Rahul Dravid: ರಾಹುಲ್ ದ್ರಾವಿಡ್ ಬೌಲರ್​ ಆಗಿದ್ದರೆ ಅವರ ಬೌಲಿಂಗ್ ಶೈಲಿ ಹೇಗಿರುತ್ತಿತ್ತು ಗೊತ್ತಾ? ಈ ವಿಡಿಯೋ ನೋಡಿ

|

Updated on: Aug 11, 2024 | 7:17 PM

Rahul Dravid: ಪ್ರಸ್ತುತ ಕ್ರಿಕೆಟ್​ನಿಂದ ಕೊಂಚ ವಿರಾಮ ಪಡೆದುಕೊಂಡಿರುವ ರಾಹುಲ್ ದ್ರಾವಿಡ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಅವರು ಎನ್‌ಸಿಎ ಮೈದಾನದ ಸಿಬ್ಬಂದಿಯೊಂದಿಗೆ ಕ್ರಿಕೆಟ್ ಆಡುತ್ತಿರುವುದನ್ನು ಕಾಣಬಹುದು. ಆದರೆ, ಈ ವಿಡಿಯೋದಲ್ಲಿನ ವಿಶೇಷವೆಂದರೆ ಇಲ್ಲಿ ದ್ರಾವಿಡ್ ಬ್ಯಾಟಿಂಗ್ ಮಾಡುವ ಬದಲು ಬೌಲಿಂಗ್ ಮಾಡುತ್ತಿದ್ದಾರೆ.

Rahul Dravid: ರಾಹುಲ್ ದ್ರಾವಿಡ್ ಬೌಲರ್​ ಆಗಿದ್ದರೆ ಅವರ ಬೌಲಿಂಗ್ ಶೈಲಿ ಹೇಗಿರುತ್ತಿತ್ತು ಗೊತ್ತಾ? ಈ ವಿಡಿಯೋ ನೋಡಿ
ರಾಹುಲ್ ದ್ರಾವಿಡ್
Follow us on

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ, ಮಾಜಿ ಕೋಚ್ ಹಾಗೂ ಕನ್ನಡಿಗ ರಾಹುಲ್ ದ್ರಾವಿಡ್ ಮೈದಾನದಲ್ಲಿ ತಮ್ಮ ಆಮೆಗತಿಯ ಬ್ಯಾಟಿಂಗ್ ಮೂಲಕವೇ ಎದುರಾಳಿ ತಂಡದ ಬೌಲರ್​ಗಳ ಬೆವರಿಳಿಸುತ್ತಿದ್ದನ್ನು ನಾವು ಸಾಕಷ್ಟು ಬಾರಿ ನೋಡಿದ್ದೇವೆ. ಇದೇ ಕಾರಣಕ್ಕೆ ದ್ರಾವಿಡ್​ಗೆ ಗೋಡೆ ಎಂಬ ಉಪನಾಮವನ್ನು ಇಡಲಾಗಿತ್ತು. ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ದ್ರಾವಿಡ್, ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪಿಂಗ್ ಮಾಡಿರುವುದನ್ನು ನಾವು ನೋಡಿದ್ದೇವೆ. ಹಾಗೆಯೇ ದ್ರಾವಿಡ್ ಎಂತಹಾ ಅದ್ಭುತ ಫೀಲ್ಡರ್ ಎಂಬುದು ನಮಗೆಲ್ಲ ಗೊತ್ತೇ ಇದೆ. ಆದರೆ ದ್ರಾವಿಡ್ ಬೌಲಿಂಗ್ ಮಾಡಿದ್ದನ್ನು ನಾವ್ಯಾರು ಹೆಚ್ಚಾಗಿ ನೋಡಿಲ್ಲ. ಒಂದು ವೇಳೆ ರಾಹುಲ್ ದ್ರಾವಿಡ್ ಬೌಲಿಂಗ್ ಮಾಡಿದ್ದರೆ ಅವರ ಆ್ಯಕ್ಷನ್ ಹೇಗಿರುತ್ತಿತ್ತು ಎಂಬ ಪ್ರಶ್ನೆ ಹಲವರ ಮನಸ್ಸಿನಲ್ಲಿ ಆಗಾಗ ಕಾಡುತ್ತಲೇ ಇರುತ್ತದೆ. ಆ ಎಲ್ಲಾ ಕುತೂಹಲಗಳಿಗೂ ದ್ರಾವಿಡ್ ತೆರೆ ಎಳೆಯುವ ಕೆಲಸ ಮಾಡಿದ್ದಾರೆ.

ಬೌಲಿಂಗ್ ಮಾಡಿದ ದ್ರಾವಿಡ್​

ಪ್ರಸ್ತುತ ಕ್ರಿಕೆಟ್​ನಿಂದ ಕೊಂಚ ವಿರಾಮ ಪಡೆದುಕೊಂಡಿರುವ ರಾಹುಲ್ ದ್ರಾವಿಡ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಅವರು ಎನ್‌ಸಿಎ ಮೈದಾನದ ಸಿಬ್ಬಂದಿಯೊಂದಿಗೆ ಕ್ರಿಕೆಟ್ ಆಡುತ್ತಿರುವುದನ್ನು ಕಾಣಬಹುದು. ಆದರೆ, ಈ ವಿಡಿಯೋದಲ್ಲಿನ ವಿಶೇಷವೆಂದರೆ ಇಲ್ಲಿ ದ್ರಾವಿಡ್ ಬ್ಯಾಟಿಂಗ್ ಮಾಡುವ ಬದಲು ಬೌಲಿಂಗ್ ಮಾಡುತ್ತಿದ್ದಾರೆ. ದ್ರಾವಿಡ್ ಅವರ ಬೌಲಿಂಗ್ ಶೈಲಿಯನ್ನು ಗಮನಿಸಿದರೆ, ಯಾವುದೇ ವೃತ್ತಿಪರ ವೇಗದ ಬೌಲರ್‌ಗೂ ಕಡಿಮೆ ಇಲ್ಲ ಎಂಬುದನ್ನು ನಾವು ಗಮನಿಸಬಹುದಾಗಿದೆ.

ಹುದ್ದೆಗೆ ವಿದಾಯ

ಇತ್ತೀಚೆಗಷ್ಟೇ ರಾಹುಲ್ ದ್ರಾವಿಡ್ ಅವರ ಕೋಚಿಂಗ್‌ನಲ್ಲಿ ಟೀಂ ಇಂಡಿಯಾ ಇತಿಹಾಸ ಸೃಷ್ಟಿಸಿದ್ದಲ್ಲದೆ ಎರಡನೇ ಬಾರಿಗೆ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಆದರೆ, ತಂಡವನ್ನು ಚಾಂಪಿಯನ್ ಮಾಡುವುದರೊಂದಿಗೆ ದ್ರಾವಿಡ್ ಅವರ ಅಧಿಕಾರವಧಿಯೂ ಕೊನೆಗೊಂಡಿತ್ತು. ಮುಖ್ಯ ಕೋಚ್ ಹುದ್ದೆಯನ್ನು ಮುಂದುವರೆಸಬೇಕೆಂದು ಬಿಸಿಸಿಐ, ದ್ರಾವಿಡ್ ಬಳಿ ಮನವಿ ಮಾಡಿದರೂ, ದ್ರಾವಿಡ್ ತಿರಸ್ಕರಿಸಿದರು. ಇದಕ್ಕೆ ಕಾರಣವನ್ನು ಸಹ ದ್ರಾವಿಡ್ ನೀಡಿದ್ದರು. ಇದೀಗ ರಾಷ್ಟ್ರೀಯ ತಂಡದ ಕೋಚ್ ಹುದ್ದೆಯಿಂದ ಕೆಳಗಿಳಿದಿರುವ ದ್ರಾವಿಡ್, ಶೀಘ್ರದಲ್ಲೇ ಐಪಿಎಲ್‌ನಲ್ಲಿ ಕೋಚ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.

ರಾಹುಲ್ ದ್ರಾವಿಡ್ ವೃತ್ತಿಜೀವನ ಹೇಗಿತ್ತು?

ರಾಹುಲ್ ದ್ರಾವಿಡ್ ಭಾರತ ಪರ 164 ಟೆಸ್ಟ್ ಪಂದ್ಯಗಳನ್ನಾಡಿದ್ದು, 13288 ರನ್ ಬಾರಿಸಿದ್ದಾರೆ. ಇದರಲ್ಲಿ 36 ಶತಕ ಮತ್ತು 63 ಅರ್ಧ ಶತಕಗಳು ಸೇರಿದ್ದು, 5 ದ್ವಿಶತಕಗಳನ್ನೂ ದ್ರಾವಿಡ್ ಬಾರಿಸಿದ್ದಾರೆ. ಹಾಗೆಯೇ 344 ಏಕದಿನ ಪಂದ್ಯಗಳಲ್ಲಿ 10889 ರನ್ ಬಾರಿಸಿರುವ ಅವರು 12 ಶತಕ ಮತ್ತು 83 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. ಇದಲ್ಲದೆ, ರಾಹುಲ್ ದ್ರಾವಿಡ್ ಭಾರತದ ಪರ ಕೇವಲ 1 ಟಿ20 ಪಂದ್ಯವನ್ನು ಆಡಿದ್ದು, ಇದರಲ್ಲಿ ಅವರು 31 ರನ್ ಬಾರಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:16 pm, Sun, 11 August 24