Ranji Trophy 2022: ಭರ್ಜರಿ ಜಯದೊಂದಿಗೆ ಪ್ರೀ ಕ್ವಾರ್ಟರ್​ ಫೈನಲ್​ಗೆ ಎಂಟ್ರಿಕೊಟ್ಟ ಕರ್ನಾಟಕ

| Updated By: ಝಾಹಿರ್ ಯೂಸುಫ್

Updated on: Mar 06, 2022 | 2:36 PM

Ranji Trophy 2022: ಪುದುಚೇರಿ ವಿರುದ್ದ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ಪರ ದೇವದತ್ ಪಡಿಕ್ಕಲ್ 178 ರನ್​ ಬಾರಿಸಿದ್ದರು. ಇದಾದ ಬಳಿಕ ನಾಯಕ ಮನೀಷ್ ಪಾಂಡೆ ಕೂಡ ಭರ್ಜರಿ ಶತಕ (107) ಸಿಡಿಸಿದ್ದರು.

Ranji Trophy 2022: ಭರ್ಜರಿ ಜಯದೊಂದಿಗೆ ಪ್ರೀ ಕ್ವಾರ್ಟರ್​ ಫೈನಲ್​ಗೆ ಎಂಟ್ರಿಕೊಟ್ಟ ಕರ್ನಾಟಕ
Ranji Trophy 2022
Follow us on

ರಣಜಿ ಟ್ರೋಫಿಯ 2022ರ (Ranji Trophy 2022) ಸೀಸನ್​ನಲ್ಲಿ ಸತತ ಎರಡು ಜಯ ಸಾಧಿಸುವ ಮೂಲಕ ಕರ್ನಾಟಕ (Karnataka) ತಂಡವು ಪ್ರೀ ಕ್ವಾರ್ಟರ್​ ಫೈನಲ್ ಪ್ರವೇಶಿಸಿದೆ. ಮೊದಲ ಪಂದ್ಯದಲ್ಲಿ ರೈಲ್ವೇಸ್ ವಿರುದ್ದ ಡ್ರಾ ಮಾಡಿಕೊಂಡಿದ್ದ ಕರ್ನಾಟಕ ತಂಡವು ಆ ಬಳಿಕ ಎರಡು ಪಂದ್ಯಗಳನ್ನು ಭರ್ಜರಿಯಾಗಿ ಗೆದ್ದುಕೊಂಡಿತು. ಜಮ್ಮು-ಕಾಶ್ಮೀರ ವಿರುದ್ದ ನಡೆದ ಪಂದ್ಯದಲ್ಲಿ ಕರ್ನಾಟಕ ಪರ ಕರುಣ್ ನಾಯರ್ 175 ರನ್​ ಬಾರಿಸಿ ಮಿಂಚಿದ್ದರು. ಇನ್ನು ಬೌಲಿಂಗ್​ನಲ್ಲಿ ಪ್ರಸಿದ್ಧ್ ಕೃಷ್ಣ ಎರಡು ಇನಿಂಗ್ಸ್ ಮೂಲಕ 10 ವಿಕೆಟ್ ಕಬಳಿಸಿದ್ದರು. ಈ ಮೂಲಕ ಜಮ್ಮು-ಕಾಶ್ಮೀರ ವಿರುದ್ದ ಕರ್ನಾಟಕ ತಂಡವು 117 ರನ್​ಗಳ ಜಯ ಸಾಧಿಸಿತ್ತು.

ಇನ್ನು ಪುದುಚೇರಿ ವಿರುದ್ದ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ಪರ ದೇವದತ್ ಪಡಿಕ್ಕಲ್ 178 ರನ್​ ಬಾರಿಸಿದ್ದರು. ಇದಾದ ಬಳಿಕ ನಾಯಕ ಮನೀಷ್ ಪಾಂಡೆ ಕೂಡ ಭರ್ಜರಿ ಶತಕ (107) ಸಿಡಿಸಿದ್ದರು. ಈ ಮೂಲಕ ಮೊದಲ ಇನಿಂಗ್ಸ್​ನಲ್ಲಿ 8 ವಿಕೆಟ್ ನಷ್ಟಕ್ಕೆ 453 ರನ್​ ಕಲೆಹಾಕಿ ಡಿಕ್ಲೇರ್ ಘೋಷಿಸಿತ್ತು.

ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಪುದುಚೇರಿ ತಂಡವು ಕೃಷ್ಣಪ್ಪ ಗೌತಮ್ ದಾಳಿಗೆ ತತ್ತರಿಸಿತು. ಪರಿಣಾಮ ಮೊದಲ ಇನಿಂಗ್ಸ್​ನಲ್ಲಿ ಕೇವಲ 241 ರನ್​ಗಳಿಗೆ ಆಲೌಟ್ ಆಯಿತು. ಫಾಲೋಆನ್​ ಪಡೆದು 2ನೇ ಇನಿಂಗ್ಸ್​ ಆರಂಭಿಸಿದ ಪುದುಚೇರಿ ತಂಡವು ಈ ಬಾರಿ ಶ್ರೇಯಸ್ ಗೋಪಾಲ್ ಸ್ಪಿನ್ ಮೋಡಿಗೆ ಬಾಗಿತು. ಅದರಂತೆ 2ನೇ ಇನಿಂಗ್ಸ್​ನಲ್ಲಿ 192 ರನ್​ಗೆ ಆಲೌಟ್ ಆಗುವ ಮೂಲಕ ಇನಿಂಗ್ಸ್​ ಹಾಗೂ 20 ರನ್​ಗಳಿಂದ ಸೋಲೋಪ್ಪಿಕೊಂಡಿತು. ಕರ್ನಾಟಕ ಪರ ಕೃಷ್ಣಪ್ಪ ಗೌತಮ್ ಹಾಗೂ ಶ್ರೇಯಸ್ ಗೋಪಾಲ್ 2 ಇನಿಂಗ್ಸ್​​ಗಳಲ್ಲಿ ತಲಾ 5 ವಿಕೆಟ್ ಉರುಳಿಸಿ ಮಿಂಚಿದ್ದರು. ಈ ಎರಡು ಭರ್ಜರಿ ಜಯದೊಂದಿಗೆ ಗ್ರೂಪ್ ಸಿ ನಲ್ಲಿ ಅಗ್ರ ತಂಡವಾಗಿ ಕರ್ನಾಟಕವು ಪ್ರೀ ಕ್ವಾರ್ಟರ್​ ಫೈನಲ್​ಗೆ ಎಂಟ್ರಿ ಕೊಟ್ಟಿದೆ.

ಕರ್ನಾಟಕ ತಂಡ: ರವಿಕುಮಾರ್ ಸಮರ್ಥ್ , ದೇವದತ್ ಪಡಿಕ್ಕಲ್ , ಕರುಣ್ ನಾಯರ್ , ಕೃಷ್ಣಮೂರ್ತಿ ಸಿದ್ಧಾರ್ಥ್ , ಮನೀಶ್ ಪಾಂಡೆ (ನಾಯಕ) , ಶರತ್ ಬಿಆರ್ (ವಿಕೆಟ್ ಕೀಪರ್) , ಶ್ರೇಯಸ್ ಗೋಪಾಲ್ , ಕೃಷ್ಣಪ್ಪ ಗೌತಮ್ , ವಿದ್ಯಾಧರ್ ಪಾಟೀಲ್ , ವಿಧ್ವತ್ ಕಾವೇರಪ್ಪ , ಪ್ರಸಿದ್ಧ್ ಕೃಷ್ಣ, ಮೋನಿತ್ ಮೋರೆ , ಡಿ ನಿಶ್ಚಲ್ , ಕೆ ಸಿ ಕಾರಿಯಪ್ಪ , ಜಗದೀಶ ಸುಚಿತ್ , ವಿಜಯ್ ಕುಮಾರ್ ವೈಶಾಕ್ , ಶ್ರೀನಿವಾಸ್ ಶರತ್ , ಮುರಳೀಧರ ವೆಂಕಟೇಶ್ , ಶುಭಾಂಗ್ ಹೆಗ್ಡೆ , ಅನೀಶ್ವರ್ ಗೌತಮ್

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?

(Ranji Trophy 2022: Karnataka enter quarterfinal)