PBKS vs RR Highlights IPL 2023: ಗೆದ್ದ ರಾಜಸ್ಥಾನ್​; ಆದರೂ ಆರ್​​ಸಿಬಿ ಸ್ಥಾನಕ್ಕೆ ಭಂಗವಿಲ್ಲ

|

Updated on: May 19, 2023 | 11:33 PM

Punjab Kings vs Rajasthan Royals IPL 2023 Highlights in Kannada: ಪಂಜಾಬ್ ಕಿಂಗ್ಸ್ ವಿರುದ್ಧದ ಈ ಆವೃತ್ತಿಯ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ, ರಾಜಸ್ಥಾನ್ ರಾಯಲ್ಸ್ 4 ವಿಕೆಟ್‌ಗಳಿಂದ ಗೆದ್ದಿದೆ.

PBKS vs RR Highlights IPL 2023: ಗೆದ್ದ ರಾಜಸ್ಥಾನ್​; ಆದರೂ ಆರ್​​ಸಿಬಿ ಸ್ಥಾನಕ್ಕೆ ಭಂಗವಿಲ್ಲ
ಪಂಜಾಬ್- ರಾಜಸ್ಥಾನ್ ಮುಖಾಮುಖಿ

ಐಪಿಎಲ್ 2023ರ ಪ್ಲೇಆಫ್ ನಿರೀಕ್ಷೆಯನ್ನು ಕೊನೆಯ ಪಂದ್ಯದವರೆಗೂ ಜೀವಂತವಾಗಿರಿಸಿಕೊಳ್ಳುವಲ್ಲಿ ರಾಜಸ್ಥಾನ್ ರಾಯಲ್ಸ್ ಯಶಸ್ವಿಯಾಗಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಈ ಆವೃತ್ತಿಯ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ, ರಾಜಸ್ಥಾನ್ ರಾಯಲ್ಸ್ 4 ವಿಕೆಟ್‌ಗಳಿಂದ ಗೆದ್ದಿದೆ. ಇದರೊಂದಿಗೆ 14 ಅಂಕ ಸಂಪಾಧಿಸಿರುವ ರಾಜಸ್ಥಾನ್​ಗೆ ಕೊನೆಯ ಭರವಸೆ ಉಳಿದ್ದರೆ ಇತ್ತ ಪಂಜಾಬ್ ಕಿಂಗ್ಸ್ ಪಯಣ ಕೊನೆಗೊಂಡಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 5 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತು. ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ಯಶಸ್ವಿ ಜೈಸ್ವಾಲ್ ಮತ್ತು ದೇವದತ್ ಪಡಿಕ್ಕಲ್ ಅವರ ಅರ್ಧಶತಕದ ನೆರವಿನಿಂದ ಕೊನೆಯ ಓವರ್‌ನಲ್ಲಿ ಗೆಲುವು ಸಾಧಿಸಿತು.

LIVE NEWS & UPDATES

The liveblog has ended.
  • 19 May 2023 11:33 PM (IST)

    ಜುರೇಲ್ ಸಿಕ್ಸ್, ಗೆದ್ದ ರಾಜಸ್ಥಾನ್

    ಚಹರ್ ಬೌಲ್ ಮಾಡಿದ 20ನೇ ಓವರ್​ನ 3ನೇ ಎಸೆತವನ್ನು ಸಿಕ್ಸರ್​ಗಟ್ಟಿದ ಜುರೇಲ್ ರಾಜಸ್ಥಾನ್​ಗೆ ರೋಚಕ ಜಯ ತಂದುಕೊಟ್ಟರು.

  • 19 May 2023 11:32 PM (IST)

    ಕೊನೆಯ ಓವರ್‌ನಲ್ಲಿ 9 ರನ್‌ಗಳ ಅಗತ್ಯವಿದೆ

    ಕೊನೆಯ ಓವರ್‌ನಲ್ಲಿ ರಾಜಸ್ಥಾನ ಗೆಲ್ಲಲು 6 ಎಸೆತಗಳಲ್ಲಿ 9 ರನ್ ಅಗತ್ಯವಿದೆ, ಆದರೆ ಪಂಜಾಬ್ ಈ ರನ್‌ಗಳನ್ನು ಉಳಿಸಬೇಕಾಗಿದೆ. ಧ್ರುವ್ ಜುರೆಲ್ ಮತ್ತು ಟ್ರೆಂಟ್ ಬೌಲ್ಟ್ ಬ್ಯಾಟಿಂಗ್ ಮಾಡುತ್ತಿದ್ದರೆ ರಾಹುಲ್ ಚಹಾರ್ ಓವರ್ ಆರಂಭಿಸಿದ್ದಾರೆ.


  • 19 May 2023 11:25 PM (IST)

    ಶಿಮ್ರಾನ್ ಹೆಟ್ಮೆಯರ್ ಔಟ್

    ಶಿಮ್ರಾನ್ ಹೆಟ್ಮೆಯರ್ ಔಟಾಗಿದ್ದಾರೆ. 19ನೇ ಓವರ್‌ನ ಐದನೇ ಎಸೆತದಲ್ಲಿ ಅವರನ್ನು ಸ್ಯಾಮ್ ಕರನ್ ಔಟ್ ಮಾಡಿದರು. ಧವನ್ ಅವರ ಅದ್ಭುತ ಕ್ಯಾಚ್ ಪಡೆದರು.

  • 19 May 2023 11:19 PM (IST)

    ರಿಯಾನ್ ಪರಾಗ್ ಔಟ್

    ರಿಯಾನ್ ಪರಾಗ್ ಔಟ್ ಆಗಿದ್ದಾರೆ. 18ನೇ ಓವರ್‌ನ ಕೊನೆಯ ಎಸೆತದಲ್ಲಿ ಕಗಿಸೊ ರಬಾಡ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು.

  • 19 May 2023 10:53 PM (IST)

    ಜೈಸ್ವಾಲ್ ಔಟ್

    15ನೇ ಓವರ್‌ನ ಮೂರನೇ ಎಸೆತದಲ್ಲಿ ಯಶಸ್ವಿ ಜೈಸ್ವಾಲ್ ಔಟಾದರು.ನಥನ್ ಎಲ್ಲಿಸ್ ಎಸೆತದಲ್ಲಿ ರಿವರ್ಸ್ ಸ್ವೀಪ್ ಶಾಟ್ ಬಾರಿಸಲು ಪ್ರಯತ್ನ ಮಾಡಿದ ಯಶಸ್ವಿ, ರಿಷಿ ಧವನ್​ಗೆ ಕ್ಯಾಚಿತ್ತು ಔಟಾದರು.

  • 19 May 2023 10:52 PM (IST)

    ಯಶಸ್ವಿ ಜೈಸ್ವಾಲ್ ಅರ್ಧಶತಕ

    ಯಶಸ್ವಿ ಜೈಸ್ವಾಲ್ ಮತ್ತೊಂದು ಅದ್ಭುತ ಇನ್ನಿಂಗ್ಸ್ ಆಡಿ ಅರ್ಧಶತಕ ಗಳಿಸಿದ್ದಾರೆ. 15ನೇ ಓವರ್‌ನ ಮೊದಲ ಎಸೆತದಲ್ಲಿ ಅವರು ತಮ್ಮ ಅರ್ಧಶತಕ ಪೂರೈಸಿದರು.

  • 19 May 2023 10:34 PM (IST)

    ಸಂಜು ಸ್ಯಾಮ್ಸನ್ ಔಟ್

    11ನೇ ಓವರ್​ನ ನಾಲ್ಕನೇ ಎಸೆತದಲ್ಲಿ ರಾಹುಲ್ ಚಾಹಲ್ ರಾಜಸ್ಥಾನ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರನ್ನು ಔಟ್ ಮಾಡಿದರು. ಚಹರ್ ಎಸೆತದಲ್ಲಿ ರಿಷಿ ಧವನ್​ಗೆ ಸಂಜು ಕ್ಯಾಚ್ ನೀಡಿದರು. ಇದರೊಂದಿಗೆ ರಾಜಸ್ಥಾನದ ಮೂರನೇ ವಿಕೆಟ್ ಪತನಗೊಂಡಿದೆ.

    ಸಂಜು ಸ್ಯಾಮ್ಸನ್ – 2 ರನ್, 3 ಎಸೆತಗಳು

  • 19 May 2023 10:12 PM (IST)

    ರಾಜಸ್ಥಾನ್ ಅರ್ಧಶತಕ

    ರಾಜಸ್ಥಾನದ ಅರ್ಧಶತಕ ಪೂರೈಸಿದೆ. ಯಶಸ್ವಿ ಆರನೇ ಓವರ್​ನ ಮೂರನೇ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ತಂಡದ ಸ್ಕೋರ್ ಅನ್ನು 50ರ ಗಡಿ ದಾಟಿಸಿದರು.

  • 19 May 2023 09:51 PM (IST)

    ಬಟ್ಲರ್ ಔಟ್

    ರಾಜಸ್ಥಾನಕ್ಕೆ ಮೊದಲ ಹೊಡೆತ ಬಿದ್ದಿದೆ.

    ಬಟ್ಲರ್ ಮತ್ತೊಮ್ಮೆ ಖಾತೆ ತೆರೆಯದೆ ಔಟಾದರು.

    ಈ ಸೀಸನ್​ನಲ್ಲಿ ಇದು ಅವರ ಐದನೇ ಡಕ್ ಆಗಿದೆ.

    ಎರಡನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಕಗಿಸೊ ರಬಾಡ ಅವರನ್ನು ಎಲ್ಬಿಡಬ್ಲು ಮಾಡಿದರು.

  • 19 May 2023 09:24 PM (IST)

    ಪಂಜಾಬ್ ಇನ್ನಿಂಗ್ಸ್ ಅಂತ್ಯ

    ಪಂಜಾಬ್ ಇನ್ನಿಂಗ್ಸ್ ಮುಗಿದಿದೆ. ಈ ತಂಡ ಆರು ವಿಕೆಟ್ ಕಳೆದುಕೊಂಡು 187 ರನ್ ಗಳಿಸಿದೆ. ಸ್ಯಾಮ್ ಕರನ್ 49 ರನ್ ಗಳಿಸಿ ಅಜೇಯರಾಗಿ ಉಳಿದರೆ, ಶಾರುಖ್ ಖಾನ್ ಅವರೊಂದಿಗೆ 41 ರನ್ ಗಳಿಸಿ ಅಜೇಯರಾಗಿ ಉಳಿದರು. ಕೊನೆಯ ಎರಡು ಓವರ್‌ಗಳಲ್ಲಿ ಪಂಜಾಬ್ 46 ರನ್ ಗಳಿಸಿತು.

  • 19 May 2023 09:00 PM (IST)

    ಜಿತೇಶ್ ಶರ್ಮಾ ಔಟ್

    ಜಿತೇಶ್ ಶರ್ಮಾ ಔಟಾಗಿದ್ದಾರೆ.

    14ನೇ ಓವರ್‌ನ ಐದನೇ ಎಸೆತದಲ್ಲಿ ನವದೀಪ್ ಸೈನಿ ಅವರನ್ನು ಬಲಿಪಶು ಮಾಡಿದರು.

    ಜಿತೇಶ್ ಜೊತೆಗೆ ಪಂಜಾಬ್ ಐದನೇ ವಿಕೆಟ್ ಕಳೆದುಕೊಂಡಿದೆ.

    ಜಿತೇಶ್ ಶರ್ಮಾ – 44 ರನ್, 28 ಎಸೆತಗಳು 3×4 3×6

  • 19 May 2023 08:46 PM (IST)

    Karnataka Politics Live: ಸೋನಿಯಾ ನಿವಾಸದಲ್ಲಿ ಸಚಿವರ ಪಟ್ಟಿ ಅಂತಿಮಗೊಳಿಸಿ ಖುಷಿಯಿಂದ ಹೊರಬಂದ ಸಿದ್ದು, ಡಿಕೆ

  • 19 May 2023 08:44 PM (IST)

    ಪಂಜಾಬ್ ಶತಕ

    ಪಂಜಾಬ್ ಶತಕ ಪೂರೈಸಿದೆ. 14ನೇ ಓವರ್​ನ ಎರಡನೇ ಎಸೆತದಲ್ಲಿ ಜಿತೇಶ್ ಬೌಂಡರಿ ಬಾರಿಸುವ ಮೂಲಕ ತಂಡದ ಶತಕ ಪೂರೈಸಿದರು.

  • 19 May 2023 08:42 PM (IST)

    10 ಓವರ್ ಅಂತ್ಯ

    ಪಂಜಾಬ್ ಕಿಂಗ್ಸ್ ಇನ್ನಿಂಗ್ಸ್​ನ 10 ಓವರ್ ಮುಗಿದಿದೆ.

    ಈ 10 ಓವರ್ ಅಂತ್ಯಕ್ಕೆ ತಂಡ 4 ವಿಕೆಟ್​ ಕಳೆದುಕೊಂಡು 78 ರನ್ ಬಾರಿಸಿದೆ.

  • 19 May 2023 08:09 PM (IST)

    ಲಿಯಾಮ್ ಲಿವಿಂಗ್ಸ್ಟನ್ ಔಟ್

    ಲಿಯಾಮ್ ಲಿವಿಂಗ್‌ಸ್ಟನ್ ಔಟ್. ಏಳನೇ ಓವರ್‌ನ ಮೂರನೇ ಎಸೆತದಲ್ಲಿ ಸೈನಿ ಅವರನ್ನು ಬೌಲ್ಡ್ ಮಾಡಿದರು. ಇದರೊಂದಿಗೆ ಪಂಜಾಬ್ ನಾಲ್ಕನೇ ವಿಕೆಟ್ ಕಳೆದುಕೊಂಡಿತು.

  • 19 May 2023 08:08 PM (IST)

    ಧವನ್ ಔಟ್

    ಪಂಜಾಬ್ ತಂಡದ ಮೂರನೇ ವಿಕೆಟ್ ಪತನಗೊಂಡಿದೆ. ಆರನೇ ಓವರ್​ನ ಮೂರನೇ ಎಸೆತದಲ್ಲಿ ಶಿಖರ್ ಧವನ್ ಅವರನ್ನು ಆಡಮ್ ಝಂಪಾ ಔಟ್ ಮಾಡಿದರು.

    ಶಿಖರ್ ಧವನ್ – 17 ರನ್, 12 ಎಸೆತಗಳು 2×4 1×6

  • 19 May 2023 08:06 PM (IST)

    Karnataka Politics Live: ನಾಳೆ ಸಿದ್ದರಾಮಯ್ಯ, ಡಿಕೆಶಿ ಪ್ರಮಾಣ ವಚನ ಹಿನ್ನೆಲೆ; ಬೆಂಗಳೂರಿಗೆ ಆಗಮಿಸಿದ ಜಮ್ಮು ಕಾಶ್ಮೀರ ಮಾಜಿ ಸಿಎಂ ಮೆಹಬೂಬ್ ಮುಫ್ತಿ

    ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಸ್ಪಷ್ಟ ಬಹುಮತ ಪಡೆದು  ನಾಳೆ (ಮೇ.20) ಸಿದ್ದರಾಮಯ್ಯ, ಡಿಕೆಶಿ ಪ್ರಮಾಣ ವಚನ ಮಾಡಲಿದ್ದಾರೆ. ಈ ಹಿನ್ನೆಲೆ ವಿವಿಧ ರಾಜ್ಯದ 8 ಮುಖ್ಯಮಂತ್ರಿಗಳು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಅದರಂತೆ ಇದೀಗ(ಮೇ.19) ಜಮ್ಮು ಕಾಶ್ಮೀರ ಮಾಜಿ ಸಿಎಂ ಮೆಹಬೂಬ್ ಮುಫ್ತಿ ಬೆಂಗಳೂರಿನ  ಕೇಂಪೇಗೌಡ ಏರ್ಪೋರ್ಟ್ ಗೆ ಆಗಮಿಸಿದ್ದಾರೆ.

     

  • 19 May 2023 08:04 PM (IST)

    Karnataka Politics Live: ನಾಳೆ ಸಿದ್ದರಾಮಯ್ಯ, ಡಿಕೆಶಿ ಪ್ರಮಾಣ ವಚನ ಹಿನ್ನೆಲೆ; ಬೆಂಗಳೂರಿಗೆ ಆಗಮಿಸಿದ ಜಮ್ಮು ಕಾಶ್ಮೀರ ಮಾಜಿ ಸಿಎಂ ಮೆಹಬೂಬ್ ಮುಫ್ತಿ

    ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಸ್ಪಷ್ಟ ಬಹುಮತ ಪಡೆದು  ನಾಳೆ (ಮೇ.20) ಸಿದ್ದರಾಮಯ್ಯ, ಡಿಕೆಶಿ ಪ್ರಮಾಣ ವಚನ ಮಾಡಲಿದ್ದಾರೆ. ಈ ಹಿನ್ನೆಲೆ ವಿವಿಧ ರಾಜ್ಯದ 8 ಮುಖ್ಯಮಂತ್ರಿಗಳು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಅದರಂತೆ ಇದೀಗ(ಮೇ.19) ಜಮ್ಮು ಕಾಶ್ಮೀರ ಮಾಜಿ ಸಿಎಂ ಮೆಹಬೂಬ್ ಮುಫ್ತಿ ಬೆಂಗಳೂರಿನ  ಕೇಂಪೇಗೌಡ ಏರ್ಪೋರ್ಟ್ ಗೆ ಆಗಮಿಸಿದ್ದಾರೆ.

  • 19 May 2023 07:56 PM (IST)

    ಎರಡನೇ ವಿಕೆಟ್ ಪತನ

    ಪಂಜಾಬ್ ಎರಡನೇ ವಿಕೆಟ್ ಕಳೆದುಕೊಂಡಿತು. ಅರ್ಥವ್ ಟೈಡ್ ಔಟಾದರು, ಅವರು ನವದೀಪ್ ಸೈನಿ ಎಸೆತದಲ್ಲಿ ದೇವದತ್ ಪಡಿಕ್ಕಲ್ ಅವರಿಗೆ ಕ್ಯಾಚ್ ನೀಡಿದರು.

  • 19 May 2023 07:44 PM (IST)

    ಸಂದೀಪ್ ದುಬಾರಿ

    2ನೇ ಓವರ್​ನಲ್ಲಿ 16 ರನ್ ಬಂದವು

    ಈ ಓವರ್​ನಲ್ಲಿ ಧವನ್ 1 ಬೌಂಡರಿ ಹಾಗೂ ಸಿಕ್ಸರ್ ಸಿಡಿಸಿದರು

    ಟೈಡೆ ಬೌಂಡರಿ ಬಾರಿಸಿದರು.

  • 19 May 2023 07:37 PM (IST)

    ಮೊದಲ ವಿಕೆಟ್ ಪತನ

    ಪಂದ್ಯ ಆರಂಭವಾಗಿದೆ. ಮೊದಲ ಓವರ್​ನಲ್ಲೇ ಪಂಜಾಬ್ ಕೂಡ ಹಿನ್ನಡೆ ಅನುಭವಿಸಿದೆ. ಪ್ರಭಾಸಿಮ್ರಾನ್ ಸಿಂಗ್ ಎರಡನೇ ಎಸೆತದಲ್ಲಿ ಟ್ರೆಂಟ್ ಬೌಲ್ಟ್‌ಗೆ ಕ್ಯಾಚಿತ್ತು ಔಟಾದರು.

  • 19 May 2023 07:22 PM (IST)

    ರಾಜಸ್ಥಾನ್ ರಾಯಲ್ಸ್

    ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಶಿಮ್ರೋನ್ ಹೆಟ್ಮೆಯರ್, ರಿಯಾನ್ ಪರಾಗ್, ಆಡಮ್ ಝಂಪಾ, ಟ್ರೆಂಟ್ ಬೌಲ್ಟ್, ನವದೀಪ್ ಸೈನಿ, ಸಂದೀಪ್ ಶರ್ಮಾ, ಯುಜ್ವೇಂದ್ರ ಚಹಾಲ್

  • 19 May 2023 07:21 PM (IST)

    ಪಂಜಾಬ್ ಕಿಂಗ್ಸ್

    ಶಿಖರ್ ಧವನ್ (ನಾಯಕ), ಪ್ರಭ್​ಸಿಮ್ರಾನ್ ಸಿಂಗ್, ಅಥರ್ವ್​ ಟೈಡೆ, ಲಿಯಾಮ್ ಲಿವಿಂಗ್‌ಸ್ಟನ್, ಸ್ಯಾಮ್ ಕರನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ರಾಹುಲ್ ಚಾಹರ್, ಕಗಿಸೊ ರಬಾಡ, ಅರ್ಶ್‌ದೀಪ್ ಸಿಂಗ್.

  • 19 May 2023 07:01 PM (IST)

    ಟಾಸ್ ಗೆದ್ದ ರಾಜಸ್ಥಾನ್

    ಟಾಸ್ ಗೆದ್ದ ರಾಜಸ್ಥಾನ್ ನಾಯಕ ಸಂಜು ಮೊದಲು ಬೌಲ್ ಮಾಡಲು ನಿರ್ಧರಿಸಿದ್ದಾರೆ.

Published On - 7:00 pm, Fri, 19 May 23

Follow us on