VIDEO: ಸತತ 5 ಸಿಕ್ಸ್ ಸಿಡಿಸಿದ ಮುಂಬೈ ಇಂಡಿಯನ್ಸ್ ಆಟಗಾರ..!
Ramandeep Singh: ಈ ಬಾರಿಯ ಟೂರ್ನಿಯಲ್ಲಿ ಅವರಿಗೆ ಒಂದೇ ಒಂದು ಅವಕಾಶ ಕೂಡ ಸಿಕ್ಕಿರಲಿಲ್ಲ. ಇದೀಗ ದೇಶೀಯ ಅಂಗಳದಲ್ಲಿ ಅಬ್ಬರಿಸುವ ಮೂಲಕ ರಮಣ್ದೀಪ್ ಸಿಂಗ್ ಮುಂಬರುವ ಐಪಿಎಲ್ನಲ್ಲಿ ಅವಕಾಶ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.
ಮೊಹಾಲಿಯಲ್ಲಿ ನಡೆಯುತ್ತಿರುವ ಶೇರ್-ಎ-ಪಂಜಾಬ್ ಟಿ20 ಕಪ್‌ನಲ್ಲಿ ಒಂದೇ ಓವರ್ನಲ್ಲಿ 5 ಸಿಕ್ಸ್ ಸಿಡಿಸುವ ಮೂಲಕ ರಮಣ್ದೀಪ್ ಸಿಂಗ್ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವ ರಮಣ್ದೀಪ್ ಸಿಂಗ್ ಈ ಟೂರ್ನಿಯಲ್ಲಿ ಅಗ್ರಿ ಕಿಂಗ್ ನೈಟ್ಸ್ ಪರ ಕಣಕ್ಕಿಳಿದಿದ್ದರು. ಬುಧವಾರ ನಡೆದ ಈ ಪಂದ್ಯದಲ್ಲಿ BLV ಬ್ಲಾಸ್ಟರ್ಸ್ ಹಾಗೂ ಅಗ್ರಿ ಕಿಂಗ್ ನೈಟ್ಸ್ ತಂಡಗಳು ಮುಖಾಮುಖಿಯಾಗಿತ್ತು. ಮೊದಲು ಬ್ಯಾಟ್ ಮಾಡಿದ ಬಿಎಲ್ವಿ ಬ್ಲಾಸ್ಟರ್ಸ್ ತಂಡವು 20 ಓವರ್‌ಗಳಲ್ಲಿ 194 ರನ್ ಕಲೆಹಾಕಿತು.
ಈ ಬೃಹತ್ ಮೊತ್ತ ಬೆನ್ನತ್ತಿದ ಅಗ್ರಿ ಕಿಂಗ್ ನೈಟ್ಸ್ ಪರ ರಮಣ್ದೀಪ್ ಸಿಂಗ್ ಸ್ಪೋಟಕ ಬ್ಯಾಟಿಂಗ್ ನಡೆಸಿದರು. ಅದರಲ್ಲೂ ಆಫ್-ಸ್ಪಿನ್ನರ್ ಕ್ರಿಶನ್ ಅಲಂಗ್ ಎಸೆದ 13ನೇ ಓವರ್ನ 5 ಎಸೆತಗಳಲ್ಲಿ ಸತತ 5 ಸಿಕ್ಸ್ಗಳನ್ನು ಸಿಡಿಸಿ ಅಬ್ಬರಿಸಿದರು. ಇನ್ನು 6ನೇ ಎಸೆತದಲ್ಲಿ 1 ರನ್ ಕಲೆಹಾಕುವ ಮೂಲಕ ಒಟ್ಟು 31 ರನ್ ಚಚ್ಚಿದರು.
ಈ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ರಮಣ್ದೀಪ್ ಸಿಂಗ್ ಕೇವಲ 28 ಎಸೆತಗಳಲ್ಲಿ 63 ರನ್ ಗಳಿಸಿದರು. ಇದಾಗ್ಯೂ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಅಗ್ರಿ ಕಿಂಗ್ ನೈಟ್ಸ್ ತಂಡವು 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 191 ರನ್ಗಳಿಸಿ 3 ರನ್ಗಳಿಂದ ವಿರೋಚಿತವಾಗಿ ಸೋಲೊಪ್ಪಿಕೊಂಡಿತು.
— IndiaCricket (@IndiaCrick18158) July 20, 2023
ಇನ್ನು ರಮಣ್ದೀಪ್ ಸಿಂಗ್ ಅವರ ಈ ಭರ್ಜರಿ ಬ್ಯಾಟಿಂಗ್ ವಿಡಿಯೋವನ್ನು ಟೀಮ್ ಇಂಡಿಯಾ ಆಟಗಾರ ಸೂರ್ಯಕುಮಾರ್ ಯಾದವ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:IPL 2023: ಐಪಿಎಲ್ನ ಅತ್ಯಂತ ಜನಪ್ರಿಯ ಆಟಗಾರರ ಪಟ್ಟಿ ಪ್ರಕಟ..!
ಮುಂಬೈ ಇಂಡಿಯನ್ಸ್ ಆಟಗಾರ:
ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ 5 ಪಂದ್ಯಗಳನ್ನಾಡಿರುವ ರಮಣ್ದೀಪ್ ಸಿಂಗ್ ಇದುವರೆಗೆ ಮೋಡಿ ಮಾಡುವಲ್ಲಿ ಯಶಸ್ವಿಯಾಗಿಲ್ಲ. ಅಲ್ಲದೆ ಈ ಬಾರಿಯ ಟೂರ್ನಿಯಲ್ಲಿ ಅವರಿಗೆ ಒಂದೇ ಒಂದು ಅವಕಾಶ ಕೂಡ ಸಿಕ್ಕಿರಲಿಲ್ಲ. ಇದೀಗ ದೇಶೀಯ ಅಂಗಳದಲ್ಲಿ ಅಬ್ಬರಿಸುವ ಮೂಲಕ ರಮಣ್ದೀಪ್ ಸಿಂಗ್ ಮುಂಬರುವ ಐಪಿಎಲ್ನಲ್ಲಿ ಅವಕಾಶ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.