
ಐಪಿಎಲ್ 2024 ರಲ್ಲಿ ತನ್ನ ಅಮೋಘ ಆಟವನ್ನು ಮುಂದುವರಿಸಿದ ರಾಜಸ್ಥಾನ್ ರಾಯಲ್ಸ್ ರೋಚಕ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 3 ವಿಕೆಟ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 147 ರನ್ ಗಳಿಸಿತು. ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ ಕೊನೆಯ ಓವರ್‌ನಲ್ಲಿ ಗೆಲುವಿನ ನಗೆ ಬೀರಿತು. ರಾಜಸ್ಥಾನದ ಈ ಗೆಲುವಿನಲ್ಲಿ ವೆಸ್ಟ್ ಇಂಡೀಸ್ ಬ್ಯಾಟರ್ ಹೆಟ್ಮಾಯರ್ ಪ್ರಮುಖ ಪಾತ್ರವಹಿಸಿದರು. ಕೊನೆಯ 6 ಎಸೆತಗಳಲ್ಲಿ 10 ರನ್ ಬೇಕಿದ್ದಾಗ, ಹೆಟ್ಮಾಯರ್ 2 ಸಿಕ್ಸರ್ ಸಿಡಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ಪಂಜಾಬ್ ತಂಡವನ್ನು ಮೂರು ವಿಕೆಟ್‌ಗಳಿಂದ ಸೋಲಿಸಿದ ರಾಜಸ್ಥಾನ್ ರಾಯಲ್ಸ್ ಈ ಸೀಸನ್ನಲ್ಲಿ 4ನೇ ಗೆಲುವು ದಾಖಲಿಸುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ತನ್ನ ಪಾರುಪತ್ಯವನ್ನು ಮುಂದುವರೆಸಿದೆ. ಹೆಟ್ಮೆಯರ್ ಕೊನೆಯ ಓವರ್‌ನ ಐದನೇ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
ರಾಜಸ್ಥಾನ್ ರಾಯಲ್ಸ್ ತನ್ನ 2 ಬ್ಯಾಟ್ಸ್‌ಮನ್‌ಗಳ ವಿಕೆಟ್‌ಗಳನ್ನು ಒಂದೇ ಓವರ್‌ನಲ್ಲಿ ಕಳೆದುಕೊಂಡಿದೆ. ರೋವ್ಮನ್ ಪೊರೆಲ್ 11 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರೆ, ಕೇಶವ್ ಮಹಾರಾಜ್ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ತಂಡದ ಗೆಲುವಿಗೆ 5 ಎಸೆತಗಳಲ್ಲಿ 10 ರನ್‌ಗಳ ಅಗತ್ಯವಿದೆ.
ರಾಜಸ್ಥಾನ್ 4ನೇ ವಿಕೆಟ್ ಕಳೆದುಕೊಂಡಿದೆ. ಇನ್ಫಾರ್ಮ್ ರಿಯಾನ್ ಪರಾಗ್ ಅವರನ್ನು ಕಗಿಸೊ ರಬಾಡ ಔಟ್ ಮಾಡಿದರು. ಪರಾಗ್ 23 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ.
ರಾಜಸ್ಥಾನ್ ಮೂರನೇ ವಿಕೆಟ್ ಕಳೆದುಕೊಂಡಿದೆ. ಕಗಿಸೋ ರಬಾಡ, ನಾಯಕ ಸಂಜು ಸ್ಯಾಮ್ಸನ್ ಅವರನ್ನು ಪಡವಿಲಿಯನ್ಗಟ್ಟಿದ್ದಾರೆ. ಸದ್ಯ ರಿಯಾನ್ ಪರಾಗ್ ಮತ್ತು ಧ್ರುವ್ ಜುರೆಲ್ ಕ್ರೀಸ್‌ನಲ್ಲಿದ್ದಾರೆ. ತಂಡದ ಗೆಲುವಿಗೆ 39 ಎಸೆತಗಳಲ್ಲಿ 59 ರನ್‌ಗಳ ಅಗತ್ಯವಿದೆ.
ರಾಜಸ್ಥಾನದ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ 39 ರನ್ ಗಳಿಸಿ ಕಗಿಸೊ ರಬಾಡ ಎಸೆತದಲ್ಲಿ ಹರ್ಷಲ್ ಪಟೇಲ್ಗೆ ಕ್ಯಾಚಿತ್ತು ಔಟಾದರು. ಸದ್ಯ ಸಂಜು ಸ್ಯಾಮ್ಸನ್ 16 ರನ್, ರಿಯಾನ್ ಪರಾಗ್ ಒಂದು ರನ್ ಗಳಿಸಿ ಅಜೇಯರಾಗಿ ಆಡುತ್ತಿದ್ದಾರೆ. 12 ಓವರ್‌ಗಳ ನಂತರ ತಂಡದ ಸ್ಕೋರ್ 83/2.
56 ರನ್ಗೆ ರಾಜಸ್ಥಾನದ ಮೊದಲ ವಿಕೆಟ್ ಪತನವಾಗಿದೆ. ಒಂಬತ್ತನೇ ಓವರ್‌ನ ಎರಡನೇ ಎಸೆತದಲ್ಲಿ ತನುಷ್ ಕೋಟ್ಯಾನ್ (24) ವಿಕೆಟ್ ಒಪ್ಪಿಸಿದರು. ಸಂಜು ಸ್ಯಾಮ್ಸನ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ. ಒಂಬತ್ತು ಓವರ್‌ಗಳ ನಂತರ ತಂಡದ ಸ್ಕೋರ್ 58/1.
ಪವರ್‌ಪ್ಲೇ ಅಂತ್ಯಗೊಂಡಿದ್ದು, ರಾಜಸ್ಥಾನ್ ರಾಯಲ್ಸ್ ಯಾವುದೇ ವಿಕೆಟ್ ನಷ್ಟವಿಲ್ಲದೆ 43 ರನ್ ಗಳಿಸಿದೆ. ಯಶಸ್ವಿ ಜೈಸ್ವಾಲ್ ಮತ್ತು ತನುಷ್ ಕೋಟ್ಯಾನ್ ನಡುವೆ ಉತ್ತಮ ಪಾಲುದಾರಿಕೆ ಕಂಡುಬರುತ್ತಿದೆ.
ರಾಜಸ್ಥಾನ ರಾಯಲ್ಸ್‌ನ ಇಬ್ಬರೂ ಆರಂಭಿಕ ಬ್ಯಾಟ್ಸ್‌ಮನ್‌ಗಳು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಇಬ್ಬರೂ ವಿಕೆಟ್‌ನಲ್ಲಿ ಉಳಿದುಕೊಂಡು ಆಡಲು ಪ್ರಯತ್ನಿಸುತ್ತಿದ್ದಾರೆ. ಮೂರು ಓವರ್‌ಗಳ ನಂತರ ತಂಡದ ಸ್ಕೋರ್ 16/0.
ಪಂಜಾಬ್ ರಾಜಸ್ಥಾನಕ್ಕೆ 148 ರನ್ ಗುರಿ ನೀಡಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 8 ವಿಕೆಟ್ ಕಳೆದುಕೊಂಡು 148 ರನ್ ಕಲೆಹಾಕಿದೆ.
ಪಂಜಾಬ್‌ನ ಆರನೇ ವಿಕೆಟ್ ಪತನವಾಗಿದೆ. ಜಿತೇಶ್ ಶರ್ಮಾ 29 ರನ್ ಬಾರಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ. 17 ಓವರ್‌ಗಳ ನಂತರ ತಂಡದ ಸ್ಕೋರ್ 111/6.
15 ಓವರ್‌ಗಳ ಆಟ ಮುಗಿದಿದ್ದು, ಇದುವರೆಗೂ ಪಂಜಾಬ್ ಸ್ಕೋರ್ 100 ರನ್ ದಾಟಿಲ್ಲ. ಸದ್ಯ ಜಿತೇಶ್ ಶರ್ಮಾ 28 ರನ್ ಹಾಗೂ ಲಿಯಾಮ್ ಲಿವಿಂಗ್ ಸ್ಟೋನ್ ನಾಲ್ಕು ರನ್ ಗಳಿಸಿ ಅಜೇಯರಾಗಿ ಆಡುತ್ತಿದ್ದಾರೆ. 15 ಓವರ್‌ಗಳ ನಂತರ ತಂಡದ ಸ್ಕೋರ್ 86/5.
ಕುಲದೀಪ್ ಸೇನ್ ಬೌಲಿಂಗ್ನಲ್ಲಿ ಧ್ರುವ್ ಜುರೆಲ್ ಕ್ಯಾಚಿತ್ತು ಔಟಾಗಿದ್ದಾರೆ. ಸದ್ಯ ಜಿತೇಶ್ ಶರ್ಮಾ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ ಕ್ರೀಸ್‌ನಲ್ಲಿದ್ದಾರೆ.
ಕೇಶವ ಮಹಾರಾಜ್ ಬೌಲಿಂಗ್ನಲ್ಲಿ ಪಂಜಾಬ್ ನಾಯಕ ಸ್ಯಾಮ್ ಕರನ್ ಕೇವಲ ಆರು ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ.
ಪಂಜಾಬ್ ಕಿಂಗ್ಸ್ ಮೂರನೇ ವಿಕೆಟ್ ಕಳೆದುಕೊಂಡಿದ್ದು ತಂಡದ ಇನ್ನಿಂಗ್ಸ್ ತತ್ತರಿಸಿದೆ. ಪಂಜಾಬ್‌ನ ಆರಂಭಿಕ ಆಟಗಾರ ಜಾನಿ ಬೈರ್‌ಸ್ಟೋವ್ ಕೂಡ ಔಟಾಗಿದ್ದು, ಸ್ಪಿನ್ನರ್ ಕೇಶವ್ ಮಹಾರಾಜ್ ಅವರ ವಿಕೆಟ್ ಪಡೆದಿದ್ದಾರೆ. ಪಂಜಾಬ್ ಕಿಂಗ್ಸ್ ತಂಡ ಎಂಟು ಓವರ್‌ಗಳ ಅಂತ್ಯಕ್ಕೆ 50 ರನ್‌ಗಳ ಗಡಿ ಮುಟ್ಟಲು ಸಾಧ್ಯವಾಗಲಿಲ್ಲ. ಬೈರ್‌ಸ್ಟೋವ್ 19 ಎಸೆತಗಳಲ್ಲಿ 15 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು.
ಪಂಜಾಬ್ ತಂಡದ ಎರಡನೇ ವಿಕೆಟ್ ಪತನವಾಗಿದ್ದು, ಪ್ರಭಾಸಿಮ್ರಾನ್ ಸಿಂಗ್, ಯುಜ್ವೇಂದ್ರ ಚಾಹಲ್ಗೆ ಬಲಿಯಾದರು. ಕಳಪೆ ಫಾರ್ಮ್‌ನಲ್ಲಿರುವ ಪ್ರಭಾಸಿಮ್ರಾನ್ 14 ಎಸೆತಗಳಲ್ಲಿ 10 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಇದು ಚಾಹಲ್ ಅವರ ವೃತ್ತಿಜೀವನದ 198 ನೇ ವಿಕೆಟ್ ಆಗಿದ್ದು, ಇದೀಗ ಅವರು 200 ವಿಕೆಟ್‌ಗಳನ್ನು ಪೂರೈಸಲು ಎರಡು ಹೆಜ್ಜೆ ದೂರದಲ್ಲಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡದ ವೇಗದ ಬೌಲರ್ ಅವೇಶ್ ಖಾನ್ ಅರ್ಥವ್ ಟೈಡೆ ಅವರನ್ನು ಔಟ್ ಮಾಡುವ ಮೂಲಕ ಪಂಜಾಬ್ ಕಿಂಗ್ಸ್‌ಗೆ ಮೊದಲ ಹೊಡೆತ ನೀಡಿದರು. ಟೈಡೆ 12 ಎಸೆತಗಳಲ್ಲಿ 15 ರನ್ ಗಳಿಸಿ ಔಟಾದರು. ಪಂಜಾಬ್ ತಂಡ ನಾಲ್ಕು ಓವರ್‌ಗಳ ಅಂತ್ಯಕ್ಕೆ ಒಂದು ವಿಕೆಟ್‌ಗೆ 28 ರನ್ ಗಳಿಸಿದೆ.
ಪಂಜಾಬ್ ಕಿಂಗ್ಸ್ ಇನ್ನಿಂಗ್ಸ್ ಆರಂಭವಾಗಿದೆ. ಶಿಖರ್ ಧವನ್ ಬದಲಿಗೆ ಅಥರ್ವ ಟೈಡೆ ಮತ್ತು ಜಾನಿ ಬೈರ್‌ಸ್ಟೋವ್ ಬ್ಯಾಟಿಂಗ್ ಆರಂಭಿಸಿದ್ದಾರೆ. ಮೊದಲ ಓವರ್ ಅನ್ನು ಟ್ರೆಂಟ್ ಬೌಲ್ಟ್ ಎಸೆದರು. ಈ ಓವರ್‌ನಲ್ಲಿ ಪಂಜಾಬ್ ಬ್ಯಾಟ್ಸ್‌ಮನ್‌ಗಳು ನಾಲ್ಕು ರನ್ ಕದ್ದರು.
ಸಂಜು ಸ್ಯಾಮ್ಸನ್ (ನಾಯಕ), ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ರೋವ್ಮನ್ ಪೊವೆಲ್, ತನುಷ್ ಕೋಟ್ಯಾನ್, ಕೇಶವ್ ಮಹಾರಾಜ್, ಟ್ರೆಂಟ್ ಬೌಲ್ಟ್, ಅವೇಶ್ ಖಾನ್, ಕುಲದೀಪ್ ಸೇನ್, ಯುಜ್ವೇಂದ್ರ ಚಾಹಲ್.
ಇಂಪ್ಯಾಕ್ಟ್ ಪ್ಲೇಯರ್: ಯಶಸ್ವಿ ಜೈಸ್ವಾಲ್, ಟಾಮ್ ಕೊಹ್ಲರ್-ಕಾಡ್ಮೋರ್, ಶುಭಂ ದುಬೆ, ನವದೀಪ್ ಸೈನಿ, ಅಬಿದ್ ಮುಷ್ತಾಕ್.
ಜಾನಿ ಬೈರ್‌ಸ್ಟೋವ್, ಅಥರ್ವ ಟೈಡೆ, ಪ್ರಭ್‌ಸಿಮ್ರಾನ್ ಸಿಂಗ್, ಸ್ಯಾಮ್ ಕರನ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಶಾಂಕ್ ಸಿಂಗ್, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಅರ್ಶ್‌ದೀಪ್ ಸಿಂಗ್, ಕಗಿಸೊ ರಬಾಡ.
ಇಂಪ್ಯಾಕ್ಟ್ ಪ್ಲೇಯರ್: ರಾಹುಲ್ ಚಹಾರ್, ಅಶುತೋಷ್ ಶರ್ಮಾ, ವಿದ್ವತ್ ಕಾವೇರಪ್ಪ, ಹರ್‌ಪ್ರೀತ್ ಭಾಟಿಯಾ.
ಐಪಿಎಲ್ 27ನೇ ಪಂದ್ಯದಲ್ಲಿ ರಾಜಸ್ಥಾನ ತಂಡ ಎರಡು ಬದಲಾವಣೆಯೊಂದಿಗೆ ಆಡಲಿದೆ. ಜೋಸ್ ಬಟ್ಲರ್ ಮತ್ತು ರವಿಚಂದ್ರನ್ ಅಶ್ವಿನ್ ಬದಲಿಗೆ ರೋವ್‌ಮನ್ ಪೊವೆಲ್ ಮತ್ತು ತನುಷ್ ಕೋಟ್ಯಾನ್ ಅವಕಾಶ ಪಡೆದಿದ್ದಾರೆ. ಅದೇ ಸಮಯದಲ್ಲಿ, ಪಂಜಾಬ್ ತಂಡವು ನಾಯಕ ಶಿಖರ್ ಧವನ್ ಇಲ್ಲದೆ ಆಡುವುದನ್ನು ಕಾಣಬಹುದು. ಅವರ ಜಾಗದಲ್ಲಿ ಅಥರ್ವ ಟೈಡೆ ಅವರನ್ನು ಪ್ಲೇಯಿಂಗ್ 11 ರಲ್ಲಿ ಸೇರಿಸಲಾಗಿದೆ. ಅದೇ ಸಮಯದಲ್ಲಿ, ಲಿಯಾಮ್ ಲಿವಿಂಗ್ಸ್ಟೋನ್ ಕೂಡ ಇಂದು ಆಡುವುದನ್ನು ಕಾಣಬಹುದು.
ಟಾಸ್ ಗೆದ್ದ ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
Published On - 7:01 pm, Sat, 13 April 24