
ಇಂದು ಇಡೀ ದೇಶವೇ ಸಹೋದರತ್ವದ ಭಾವ ಬೆಸೆಯುವ ರಕ್ಷಾ ಬಂಧನದ ಸಂಭ್ರಮದಲ್ಲಿದೆ. ಈ ಸಂಭ್ರಮಕ್ಕೆ ಕಿಚ್ಚು ಹಚ್ಚುವಂತೆ ಐಪಿಎಲ್ ಫ್ರಾಂಚೈಸಿಗಳು ಕೂಡ ಶುಭಾಶಯ ತಿಳಿಸಿದ್ದಾರೆ. ಹೀಗೆ ಪಂಜಾಬ್ ಕಿಂಗ್ಸ್ ತಂಡ ತಮ್ಮ ಆಟಗಾರರ ಮತ್ತು ಅವರ ಸಹೋದರಿಯರ ಫೋಟೋವನ್ನು ಪ್ರಕಟಿಸಿ ವಿಶೇಷವಾಗಿ ಶುಭಕೋರಿದ್ದಾರೆ.

ಕೆಎಲ್ ರಾಹುಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದು, ನಾಯಕ ಕೆಎಲ್ ರಾಹುಲ್, ಅರ್ಷದೀಪ್ ಸಿಂಗ್, ಹರಪ್ರೀತ್ ಬ್ರಾರ್, ದರ್ಶನ್ ನಲ್ಕಂಡೆ, ಇಶಾನ್ ಪೊರೆಲ್ ರಕ್ಷಾ ಬಂಧನ ಆಚರಿಸುತ್ತಿರುವುದು ಕಾಣಬಹುದು.

ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಮ್ಮ ಸ್ಟಾರ್ ಆಟಗಾರರು ತಮ್ಮ ಸಹೋದರಿಯರಿಗೆ ಶುಭಾಶಯ ಕೋರಲು ಮಾಡಿದ ವೀಡಿಯೊ ಕರೆಗಳ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅರ್ಜುನ್ ತೆಂಡೂಲ್ಕರ್, ಅನ್ಮೋಪ್ರೀತ್ ಸಿಂಗ್, ಯುದ್ವೀರ್ ಸಿಂಗ್, ಆದಿತ್ಯ ತಾರೆ ಕಾಣಿಸಿಕೊಂಡಿದ್ದಾರೆ.

ದೆಹಲಿ ಕ್ಯಾಪಿಟಲ್ಸ್ ತಂಡವು ವಿಭಿನ್ನ ರೀತಿಯಲ್ಲಿ ಶುಭಕೋರಿದೆ. ರಕ್ಷಾ ಬಂಧನದ ಉಡುಗೊರೆ ಏನು ಎಂಬ ಸಹೋದರಿಯರ ಕುತೂಹಲವನ್ನು ಗಿಫ್ಟ್ ರಿವ್ಯೂ ಸಿಸ್ಟಂ ಮೂಲಕ ಬಿಂಬಿಸಿ ಹಾಸ್ಯದೊಂದಿಗೆ ಡೆಲ್ಲಿ ರಕ್ಷಾ ಬಂಧನದ ಶುಭಾಶಯ ತಿಳಿಸಿದ್ದಾರೆ.

ಇನ್ನು ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಅಭಿಮಾನಿಗಳಿಗೆ ಸರಳ ರೀತಿಯಲ್ಲಿ ಶುಭಾಶಯ ಸಲ್ಲಿಸಿದೆ. ನಾಡಿನ ಸಮಸ್ತ ಜನತೆಗೆ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು! ಎಂದು ಆರ್ಸಿಬಿ ಶುಭಕೋರಿದೆ.

ಸನ್ ರೈಸರ್ಸ್ ಹೈದರಾಬಾದ್ ಬಾಲ್ಯವನ್ನು ನೆನಪಿಸುವಂತೆ ರಕ್ಷಾ ಬಂಧನದ ಶುಭಕೋರಿದ್ದಾರೆ. ಈ ಶುಭಾಶಯ ಪೋಸ್ಟ್ನಲ್ಲಿ ಸಹೋದರಿ ಬ್ಯಾಟ್ ಹಿಡಿದು ನಿಂತಿದ್ದರೆ, ಸಹೋದರ ಚೆಂಡನ್ನು ಎಸೆಯುತ್ತಿರುವಂತೆ ಚಿತ್ರಿಸಲಾಗಿದೆ. ಈ ಮೂಲಕ ನೆನಪುಗಳ ರಕ್ಷಾಬಂಧನದ ಶುಭಾಶಯ ತಿಳಿಸಿದ್ದಾರೆ.
Published On - 4:14 pm, Sun, 22 August 21