IND vs SA: ಪಂತ್ ಅಥವಾ ಸಾಹ; ಈ ಇಬ್ಬರಲ್ಲಿ ಯಾರಿಗೆ ಸಿಗಲಿದೆ ಅವಕಾಶ? ದ್ರಾವಿಡ್ ಕೊಟ್ಟ ಉತ್ತರ ಹೀಗಿತ್ತು

IND vs SA: ಪಂತ್ ಮತ್ತು ಸಹಾ ನಡುವೆ ಯಾರನ್ನು ತಂಡದಲ್ಲಿ ಆಯ್ಕೆ ಮಾಡಲಾಗುತ್ತದೆ ಎಂದು ರಾಹುಲ್‌ಗೆ ಕೇಳಿದಾಗ, ನಮ್ಮ ಪ್ಲೇಯಿಂಗ್ XI ಬಗ್ಗೆ ನಾವು ತುಂಬಾ ಸ್ಪಷ್ಟವಾಗಿದ್ದೇವೆ ಆದರೆ ನಾವು ಅದನ್ನು ಬಹಿರಂಗಪಡಿಸುವುದಿಲ್ಲ.

IND vs SA: ಪಂತ್ ಅಥವಾ ಸಾಹ; ಈ ಇಬ್ಬರಲ್ಲಿ ಯಾರಿಗೆ ಸಿಗಲಿದೆ ಅವಕಾಶ? ದ್ರಾವಿಡ್ ಕೊಟ್ಟ ಉತ್ತರ ಹೀಗಿತ್ತು
ಸಾಹ, ಪಂತ್
Updated By: ಪೃಥ್ವಿಶಂಕರ

Updated on: Dec 25, 2021 | 9:55 PM

ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದೊಂದಿಗೆ ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ ಆರಂಭವಾಗುತ್ತಿದೆ. ಈ ಪಂದ್ಯಕ್ಕೂ ಮುನ್ನ ಭಾರತ ತಂಡದ ಸಂಯೋಜನೆಯ ಬಗ್ಗೆ ಭಾರಿ ಕುತೂಹಲ ಮೂಡಿದೆ. ಯಾರು ಆಡುತ್ತಾರೆ ಮತ್ತು ಯಾರು ಆಡುವುದಿಲ್ಲ ಎಂಬುದರ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಈ ನಿಟ್ಟಿನಲ್ಲಿ ತಂಡದ ವಿಕೆಟ್ ಕೀಪರ್ ಯಾರು ಎಂಬ ಪ್ರಶ್ನೆಯೂ ಮೂಡಿದೆ. ತಂಡಕ್ಕೆ ಎರಡು ಆಯ್ಕೆಗಳಿವೆ. ರಿಷಬ್ ಪಂತ್ ಮತ್ತು ವೃದ್ಧಿಮಾನ್ ಸಹಾ, ಈ ಇಬ್ಬರಲ್ಲಿ ಯಾರು ಆಡುವ XI ನಲ್ಲಿ ಸ್ಥಾನ ಪಡೆಯುತ್ತಾರೆ ಎಂಬುದು ಕುತೂಹಲಕಾರಿ ಸಂಗತಿಯಾಗಿದೆ. ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರನ್ನು ಈ ಬಗ್ಗೆ ಪ್ರಶ್ನಿಸಲಾಯಿತು. ಆದರೆ, ರಾಹುಲ್ ಇದಕ್ಕೆ ಉತ್ತರಿಸಲು ನಿರಾಕರಿಸಿದರು.

ಪಂತ್ ಮತ್ತು ಸಹಾ ನಡುವೆ ಯಾರನ್ನು ತಂಡದಲ್ಲಿ ಆಯ್ಕೆ ಮಾಡಲಾಗುತ್ತದೆ ಎಂದು ರಾಹುಲ್‌ಗೆ ಕೇಳಿದಾಗ, ನಮ್ಮ ಪ್ಲೇಯಿಂಗ್ XI ಬಗ್ಗೆ ನಾವು ತುಂಬಾ ಸ್ಪಷ್ಟವಾಗಿದ್ದೇವೆ ಆದರೆ ನಾವು ಅದನ್ನು ಬಹಿರಂಗಪಡಿಸುವುದಿಲ್ಲ. ಪಂದ್ಯದ ದಿನದಂದು ನಮ್ಮ ಪ್ಲೇಯಿಂಗ್ XI ಬಗ್ಗೆ ನಿಮಗೆ ತಿಳಿಸುತ್ತೇವೆ. ಆದರೆ ಇಲ್ಲಿ ಹೇಳಲು ಬಯಸುವುದಿಲ್ಲ ಏಕೆಂದರೆ ನನ್ನ ಎದುರಾಳಿ ತಂಡಕ್ಕೆ ನಾನು ಸಮಯ ನೀಡಲು ಸಾಧ್ಯವಿಲ್ಲ. ನಾಳೆ ಬೆಳಿಗ್ಗೆ ಟಾಸ್ ಸಮಯದಲ್ಲಿ ಮಾತ್ರ ನಿಮಗೆ ಅದರ ಬಗ್ಗೆ ತಿಳಿಯುತ್ತದೆ ಎಂದಿದ್ದಾರೆ.

ನಮ್ಮ ಬೌಲಿಂಗ್ ದಾಳಿ ಹೆಚ್ಚು ಅನುಭವಿ: ರಾಹುಲ್
ದಕ್ಷಿಣ ಆಫ್ರಿಕಾ ತಂಡದ ಪ್ರಸ್ತುತ ಬೌಲಿಂಗ್ ದಾಳಿ ಸಾಮಾನ್ಯವಾಗಿದೆ ಎಂದು ರಾಹುಲ್‌ಗೆ ಕೇಳಿದಾಗ? ರಾಹುಲ್ ಅದನ್ನು ಅಲಗಳೆದರು. ಆದರೆ ಟೀಮ್ ಇಂಡಿಯಾದ ವೇಗದ ಬೌಲಿಂಗ್ ದಾಳಿಯು ಈ ಸಮಯದಲ್ಲಿ ಅವರಿಗಿಂತ ಹೆಚ್ಚು ಅನುಭವಿಯಾಗಿದೆ ಎಂದು ಹೇಳಿದರು. ದಕ್ಷಿಣ ಆಫ್ರಿಕಾ ತಂಡದ ಪ್ರಸ್ತುತ ಬೌಲಿಂಗ್ ದಾಳಿ ಸಾಮಾನ್ಯವಲ್ಲ ಎಂದು ನಾನು ಎಲ್ಲಿಯೂ ಯೋಚಿಸುವುದಿಲ್ಲ ಎಂದು ಅವರು ಹೇಳಿದರು. ನಮ್ಮ ವೇಗದ ಬೌಲಿಂಗ್ ದಾಳಿಯು ದಕ್ಷಿಣ ಆಫ್ರಿಕಾಕ್ಕಿಂತ ಹೆಚ್ಚು ಅನುಭವಿ ಎಂದು ನಾನು ಖಂಡಿತವಾಗಿ ಹೇಳುತ್ತೇನೆ. ನಮ್ಮ ಬೌಲರ್‌ಗಳು ಅವರಿಗಿಂತ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ. ಅದು ಮೊದಲು ಇರಲಿಲ್ಲ, ಆದರೆ ಅವರಲ್ಲಿ ಅತ್ಯುತ್ತಮ ಬೌಲರ್‌ಗಳಿದ್ದಾರೆ. ನಾವು ಅವರನ್ನು ಲಘುವಾಗಿ ಪರಿಗಣಿಸುವುದಿಲ್ಲ ಎಂದಿದ್ದಾರೆ.