Rahul Dravid: ಕೊಹ್ಲಿ, ರಾಹುಲ್ ಅಲ್ಲ: ಈ ಬ್ಯಾಟರ್ ಅಬ್ಬರಿಸಿದರೆ ಭಾರತಕ್ಕೆ ಗೆಲುವು ಖಚಿತ ಎಂದ ದ್ರಾವಿಡ್

South Africa vs India: ಭಾರತ ದಕ್ಷಿಣ ಆಫ್ರಿಕಾ ದ್ವಿತೀಯ ಟೆಸ್ಟ್‌ ಪಂದ್ಯ ಆರಂಭಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್, ಚೇತೇಶ್ವರ್ ಪೂಜಾರ ಹಾಗೂ ನಾಯಕ ವಿರಾಟ್ ಕೊಹ್ಲಿ ಆಟದ ಬಗ್ಗೆ ಮಾತನಾಡಿದ್ದಾರೆ.

Rahul Dravid: ಕೊಹ್ಲಿ, ರಾಹುಲ್ ಅಲ್ಲ: ಈ ಬ್ಯಾಟರ್ ಅಬ್ಬರಿಸಿದರೆ ಭಾರತಕ್ಕೆ ಗೆಲುವು ಖಚಿತ ಎಂದ ದ್ರಾವಿಡ್
Rahul Dravid IND vs SA
Follow us
TV9 Web
| Updated By: Vinay Bhat

Updated on: Jan 03, 2022 | 9:40 AM

ಸೆಂಚುರಿಯನ್ ಪಿಚ್‍ನಲ್ಲಿ ನಡೆದ ದಕ್ಷಿಣ ಆಫ್ರಿಕಾ (India vs South Africa) ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 113 ರನ್‍ಗಳಿಂದ ಜಯ ಸಾಧಿಸುವ ಮೂಲಕ ಐತಿಹಾಸಿಕ ಟೆಸ್ಟ್ ಸರಣಿ ಗೆಲ್ಲುವ ಸುವರ್ಣಾಕಾಶ ಭಾರತ ಸೃಷ್ಟಿಮಾಡಿಕೊಂಡಿದೆ. ವಿರಾಟ್ ಕೊಹ್ಲಿ (Virat Kohli) ತಮ್ಮ ಬ್ಯಾಟಿಂಗ್‍ನಿಂದ ರನ್‍ಗಳ ಸುರಿಮಳೆಯನ್ನು ಸುರಿಸಲು ಸತತ ವಿಫಲರಾಗುತ್ತಿದ್ದರೂ ತಮ್ಮ ನಾಯಕತ್ವದಿಂದ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಈಗ ಜೋಹಾನ್ಸ್‍ಬರ್ಗ್‍ನ ವೆಂಡರಸ್ ಪಿಚ್‍ನಲ್ಲಿ 2 ಟೆಸ್ಟ್ ಗೆಲ್ಲುವ ಮೂಲಕ ದಕ್ಷಿಣ ಆಫ್ರಿಕಾದಲ್ಲಿ ಸರಣಿ ಗೆದ್ದ ಮೊದಲ ಭಾರತ ಹಾಗೂ ಏಷ್ಯಾನ್ ನಾಯಕ ಎಂಬ ಕೀರ್ತಿಗೆ ಕೊಹ್ಲಿ ಭಾಜನರಾಗಲು ಹೊರಟಿದ್ದಾರೆ. ಇಂದು ಎರಡನೇ ಕದನಕ್ಕೆ ಚಾಲನೆ ದೊರೆಯಲಿದೆ. ಇದಕ್ಕೂ ಟೀಮ್ ಇಂಡಿಯಾ (Team India) ಕೋಚ್ ರಾಹುಲ್ ದ್ರಾವಿಡ್ (Rahul Dravid) ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ದ್ವಿತೀಯ ಟೆಸ್ಟ್‌ ಪಂದ್ಯ ಆರಂಭಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದ್ರಾವಿಡ್, ಚೇತೇಶ್ವರ್ ಪೂಜಾರ ಆಟದ ಬಗ್ಗೆ ಮಾತನಾಡಿದ್ದಾರೆ. ಸದ್ಯ ಸತತ ಕಳಪೆ ಆಟದಿಂದ ಬಳಲುತ್ತಿರುವ ಪೂಜಾರ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ. ಹೀಗಿರುವಾಗ ದ್ರಾವಿಡ್ ಅವರು ಪೂಜಾರ ಯಾವಾಗ ದೊಡ್ಡ ರನ್ ಕಲೆಹಾಕುತ್ತಾರೋ ಆಗ ಭಾರತಕ್ಕೆ ಗೆಲುವು ಖಚಿತ ಎಂದು ಹೇಳಿದ್ದಾರೆ.

“ಪೂಜಾರ ತನ್ನ ಕೈಲಾದಷ್ಟು ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ. ರನ್ ಗಳಿಸುವ ದಾಹ ಅವರಲ್ಲಿದೆ. ಇದು ಚಿಂತಿಸುವ ವಿಚಾರವಲ್ಲ ಬದಲಾಗಿ ಇದು ಅವರು ಬ್ಯಾಟಿಂಗ್ ಮಾಡುವ ಕ್ರಮಾಂಕದ ಬಗ್ಗೆ. ಆದರೆ, ಅವರು ಯಾವಾಗ ದೊಡ್ಡ ಸ್ಕೋರ್ ಸ್ಕೋರ್ ಮಾಡ್ತಾರೋ ಆಗ ಭಾರತಕ್ಕೆ ಕಯ ಕಟ್ಟಿಟ್ಟ ಬುತ್ತಿ,” ಎಂದು ದ್ರಾವಿಡ್ ಹೇಳಿದ್ದಾರೆ.

ಇನ್ನು ಇದೇವೇಳೆ ವಿರಾಟ್ ಕೊಹ್ಲಿ ಬ್ಯಾಟಿಂಗ್ ಬಗ್ಗೆಯೂ ಮಾತನಾಡಿದ ದ್ರಾವಿಡ್, “ಕೊಹ್ಲಿಯ ಶತಕವು ಬ್ಯಾಟ್‌ನೊಂದಿಗೆ ಹತ್ತಿರದಲ್ಲಿದೆ. ಉತ್ತಮ ಆರಂಭವನ್ನು ದೊಡ್ಡ ಸ್ಕೋರ್ ಆಗಿ ಪರಿವರ್ತಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂಬುದು ನನಗೆ ತಿಳಿದಿದೆ. ಆದರೆ ಅವರ ಬ್ಯಾಟ್ ಅತಿ ಶೀಘ್ರದಲ್ಲಿ ದೊಡ್ಡ ಸ್ಕೋರ್ ಪಡೆಯಲಿದೆ ಎಂದು ನಾನು ಭಾವಿಸುತ್ತೇನೆ, ಮುಂದಿನ ಪಂದ್ಯದಲ್ಲಿ ಅದು ಆಗದಿರಬಹುದು ಆದರೆ ಅದು ಶೀಘ್ರದಲ್ಲೇ ಸಂಭವಿಸುತ್ತದೆ,” ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಮಾಧ್ಯಮಗೋಷ್ಠಿಯಿಂದ ವಿರಾಟ್ ಕೊಹ್ಲಿ ಯಾಕೆ ದೂರ ಎಂಬುದರ ಗುಟ್ಟನ್ನು ದ್ರಾವಿಡ್ ಬಿಚ್ಚಿಟ್ಟಿದ್ದಾರೆ. “ಈ ಸರಣಿಯ ಮೂರನೇ ಪಂದ್ಯವು ವಿರಾಟ್‌ಗೆ 100ನೇ ಟೆಸ್ಟ್ ಪಂದ್ಯವಾಗಲಿದೆ. ಆಗ ಅವರು ಮಾಧ್ಯಮಗೋಷ್ಠಿಗೆ ಹಾಜರಾಗಲಿದ್ದಾರೆ. ಆಗ ಅವರ ನೂರನೇ ಪಂದ್ಯದ ಕುರಿತು ನೀವೆಲ್ಲರೂ ಪ್ರಶ್ನೆಗಳನ್ನು ಕೇಳಬಹುದು. ತಂಡಕ್ಕೆ ವಿರಾಟ್ ಯಾವಾಗಲೂ ಆಧಾರಸ್ತಂಭವೇ ಆಗಿದ್ದಾರೆ. ಅವರು ತಂಡದ ಆಟಗಾರರ ಸ್ಥೈರ್ಯವನ್ನು ಉನ್ನತ ಮಟ್ಟದಲ್ಲಿರುವಂತೆ ನೋಡಿಕೊಳ್ಳುತ್ತಾರೆ. ಎಲ್ಲರನ್ನೂ ಹುರಿದುಂಬಿಸುತ್ತ ತಂಡದಲ್ಲಿ ಶಕ್ತಿ ಪ್ರವಹಿಸುವಂತೆ ಮಾಡುತ್ತಾರೆ. ಅವರಿರುವುದರಿಂದ ನನ್ನ ಕೆಲಸ ಸುಲಭ,” ಎಂದು ದ್ರಾವಿಡ್ ಹೇಳಿದರು.

India vs South Africa: ಎರಡನೇ ಟೆಸ್ಟ್ ಆರಂಭಕ್ಕೆ ಇದೆಯೇ ಮಳೆಯ ಕಾಟ?: ಜೋಹನ್ಸ್​​ಬರ್ಗ್​​ ವಾತಾವರಣ ಹೇಗಿದೆ?

South Africa vs India: ಇಂದಿನಿಂದ ಭಾರತ-ಆಫ್ರಿಕಾ ಎರಡನೇ ಟೆಸ್ಟ್ ಆರಂಭ: ಐತಿಹಾಸಿಕ ಸಾಧನೆ ಮಾಡುತ್ತಾ ವಿರಾಟ್ ಕೊಹ್ಲಿ ಪಡೆ?

(Rahul Dravid said in the pre-match press conference When Pujara scores big India wins)

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ