Ramandeep Singh: 2ನೇ ಬಾರಿ ಒಂದೇ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿದ ರಮಣ್​ದೀಪ್ ಸಿಂಗ್

|

Updated on: Jun 20, 2024 | 9:05 AM

Ramandeep Singh: ಐಪಿಎಲ್​ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಕಣಕ್ಕಿಳಿಯುತ್ತಿರುವ ರಮಣ್​ದೀಪ್ ಸಿಂಗ್ ಒಂದೇ ಓವರ್​ನಲ್ಲಿ 5 ಸಿಕ್ಸ್ ಸಿಡಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ನಡೆದ ಶೇರ್-ಎ-ಪಂಜಾಬ್ ಟಿ20 ಕಪ್‌ನಲ್ಲಿ ಒಂದೇ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಸಂಚಲನ ಸೃಷ್ಟಿಸಿದ್ದರು. ಇದೀಗ ಮತ್ತೊಮ್ಮೆ 5 ಸಿಕ್ಸ್​ಗಳೊಂದಿಗೆ ಅಬ್ಬರಿಸಿದ್ದಾರೆ.

Ramandeep Singh: 2ನೇ ಬಾರಿ ಒಂದೇ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿದ ರಮಣ್​ದೀಪ್ ಸಿಂಗ್
Ramandeep Singh
Follow us on

ಪಂಜಾಬ್​ನಲ್ಲಿ ನಡೆಯುತ್ತಿರುವ ಶೇರ್ ಇ ಪಂಜಾಬ್ ಟಿ20 ಕಪ್​ ಟೂರ್ನಿಯ 20ನೇ ಪಂದ್ಯದಲ್ಲಿ ರಮಣ್​ದೀಪ್ ಸಿಂಗ್ (Ramandeep Singh) ಒಂದೇ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಅಬ್ಬರಿಸಿದ್ದಾರೆ. ಐಎಸ್​ ಬಿಂದ್ರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟ್ರೈಡೆಂಟ್ ಸ್ಟಾಲಿಯನ್ಸ್ ಮತ್ತು ಜೆಕೆ ಸೂಪರ್ ಸ್ಟ್ರೈಕರ್ಸ್ ತಂಡಗಳು ಮುಖಾಮುಖಿಯಾಗಿತ್ತು.

ಮಳೆಬಾಧಿತ ಈ ಪಂದ್ಯದಲ್ಲಿ ಟಾಸ್ ಗೆದ್ದ ಟ್ರೈಡೆಂಟ್ ಸ್ಟಾಲಿಯನ್ಸ್ ತಂಡದ ನಾಯಕ ಪ್ರಭ್​ಸಿಮ್ರಾನ್ ಸಿಂಗ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. 13 ಓವರ್​ಗಳಿಗೆ ಸೀಮಿತವಾಗಿದ್ದ ಈ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸಿದ ಟ್ರೈಡೆಂಟ್ ಸ್ಟಾಲಿಯನ್ಸ್ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು.

ಆರಂಭಿಕ ಮನ್​ಪ್ರೀತ್ ಜೋಹಲ್ (4) ಹಾಗೂ ಪ್ರಭ್​ಸಿಮ್ರಾನ್ ಸಿಂಗ್ (13) ಬೇಗನೆ ನಿರ್ಗಮಿಸಿದರೆ, ಅಭಯ್ ಚೌಧರಿ 23 ರನ್​ಗಳಿಸಲು 33 ಎಸೆತಗಳನ್ನು ತೆಗೆದುಕೊಂಡಿದ್ದರು.

ಇನ್ನು 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಮಣ್​ದೀಪ್ ಸಿಂಗ್ ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್​ಗೆ ಒತ್ತು ನೀಡಿದ್ದರು. ಆದರೆ ಪಂದ್ಯದ 13ನೇ ಓವರ್​ನಲ್ಲಿ ಅಕ್ಷರಶಃ ಅಬ್ಬರಿಸಿದರು.

ಸಾಹಿಲ್ ಖಾನ್ ಎಸೆದ 13ನೇ ಓವರ್​ನ ಮೊದಲ ಎಸೆತದಲ್ಲಿ ರಮಣ್​ದೀಪ್ ಸಿಂಗ್ ಯಾವುದೇ ರನ್ ಕಲೆಹಾಕಿರಲಿಲ್ಲ. ಆದರೆ ಆ ಬಳಿಕ ಮೂರು ಹ್ಯಾಟ್ರಿಕ್ ಸಿಕ್ಸ್ ಸಿಡಿಸಿದರು. ಇದಾದ ಬಳಿಕ ಸಾಹಿಲ್ ಖಾನ್ ಎರಡು ವೈಡ್ ಎಸೆದರು. 5ನೇ ಎಸೆತದಲ್ಲಿ ಮತ್ತೊಂದು ಸಿಕ್ಸ್ ಸಿಡಿಸಿದರು. ಆ ನಂತರ ಮತ್ತೆರಡು ವೈಡ್. ಇನ್ನು ಕೊನೆಯ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ರಮಣ್​ದೀಪ್ ಸಿಂಗ್ 34 ರನ್ ಕಲೆಹಾಕಿದರು.

ರಮಣ್​ದೀಪ್ ಸಿಂಗ್​ರ (46) ಈ ಸ್ಪೋಟಕ ಬ್ಯಾಟಿಂಗ್​ ನೆರವಿನಿಂದ ಟ್ರೈಡೆಂಟ್ ಸ್ಟಾಲಿಯನ್ಸ್ ತಂಡವು 13 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 100 ರನ್ ಕಲೆಹಾಕಿತು.

ಡಕ್​ವರ್ತ್ ಲೂಯಿಸ್ ನಿಯಮದಂತೆ 114 ರನ್​ಗಳ ಗುರಿ ಪಡೆದ ಜೆಕೆ ಸೂಪರ್ ಸ್ಟ್ರೈಕರ್ಸ್ ಪರ ಆರಂಭಿಕ ಆಟಗಾರ ಕಾರ್ತಿಕ್ ಶರ್ಮಾ (58) ಸ್ಪೋಟಕ ಅರ್ಧಶತಕ ಸಿಡಿಸಿದರು. ಇನ್ನು ನಾಯಕ ಸನ್ವೀರ್ ಸಿಂಗ್ 20 ರನ್​ಗಳಿಸುವ ಮೂಲಕ 12.5 ಓವರ್​ಗಳಲ್ಲಿ ತಂಡವನ್ನು ಗುರಿ ಮುಟ್ಟಿಸುವ ಮೂಲಕ 5 ವಿಕೆಟ್​ಗಳ ಜಯ ಸಾಧಿಸಿತು.

ಇದನ್ನೂ ಓದಿ: Virat Kohli-Rohit Sharma: ವಿಶ್ವ ದಾಖಲೆ ಬರೆಯಲು ಕೊಹ್ಲಿ-ರೋಹಿತ್ ನಡುವೆ 4 ರನ್​ಗಳ ಪೈಪೋಟಿ

2ನೇ ಬಾರಿ 5 ಸಿಕ್ಸ್​:

ರಮಣ್​ದೀಪ್ ಸಿಂಗ್ ಒಂದೇ ಓವರ್​ನಲ್ಲಿ 5 ಸಿಕ್ಸ್ ಸಿಡಿಸುತ್ತಿರುವುದು ಇದೇ ಮೊದಲ ಬಾರಿಯಲ್ಲ. ಕಳೆದ ವರ್ಷ ನಡೆದ ಶೇರ್-ಎ-ಪಂಜಾಬ್ ಟಿ20 ಕಪ್‌ನಲ್ಲಿ ಒಂದೇ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಸಂಚಲನ ಸೃಷ್ಟಿಸಿದ್ದರು. ಅಗ್ರಿ ಕಿಂಗ್ ನೈಟ್ಸ್ ಪರ ಕಣಕ್ಕಿಳಿದಿದ್ದ ರಮಣ್​ದೀಪ್ ಸಿಂಗ್  ಆಫ್-ಸ್ಪಿನ್ನರ್ ಕ್ರಿಶನ್ ಅಲಂಗ್ ಎಸೆದ 13ನೇ ಓವರ್​ನ 5 ಎಸೆತಗಳಲ್ಲಿ ಸತತ 5 ಸಿಕ್ಸ್​ಗಳನ್ನು ಬಾರಿಸಿದ್ದರು. ಇದೀಗ ಮತ್ತೊಮ್ಮೆ 5 ಸಿಕ್ಸ್​ಗಳೊಂದಿಗೆ ರಮಣ್​ದೀಪ್ ಸಿಂಗ್ ಅಬ್ಬರಿಸಿದ್ದಾರೆ.