PBKS vs KKR Highlights IPL 2023: ಕೆಕೆಆರ್ ಗೆಲುವಿಗೆ ಮಳೆ ಅಡ್ಡಿ; ಪಂಜಾಬ್​ಗೆ 7 ರನ್ ಜಯ

Punjab Kings vs Kolkata Knight Riders Highlights in Kannada: ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಶಿಖರ್ ಧವನ್ ನಾಯಕತ್ವದಲ್ಲಿ ತನ್ನ ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 7 ರನ್‌ಗಳಿಂದ (ಡಕ್‌ವರ್ತ್-ಲೂಯಿಸ್ ನಿಯಮ) ಸೋಲಿಸಿದೆ.

PBKS vs KKR Highlights IPL 2023: ಕೆಕೆಆರ್ ಗೆಲುವಿಗೆ ಮಳೆ ಅಡ್ಡಿ; ಪಂಜಾಬ್​ಗೆ 7 ರನ್ ಜಯ
ಪಂಜಾಬ್ ಕಿಂಗ್ಸ್- ಕೋಲ್ಕತ್ತಾ ನೈಟ್ ರೈಡರ್ಸ್​ ಮುಖಾಮುಖಿ

Updated on: Apr 01, 2023 | 7:58 PM

ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಶಿಖರ್ ಧವನ್ ನಾಯಕತ್ವದಲ್ಲಿ ತನ್ನ ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 7 ರನ್‌ಗಳಿಂದ (ಡಕ್‌ವರ್ತ್-ಲೂಯಿಸ್ ನಿಯಮ) ಸೋಲಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಭಾನುಕಾ ರಾಜಪಕ್ಸೆ ಅವರ ಅರ್ಧಶತಕದ ನೆರವಿನಿಂದ 191 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಕೋಲ್ಕತ್ತಾ ತಂಡ ಮಳೆ ಬರುವ ಹೊತ್ತಿಗೆ 7 ವಿಕೆಟ್ ಕಳೆದುಕೊಂಡು 146 ರನ್ ಗಳಿಸಿತ್ತು. ಅಂತಿಮವಾಗಿ ಮಳೆ ನಿಲ್ಲದ ಕಾರಣ ಅಂಪೈರ್​ಗಳು ಪಂದ್ಯವನ್ನು ರದ್ದಗೊಳಿಸಿದ್ದಾರೆ. ಹೀಗಾಗಿ ಪಂಜಾಬ್​ ಕಿಂಗ್ಸ್​ ತಂಡ ಡಕ್‌ವರ್ತ್-ಲೂಯಿಸ್ ನಿಯಮದಡಿಯಲ್ಲಿ 7 ರನ್​ಗಳ ಜಯ ಸಾಧಿಸಿದೆ.

LIVE NEWS & UPDATES

The liveblog has ended.
  • 01 Apr 2023 07:15 PM (IST)

    ವೆಂಕಟೇಶ್ ಔಟ್

    ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ಅಯ್ಯರ್, 16ನೇ ಓವರ್​ನಲ್ಲಿ ಕ್ಯಾಚಿತ್ತು ಇನ್ನಿಂಗ್ಸ್ ಮುಗಿಸಿದ್ದಾರೆ. ದೀರ್ಘ ಇನ್ನಿಂಗ್ಸ್ ಆಡಿದ ಅಯ್ಯರ್ 32 ರನ್ ಬಾರಿಸಿದರು.

  • 01 Apr 2023 07:13 PM (IST)

    ರಸೆಲ್ ಔಟ್

    ಸ್ಫೋಟಕ ಬ್ಯಾಟಿಂಗ್ ಮೂಲಕ ಪಂದ್ಯದ ಗತಿ ಬದಲಿಸುತ್ತಿದ್ದ ರಸೆಲ್, ಸ್ಯಾಮ್ ಕರನ್ ಓವರ್​ನಲ್ಲಿ ರಜಾಗೆ ಕ್ಯಾಚಿತ್ತು ಔಟಾಗಿದ್ದಾರೆ.


  • 01 Apr 2023 07:10 PM (IST)

    14 ಓವರ್‌ಗಳ ನಂತರ ಕೋಲ್ಕತ್ತಾ ಸ್ಕೋರ್ 118/5

    ಕೋಲ್ಕತ್ತಾ ಪರ ವೆಂಕಟೇಶ್ ಅಯ್ಯರ್ 32 ರನ್ ಹಾಗೂ ಆಂಡ್ರೆ ರಸೆಲ್ 24 ರನ್ ಗಳಿಸಿ ಆಡುತ್ತಿದ್ದಾರೆ.

  • 01 Apr 2023 06:52 PM (IST)

    11 ಓವರ್‌ ಅಂತ್ಯ

    ಕೋಲ್ಕತ್ತಾ ಪರ ವೆಂಕಟೇಶ್ ಅಯ್ಯರ್ 22 ರನ್ ಮತ್ತು ಆಂಡ್ರೆ ರಸೆಲ್ 2 ರನ್ ಗಳಿಸಿ ಆಡುತ್ತಿದ್ದಾರೆ.

  • 01 Apr 2023 06:51 PM (IST)

    ರಿಂಕು ಸಿಂಗ್ ಔಟ್

    ಕೋಲ್ಕತ್ತಾದ ಐದನೇ ವಿಕೆಟ್ ಪತನ, ನಾಯಕ ರಾಣಾ ವಿಕೆಟ್ ಬಳಿಕ ಬಂದ ರಿಂಕು ಸಿಂಗ್ ಕೂಡ 4 ರನ್ ಗಳಿಸಿ ಔಟಾದರು.

  • 01 Apr 2023 06:40 PM (IST)

    ನಾಯಕ ರಾಣಾ ಔಟ್

    ಕೆಕೆಆರ್​ಗೆ ಮತ್ತೊಂದು ಆಘಾತ ಎದುರಾಗಿದೆ. ತಂಡದ ನಾಯಕ ನಿತೀಶ್ ರಾಣಾ 24 ರನ್ ಗಳಿಸಿ ಸಿಕಂದರ್ ರಜಾ ಬೌಲಿಂಗ್​ನಲ್ಲಿ ರಾಹುಲ್​ ಚಹರ್​ಗೆ ಕ್ಯಾಚಿತ್ತು ಔಟಾಗಿದ್ದಾರೆ.

  • 01 Apr 2023 06:39 PM (IST)

    10 ಓವರ್ ಮುಕ್ತಾಯ

    ಕೆಕೆಆರ್ ತಂಡದ 10 ಓವರ್ ಇನ್ನಿಂಗ್ಸ್ ಆಟ ಮುಗಿದಿದೆ. ತಂಡದ ಪರ ನಾಯಕ ರಾಣಾ 24 ರನ್, ಅಯ್ಯರ್ 20 ರನ್ ಗಳಿಸಿ ಆಡುತ್ತಿದ್ದಾರೆ.

  • 01 Apr 2023 06:32 PM (IST)

    7 ಓವರ್‌ ಅಂತ್ಯ

    ಕೋಲ್ಕತ್ತಾ ಪರ ವೆಂಕಟೇಶ್ ಅಯ್ಯರ್ 12 ಹಾಗೂ ನಿತೀಶ್ ರಾಣಾ 8 ರನ್ ಗಳಿಸಿ ಆಡುತ್ತಿದ್ದಾರೆ.ಇಲ್ಲಿಂದ ಉತ್ತಮ ಜೊತೆಯಾಟದ ಅವಶ್ಯಕತೆ ಇದೆ.

  • 01 Apr 2023 06:26 PM (IST)

    5 ಓವರ್‌ ಅಂತ್ಯ

    ಕೋಲ್ಕತ್ತಾ ಪರ ವೆಂಕಟೇಶ್ ಅಯ್ಯರ್ 1 ರನ್ ಹಾಗೂ ನಿತೀಶ್ ರಾಣಾ 6 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್‌ನಲ್ಲಿ ರಾಣಾ ಒಂದು ಫೋರ್ ಕೂಡ ಬಾರಿಸಿದರು.

  • 01 Apr 2023 06:20 PM (IST)

    ಮೂರನೇ ವಿಕೆಟ್ ಪತನ

    ಕೋಲ್ಕತ್ತಾ ನೈಟ್ ರೈಡರ್ಸ್ ಮೂರನೇ ವಿಕೆಟ್ ಪತನ, ಆರಂಬಿಕರಾಗಿ ಕಣಕ್ಕಿಳಿದಿದ್ದ ರಹಮಾನುಲ್ಲಾ ಗುರ್ಬಾಜ್, ಎಲಿಸ್ ಓವರ್​ನಲ್ಲಿ ಬಿಗ್ ಶಾಟ್ ಆಡಲು ಯತ್ನಿಸಿ ಕ್ಲೀನ್ ಬೌಲ್ಡ್ ಆದರು. ಅಂತಿಮವಾಗಿ ಗುರ್ಬಾಜ್ 22 ರನ್ ಗಳಿಸಿ ಔಟಾದರು

  • 01 Apr 2023 06:14 PM (IST)

    3 ಓವರ್‌ಗಳ ನಂತರ ಕೋಲ್ಕತ್ತಾ ಸ್ಕೋರ್ 24/2

    ಕೋಲ್ಕತ್ತಾ ಪರ ವೆಂಕಟೇಶ್ ಅಯ್ಯರ್ 1 ರನ್ ಮತ್ತು ರಹಮಾನುಲ್ಲಾ ಗುರ್ಬಾಜ್ 17 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್‌ನಲ್ಲಿ ಗುರ್ಬಾಜ್ 1 ಫೋರ್‌ ಕೂಡ ಹೊಡೆದರು.

  • 01 Apr 2023 06:03 PM (IST)

    2ನೇ ವಿಕೆಟ್ ಪತನ

    ಮಂದೀಪ್ ವಿಕೆಟ್ ಬಳಿಕ ಬಂದ ಅನ್ಕುಲ್ ರಾಯ್ ಕೂಡ ಒಂದು ಬೌಂಡರಿ ಬಾರಿಸಿ, ಅರ್ಶದೀಪ್ ಒವರ್​ನಲ್ಲೇ ಕ್ಯಾಚಿತ್ತು ಔಟಾದರು.

  • 01 Apr 2023 05:58 PM (IST)

    ಮಂದೀಪ್ ಔಟ್

    2ನೇ ಓವರ್ ಮೊದಲ ಎಸೆತದಲ್ಲೇ ಮಂದೀಪ್ ಸಿಕ್ಸರ್ ಹೊಡೆಯುವ ಯತ್ನದಲ್ಲಿ ಕರನ್​ಗೆ ಕ್ಯಾಚಿತ್ತು ಔಟಾಗಿದ್ದಾರೆ. ಅರ್ಶದೀಪ್​ಗೆ ವಿಕೆಟ್

  • 01 Apr 2023 05:57 PM (IST)

    ಕೋಲ್ಕತ್ತಾ ಬ್ಯಾಟಿಂಗ್ ಆರಂಭ

    ಕೋಲ್ಕತ್ತಾದ ಬ್ಯಾಟಿಂಗ್ ಆರಂಭವಾಗಿದೆ, 1 ಓವರ್‌ನ ನಂತರ ಕೋಲ್ಕತ್ತಾ ಸ್ಕೋರ್ 13/0. ಮೊದಲ ಓವರ್‌ನಲ್ಲಿ 1 ಸಿಕ್ಸರ್ ಮತ್ತು 1 ಬೌಂಡರಿ ಬಂತು.

  • 01 Apr 2023 05:54 PM (IST)

    ಫ್ಲಡ್‌ಲೈಟ್‌ಗಳ ತಾಂತ್ರಿಕ ದೋಷ

    ಫ್ಲಡ್‌ಲೈಟ್‌ಗಳ ತಾಂತ್ರಿಕ ದೋಷದಿಂದಾಗಿ ಕೋಲ್ಕತ್ತಾದ ಇನ್ನಿಂಗ್ಸ್ ಪ್ರಾರಂಭವಾಗಲು ಕೊಂಚ ವಿಳಂಬವಾಯಿತು.

  • 01 Apr 2023 05:24 PM (IST)

    ಪಂಜಾಬ್ ಇನ್ನಿಂಗ್ಸ್ ಅಂತ್ಯ

    ಪಂಜಾಬ್ ಇನ್ನಿಂಗ್ಸ್ ಮುಗಿದಿದ್ದು, ಕೋಲ್ಕತ್ತಾಗೆ 192 ರನ್ ಟಾರ್ಗೆಟ್ ಸಿಕ್ಕಿದೆ. ಪಂಜಾಬ್ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 191 ರನ್ ಗಳಿಸಿತು. ತಂಡದ ಪರ ರಾಜಪಕ್ಸೆ ಅತ್ಯಧಿಕ 50 ರನ್ ಬಾರಿಸಿದರು.

  • 01 Apr 2023 05:11 PM (IST)

    19 ಓವರ್‌ಗಳ ನಂತರ ಪಂಜಾಬ್ ಸ್ಕೋರ್ 176/5

    ಪಂಜಾಬ್ ಪರ ಶಾರುಖ್ ಖಾನ್ 6 ರನ್ ಹಾಗೂ ಕರನ್ 13 ರನ್ ಗಳಿಸಿ ಆಡುತ್ತಿದ್ದಾರೆ. 19 ಓವರ್‌ಗಳಲ್ಲಿ ಪಂಜಾಬ್ ಸ್ಕೋರ್ 176/5

  • 01 Apr 2023 05:05 PM (IST)

    ಐದನೇ ವಿಕೆಟ್ ಪತನ

    ಸಿಕಂದರ್ ರಜಾ 16 ರನ್ ಗಳಿಸಿ ನರೇನ್ ಎಸೆತದಲ್ಲಿ ಕ್ಯಾಚಿತ್ತು ಔಟಾದರು. 18 ಓವರ್‌ಗಳಲ್ಲಿ ಪಂಜಾಬ್ ಸ್ಕೋರ್ 168/5

  • 01 Apr 2023 04:57 PM (IST)

    16 ಓವರ್‌ ಅಂತ್ಯ

    ಸದ್ಯ ಪಂಜಾಬ್ ಇನ್ನಿಂಗ್ಸ್​ನ 16ನೇ ಓವರ್​ ಮುಗಿದಿದ್ದು, ತಂಡದ ಪರ ಸಿಕಂದರ್ ರಜಾ 13 ಹಾಗೂ ಕರನ್ 3 ರನ್ ಗಳಿಸಿ ಆಡುತ್ತಿದ್ದಾರೆ.

  • 01 Apr 2023 04:56 PM (IST)

    ಪಂಜಾಬ್ ಕಿಂಗ್ಸ್ ನಾಲ್ಕನೇ ವಿಕೆಟ್ ಪತನ

    ಪಂಜಾಬ್‌ನ ನಾಲ್ಕನೇ ವಿಕೆಟ್ ಪತನ, 40 ರನ್ ಗಳಿಸಿದ್ದ ಶಿಖರ್ ಧವನ್ ವರುಣ್ ಚಕ್ರವರ್ತಿ ಬೌಲಿಂಗ್​ನಲ್ಲಿ ಕ್ಲೀನ್​ ಬೌಲ್ಡ್ ಆದರು.

  • 01 Apr 2023 04:41 PM (IST)

    3ನೇ ವಿಕೆಟ್ ಪತನ

    ಟಿಮ್ ಸೌಥಿ ಎಸೆದ 14ನೇ ಓವರ್​ನ 2ನೇ ಎಸೆತದಲ್ಲಿ ಲಾಂಗ್​ ಆನ್​ನಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದ ಜಿತೇಶ್ ಮುಂದಿನ ಎಸೆತದಲ್ಲೂ ಅದೇ ಯತ್ನದಲ್ಲಿ ಫ್ಲೈ ಸ್ಲಿಪ್​ನಲ್ಲಿ ನಿಂತಿದ್ದ ಉಮೇಶ್​ಗೆ ಕ್ಯಾಚಿತ್ತು ಔಟಾದರು.

  • 01 Apr 2023 04:35 PM (IST)

    ಜಿತೇಶ್ ಸಿಕ್ಸರ್

    ನರೈನ್ ಎಸೆದ 12ನೇ ಓವರ್​ನಲ್ಲಿ ರಾಜಪಕ್ಸೆ ಔಟಾದ ಬಳಿಕ ಬಂದ ಜಿತೇಶ್ ಶರ್ಮಾ ಲಾಂಗ್ ಆಫ್​ನಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದರು.

  • 01 Apr 2023 04:28 PM (IST)

    ರಾಜಪಕ್ಸೆ ಅರ್ಧಶತಕ, ಔಟ್

    32 ಎಸೆತಗಳಲ್ಲಿ 50 ರನ್ ಚಚ್ಚಿದ್ದ ರಾಜಪಕ್ಸೆ ಉಮೇಶ್ ಯಾದವ್ ಬೌಲಿಂಗ್​ನಲ್ಲಿ ಸಿಕ್ಸರ್ ಬಾರಿಸುವ ಯತ್ನದಲ್ಲಿ ರಿಂಕು ಸಿಂಗ್​ಗೆ ಕ್ಯಾಚಿತ್ತು ಔಟಾಗಿದ್ದಾರೆ.

  • 01 Apr 2023 04:27 PM (IST)

    10 ಓವರ್‌ ಪೂರ್ಣ

    ವರುಣ್ ಎಸೆದ 10ನೇ ಓವರ್‌ನಲ್ಲಿ 1 ಫೋರ್ ಬಂತು. ಪಂಜಾಬ್ ಪರ ಭಾನುಕಾ ರಾಜಪಕ್ಸೆ 46 ರನ್ ಹಾಗೂ ಶಿಖರ್ ಧವನ್ 29 ರನ್ ಗಳಿಸಿ ಆಡುತ್ತಿದ್ದಾರೆ.

  • 01 Apr 2023 04:19 PM (IST)

    ಶಾರ್ದೂಲ್ ಮತ್ತೆ ದುಬಾರಿ

    ಶಾರ್ದೂಲ್ ಅವರ ಓವರ್‌ನಲ್ಲಿ ಫೋರ್ ಸೇರಿದಂತೆ ಒಂದು ನೋ ಬಾಲ್ ಕೂಡ ಕಂಡುಬಂದಿತು. ಪಂಜಾಬ್ ಪರ ರಾಜಪಕ್ಸೆ 45 ರನ್ ಹಾಗೂ ಶಿಖರ್ ಧವನ್ 22 ರನ್ ಗಳಿಸಿ ಆಡುತ್ತಿದ್ದಾರೆ.

  • 01 Apr 2023 04:15 PM (IST)

    8 ಓವರ್‌ ಅಂತ್ಯ

    ಪಂಜಾಬ್ ಪರ ರಾಜಪಕ್ಸೆ 40 ರನ್ ಹಾಗೂ ಶಿಖರ್ ಧವನ್ 16 ರನ್ ಗಳಿಸಿ ಆಡುತ್ತಿದ್ದಾರೆ. ನರೇನ್ ಅವರ ಓವರ್‌ನಲ್ಲಿ ಒಂದು ಫೋರ್ ಬಂತು.

  • 01 Apr 2023 04:12 PM (IST)

    ರಾಜಪಕ್ಸೆ ಅಬ್ಬರ

    ಶಾರ್ದೂಲ್ ಅವರ ಈ ಓವರ್‌ನಲ್ಲಿ ರಾಜಪಕ್ಸೆ ಒಂದು ಬೌಂಡರಿ ಮತ್ತು ಸಿಕ್ಸರ್ ಬಾರಿಸಿದರು. ಪಂಜಾಬ್ ಪರ ರಾಜಪಕ್ಸೆ 31 ರನ್ ಹಾಗೂ ಶಿಖರ್ ಧವನ್ 15 ರನ್ ಗಳಿಸಿ ಆಡುತ್ತಿದ್ದಾರೆ.

  • 01 Apr 2023 04:03 PM (IST)

    ಪವರ್ ಪ್ಲೇ ಅಂತ್ಯ 56/1

    6ನೇ ಓವರ್ ಎಸೆದ ವರುಣ್ ಚಕ್ರವರ್ತಿ ಕೊನೆಯ ಎಸೆತದಲ್ಲಿ ಒಂದು ಬೌಂಡರಿ ಕೊಟ್ಟರು. ಪಂಜಾಬ್ ಪರ ರಾಜಪಕ್ಸೆ 18 ರನ್ ಹಾಗೂ ಶಿಖರ್ ಧವನ್ 15 ರನ್ ಗಳಿಸಿ ಆಡುತ್ತಿದ್ದಾರೆ.

  • 01 Apr 2023 03:53 PM (IST)

    ಪಂಜಾಬ್ ಅರ್ಧಶತಕ

    5ನೇ ಓವರ್​ನಲ್ಲೇ ಪಂಜಾಬ್ ಅರ್ಧಶತಕ ಪೂರೈಸಿದೆ. 5ನೇ ಓವರ್​ನಲ್ಲಿ ರಾಜಪಕ್ಸೆ 2 ಬೌಂಡರಿ ಸೇರಿದಂತೆ 1 ಸಿಕ್ಸರ್ ಕೂಡ ಬಾರಿಸಿದರು.

  • 01 Apr 2023 03:52 PM (IST)

    ಧವನ್ ಬೌಂಡರಿ

    ಪಂಜಾಬ್ ಪರ ರಾಜಪಕ್ಸೆ 3 ರನ್ ಹಾಗೂ ಶಿಖರ್ ಧವನ್ 10 ರನ್ ಗಳಿಸಿ ಆಡುತ್ತಿದ್ದಾರೆ. ಸೌಥಿ ಎಸೆದ ಈ ಓವರ್‌ನಲ್ಲಿ ಧವನ್ ಎರಡು ಬೌಂಡರಿ ಬಾರಿಸಿದರು.

  • 01 Apr 2023 03:39 PM (IST)

    ಪ್ರಬ್ಸಿಮ್ರಾನ್ ಸಿಕ್ಸರ್, ಔಟ್

    ಟಿಮ್ ಸೌಥಿ ಎಸೆದ 2ನೇ ಓವರ್​ನಲ್ಲಿ ಪ್ರಬ್ಸಿಮ್ರಾನ್ 2 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿ, ಮುಂದಿನ ಎಸೆತದಲ್ಲೇ ಕೀಪರ್​ ಕೈಗೆ ಕ್ಯಾಚಿತ್ತು ಔಟಾಗಿದ್ದಾರೆ.

  • 01 Apr 2023 03:34 PM (IST)

    ಪಂಜಾಬ್ ಬ್ಯಾಟಿಂಗ್ ಆರಂಭ

    ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ಆರಂಭಿಸಿದ್ದು, ಪ್ರಬ್ಸಿಮ್ರಾನ್ ಹಾಗೂ ನಾಯಕ ಶಿಖರ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಕೆಕೆಆರ್ ಪರ ಉಮೇಶ್ ಯಾದವ್ ಬೌಲಿಂಗ್ ಆರಂಭಿಸಿದ್ದಾರೆ. ಈ ಓವರ್​ನಲ್ಲಿ 1 ಸಿಕ್ಸರ್ ಸೇರಿದಂತೆ 9 ರನ್ ಬಂದವು.

  • 01 Apr 2023 03:14 PM (IST)

    ಪಂಜಾಬ್ ತಂಡ

    ಶಿಖರ್ ಧವನ್ (ನಾಯಕ), ಪ್ರಭಾಸಿಮ್ರಾನ್ ಸಿಂಗ್, ಭಾನುಕಾ ರಾಜಪಕ್ಸೆ, ಸಿಕಂದರ್ ರಜಾ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಾರುಖ್ ಖಾನ್, ಸ್ಯಾಮ್ ಕರನ್, ನಾಥನ್ ಎಲ್ಲಿಸ್, ಹರ್ಪ್ರೀತ್ ಬ್ರಾರ್, ರಾಹುಲ್ ಚಾಹರ್, ಅರ್ಶ್ದೀಪ್ ಸಿಂಗ್

  • 01 Apr 2023 03:13 PM (IST)

    ಕೋಲ್ಕತ್ತಾ ತಂಡ

    ನಿತೀಶ್ ರಾಣಾ (ನಾಯಕ), ರಹಮಾನುಲ್ಲಾ ಗುರ್ಬಾಜ್, ಮನ್ದೀಪ್ ಸಿಂಗ್, ರಿಂಕು ಸಿಂಗ್, ಆಂಡ್ರೆ ರಸೆಲ್, ಶಾರ್ದೂಲ್ ಠಾಕೂರ್, ಸುನಿಲ್ ನರೈನ್, ಟಿಮ್ ಸೌಥಿ, ಅನುಕುಲ್ ರಾಯ್, ಉಮೇಶ್ ಯಾದವ್, ವರುಣ್ ಚಕ್ರವರ್ತಿ.

  • 01 Apr 2023 03:03 PM (IST)

    ಟಾಸ್ ಗೆದ್ದ ಕೆಕೆಆರ್

    ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ನಾಯಕ ನಿತೀಶ್ ರಾಣಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.

  • Published On - 3:00 pm, Sat, 1 April 23