AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ranji Trophy 2024: ರಣಜಿಯಲ್ಲಿ ಸತತ 2ನೇ ಶತಕ ಸಿಡಿಸಿದ ರಿಯಾನ್ ಪರಾಗ್..!

Ranji Trophy 2024: ಕೇರಳ ಹಾಗೂ ಅಸ್ಸಾಂ ನಡುವೆ ಗುವಾಹಟಿಯಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯ ಎರಡನೇ ಪಂದ್ಯದಲ್ಲಿ ಅಸ್ಸಾಂ ತಂಡದ ನಾಯಕ ರಿಯಾನ್ ಪರಾಗ್ ಈ ಸೀಸನ್​ನ ಸತತ ಎರಡನೇ ಶತಕ ದಾಖಲಿಸಿದ್ದಾರೆ. ರಿಯಾನ್ ತಮ್ಮ ಇನ್ನಿಂಗ್ಸ್‌ನಲ್ಲಿ 125 ಎಸೆತಗಳನ್ನು ಎದುರಿಸಿ 3 ಸಿಕ್ಸರ್ ಮತ್ತು 16 ಬೌಂಡರಿಗಳ ಸಹಾಯದಿಂದ 116 ರನ್ ಸಿಡಿಸಿದರು.

Ranji Trophy 2024: ರಣಜಿಯಲ್ಲಿ ಸತತ 2ನೇ ಶತಕ ಸಿಡಿಸಿದ ರಿಯಾನ್ ಪರಾಗ್..!
ರಿಯಾನ್ ಪರಾಗ್
ಪೃಥ್ವಿಶಂಕರ
|

Updated on: Jan 14, 2024 | 5:39 PM

Share

ಕೇರಳ ಹಾಗೂ ಅಸ್ಸಾಂ (Kerala vs Assam) ನಡುವೆ ಗುವಾಹಟಿಯಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯ ಎರಡನೇ ಪಂದ್ಯದಲ್ಲಿ ಅಸ್ಸಾಂ ತಂಡದ ನಾಯಕ ರಿಯಾನ್ ಪರಾಗ್ (Riyan Parag) ಈ ಸೀಸನ್​ನ ಸತತ ಎರಡನೇ ಶತಕ ದಾಖಲಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲ ಇನ್ನಿಂಗ್ಸ್ ಆರಂಭಿಸಿದ ಕೇರಳ ತಂಡ ಸಚಿನ್ ಬೇಬಿ (Sachin Baby) ಅವರ ಶತಕದ ಆಧಾರದ ಮೇಲೆ 419 ರನ್​ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದೆ. ಇನ್ನು ಮೊದಲ ಇನ್ನಿಂಗ್ಸ್ ಆರಂಭಿಸಿರುವ ಅಸ್ಸಾಂ ತಂಡ ಮೂರನೇ ದಿನದಾಟದಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 231 ರನ್ ಕಲೆಹಾಕಿದೆ. ಇದರೊಂದಿಗೆ ಮೊದಲ ಇನ್ನಿಂಗ್ಸ್​ನಲ್ಲಿ ಇನ್ನು 188 ರನ್​ಗಳ ಹಿನ್ನಡೆಯಲ್ಲಿದೆ.

ಕೇರಳಕ್ಕೆ ಅದ್ಭುತ ಆರಂಭ

ಮೊದಲ ಇನ್ನಿಂಗ್ಸ್​ನಲ್ಲಿ ಕೇರಳ ತಂಡಕ್ಕೆ ಅದ್ಭುತ ಆರಂಭ ಸಿಕ್ಕಿತು. ಆರಂಭಿಕರಾದ ರೋಹನ್ ಕುನ್ನುಮ್ಮಲ್ (83 ರನ್) ಕೃಷ್ಣ ಪ್ರಸಾದ್ (80 ರನ್) ಮೊದಲ ವಿಕೆಟ್​ಗೆ 133 ರನ್​ಗಳ ಜೊತೆಯಾಟ ನೀಡಿದರು. ಹಾಗೆಯೇ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ರೋಹನ್ ಪ್ರೇಮ್ ಕೂಡ 50 ರನ್​ಗಳ ಕೊಡುಗೆ ನೀಡಿದರು. ಆ ಬಳಿಕ ಅಖಾಡಕ್ಕಿಳಿದ ಸಚಿನ್ ಬೇಬಿ ಅಮೋಘ ಶತಕ ಸಿಡಿಸಿ ಮಿಂಚಿದರು. ಈ ನಾಲ್ವರ ಆಟದಿಂದಾಗಿ ಕೇರಳ ತಂಡ 419 ರನ್​ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿತು.

Ranji Trophy: ರಣಜಿಯಲ್ಲಿ ಗೆಲುವಿನ ಶುಭಾರಂಭ ಮಾಡಿದ ಕರ್ನಾಟಕ; ಪಂಜಾಬ್​ಗೆ ಹೀನಾಯ ಸೋಲು

ಸಚಿನ್ ಬೇಬಿ ಶತಕ

ಆರಂಭಿಕರು ನೀಡಿದ ಭದ್ರ ಅಡಿಪಾಯದ ಲಾಭ ಪಡೆದ ಸಚಿನ್ ಬೇಬಿ ಅಸ್ಸಾಂ ಬೌಲರ್​ಗಳ ಬೆವರಿಳಿಸಿದರು. ತಮ್ಮ ಇನ್ನಿಂಗ್ಸ್​ನಲ್ಲಿ 148 ಎಸೆತಗಳನ್ನು ಎದುರಿಸಿದ ಸಚಿನ್ 5 ಸಿಕ್ಸರ್ ಮತ್ತು 16 ಬೌಂಡರಿಗಳ ಸಹಾಯದಿಂದ131 ರನ್ ಗಳಿಸಿದರು. ಹಾಗೆಯೇ ನಾಯಕ ಕುನ್ನುಮ್ಮಲ್ 95 ಎಸೆತಗಳಲ್ಲಿ 83 ರನ್ ಗಳಿಸಿದರೆ, ಕೃಷ್ಣ ಪ್ರಸಾದ್ 80 ರನ್ ಗಳಿಸಿದರು.

ಪರಾಗ್ ಏಕಾಂಗಿ ಹೋರಾಟ

ಇನ್ನು ಕೇರಳ ನೀಡಿದ ಬೃಹತ್ ಮೊತ್ತದ ಬೆನ್ನಟ್ಟಿದ ಅಸ್ಸಾಂ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. 13 ರನ್​ಗಳಿಗೆ ತಂಡ ಮೊದಲ ವಿಕೆಟ್ ಕಳೆದುಕೊಂಡಿತು. ಹಾಗೆಯೇ ಮೊದಲ ನಾಲ್ವರು ಬ್ಯಾಟರ್​ಗಳಿಗೆ ಬಿಗ್ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಹೀಗಾಗಿ ತಂಡ 25 ರನ್​ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆ ಬಳಿಕ ಆರಂಭಿಕ ರಿಶವ್ ಜೊತೆಯಾದ ಪರಾಗ್ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು. ಅಲ್ಲದೆ ತಮ್ಮ ಅರ್ಧಶತಕವನ್ನೂ ಪೂರೈಸಿದರು. ಆದರೆ ಈ ಜೊತೆಯಾಟ ಮುರಿದ ಬಳಿಕ ತಂಡದ ಮತ್ತ್ಯಾವ ಬ್ಯಾಟರ್​ನಿಂದದೂ ಹೇಳಿಕೊಳ್ಳುವಂತಹ ಪ್ರದರ್ಶನ ಹೊರಬರಲಿಲ್ಲ. ಹೀಗಾಗಿ ತಂಡ 231 ರನ್​ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಸತತ ಎರಡನೇ ಶತಕ ಸಿಡಿಸಿದ ಪರಾಗ್

ರಣಜಿ ಟ್ರೋಫಿಯ ಈ ಸೀಸನ್​ನಲ್ಲಿ ಪರಾಗ್ ಅದ್ಭುತ ಪಾರ್ಮ್​ನಲ್ಲಿದ್ದಾರೆ. ಛತ್ತೀಸ್‌ಗಢ ವಿರುದ್ಧದ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 8 ರನ್ ಗಳಿಸಿದ್ದ ಪರಾಗ್, ಎರಡನೇ ಇನ್ನಿಂಗ್ಸ್‌ನಲ್ಲಿ 155 ರನ್‌ಗಳ ಪ್ರಬಲ ಇನ್ನಿಂಗ್ಸ್ ಆಡಿದ್ದರು. ಈಗ ಕೇರಳ ವಿರುದ್ಧದ ಎರಡನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 116 ರನ್​ಗಳ ಅವಶ್ಯಕ ಇನ್ನಿಂಗ್ಸ್ ಆಡಿದ್ದಾರೆ. ಈ ಮೂಲಕ ಈ ಸೀಸನ್​ನಲ್ಲಿ ಸತತ ಎರಡನೇ ಶತಕ ದಾಖಲಿಸಿದ್ದಾರೆ. ರಿಯಾನ್ ತಮ್ಮ ಇನ್ನಿಂಗ್ಸ್‌ನಲ್ಲಿ 125 ಎಸೆತಗಳನ್ನು ಎದುರಿಸಿ 3 ಅದ್ಭುತ ಸಿಕ್ಸರ್ ಮತ್ತು 16 ಬೌಂಡರಿಗಳನ್ನು ಬಾರಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ