Ranji Trophy: 23 ವರ್ಷಗಳ ನಂತರ ಮೊದಲ ಬಾರಿಗೆ ರಣಜಿ ಟ್ರೋಫಿ ಫೈನಲ್‌ ಪ್ರವೇಶಿಸಿದ ಮಧ್ಯಪ್ರದೇಶ..!

| Updated By: ಪೃಥ್ವಿಶಂಕರ

Updated on: Jun 18, 2022 | 2:45 PM

Ranji Trophy 2022: ಮಧ್ಯಪ್ರದೇಶ ತಂಡ ರಣಜಿ ಟ್ರೋಫಿಯಲ್ಲಿ ಫೈನಲ್ ತಲುಪಿದೆ. ಸೆಮಿಫೈನಲ್ ಪಂದ್ಯದಲ್ಲಿ ಮಧ್ಯಪ್ರದೇಶ ತಂಡ ಬಂಗಾಳವನ್ನು 174 ರನ್‌ಗಳಿಂದ ಸೋಲಿಸಿ ಇತಿಹಾಸ ನಿರ್ಮಿಸಿದೆ.

Ranji Trophy: 23 ವರ್ಷಗಳ ನಂತರ ಮೊದಲ ಬಾರಿಗೆ ರಣಜಿ ಟ್ರೋಫಿ ಫೈನಲ್‌ ಪ್ರವೇಶಿಸಿದ ಮಧ್ಯಪ್ರದೇಶ..!
ಮಧ್ಯಪ್ರದೇಶ ತಂಡ
Follow us on

ಮಧ್ಯಪ್ರದೇಶ ತಂಡ ರಣಜಿ ಟ್ರೋಫಿ (Ranji Trophy)ಯಲ್ಲಿ ಫೈನಲ್ ತಲುಪಿದೆ. ಸೆಮಿಫೈನಲ್ ಪಂದ್ಯದಲ್ಲಿ ಮಧ್ಯಪ್ರದೇಶ ತಂಡ ಬಂಗಾಳವನ್ನು 174 ರನ್‌ಗಳಿಂದ ಸೋಲಿಸಿ ಇತಿಹಾಸ ನಿರ್ಮಿಸಿದೆ. ಜೊತೆಗೆ ಮಧ್ಯಪ್ರದೇಶ 23 ವರ್ಷಗಳ ನಂತರ ಮೊದಲ ಬಾರಿಗೆ ರಣಜಿ ಟ್ರೋಫಿ ಫೈನಲ್ ತಲುಪಿದೆ. ಮಧ್ಯಪ್ರದೇಶ ಬಂಗಾಳಕ್ಕೆ 350 ರನ್‌ಗಳ ಗುರಿಯನ್ನು ನೀಡಿತ್ತು, ಆದರೆ ಸೆಮಿಫೈನಲ್‌ನ ಕೊನೆಯ ದಿನದಂದು ಬಂಗಾಳ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 175 ರನ್‌ಗಳಿಗೆ ಕುಸಿಯಿತು. ಮೊದಲ ಇನಿಂಗ್ಸ್‌ನಲ್ಲಿ 165 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 21 ರನ್ ಗಳಿಸಿದ ಹಿಮಾಂಶು ಮ್ಯಾಟ್ರಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಮೊದಲು ಬ್ಯಾಟ್ ಮಾಡಿದ ಮಧ್ಯಪ್ರದೇಶ ಮೊದಲ ಇನ್ನಿಂಗ್ಸ್​ನಲ್ಲಿ 341 ರನ್ ಗಳಿಸಿತ್ತು. ಹಿಮಾಂಶು ಹೊರತುಪಡಿಸಿ ಆಕಾಶ್ ರಘುವಂಶಿ 63 ರನ್ ಗಳಿಸಿದ್ದರು. ಇವರಿಬ್ಬರನ್ನು ಬಿಟ್ಟರೆ ಯಾವುದೇ ಬ್ಯಾಟ್ಸ್‌ಮನ್ ರನ್ ಗಳಿಸಲು ಸಾಧ್ಯವಾಗಲಿಲ್ಲ. ಆದರೆ ನಂತರ ಬೌಲರ್‌ಗಳು ಅದ್ಭುತ ಬೌಲಿಂಗ್ ಮಾಡಿ ಬಂಗಾಳದ ಮೊದಲ ಇನ್ನಿಂಗ್ಸ್ ಅನ್ನು 273 ರನ್‌ಗಳಿಗೆ ನಿಲ್ಲಿಸಿದರು. ಕುಮಾರ್ ಕಾರ್ತಿಕೇಯ, ಸರನ್ಶ್ ಜೈನ್ ಮತ್ತು ಪುನೀತ್ ಡೇಟಿ ಎಲ್ಲರೂ ತಲಾ 3 ವಿಕೆಟ್ ಪಡೆದರು.

ಮಧ್ಯಪ್ರದೇಶ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ರಜತ್ ಪಾಟಿದಾರ್ ಅವರ 79 ಮತ್ತು ನಾಯಕ ಆದಿತ್ಯ ಶ್ರೀವಾಸ್ತವ್ ಅವರ 82 ರ ನೆರವಿನಿಂದ 281 ರನ್ ಗಳಿಸಿತು. ಬಂಗಾಳದ ಬೌಲರ್‌ಗಳಾದ ಶಹಬಾಜ್ ಅಹ್ಮದ್ ಮತ್ತು ಪ್ರಮಾಣಿಕ್ ಮಧ್ಯಪ್ರದೇಶಕ್ಕೆ ಅಲ್ಪ ಮುನ್ನಡೆ ಸಾಧಿಸಲು ಅವಕಾಶ ಮಾಡಿಕೊಟ್ಟರು. ಆದರೆ ಬಂಗಾಳದ ಬ್ಯಾಟ್ಸ್‌ಮನ್‌ಗಳು ಅದರ ಲಾಭ ಪಡೆಯಲು ಸಾಧ್ಯವಾಗಲಿಲ್ಲ. ಮತ್ತು ಇಡೀ ತಂಡವನ್ನು 175 ರನ್‌ಗಳಿಗೆ ಆಲ್​ಔಟ್ ಮಾಡಲಾಯಿತು. ಕುಮಾರ್ ಕಾರ್ತಿಕೇಯ 67 ರನ್ ನೀಡಿ 5 ವಿಕೆಟ್ ಕಬಳಿಸಿದರು. ಅದೇ ವೇಳೆ ಗೌರವ್ ಯಾದವ್ 19 ರನ್ ನೀಡಿ 3 ವಿಕೆಟ್ ಪಡೆದರು.

ಇದನ್ನೂ ಓದಿ
ENG vs NED: 498 ರನ್, 3 ಶತಕ, 26 ಸಿಕ್ಸರ್! ನೆದರ್ಲೆಂಡ್ಸ್ ವಿರುದ್ಧ ಇಂಗ್ಲೆಂಡ್ ನಿರ್ಮಿಸಿದ 5 ವಿಶ್ವ ದಾಖಲೆಗಳಿವು
IND vs SA: ಸಿಂಗಲ್​ಗೆ ಒಲ್ಲೆ ಎಂದ ಪಾಂಡ್ಯ; 26 ಎಸೆತಗಳಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿ ಉತ್ತರ ಕೊಟ್ಟ ಕಾರ್ತಿಕ್

ಇದನ್ನೂ ಓದಿ:Ranji Trophy: ಮೊದಲು ಶತಕ.. ಈಗ 5 ವಿಕೆಟ್! ರಣಜಿ ಸೆಮಿಫೈನಲ್​ನಲ್ಲಿ ಅಬ್ಬರಿಸಿದ ಆರ್​ಸಿಬಿ ಆಟಗಾರ

ಕ್ರೀಡಾ ಸಚಿವರ ಪ್ರಯತ್ನ ನೀರು ಪಾಲು

ಬಂಗಾಳದ ಕ್ರೀಡಾ ಸಚಿವ ಮನೋಜ್ ತಿವಾರಿ ತಂಡವನ್ನು ಉಳಿಸಲು ಸಾಕಷ್ಟು ಪ್ರಯತ್ನಿಸಿದರು. ಆದರೆ ಉಳಿದ ಬ್ಯಾಟ್ಸ್‌ಮನ್‌ಗಳ ಫ್ಲಾಪ್ ಶೋನಿಂದ, ಅವರ ಪ್ರಯತ್ನವೂ ವಿಫಲವಾಯಿತು. ಬಂಗಾಳದ ಮೊದಲ ಇನಿಂಗ್ಸ್‌ನಲ್ಲಿ ತಂಡ 44 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದಾಗ, ಅಂತಹ ಸಮಯದಲ್ಲಿ ಮನೋಜ್ ತಿವಾರಿ 102 ರನ್‌ಗಳ ಇನಿಂಗ್ಸ್‌ನಲ್ಲಿ ಶಹಬಾಜ್ ಅಹ್ಮದ್ ಜೊತೆಗೂಡಿ ದೊಡ್ಡ ಜೊತೆಯಾಟ ನೀಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಲು ಪ್ರಯತ್ನಿಸಿದರು. ಅಹ್ಮದ್ 116 ರನ್ ಗಳಿಸಿದ್ದರು. ಇವರಲ್ಲದೆ ನಾಯಕ ಅಭಿಮನ್ಯು 22 ರನ್ ಗಳಿಸಿದರು. ಈ ಮೂವರನ್ನು ಹೊರತುಪಡಿಸಿ ಯಾವುದೇ ಬ್ಯಾಟ್ಸ್‌ಮನ್ ಎರಡಂಕಿ ತಲುಪಲು ಸಾಧ್ಯವಾಗಲಿಲ್ಲ. 350 ರನ್‌ಗಳ ಗುರಿಗೆ ಉತ್ತರವಾಗಿ ಬಂಗಾಳದ ನಾಯಕ ಮಾತ್ರ ಬ್ಯಾಟ್ ಬೀಸಿ 78 ರನ್ ಗಳಿಸಿದರು. ಆದರೆ ಅವರಿಗೆ ಉಳಿದ ಬ್ಯಾಟ್ಸ್‌ಮನ್‌ಗಳ ಬೆಂಬಲ ಸಿಗಲಿಲ್ಲ.

Published On - 2:09 pm, Sat, 18 June 22