AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: ಪ್ಲೇ ಆಫ್​ಗೂ ಮುನ್ನ ಲಕ್ನೋ ತಂಡಕ್ಕೆ ಯುವ ಆಟಗಾರನ ಎಂಟ್ರಿ..!

IPL 2023: ಲಕ್ನೋ ಸೂಪರ್ ಜೈಂಟ್ಸ್ ಗುರುವಾರ ವೇಗಿ ಉನಾದ್ಕಟ್ ಅವರ ಬದಲಿ ಆಟಗಾರನನ್ನು ಆಯ್ಕೆ ಮಾಡಿಕೊಂಡಿದೆ.

ಪೃಥ್ವಿಶಂಕರ
|

Updated on: May 19, 2023 | 4:54 PM

Share
ಐಪಿಎಲ್​ 16 ನೇ ಆವೃತ್ತಿಯಲ್ಲಿ ಪ್ಲೇಆಫ್​ಗೆ ಟಿಕೆಟ್ ಖಚಿತಪಡಿಸಿಕೊಳ್ಳಲು ಹೋರಾಡುತ್ತಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಹೊಸ ಆಟಗಾರನ ಎಂಟ್ರಿಯಾಗಿದೆ. ಲಕ್ನೋ ತಂಡ ಈಗಾಗಲೇ ನಾಯಕ ಕೆಎಲ್ ರಾಹುಲ್ ಮತ್ತು ಹಿರಿಯ ವೇಗಿ ಜಯದೇವ್ ಉನದ್ಕಟ್ ಅಲಭ್ಯತೆಯಿಂದ ಕೊಂಚ ಹಿನ್ನಡೆ ಅನುಭವಿಸಿದೆ.

1 / 6
ಐಪಿಎಲ್ ಆರಂಭದಲ್ಲೇ ರಾಹುಲ್ ಮತ್ತು ಉನದ್ಕಟ್ ಇಂಜುರಿಯಿಂದಾಗಿ ಇಡೀ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ನಾಯಕ ರಾಹುಲ್ ಬದಲಿಗೆ ಹಿರಿಯ ಬ್ಯಾಟರ್ ಕರುಣ್ ನಾಯರ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದ ಲಕ್ನೋ ಸೂಪರ್ ಜೈಂಟ್ಸ್ ಗುರುವಾರ ವೇಗಿ ಉನಾದ್ಕಟ್ ಅವರ ಬದಲಿ ಆಟಗಾರನನ್ನು ಆಯ್ಕೆ ಮಾಡಿಕೊಂಡಿದೆ.

2 / 6
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಲಕ್ನೋ, ಇಂಡಿಯನ್ ಪ್ರೀಮಿಯರ್ ಲೀಗ್ 2023 ರ ಉಳಿದ ಭಾಗಕ್ಕೆ ಗಾಯಗೊಂಡಿರುವ ವೇಗಿ ಉನದ್ಕಟ್ ಬದಲಿಯಾಗಿ ಲಕ್ನೋ ಸೂಪರ್ ಜೈಂಟ್ಸ್ ಸೂರ್ಯಾಂಶ್ ಶೆಡ್ಗೆ ಅವರನ್ನು ಆಯ್ಕೆ ಮಾಡಿದೆ. ಸೂರ್ಯಾಂಶ್ ಅವರನ್ನು ಮೂಲ ಬೆಲೆ 20 ಲಕ್ಷಕ್ಕೆ ಖರೀದಿಸಲಾಗಿದೆ.

3 / 6
ಸೂರ್ಯಾಂಶ್ ಇನ್ನೂ ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿಲ್ಲ. ಆದರೆ ಸೂರ್ಯಾಂಶ್ ಗಿಲ್ಸ್ ಶೀಲ್ಡ್ ಟ್ರೋಫಿಯಲ್ಲಿ ಅತಿವೇಗದ ತ್ರಿಶತಕ ಬಾರಿಸಿದ್ದಾರೆ. 7 ವರ್ಷಗಳ ಹಿಂದೆ ಗುಂಡೇಜ ಎಜುಕೇಶನ್ ಅಕಾಡೆಮಿ (ಕಾಂದಿವಲಿ) ಪರ SPSS ಮುಂಬಾದೇವಿ ನಿಕೇತನ ವಿರುದ್ಧ ಸೂರ್ಯಾಂಶ್ 137 ಎಸೆತಗಳಲ್ಲಿ 326 ರನ್ ಬಾರಿಸಿದ್ದರು.ಇದೀಗ ಐಪಿಎಲ್‌ನ ಕೊನೆಯ ಹಂತದಲ್ಲಿ ಸೂರ್ಯಾಂಶ್‌ಗೆ ಅವಕಾಶ ಸಿಕ್ಕಿದೆ. ಆದರೆ ಆ ನಂತರವೂ ಈ ಅವಕಾಶವನ್ನು ಸೂರ್ಯಾಂಶ್ ಹೇಗೆ ಬಳಸಿಕೊಳ್ಳುತ್ತಾರೆ ಎಂಬುದೇ ಕ್ರಿಕೆಟ್ ಲೋಕದ ಗಮನ.

4 / 6
ಇನ್ನೂ ಐಪಿಎಲ್​ನಲ್ಲಿ ಗಾಯಗೊಂಡಿರುವ ಜಯದೇವ್, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಮುಂಚಿತವಾಗಿ ಸಂಪೂರ್ಣವಾಗಿ ಫಿಟ್‌ ಆಗುವ ನಿರೀಕ್ಷೆಯಿದೆ.

5 / 6
ಲಕ್ನೋ ಸೂಪರ್ ಜೈಂಟ್ಸ್ ತಂಡ | ಕೃನಾಲ್ ಪಾಂಡ್ಯ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ದೀಪಕ್ ಹೂಡಾ, ಪ್ರೇರಕ್ ಮಂಕಡ್, ಮಾರ್ಕಸ್ ಸ್ಟೋಯ್ನಿಸ್, ನಿಕೋಲಸ್ ಪೂರನ್, ಆಯುಷ್ ಬಡೋನಿ, ನವೀನ್-ಉಲ್-ಹಕ್, ರವಿ ಬಿಷ್ಣೋಯ್, ಸ್ವಪ್ನಿಲ್ ಸಿಂಗ್, ಮೊಹ್ಸಿನ್ ಖಾನ್, ಕೈಲ್ ಮೇಯರ್ಸ್, ಯಶ್ ಠಾಕೂರ್, ಕೃಷ್ಣಾ ಠಾಕೂರ್ , ಡೇನಿಯಲ್ ಸಾಮ್ಸ್, ಯುದ್ವೀರ್ ಸಿಂಗ್ ಚರಕ್, ಅಮಿತ್ ಮಿಶ್ರಾ, ಅವೇಶ್ ಖಾನ್, ಅರ್ಪಿತ್ ಗುಲೇರಿಯಾ, ಕರುಣ್ ನಾಯರ್, ಮನನ್ ವೋಹ್ರಾ, ಮಾರ್ಕ್ ವುಡ್, ರೊಮಾರಿಯೋ ಶೆಫರ್ಡ್, ಸೂರ್ಯಾಂಶ್ ಶೆಡ್ಗೆ ಮತ್ತು ಕರಣ್ ಶರ್ಮಾ.

6 / 6