AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PBKS vs MI Highlights IPL 2023: ಸೂರ್ಯ- ಕಿಶನ್ ಸಿಡಿಲಬ್ಬರದ ಬ್ಯಾಟಿಂಗ್; ಮುಂಬೈಗೆ ರೋಚಕ ಜಯ

Punjab Kings vs Mumbai Indians IPL 2023 Highlights in Kannada: ಮೊಹಾಲಿಯಲ್ಲಿ ನಡೆದ ಐಪಿಎಲ್​ನ 46ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಪಂಜಾಬ್ ಕಿಂಗ್ಸ್ ತಂಡವನ್ನು 6 ವಿಕೆಟ್​ಗಳಿಂದ ಮಣಿಸಿ ಟೂರ್ನಿಯಲ್ಲಿ 6ನೇ ಗೆಲುವು ದಾಖಲಿಸಿದೆ.

PBKS vs MI Highlights IPL 2023: ಸೂರ್ಯ- ಕಿಶನ್ ಸಿಡಿಲಬ್ಬರದ ಬ್ಯಾಟಿಂಗ್; ಮುಂಬೈಗೆ ರೋಚಕ ಜಯ
ಮುಂಬೈ- ಪಂಜಾಬ್ ಮುಖಾಮುಖಿ
ಪೃಥ್ವಿಶಂಕರ
|

Updated on:May 03, 2023 | 11:15 PM

Share

ಮೊಹಾಲಿಯಲ್ಲಿ ನಡೆದ ಐಪಿಎಲ್​ನ 46ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಪಂಜಾಬ್ ಕಿಂಗ್ಸ್ ತಂಡವನ್ನು 6 ವಿಕೆಟ್​ಗಳಿಂದ ಮಣಿಸಿ ಟೂರ್ನಿಯಲ್ಲಿ 6ನೇ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಟಾಸ್ ಗೆದ್ದು ರನ್ ಚೇಸ್ ಆಯ್ಕೆ ಮಾಡಿಕೊಂಡರು. ಹೀಗಾಗಿ ತವರು ನೆಲದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 214 ರನ್ ಗಳಿಸಿತು. ಲಿಯಾಮ್ ಲಿವಿಂಗ್‌ಸ್ಟನ್ ಮತ್ತು ಜಿತೇಶ್ ಶರ್ಮಾ ಅವರ ಶತಕದ ಜೊತೆಯಾಟ ಪಂಜಾಬ್, ಮುಂಬೈ ವಿರುದ್ಧ ಬೃಹತ್ ಮೊತ್ತ ದಾಖಲಿಸಲು ನೆರವಾಯಿತು. ಈ ಗುರಿ ಬೆನ್ನಟ್ಟಿದ ಮುಂಬೈ ಇಶಾನ್ ಕಿಶನ್ ಮತ್ತು ಸೂರ್ಯ ಅವರ ಅದ್ಭುತ ಅರ್ಧಶತಕದಿಂದಾಗಿ ಇನ್ನು 7 ಎಸೆತಗಳಲು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು.

LIVE NEWS & UPDATES

The liveblog has ended.
  • 03 May 2023 11:11 PM (IST)

    ಗೆಲುವಿನ ಸಿಕ್ಸರ್ ಬಾರಿಸಿದ ತಿಲಕ್

    19ನೇ ಓವರ್​​ನ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿದ ತಿಲಕ್ ವರ್ಮಾ ಮುಂಬೈ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.

  • 03 May 2023 11:08 PM (IST)

    ಡೇವಿಡ್ ಬೌಂಡರಿ

    19ನೇ ಓವರ್​​ನ ಮೊದಲ ಎಸೆತದಲ್ಲೇ ಟಿಮ್ ಡೇವಿಡ್ ಬೌಂಡರಿ ಹೊಡೆದರು.

  • 03 May 2023 11:05 PM (IST)

    ತಿಲಕ್ ವರ್ಮಾ 2 ಸಿಕ್ಸರ್‌

    17ನೇ ಓವರ್‌ನ ನಾಲ್ಕನೇ ಮತ್ತು ಅಂತಿಮ ಎಸೆತದಲ್ಲಿ ತಿಲಕ್ ವರ್ಮಾ ಎರಡು ಅದ್ಭುತ ಸಿಕ್ಸರ್ ಬಾರಿಸಿದರು.

  • 03 May 2023 11:04 PM (IST)

    ಕಿಶನ್ ಔಟ್

    ಅರ್ಷದೀಪ್ ಸಿಂಗ್ ಇಶಾನ್ ಕಿಶನ್ ಇನ್ನಿಂಗ್ಸ್ ಅನ್ನು ಅಂತ್ಯಗೊಳಿಸಿದ್ದಾರೆ. 17ನೇ ಓವರ್‌ನ ಮೊದಲ ಎಸೆತದಲ್ಲಿ ಡೀಪ್ ಸ್ಕ್ವೇರ್ ಲೆಗ್‌ನಲ್ಲಿ ರಿಷಿ ಧವನ್‌ಗೆ ಕ್ಯಾಚಿತ್ತು ಕಿಶನ್ ನಿರ್ಗಮಿಸಿದರು. ಇದರೊಂದಿಗೆ ಮುಂಬೈ ನಾಲ್ಕನೇ ವಿಕೆಟ್ ಕಳೆದುಕೊಂಡಿತು.

    ಇಶಾನ್ ಕಿಶನ್ – 75 ರನ್, 41 ಎಸೆತಗಳು 7×4 4×6

  • 03 May 2023 11:03 PM (IST)

    ಡೇವಿಡ್ ಬೌಂಡರಿ

    16ನೇ ಓವರ್‌ನ ಮೊದಲ ಎಸೆತದಲ್ಲಿ ದೊಡ್ಡ ವಿಕೆಟ್ ಪಡೆದ ಎಲ್ಲಿಸ್, ಕೊನೆಯ ಎಸೆತದಲ್ಲಿ ಬೌಂಡರಿ ಬಿಟ್ಟುಕೊಟ್ಟರು.

  • 03 May 2023 11:02 PM (IST)

    ಸೂರ್ಯಕುಮಾರ್ ಯಾದವ್ ಔಟ್

    ಸೂರ್ಯಕುಮಾರ್ ಯಾದವ್ ಔಟಾಗಿದ್ದಾರೆ. 16ನೇ ಓವರ್‌ನ ಮೊದಲ ಎಸೆತದಲ್ಲಿ ನಾಥನ್ ಎಲ್ಲಿಸ್ ಅವರನ್ನು ಔಟ್ ಮಾಡಿದರು. ಶಾರ್ಟ್ ಥರ್ಡ್‌ಮ್ಯಾನ್‌ನಲ್ಲಿ ಅರ್ಷದೀಪ್ ಅದ್ಭುತ ಕ್ಯಾಚ್ ಹಿಡಿದರು.

    ಸೂರ್ಯಕುಮಾರ್ ಯಾದವ್ – 66 ರನ್, 31 ಎಸೆತಗಳು 8×4 2×6

  • 03 May 2023 11:02 PM (IST)

    ಇಶಾನ್ ಸಿಕ್ಸ್

    ಮುಂಬೈಗೆ ಮತ್ತೊಂದು ದೊಡ್ಡ ಓವರ್ ಸಿಕ್ಕಿತು. 15ನೇ ಓವರ್‌ನಲ್ಲಿ ಮುಂಬೈಗೆ 3 ಬೌಂಡರಿ ಮತ್ತು ಒಂದು ಸಿಕ್ಸರ್ ಸಿಕ್ಕಿತು. ಸೂರ್ಯ ಓವರ್‌ನ ಎರಡನೇ ಎಸೆತವನ್ನು ಬೌಂಡರಿ ಬಾರಿಸಿದರೆ, ಇಶಾನ್ ಕಿಶನ್ ನಾಲ್ಕನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಮುಂದಿನ ಎಸೆತದಲ್ಲಿ ಬೌಂಡರಿ ಬಾರಿಸಿದರೆ, ಓವರ್‌ನ ಕೊನೆಯ ಎಸೆತವನ್ನು ಬೌಂಡರಿಗಟ್ಟಿದರು. ಹೀಗಾಗಿ ಓವರ್‌ನಲ್ಲಿ 21 ರನ್‌ಗಳು ಬಂದವು.

  • 03 May 2023 10:39 PM (IST)

    ಸೂರ್ಯ ಅರ್ಧಶತಕ

    13ನೇ ಓವರ್​ನ ನಾಲ್ಕನೇ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ ಬೌಂಡರಿ ಬಾರಿಸಿ ಅರ್ಧಶತಕ ಪೂರೈಸಿದರು. ಅವರು 21 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

  • 03 May 2023 10:35 PM (IST)

    ಕಿಶನ್ ಅರ್ಧಶತಕ

    ಇಶಾನ್ ಕಿಶನ್ 12ನೇ ಓವರ್ ನ ಮೊದಲ ಎಸೆತದಲ್ಲಿ ಎರಡು ರನ್ ಗಳಿಸುವ ಮೂಲಕ ಅರ್ಧಶತಕ ಪೂರೈಸಿದರು. ಅವರು 29 ಎಸೆತಗಳಲ್ಲಿ 50 ರನ್ ಪೂರೈಸಿದರು.

  • 03 May 2023 10:35 PM (IST)

    ಮುಂಬೈನ 100 ರನ್‌ಗಳು ಪೂರ್ಣ

    ಸೂರ್ಯಕುಮಾರ್ ಯಾದವ್ 11ನೇ ಓವರ್​ನ ಮೂರನೇ ಎಸೆತದಲ್ಲಿ ಒಂದು ರನ್ ಪಡೆಯುವ ಮೂಲಕ ಮುಂಬೈ 100 ರನ್ ಪೂರೈಸಿದರು. ಈ ವೇಳೆ ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಕ್ರೀಸ್​ನಲ್ಲಿದ್ದು ವೇಗವಾಗಿ ರನ್ ಗಳಿಸುತ್ತಿದ್ದಾರೆ.

  • 03 May 2023 10:26 PM (IST)

    ಸೂರ್ಯ 2 ಬೌಂಡರಿ

    11ನೇ ಓವರ್‌ನ ಎರಡು ಮತ್ತು ಮೂರನೇ ಎಸೆತಗಳಲ್ಲಿ ಸೂರ್ಯ ಕುಮಾರ್ ಬೌಂಡರಿ ಬಾರಿಸಿದರು. ಆ ಬಳಿಕ ಇಶಾನ್ ಕೂಡ ಫೋರ್ ಬಾರಿಸಿದರು. ಹೀಗಾಗಿ ಮುಂಬೈ ಪರ ಓವರ್‌ನಲ್ಲಿ ಮೂರು ಬೌಂಡರಿಗಳು ಬಂದವು.

  • 03 May 2023 10:26 PM (IST)

    ಇಶಾನ್ ಸಿಕ್ಸ್

    ಇಶಾನ್ ಕಿಶನ್ 10ನೇ ಓವರ್​ನ ಕೊನೆಯ ಎಸೆತದಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದರು. ಮೂರನೇ ಎಸೆತದಲ್ಲಿ ಬೌಂಡರಿ ಕೂಡ ಪಡೆದರು.

  • 03 May 2023 10:21 PM (IST)

    ಮತ್ತೊಂದು ಬೌಂಡರಿ

    9ನೇ ಓವರ್​ನ ಎರಡನೇ ಎಸೆತದಲ್ಲಿ ಸೂರ್ಯ ಬೌಂಡರಿ ಬಾರಿಸಿದರು. ಚಾಹರ್ ಅವರ ಗೂಗ್ಲಿ ಚೆಂಡನ್ನು ಸ್ವೆಪ್ ಮಾಡಿ ಶಾರ್ಟ್ ಫೈನ್ ಕಡೆಗೆ ಬೌಂಡರಿ ಬಾರಿಸಿದರು.

  • 03 May 2023 10:20 PM (IST)

    ಸೂರ್ಯ ಬೌಂಡರಿ

    7ನೇ ಓವರ್​ನ ಮೂರನೇ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ ಬೌಂಡರಿ ಬಾರಿಸಿದರು. ಸೂರ್ಯ ಡೀಪ್ ಮಿಡ್ ವಿಕೆಟ್‌ನಲ್ಲಿ ಬ್ಯಾಕ್ ಫುಟ್‌ನಲ್ಲಿ ಹೋಗಿ ಶಾರ್ಟ್ ಬಾಲ್ ಅನ್ನು ಫೋರ್‌ಗೆ ಹೊಡೆದರು.

  • 03 May 2023 10:11 PM (IST)

    ಮುಂಬೈನ 50 ರನ್‌ ಪೂರ್ಣ

    ಮುಂಬೈ ಇಂಡಿಯನ್ಸ್ 50 ರನ್ ಪೂರೈಸಿದೆ. ಆರನೇ ಓವರ್‌ನ ಎರಡನೇ ಎಸೆತದಲ್ಲಿ ಸಿಂಗಲ್ ರನ್ ಗಳಿಸಿದ ಇಶಾನ್ ತಂಡದ 50 ರನ್ ಪೂರೈಸಿದರು.

  • 03 May 2023 10:09 PM (IST)

    ಗ್ರೀನ್ ಔಟ್

    ನಾಥನ್ ಎಲ್ಲಿಸ್ ಪವರ್ ಪ್ಲೇ ಓವರ್‌ನ ಕೊನೆಯ ಎಸೆತದಲ್ಲಿ ಕ್ಯಾಮರೂನ್ ಗ್ರೀನ್ ವಿಕೆಟ್ ಪಡೆದರು. ಗ್ರೀನ್ ಡೀಪ್ ಮಿಡ್ ವಿಕೆಟ್‌ನಲ್ಲಿ ರಾಹುಲ್ ಚಹಾರ್ ಕೈಗೆ ಕ್ಯಾಚ್ ನಿಡಿದರು.

  • 03 May 2023 10:09 PM (IST)

    ಕಿಶನ್ 2 ಸಿಕ್ಸರ್‌

    ಐದನೇ ಓವರ್‌ನ ಮೊದಲ ಬಾಲ್‌ನಲ್ಲಿ, ಇಶಾನ್ ಕಿಶನ್ 98 ಮೀಟರ್‌ಗಳ ಸಿಕ್ಸರ್ ಬಾರಿಸಿದರೆ, ಓವರ್‌ನ ಮೂರನೇ ಎಸೆತದಲ್ಲಿ ಮಿಡ್ ವಿಕೆಟ್‌ನಲ್ಲಿ ಸಿಕ್ಸರ್ ಬಾರಿಸಿದರು. ಕ್ಯಾಮರೂನ್ ಗ್ರೀನ್ ಓವರ್‌ನ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿದರು.

  • 03 May 2023 09:56 PM (IST)

    ಗ್ರೀನ್ ಬೌಂಡರಿ

    ನಾಲ್ಕನೇ ಓವರ್‌ನ ನಾಲ್ಕನೇ ಮತ್ತು ಅಂತಿಮ ಎಸೆತದಲ್ಲಿ ಎರಡು ಅಮೋಘ ಬೌಂಡರಿಗಳನ್ನು ಗಳಿಸುವ ಮೂಲಕ ಕ್ಯಾಮರೂನ್ ಗ್ರೀನ್ ಮುಂಬೈನ ಗಂಭೀರ ಪರಿಸ್ಥಿತಿಯನ್ನು ಸುಗಮಗೊಳಿಸಿದರು.

  • 03 May 2023 09:50 PM (IST)

    ಕಿಶನ್ ಬೌಂಡರಿ

    ಎರಡನೇ ಓವರ್‌ನಲ್ಲಿ ಅರ್ಷದೀಪ್ ಸಿಂಗ್ 3 ಬೌಂಡರಿ ನೀಡಿದರು. 2ನೇ ಎಸೆತದಲ್ಲಿ ಕ್ಯಾಮರೂನ್ ಗ್ರೀನ್ ಬೌಂಡರಿ ಬಾರಿಸಿದರೆ, ಇಶಾನ್ ಕಿಶನ್ ಓವರ್​ನ ಕೊನೆಯ ಎರಡು ಎಸೆತಗಳಲ್ಲಿ ಬೌಂಡರಿ ಬಾರಿಸಿದರು.

  • 03 May 2023 09:36 PM (IST)

    ರೋಹಿತ್ ಔಟ್

    ಶಾರ್ಟ್​ ಬೌಲ್ ಮಾಡಿದ ಮೊದಲ ಓವರ್​​ನ ಮೂರನೇ ಎಸೆತದಲ್ಲಿ ಮುಂಬೈ ನಾಯಕ ರೋಹಿತ್ ಶರ್ಮಾ ಖಾತೆ ತೆರೆತದೆ ವಿಕೆಟ್ ಒಪ್ಪಿಸಿದರು.

  • 03 May 2023 09:14 PM (IST)

    216 ರನ್ ಟಾರ್ಗೆಟ್

    20ನೇ ಓವರ್ ಬೌಲ್ ಮಾಡಿದ ಬೌಲ್ ಮಾಡಿದ ಆಕಾಶ್ ಯಾವುದೇ ಬೌಂಡರಿ ನೀಡಲಿಲ್ಲ. ಅಂತಿಮವಾಗಿ ಪಂಜಾಬ್ ತಂಡ 3 ವಿಕೆಟ್ ಕಳೆದುಕೊಂಡು 214 ರನ್ ಕಲೆಹಾಕಿದೆ.

  • 03 May 2023 09:10 PM (IST)

    ಹ್ಯಾಟ್ರಿಕ್ ಸಿಕ್ಸ್

    ಆರ್ಚರ್ ಬೌಲ್ ಮಾಡಿದ 19ನೇ ಓವರ್​​ನ ಮೊದಲ ಮೂರು ಎಸೆತದಲ್ಲಿ ಲಿವಿಂಗ್​​ಸ್ಟನ್ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿದರು. ಈ ಓವರ್​​ನಿಂದ 27 ರನ್ ಬಂದವು.

  • 03 May 2023 08:58 PM (IST)

    ಲಿವಿಂಗ್​​ಸ್ಟನ್ ಅರ್ಧಶತಕ

    17ನೇ ಓವರ್​​ನ 2ನೇ ಎಸೆತದಲ್ಲಿ ಬೌಂಡರಿ ಬಾರಿಸಿದ ಲಿವಿಂಗ್​​ಸ್ಟನ್ ತಮ್ಮ 5ನೇ ಐಪಿಎಲ್ ಅರ್ಧಶತಕ ಪೂರೈಸಿದರು.

  • 03 May 2023 08:56 PM (IST)

    ಜಿತೇಶ್ ಸಿಕ್ಸರ್

    17ನೇ ಓವರ್​ನ 2ನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಜಿತೇಶ್ 3ನೇ ಎಸೆತದಲ್ಲಿ ಬೌಂಡರಿ ಹೊಡೆದರು. ಈ ಓವರ್​​ನಲ್ಲಿ 14 ರನ್ ಬಂದವು.

  • 03 May 2023 08:51 PM (IST)

    ಪಂಜಾಬ್ 150 ರನ್ ಪೂರ್ಣ

    ಆರ್ಚರ್ ಬೌಲ್ ಮಾಡಿದ 15ನೇ ಓವರ್​​ನಲ್ಲಿ ಬೌಂಡರಿ ಹೊಡೆದ ವಿಲಿಂಗ್​​ಸ್ಟನ್ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.

  • 03 May 2023 08:42 PM (IST)

    ಅರ್ಷದ್​​ಗೆ ಬೌಂಡರಿ, ಪಂಜಾಬ್ 145/3

    ಅರ್ಷದ್ ಬೌಲ್ ಮಾಡಿದ 15ನೇ ಓವರ್​​ನ ಮೊದಲೆರಡು ಎಸಡತಗಳನ್ನ ಬೌಂಡರಿಗಟ್ಟಿದ ಲಿವಿಂಗ್​ಸ್ಟನ್ ಓವರ್​​ನ ಕೊನೆಯ ಎಸೆತದಲ್ಲೂ ಬೌಂಡರಿ ಹೊಡೆದರು.

  • 03 May 2023 08:36 PM (IST)

    21 ರನ್ ಕೊಟ್ಟ ಆರ್ಚರ್

    ಆರ್ಚರ್ ಬೌಲ್ ಮಾಡಿದ 13ನೇ ಓವರ್​​ನಲ್ಲಿ 4 ಬೌಂಡರಿಗಳು ಬಂದವು. ಈ 4 ಬೌಂಡರಿಗಳನ್ನು ಜಿತೇಶ್ ಶರ್ಮಾ ಬಾರಿಸಿದರು.

  • 03 May 2023 08:25 PM (IST)

    ಶಾರ್ಟ್​ ಔಟ್

    ವಿಕೆಟ್ ಭೇಟೆ ಆರಂಭಿಸಿರುವ ಚಾವ್ಲಾ 12ನೇ ಓವರ್​​ನ 2ನೇ ಎಸೆತದಲ್ಲಿ ಶಾರ್ಟ್​ರನ್ನು ಕ್ಲೀನ್ ಬೌಲ್ಡ್ ಮಾಡಿದರು.

  • 03 May 2023 08:24 PM (IST)

    ಲಿವಿಂಗ್​​‘ಸ್ಟನ್’ ಬ್ಯಾಟಿಂಗ್

    11ನೇ ಓವರ್​​ನ ಮೊದಲ ಎಸೆತದಲ್ಲಿ ಬೌಲರ್ ತಲೆಯ ಮೇಲೆ ಬೌಂಡರಿ ಹೊಡೆದ ಲಿವಿಂಗ್​ಸ್ಟನ್ 5ನೇ ಎಸೆತದಲ್ಲಿ ಡೀಪ್ ಸ್ಕ್ವೇರ್​​ ಲೆಗ್​​ನಲ್ಲಿ ಸಿಕ್ಸರ್ ಬಾರಿಸಿದರು.

  • 03 May 2023 08:17 PM (IST)

    10ನೇ ಓವರ್ ಅಂತ್ಯ

    ಪಂಜಾಬ್ ಇನ್ನಿಂಗ್ಸ್​​ನ 10 ಓವರ್ ಮುಗಿದಿದ್ದು, ಇದರಲ್ಲಿ ಪಂಜಾಬ್ ತಂಡ 2 ವಿಕೆಟ್ ಕಳೆದುಕೊಂಡು 78 ರನ್ ಕಲೆಹಾಕಿದೆ. 10ನೇ ಓವರ್​​ನಲ್ಲೂ ಲಿವಂಗ್​​ಸ್ಟನ್ ಬೌಂಡರಿ ಹೊಡೆದರು.

  • 03 May 2023 08:05 PM (IST)

    ಧವನ್ ಬೌಂಡರಿ, ಔಟ್

    ಚಾವ್ಲಾ ಬೌಲ್ ಮಾಡಿದ 8ನೇ ಓವರ್​​ನ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದ ಧವನ್, ಎರಡನೇ ಎಸೆತದಲ್ಲೂ ಅದೇ ಪ್ರಯತ್ನ ಮಾಡಿ ಸ್ಟಂಪ್ ಔಟ್ ಆದರು.

  • 03 May 2023 07:59 PM (IST)

    ಪಂಜಾಬ್ ಅರ್ಧಶತಕ

    ಪವರ್ ಪ್ಲೇ ಕೊನೆಯ ಎಸೆತದಲ್ಲಿ ಸಿಂಗಲ್ ಬಾರಿಸಿದ ಶಾರ್ಟ್​, ಪಂಜಾಬ್ ಮೊತ್ತವನ್ನು 50ರ ಗಡಿ ದಾಟಿಸಿದರು.

  • 03 May 2023 07:58 PM (IST)

    ಬ್ಯಾಕ್ ಟು ಬ್ಯಾಕ್ ಬೌಂಡರಿ

    ಪವರ್ ಪ್ಲೇ ಕೊನೆಯ ಓವರ್ ಎಸೆದ ಚಾವ್ಲಾ 10 ರನ್ ಬಿಟ್ಟುಕೊಟ್ಟರು. ಓವರ್​​ನ ಮೊದಲೆರಡು ಎಸೆತಗಳನ್ನು ಧವನ್ ಬೌಂಡರಿಗಟ್ಟಿದರು.

  • 03 May 2023 07:47 PM (IST)

    ಮೊದಲ ವಿಕೆಟ್ ಪತನ

    ಪಂಜಾಬ್​ನ ಮೊದಲ ವಿಕೆಟ್ ಪತನಗೊಂಡಿದೆ. ಪ್ರಭಾಸಿಮ್ರಾನ್ ಸಿಂಗ್ ಔಟಾಗಿದ್ದಾರೆ. ಎರಡನೇ ಓವರ್‌ನ ಮೂರನೇ ಎಸೆತದಲ್ಲಿ ಅವರು ಇಶಾನ್ ಕಿಶನ್ ಅವರ ಕೈಗೆ ಕ್ಯಾಚ್ ನೀಡಿದರು.

    ಪ್ರಭಾಸಿಮ್ರಾನ್ ಸಿಂಗ್ – 9 ರನ್, 7 ಎಸೆತಗಳು 1×4

  • 03 May 2023 07:47 PM (IST)

    ಪಂದ್ಯ ಪ್ರಾರಂಭ

    ಪಂದ್ಯ ಆರಂಭವಾಗಿದೆ. ಶಿಖರ್ ಧವನ್ ಅವರೊಂದಿಗೆ ಇನಿಂಗ್ಸ್ ಆರಂಭಿಸಲು ಪ್ರಭಾಸಿಮ್ರಾನ್ ಸಿಂಗ್ ಬಂದಿದ್ದಾರೆ. ಮುಂಬೈ ಪರ ಕ್ಯಾಮರೂನ್ ಗ್ರೀನ್ ಬೌಲಿಂಗ್ ಆರಂಭಿಸುತ್ತಿದ್ದಾರೆ.

  • 03 May 2023 07:46 PM (IST)

    ಪಂಜಾಬ್ಸ್ ಪ್ಲೇಯಿಂಗ್-11

    ಶಿಖರ್ ಧವನ್, ಪ್ರಭ್‌ಸಿಮ್ರಾನ್ ಸಿಂಗ್, ಮ್ಯಾಥ್ಯೂ ಶಾರ್ಟ್, ಲಿಯಾಮ್ ಲಿವಿಂಗ್‌ಸ್ಟನ್, ಜಿತೇಶ್ ಶರ್ಮಾ, ಸ್ಯಾಮ್ ಕರನ್, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ರಿಷಿ ಧವನ್, ರಾಹುಲ್ ಚಾಹರ್, ಅರ್ಷ್‌ದೀಪ್ ಸಿಂಗ್

  • 03 May 2023 07:46 PM (IST)

    ಮುಂಬೈನ ಪ್ಲೇಯಿಂಗ್-11

    ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಕ್ಯಾಮೆರಾನ್ ಗ್ರೀನ್, ತಿಲಕ್ ವರ್ಮಾ, ಟಿಮ್ ಡೇವಿಡ್, ಅರ್ಷದ್ ಖಾನ್, ನೆಹಾಲ್ ವಧೇರಾ, ಜೋಫ್ರಾ ಆರ್ಚರ್, ಪಿಯೂಷ್ ಚಾವ್ಲಾ, ಕುಮಾರ್ ಕಾರ್ತಿಕೇಯ, ಆಕಾಶ್ ಮಂಡ್ವಾಲ್.

  • 03 May 2023 07:03 PM (IST)

    ಟಾಸ್ ಗೆದ್ದ ಮುಂಬೈ

    ಟಾಸ್ ಗೆದ್ದ ಮುಂಬೈ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.

Published On - May 03,2023 7:01 PM

ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?