಿಝ್ವಾನ್ (10) ಹಾಗೂ ಅಬ್ದುಲ್ಲ ಶಫೀಕ್ (37) ಬ್ಯಾಟಿಂಗ್.

    PAK 71/2 (15)

      

  • 10 Oct 2023 07:30 PM (IST)

    PAK vs SL ICC World Cup 2023 Live Score: ಅರ್ಧಶತಕ ಪೂರೈಸಿದ ಪಾಕ್ ತಂಡ

    12 ಓವರ್​ಗಳಲ್ಲಿ ಅರ್ಧಶತಕ ಪೂರೈಸಿರುವ ಪಾಕಿಸ್ತಾನ್ ತಂಡ.

    ಬಾಬರ್ ಆಝಂ (10) ಹಾಗೂ ಇಮಾಮ್ ಉಲ್ ಹಕ್ (12) ಔಟ್.

    ಕ್ರೀಸ್​ನಲ್ಲಿ ಮೊಹಮ್ಮದ್ ರಿಝ್ವಾನ್ ಹಾಗೂ ಅಬ್ದುಲ್ಲ ಶಫೀಕ್ ಬ್ಯಾಟಿಂಗ್.

    PAK 55/2 (12)

      

  • 10 Oct 2023 07:17 PM (IST)

    PAK vs SL ICC World Cup 2023 Live Score: 10 ಓವರ್​ಗಳು ಮುಕ್ತಾಯ

    ದಿಲ್ಶನ್ ಮಧುಶಂಕ ಎಸೆದ 10ನೇ ಓವರ್​ನ 2ನೇ ಎಸೆತದಲ್ಲಿ ಲೆಗ್ ಸೈಡ್​ನತ್ತ ಫೋರ್ ಬಾರಿಸಿದ ಅಬ್ದುಲ್ಲ ಶಫೀಕ್.

    10 ಓವರ್​ಗಳ ಮುಕ್ತಾಯದ ವೇಳೆಗೆ 2 ವಿಕೆಟ್ ಕಳೆದುಕೊಂಡು 48 ರನ್ ಕಲೆಹಾಕಿದ ಪಾಕಿಸ್ತಾನ್.

    ಕ್ರೀಸ್​ನಲ್ಲಿ ಮೊಹಮ್ಮದ್ ರಿಝ್ವಾನ್ (3) ಹಾಗೂ ಅಬ್ದುಲ್ಲ ಶಫೀಕ್ (22) ಬ್ಯಾಟಿಂಗ್.

    PAK 48/2 (10)

      

  • 10 Oct 2023 07:03 PM (IST)

    PAK vs SL ICC World Cup 2023 Live Score: ಪಾಕ್ ತಂಡದ 2ನೇ ವಿಕೆಟ್ ಪತನ

    ಎಡಗೈ ವೇಗಿ ದಿಲ್ಶನ್ ಮಧುಶಂಕ ಎಸೆದ 8ನೇ ಓವರ್​ನ 2ನೇ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ ಬಾಬರ್ ಆಝಂ.

    15 ಎಸೆತಗಳಲ್ಲಿ 10 ರನ್ ಬಾರಿಸಿ ಔಟಾದ ಪಾಕ್ ತಂಡದ ನಾಯಕ.

    PAK 37/2 (8)

      

      

  • 10 Oct 2023 07:00 PM (IST)

    PAK vs SL ICC World Cup 2023 Live Score: ಆಕರ್ಷಕ ಬೌಂಡರಿ

    ದಸುನ್ ಶಾನಕ ಎಸೆದ 7ನೇ ಓವರ್​ನ 5ನೇ ಎಸೆತದಲ್ಲಿ ಆಫ್ ಸೈಡ್​ನತ್ತ ಆಕರ್ಷಕ ಫೋರ್ ಬಾರಿಸಿದ ಅಬ್ದುಲ್ಲ ಶಫೀಕ್.

    ಕ್ರೀಸ್​ನಲ್ಲಿ ಬಾಬರ್ ಆಝಂ ಹಾಗೂ ಅಬ್ದುಲ್ಲ ಶಫೀಕ್ ಬ್ಯಾಟಿಂಗ್.

    PAK 36/1 (7)

      ಇಮಾಮ್ ಉಲ್ ಹಕ್ (12) ಔಟ್.

  • 10 Oct 2023 06:50 PM (IST)

    PAK vs SL ICC World Cup 2023 Live Score: 5 ಓವರ್​ಗಳು ಮುಕ್ತಾಯ

    5 ಓವರ್​ಗಳ ಮುಕ್ತಾಯದ ವೇಳೆಗೆ 22 ರನ್ ಕಲೆಹಾಕಿದ ಪಾಕಿಸ್ತಾನ್.

    ಕ್ರೀಸ್​ನಲ್ಲಿ ಬಾಬರ್ ಆಝಂ ಹಾಗೂ ಅಬ್ದುಲ್ಲ ಶಫೀಕ್ ಬ್ಯಾಟಿಂಗ್.

    ಇಮಾಮ್ ಉಲ್ ಹಕ್ (12) ವಿಕೆಟ್ ಪಡೆದ ಶ್ರೀಲಂಕಾ ತಂಡದ ಎಡಗೈ ವೇಗಿ ದಿಲ್ಶನ್ ಮಧುಶಂಕ.

    PAK 22/1 (5)

      

  • 10 Oct 2023 06:47 PM (IST)

    PAK vs SL ICC World Cup 2023 Live Score: ಪಾಕ್ ತಂಡದ ಮೊದಲ ವಿಕೆಟ್ ಪತನ

    ದಿಲ್ಶನ್ ಮಧುಶಂಕ ಎಸೆತದಲ್ಲಿ ಲೆಗ್ ಸೈಡ್​ನತ್ತ ಭರ್ಜರಿ ಹೊಡೆತಕ್ಕೆ ಯತ್ನಿಸಿದ ಇಮಾಮ್ ಉಲ್ ಹಕ್. ಥರ್ಡ್​ ಮ್ಯಾನ್ ಬೌಂಡರಿಯಲ್ಲಿ ಅತ್ಯುತ್ತಮ ಕ್ಯಾಚ್ ಹಿಡಿದ ಕುಸಾಲ್ ಪೆರೇರಾ.

    12 ಎಸೆತಗಳಲ್ಲಿ 12 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಇಮಾಮ್ ಉಲ್ ಹಕ್.

    PAK 20/1 (4)

      

  • 10 Oct 2023 06:37 PM (IST)

    PAK vs SL ICC World Cup 2023 Live Score: ಮೊದಲ ಬೌಂಡರಿ

    ದಿಲ್ಶನ್ ಮಧುಶಂಕ ಎಸೆದ 2ನೇ ಓವರ್​ನ 4ನೇ ಎಸೆತವನ್ನು ಸ್ಟ್ರೈಟ್ ಡ್ರೈವ್ ಮೂಲಕ ಬೌಂಡರಿಗಟ್ಟಿದ ಇಮಾಮ್ ಉಲ್ ಹಕ್.

    ಇದು ಪಾಕ್ ಇನಿಂಗ್ಸ್​ನ ಮೊದಲ ಫೋರ್.

    ಕ್ರೀಸ್​ನಲ್ಲಿ ಇಮಾಮ್ ಹಾಗೂ ಅಬ್ದುಲ್ಲ ಶಫೀಕ್ ಬ್ಯಾಟಿಂಗ್.

    PAK 10/0 (2)

      

  • 10 Oct 2023 06:33 PM (IST)

    PAK vs SL ICC World Cup 2023 Live Score: ಪಾಕ್ ಇನಿಂಗ್ಸ್​ ಆರಂಭ

    ಮೊದಲ ಓವರ್ ​ನಲ್ಲಿ ಕೇವಲ 6 ರನ್ ನೀಡಿದ ಸ್ಪಿನ್ನರ್ ಮಹೀಶ್ ತೀಕ್ಷಣ.

    ಕ್ರೀಸ್​ನಲ್ಲಿ ಇಮಾಮ್ ಉಲ್ ಹಕ್ ಹಾಗೂ ಅಬ್ದುಲ್ಲ ಶಫೀಕ್ ಬ್ಯಾಟಿಂಗ್.

    PAK 6/0 (1)

    ಪಾಕಿಸ್ತಾನ್ ತಂಡಕ್ಕೆ 345 ರನ್ ​ಗಳ ಗುರಿ ನೀಡಿರುವ ಶ್ರೀಲಂಕಾ.

      

     

  • 10 Oct 2023 05:59 PM (IST)

    PAK vs SL ICC World Cup 2023 Live Score: ಶ್ರೀಲಂಕಾ ತಂಡದ ಇನಿಂಗ್ಸ್ ಅಂತ್ಯ

    ಹ್ಯಾರಿಸ್ ರೌಫ್ ಎಸೆದ ಕೊನೆಯ ಓವರ್​ನ 2ನೇ ಎಸೆತದಲ್ಲಿ ಮಹೀಶ್ ತೀಕ್ಷಣ (0) ಕ್ಲೀನ್ ಬೌಲ್ಡ್.

    ಅಂತಿಮ ಎಸೆತದಲ್ಲಿ ದುನಿತ್ ವೆಲ್ಲಲಾಗೆ (10) ಕ್ಯಾಚ್ ಔಟ್.

    ಕೊನೆಯ ಓವರ್​ನಲ್ಲಿ ಕೇವಲ 1 ರನ್ ನೀಡಿ 2 ವಿಕೆಟ್ ಪಡೆದ ಹ್ಯಾರಿಸ್ ರೌಫ್.

    ಶ್ರೀಲಂಕಾ- 344/9 (50)

      

  • 10 Oct 2023 05:49 PM (IST)

    PAK vs SL ICC World Cup 2023 Live Score: ಲಂಕಾ ತಂಡದ 7ನೇ ವಿಕೆಟ್ ಪತನ

    ಹಸನ್ ಅಲಿ ಎಸೆದ 48ನೇ ಓವರ್​ನ ಕೊನೆಯ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ ಸದೀರ ಸಮರವಿಕ್ರಮ.

    89 ಎಸೆತಗಳಲ್ಲಿ 108 ರನ್​ ಬಾರಿಸಿದ ವಿಕೆಟ್ ಒಪ್ಪಿಸಿದ ಸದೀರ.

    ಕ್ರೀಸ್​ನಲ್ಲಿ ದುನಿತ್ ವೆಲ್ಲಲಾಗೆ ಹಾಗೂ ಮಹೀಶ್ ತೀಕ್ಷಣ ಬ್ಯಾಟಿಂಗ್.

    SL 335/7 (48)

      

  • 10 Oct 2023 05:43 PM (IST)

    PAK vs SL ICC World Cup 2023 Live Score: ಪಾಕ್ ತಂಡಕ್ಕೆ 6ನೇ ಯಶಸ್ಸು

    ಶಾಹೀನ್ ಅಫ್ರಿದಿ ಎಸೆದ 47ನೇ ಓವರ್​ನ 3ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಲಾಂಗ್​ ಆನ್​ನಲ್ಲಿ ಕ್ಯಾಚ್ ನೀಡಿದ ದಸುನ್ ಶಾನಕ.

    18 ಎಸೆತಗಳಲ್ಲಿ 12 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಶ್ರೀಲಂಕಾ ತಂಡದ ನಾಯಕ ಶಾನಕ.

    ಕ್ರೀಸ್​ನಲ್ಲಿ ಸದೀರ ಸಮರವಿಕ್ರಮ ಹಾಗೂ ದುನಿತ್ ವೆಲ್ಲಲಾಗೆ ಬ್ಯಾಟಿಂಗ್.

    SL 331/6 (47)

      

  • 10 Oct 2023 05:37 PM (IST)

    PAK vs SL ICC World Cup 2023 Live Score: ಸದೀರ ಭರ್ಜರಿ ಶತಕ

    82 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 10 ಫೋರ್​ಗಳೊಂದಿಗೆ ಶತಕ ಪೂರೈಸಿದ ಸದೀರ ಸಮರವಿಕ್ರಮ.

    46 ಓವರ್​ಗಳಲ್ಲಿ 321 ರನ್​ ಕಲೆಹಾಕಿದ ಶ್ರೀಲಂಕಾ.

    ಕ್ರೀಸ್​ನಲ್ಲಿ ದಸುನ್ ಶಾನಕ ಹಾಗೂ ಸದೀರ ಸಮರವಿಕ್ರಮ ಬ್ಯಾಟಿಂಗ್.

    SL 321/5 (46)

      

  • 10 Oct 2023 05:32 PM (IST)

    PAK vs SL ICC World Cup 2023 Live Score: 45 ಓವರ್​ಗಳು ಮುಕ್ತಾಯ

    45 ಓವರ್​ಗಳ ಮುಕ್ತಾಯದ ವೇಳೆಗೆ 315 ರನ್ ಕಲೆಹಾಕಿದ ಶ್ರೀಲಂಕಾ.

    ಕ್ರೀಸ್​ನಲ್ಲಿ ಸದೀರ ಸಮರವಿಕ್ರಮ (98) ಹಾಗೂ ದಸುನ್ ಶಾನಕ ಬ್ಯಾಟಿಂಗ್.

    ಪಾಕಿಸ್ತಾನ್ ತಂಡದ ಕೊನೆಯ ಐದು ಓವರ್​ಗಳು ಮಾತ್ರ ಬಾಕಿ.

    SL 315/5 (45)

      

  • 10 Oct 2023 05:27 PM (IST)

    PAK vs SL ICC World Cup 2023 Live Score: ಭರ್ಜರಿ ಸಿಕ್ಸ್ ಸಿಡಿಸಿದ ಸದೀರ

    ಮೊಹಮ್ಮದ್ ನವಾಝ್ ಎಸೆದ 44ನೇ ಓವರ್​ನ 3ನೇ ಎಸೆತದಲ್ಲಿ ಡೀಪ್ ಕವರ್​ನತ್ತ ಸಿಕ್ಸ್​ ಸಿಡಿಸಿದ ಸದೀರ ಸಮರವಿಕ್ರಮ.

    ಈ ಸಿಕ್ಸ್​ನೊಂದಿಗೆ 300 ರನ್ ಪೂರೈಸಿದ ಶ್ರೀಲಂಕಾ.

    ಕ್ರೀಸ್​ನಲ್ಲಿ ಸದೀರ ಸಮರವಿಕ್ರಮ (96) ಹಾಗೂ ದಸುನ್ ಶಾನಕ (3) ಬ್ಯಾಟಿಂಗ್.

    SL 309/5 (44)

      

     

  • 10 Oct 2023 05:17 PM (IST)

    PAK vs SL ICC World Cup 2023 Live Score: ಪಾಕ್ ತಂಡಕ್ಕೆ 5ನೇ ಯಶಸ್ಸು

    42ನೇ ಓವರ್​ನ ಮೊದಲ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದ ಧನಂಜಯ ಡಿಸಿಲ್ವಾ…ಬೌಂಡರಿ ಲೈನ್​ನಲ್ಲಿ ಶಾಹೀನ್ ಅಫ್ರಿದಿ ಉತ್ತಮ ಕ್ಯಾಚ್.

    34 ಎಸೆತಗಳಲ್ಲಿ 25 ರನ್ ಬಾರಿಸಿ ಔಟಾದ ಧನಂಜಯ ಡಿಸಿಲ್ವಾ .

    SL 294/5 (41.1)

     

  • 10 Oct 2023 05:10 PM (IST)

    PAK vs SL ICC World Cup 2023 Live Score: 40 ಓವರ್​ಗಳು ಮುಕ್ತಾಯ

    ಮೊಹಮ್ಮದ್ ನವಾಝ್ ಎಸೆದ 40ನೇ ಓವರ್​ನ 5ನೇ ಎಸೆತದಲ್ಲಿ ಆಫ್ ಸೈಡ್​ನತ್ತ ಫೋರ್ ಬಾರಿಸಿದ ಸದೀರ ಸಮರವಿಕ್ರಮ.

    40 ಓವರ್​ಗಳ ಮುಕ್ತಾಯದ ವೇಳೆಗೆ 283 ರನ್ ಕಲೆಹಾಕಿದ ಶ್ರೀಲಂಕಾ.

    ಕ್ರೀಸ್​ನಲ್ಲಿ ಸದೀರ ಸಮರವಿಕ್ರಮ (76) ಹಾಗೂ ಧನಂಜಯ ಡಿಸಿಲ್ವಾ (24)

    SL 283/4 (40)

     

  • 10 Oct 2023 04:49 PM (IST)

    PAK vs SL ICC World Cup 2023 Live Score: 35 ಓವರ್​ಗಳು ಮುಕ್ತಾಯ

    35 ಓವರ್​ಗಳ ಮುಕ್ತಾಯದ ವೇಳೆ 247 ರನ್ ಕಲೆಹಾಕಿದ ಶ್ರೀಲಂಕಾ ತಂಡ.

    ಕ್ರೀಸ್​ನಲ್ಲಿ ಸದೀರ ಸಮರವಿಕ್ರಮ (54) ಹಾಗೂ ಧನಂಜಯ ಡಿಸಿಲ್ವಾ (9) ಬ್ಯಾಟಿಂಗ್.

    SL 247/4 (35)

    ಪಾತುಮ್ ನಿಸ್ಸಂಕಾ, ಕುಸಾಲ್ ಪರೇರಾ, ಕುಸಾಲ್ ಮೆಂಡಿಸ್ ಹಾಗೂ ಚರಿತ್ ಅಸಲಂಕಾ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರುವ ಪಾಕ್ ಬೌಲರ್​ಗಳು.

     

  • 10 Oct 2023 04:44 PM (IST)

    PAK vs SL ICC World Cup 2023 Live Score: ಸದೀರ ಅರ್ಧಶತಕ

    43 ಎಸೆತಗಳಲ್ಲಿ ಆಕರ್ಷಕ ಅರ್ಧಶತಕ ಪೂರೈಸಿದ ಸದೀರ ಸಮರ ವಿಕ್ರಮ.

    34 ಓವರ್​ಗಳ ಮುಕ್ತಾಯದ ವೇಳೆಗೆ 244 ರನ್ ಕಲೆಹಾಕಿದ ಶ್ರೀಲಂಕಾ.

    ಕ್ರೀಸ್​ನಲ್ಲಿ ಸದೀರ ಸಮರವಿಕ್ರಮ ಹಾಗೂ ಧನಂಜಯ ಡಿಸಿಲ್ವಾ ಬ್ಯಾಟಿಂಗ್.

    SL 244/4 (34)

     

  • 10 Oct 2023 04:28 PM (IST)

    PAK vs SL ICC World Cup 2023 Live Score: 30 ಓವರ್​ಗಳು ಮುಕ್ತಾಯ

    ಹಸನ್ ಅಲಿ ಎಸೆದ 31ನೇ ಓವರ್​ನ ಮೊದಲ ಎಸೆತದಲ್ಲೇ ವಿಕೆಟ್ ಕೀಪರ್​ಗೆ ಕ್ಯಾಚ್​ ನೀಡಿದ ಚರಿತ್ ಅಸಲಂಕಾ.

    30 ಓವರ್​ಗಳ ಮುಕ್ತಾಯದ ವೇಳೆಗೆ 229 ರನ್ ಕಲೆಹಾಕಿರುವ ಶ್ರೀಲಂಕಾ ತಂಡ.

    ಕ್ರೀಸ್​ನಲ್ಲಿ ಸದೀರ ಸಮರ ವಿಕ್ರಮ ಹಾಗೂ ಧನಂಜಯ ಡಿಸಿಲ್ವಾ ಬ್ಯಾಟಿಂಗ್.

    SL 229/4 (30.1)

     

      

  • 10 Oct 2023 04:20 PM (IST)

    PAK vs SL ICC World Cup 2023 Live Score: ಶ್ರೀಲಂಕಾದ 3ನೇ ವಿಕೆಟ್ ಪತನ

    ಹಸನ್ ಅಲಿ ಎಸೆದ 29ನೇ ಓವರ್​ನ 3ನೇ ಮತ್ತು 4ನೇ ಎಸೆತಗಳಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿದ ಕುಸಾಲ್ ಮೆಂಡಿಸ್.

    5ನೇ ಎಸೆತದಲ್ಲಿ ಮತ್ತೊಂದು ಭರ್ಜರಿ ಸಿಕ್ಸ್​​ಗೆ ಯತ್ನ…ಬೌಂಡರಿ ಲೈನ್​ನಲ್ಲಿ ಇಮಾಮ್ ಅತ್ಯುತ್ತಮ ಕ್ಯಾಚ್.

    77 ಎಸೆತಗಳಲ್ಲಿ 122 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಕುಸಾಲ್ ಮೆಂಡಿಸ್.

    SL 218/3 (28.5)

      

  • 10 Oct 2023 04:15 PM (IST)

    PAK vs SL ICC World Cup 2023 Live Score: ದ್ವಿಶತಕ ಪೂರೈಸಿದ ಶ್ರೀಲಂಕಾ

    ಕೇವಲ 28 ಓವರ್ ​ಗಳಲ್ಲಿ ದ್ವಿಶತಕ ಪೂರೈಸಿದ ಶ್ರೀಲಂಕಾ.

    ಕ್ರೀಸ್​ ನಲ್ಲಿ ಕುಸಾಲ್ ಮೆಂಡಿಸ್ (110) ಹಾಗೂ ಸದೀರ ಸಮರ ವಿಕ್ರಮ (35) ಬ್ಯಾಟಿಂಗ್

    SL 204/2 (28)

    ಪಾತುಮ್ ನಿಸ್ಸಂಕಾ (51) ಹಾಗೂ ಕುಸಾಲ್ ಪೆರೇರಾ (0) ಔಟ್.

      

  • 10 Oct 2023 04:08 PM (IST)

    PAK vs SL ICC World Cup 2023 Live Score: ಶತಕ ಸಿಡಿಸಿದ ಮೆಂಡಿಸ್

    ಹಸನ್ ಅಲಿ ಎಸೆದ 27ನೇ ಓವರ್​ನ ಮೊದಲ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಸಿಕ್ಸ್ ಬಾರಿಸಿದ ಕುಸಾಲ್ ಮೆಂಡಿಸ್.

    ಈ ಭರ್ಜರಿ ಸಿಕ್ಸ್​ನೊಂದಿಗೆ ಕೇವಲ 65 ಎಸೆತಗಳಲ್ಲಿ ಶತಕ ಪೂರೈಸಿದ ಮೆಂಡಿಸ್.

    ಈ ಮೂಲಕ ಏಕದಿನ ವಿಶ್ವಕಪ್​ನಲ್ಲಿ ಅತೀ ವೇಗದ ಶತಕ ಸಿಡಿಸಿದ ಶ್ರೀಲಂಕಾ ಬ್ಯಾಟರ್ ಎನಿಸಿಕೊಂಡ ಕುಸಾಲ್ ಮೆಂಡಿಸ್.

    SL 192/2 (26.1)

      

  • 10 Oct 2023 04:04 PM (IST)

    PAK vs SL ICC World Cup 2023 Live Score: 25 ಓವರ್​ಗಳು ಮುಕ್ತಾಯ

    25 ಓವರ್​ಗಳ ಮುಕ್ತಾಯದ ವೇಳೆಗೆ 181 ರನ್ ಕಲೆಹಾಕಿದ ಶ್ರೀಲಂಕಾ.

    ಭರ್ಜರಿ ಬ್ಯಾಟಿಂಗ್ ಮುಂದುವರೆಸಿರುವ ಕುಸಾಲ್ ಮೆಂಡಿಸ್ (92) ಹಾಗೂ ಸದೀರ ಸಮರವಿಕ್ರಮ (30)

    3ನೇ ವಿಕೆಟ್​ಗೆ ಕೇವಲ 48 ಎಸೆತಗಳಲ್ಲಿ 75 ರನ್​ಗಳ ಜೊತೆಯಾಟವಾಡಿದ ಸದೀರ-ಮೆಂಡಿಸ್.

    SL 181/2 (25)

      

  • 10 Oct 2023 03:45 PM (IST)

    PAK vs SL ICC World Cup 2023 Live Score: ಸಿಕ್ಸರ್ ಸಮರವಿಕ್ರಮ

    ಹ್ಯಾರಿಸ್ ರೌಫ್ ಎಸೆದ 21ನೇ ಓವರ್​ನ 5ನೇ ಎಸೆತದಲ್ಲಿ ಲಾಂಗ್ ಆಫ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಸದೀರ ಸಮರವಿಕ್ರಮ.

    6ನೇ ಎಸೆತದಲ್ಲಿ ಆಫ್​ ಸೈಡ್​ನತ್ತ ಮತ್ತೊಂದು ಫೋರ್.

    ಕ್ರೀಸ್​ನಲ್ಲಿ ಕುಸಾಲ್ ಮೆಂಡಿಸ್ ಹಾಗೂ ಸದೀರ ಸಮರವಿಕ್ರಮ ಬ್ಯಾಟಿಂಗ್.

    SL 147/2 (21)

      

  • 10 Oct 2023 03:39 PM (IST)

    PAK vs SL ICC World Cup 2023 Live Score: 20 ಓವರ್​ಗಳು ಮುಕ್ತಾಯ

    20 ಓವರ್​ಗಳ ಮುಕ್ತಾಯದ ವೇಳೆಗೆ 127 ರನ್ ಕಲೆಹಾಕಿದ ಶ್ರೀಲಂಕಾ ತಂಡ.

    ಕ್ರೀಸ್​ನಲ್ಲಿ ಸದೀರ ಸಮರವಿಕ್ರಮ ಹಾಗೂ ಕುಸಾಲ್ ಮೆಂಡಿಸ್ ಬ್ಯಾಟಿಂಗ್

    SL 127/2 (20)

    ಕುಸಾಲ್ ಪೆರೇರಾ (0) ಹಾಗೂ ಪಾತುಮ್ ನಿಸ್ಸಂಕಾ (51) ಔಟ್.

      

  • 10 Oct 2023 03:29 PM (IST)

    PAK vs SL ICC World Cup 2023 Live Score: ಶ್ರೀಲಂಕಾ ತಂಡದ 2ನೇ ವಿಕೆಟ್ ಪತನ

    ಶಾದಾಬ್ ಖಾನ್ ಎಸೆದ 18ನೇ ಓವರ್​ನ 2ನೇ ಎಸೆತದಲ್ಲಿ ಆಫ್​ ಸೈಡ್ ಫ್ರಂಟ್ ಫೀಲ್ಡರ್​ಗೆ ಕ್ಯಾಚ್ ನೀಡಿದ ಪಾತುಮ್ ನಿಸ್ಸಂಕಾ.

    61 ಎಸೆತಗಳಲ್ಲಿ 51 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ನಿಸ್ಸಂಕಾ.

    ಕ್ರೀಸ್​ನಲ್ಲಿ ಕುಸಾಲ್ ಮೆಂಡಿಸ್ ಹಾಗೂ ಸದೀರ ಸಮರವಿಕ್ರಮ ಬ್ಯಾಟಿಂಗ್.

    SL 112/2 (18)

      

  • 10 Oct 2023 03:24 PM (IST)

    PAK vs SL ICC World Cup 2023 Live Score: ಶತಕ ಪೂರೈಸಿದ ಶ್ರೀಲಂಕಾ

    16.2 ಓವರ್​ಗಳಲ್ಲಿ ಶತಕ ಪೂರೈಸಿದ ಶ್ರೀಲಂಕಾ.

    58 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಪಾತುಮ್ ನಿಸ್ಸಂಕಾ.

    ನವಾಝ್ ಎಸೆದ 17ನೇ ಓವರ್​ನ ಕೊನೆಯ ಎಸೆತದಲ್ಲಿ ಫೋರ್ ಬಾರಿಸಿ 40 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಕುಸಾಲ್ ಮೆಂಡಿಸ್.

    2ನೇ ವಿಕೆಟ್​ಗೆ 102 ರನ್​ಗಳ ಜೊತೆಯಾಟದೊಂದಿಗೆ ಉತ್ತಮ ಬ್ಯಾಟಿಂಗ್.

    SL 107/1 (17)

      

     

      

  • 10 Oct 2023 03:18 PM (IST)

    PAK vs SL ICC World Cup 2023 Live Score: ಶ್ರೀಲಂಕಾ ಉತ್ತಮ ಬ್ಯಾಟಿಂಗ್

    15 ಓವರ್​ಗಳ ಮುಕ್ತಾಯದ ವೇಳೆಗೆ 90 ರನ್ ಕಲೆಹಾಕಿದ ಶ್ರೀಲಂಕಾ ತಂಡ.

    ಕ್ರೀಸ್​ನಲ್ಲಿ ಕುಸಾಲ್ ಮೆಂಡಿಸ್ (37) ಹಾಗೂ ಪಾತುಮ್ ನಿಸ್ಸಂಕಾ (47) ಬ್ಯಾಟಿಂಗ್.

    2ನೇ ವಿಕೆಟ್​ಗೆ 85 ರನ್​ಗಳ ಜೊತೆಯಾಟದೊಂದಿಗೆ ಉತ್ತಮ ಬ್ಯಾಟಿಂಗ್.

    SL 90/1 (15)

    ಕುಸಾಲ್ ಪೆರೇರಾ (0) ಔಟ್.

  • 10 Oct 2023 03:15 PM (IST)

    PAK vs SL ICC World Cup 2023 Live Score: ಬ್ಯಾಕ್ ಟು ಬ್ಯಾಕ್ ಬೌಂಡರಿ

    ಮೊಹಮ್ಮದ್ ನವಾಝ್ ಎಸೆದ 12ನೇ ಓವರ್​ನ ಕೊನೆಯ 2 ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಪಾತುಮ್ ನಿಸ್ಸಂಕಾ.

    ಶ್ರೀಲಂಕಾ ತಂಡದಿಂದ ಉತ್ತಮ ಬ್ಯಾಟಿಂಗ್.

    ಕ್ರೀಸ್​ನಲ್ಲಿ ಪಾತುಮ್ ನಿಸ್ಸಂಕಾ ಹಾಗೂ ಕುಸಾಲ್ ಮೆಂಡಿಸ್ ಬ್ಯಾಟಿಂಗ್

    SL 73/1 (12)

      

  • 10 Oct 2023 02:51 PM (IST)

    PAK vs SL ICC World Cup 2023 Live Score: 10 ಓವರ್​ಗಳು ಮುಕ್ತಾಯ

    ಹ್ಯಾರಿಸ್ ರೌಫ್ ಎಸೆದ 10ನೇ ಓವರ್​ನ ಮೊದಲ ಎಸೆತದಲ್ಲಿ ಆಫ್​ ಸೈಡ್​ನತ್ತ ಫೋರ್ ಬಾರಿಸಿದ ಪಾತುಮ್ ನಿಸ್ಸಂಕಾ.

    10 ಓವರ್​ಗಳ ಮುಕ್ತಾಯದ ವೇಳೆಗೆ 58 ರನ್ ಕಲೆಹಾಕಿದ ಶ್ರೀಲಂಕಾ.

    ಕ್ರೀಸ್​ನಲ್ಲಿ ಪಾತುಮ್ ನಿಸ್ಸಂಕಾ (29) ಹಾಗೂ ಕುಸಾಲ್ ಮೆಂಡಿಸ್ (23) ಬ್ಯಾಟಿಂಗ್.

    SL 58/1 (10)

      

     

  • 10 Oct 2023 02:47 PM (IST)

    PAK vs SL ICC World Cup 2023 Live Score: ಅರ್ಧಶತಕ ಪೂರೈಸಿದ ಶ್ರೀಲಂಕಾ

    9 ಓವರ್​ಗಳಲ್ಲಿ ಅರ್ಧಶತಕ ಪೂರೈಸಿದ ಶ್ರೀಲಂಕಾ.

    2ನೇ ಓವರ್​ನಲ್ಲಿ ಮೊದಲ ವಿಕೆಟ್ ಕಳೆದುಕೊಂಡ ಬಳಿಕ ಲಂಕಾ ತಂಡದಿಂದ ಉತ್ತಮ ಬ್ಯಾಟಿಂಗ್.

    ಕ್ರೀಸ್​ನಲ್ಲಿ ಪಾತುಮ್ ನಿಸ್ಸಂಕಾ ಹಾಗೂ ಕುಸಾಲ್ ಮೆಂಡಿಸ್ ಬ್ಯಾಟಿಂಗ್.

    SL 53/1 (9)

     

  • 10 Oct 2023 02:41 PM (IST)

    PAK vs SL ICC World Cup 2023 Live Score: ಭರ್ಜರಿ ಸಿಕ್ಸ್ ಸಿಡಿಸಿದ ಪಾತುಮ್

    ಹಸನ್ ಅಲಿ ಎಸೆದ 8ನೇ ಓವರ್​ನ 5ನೇ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್​ ಸಿಡಿಸಿದ ಪಾತುಮ್ ನಿಸ್ಸಂಕಾ.

    ಶ್ರೀಲಂಕಾ ತಂಡದ ಉತ್ತಮ ಬ್ಯಾಟಿಂಗ್.

    ಕ್ರೀಸ್​ನಲ್ಲಿ ಪಾತುಮ್ ನಿಸ್ಸಂಕಾ ಹಾಗೂ ಕುಸಾಲ್ ಮೆಂಡಿಸ್ ಬ್ಯಾಟಿಂಗ್.

    SL 48/1 (8)

     

  • 10 Oct 2023 02:32 PM (IST)

    PAK vs SL ICC World Cup 2023 Live Score: ಆಕರ್ಷಕ ಬೌಂಡರಿ

    ಹಸನ್ ಅಲಿ ಎಸೆದ 6ನೇ ಓವರ್​ನ ಕೊನೆಯ ಎಸೆತದಲ್ಲಿ ಮಿಡ್ ಆಫ್​ನತ್ತ ಫೋರ್ ಬಾರಿಸಿದ ಕುಸಾಲ್ ಮೆಂಡಿಸ್.

    6 ಓವರ್​ಗಳ ಮುಕ್ತಾಯದ ವೇಳೆಗೆ ಶ್ರೀಲಂಕಾ ತಂಡದ ಸ್ಕೋರ್ 34.

    ಕ್ರೀಸ್​ನಲ್ಲಿ ಪಾತುಮ್ ನಿಸ್ಸಂಕಾ ಹಾಗೂ ಕುಸಾಲ್ ಮೆಂಡಿಸ್ ಬ್ಯಾಟಿಂಗ್.

    SL 34/1 (6)

     

  • 10 Oct 2023 02:27 PM (IST)

    PAK vs SL ICC World Cup 2023 Live Score: 5 ಓವರ್​ಗಳು ಮುಕ್ತಾಯ

    ಶಾಹೀನ್ ಶಾ ಅಫ್ರಿದಿ ಎಸೆದ 5ನೇ ಓವರ್​ನ 5ನೇ ಎಸೆತದಲ್ಲಿ ಥರ್ಡ್​ಮ್ಯಾನ್ ಫೀಲ್ಡರ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಕುಸಾಲ್ ಮೆಂಡಿಸ್.

    ಕ್ರೀಸ್​ನಲ್ಲಿ ಕುಸಾಲ್ ಮೆಂಡಿಸ್ ಹಾಗೂ ಪಾತುಮ್ ನಿಸ್ಸಂಕಾ ಬ್ಯಾಟಿಂಗ್.

    SL 29/1 (5)

      

  • 10 Oct 2023 02:24 PM (IST)

    PAK vs SL ICC World Cup 2023 Live Score: ಶ್ರೀಲಂಕಾ ತಂಡದ ಮೊದಲ ವಿಕೆಟ್ ಪತನ

    ಹಸನ್ ಅಲಿ ಎಸೆದ 2ನೇ ಓವರ್​ನ 4ನೇ ಎಸೆತದಲ್ಲಿ ಪಾಕ್ ತಂಡಕ್ಕೆ ಮೊದಲ ಯಶಸ್ಸು.

    ವಿಕೆಟ್​ ಕೀಪರ್ ರಿಝ್ವಾನ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದ ಕುಸಾಲ್ ಪೆರೇರಾ (0).

    2 ಓವರ್​ಗಳ ಮುಕ್ತಾಯಕ್ಕೆ 1 ವಿಕೆಟ್ ಕಳೆದುಕೊಂಡು 6 ರನ್​ ಗಳಿಸಿದ ಶ್ರೀಲಂಕಾ.

    SL 6/1 (2)

      

     

     

  • 10 Oct 2023 02:21 PM (IST)

    PAK vs SL ICC World Cup 2023 Live Score: ಪಾಕಿಸ್ತಾನ್ ಉತ್ತಮ ಆರಂಭ

    ಮೊದಲ ಓವರ್​ನಲ್ಲಿ ಕೇವಲ 4 ರನ್ ನೀಡಿದ ಶಾಹೀನ್ ಶಾ ಅಫ್ರಿದಿ.

    ಶ್ರೀಲಂಕಾ ಪರ ಆರಂಭಿಕರಾಗಿ ಕಣಕ್ಕಿಳಿದ ಪಾತುಮ್ ನಿಸ್ಸಂಕಾ ಹಾಗೂ ಕುಸಾಲ್ ಪರೇರಾ.

    ಪಾಕಿಸ್ತಾನ್ ತಂಡದಿಂದ ಉತ್ತಮ ಆರಂಭ

    SL 4/0 (1)

      

  • 10 Oct 2023 01:39 PM (IST)

    PAK vs SL ICC World Cup 2023 Live Score: ಶ್ರೀಲಂಕಾ ಪ್ಲೇಯಿಂಗ್ ಇಲೆವೆನ್ ಹೀಗಿದೆ

    ಶ್ರೀಲಂಕಾ (ಪ್ಲೇಯಿಂಗ್ XI): ಪಾತುಮ್ ನಿಸ್ಸಾಂಕ, ಕುಸಾಲ್ ಪೆರೇರಾ, ಕುಸಾಲ್ ಮೆಂಡಿಸ್(ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ದಸುನ್ ಶಾನಕ (ನಾಯಕ), ದುನಿತ್ ವೆಲ್ಲಲಾಗೆ, ಮಹೀಶ್ ತೀಕ್ಷಣ, ಮತೀಶ ಪತಿರಣ, ದಿಲ್ಶನ್ ಮಧುಶಂಕ.

  • 10 Oct 2023 01:39 PM (IST)

    PAK vs SL ICC World Cup 2023 Live Score: ಪಾಕಿಸ್ತಾನ್ ಪ್ಲೇಯಿಂಗ್ ಇಲೆವೆನ್ ಹೀಗಿದೆ

    ಪಾಕಿಸ್ತಾನ್ (ಪ್ಲೇಯಿಂಗ್ XI): ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಬಾಬರ್ ಆಝಂ (ನಾಯಕ), ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಮೊಹಮ್ಮದ್ ನವಾಜ್, ಶಾದಾಬ್ ಖಾನ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್.

  • 10 Oct 2023 01:33 PM (IST)

    PAK vs SL ICC World Cup 2023 Live Score: ಟಾಸ್ ಗೆದ್ದ ಶ್ರೀಲಂಕಾ

    ಹೈದರಾಬಾದ್​ನ ರಾಜೀವ್ ಗಾಂಧಿ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಶ್ರೀಲಂಕಾ ತಂಡದ ನಾಯಕ ದಸುನ್ ಶಾನಕ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

Published On - 1:33 pm, Tue, 10 October 23

Follow us on