IND vs AFG 2nd T20I Highlights: ಭಾರತಕ್ಕೆ 6 ವಿಕೆಟ್ಗಳ ಭರ್ಜರಿ ಜಯ
India vs AFG 2nd T20I Highlights in Kannada:ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡ ಅಫ್ಘಾನಿಸ್ತಾನವನ್ನು ಆರು ವಿಕೆಟ್‌ಗಳಿಂದ ಸೋಲಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 2-0 ಮುನ್ನಡೆ ಸಾಧಿಸಿದೆ. ಅಫ್ಘಾನಿಸ್ತಾನ ನೀಡಿದ್ದ 173 ರನ್ ಗುರಿಯನ್ನು ಟೀಂ ಇಂಡಿಯಾ 14.3 ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಸಾಧಿಸಿತು.
ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಆತಿಥೇಯ ಭಾರತ, ಅಫ್ಘಾನಿಸ್ತಾನವನ್ನು 6 ವಿಕೆಟ್‌ಗಳಿಂದ ಮಣಿಸಿದೆ. ಇದೀಗ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿರುವ ಟೀಂ ಇಂಡಿಯಾ ಈ ಗೆಲುವಿನೊಂದಿಗೆ ಸರಣಿಯನ್ನೂ ಗೆದ್ದುಕೊಂಡಿದೆ. ಈ ಪಂದ್ಯದಲ್ಲಿ ಯುವ ಆಟಗಾರರಾದ ಶಿವಂ ದುಬೆ ಮತ್ತು ಯಶಸ್ವಿ ಜೈಸ್ವಾಲ್ ಟೀಂ ಇಂಡಿಯಾದ ಗೆಲುವಿನ ಹೀರೋ ಎನಿಸಿಕೊಂಡರು. ಇಬ್ಬರೂ ಆಟಗಾರರು ಅಫ್ಘಾನಿಸ್ತಾನ ಬೌಲರ್‌ಗಳನ್ನು ದಂಡಿಸಿ ಕೇವಲ 14.3 ಓವರ್‌ಗಳಲ್ಲಿ ತಂಡವನ್ನು ಗೆಲುವಿನ ದಡ ಸೇರುವಂತೆ ಮಾಡಿದರು.
LIVE NEWS & UPDATES
-
ಭಾರತಕ್ಕೆ ಗೆಲುವು
ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡ ಅಫ್ಘಾನಿಸ್ತಾನವನ್ನು ಆರು ವಿಕೆಟ್‌ಗಳಿಂದ ಸೋಲಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 2-0 ಮುನ್ನಡೆ ಸಾಧಿಸಿದೆ. ಅಫ್ಘಾನಿಸ್ತಾನ ನೀಡಿದ್ದ 173 ರನ್ ಗುರಿಯನ್ನು ಟೀಂ ಇಂಡಿಯಾ 14.3 ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಸಾಧಿಸಿತು.
-
ಜಿತೇಶ್ ಶರ್ಮಾ ಔಟ್
13ನೇ ಓವರ್‌ನ ಕೊನೆಯ ಎಸೆತದಲ್ಲಿ ಜಿತೇಶ್ ಶರ್ಮಾ ಔಟಾದರು. ಕರೀಮ್ ಎಸೆತವನ್ನು ಮಿಡ್ ಆಫ್ ಮೇಲೆ ಹೊಡೆಯಲು ಪ್ರಯತ್ನಿಸಿ ಮೊಹಮ್ಮದ್ ನಬಿಗೆ ಕ್ಯಾಚಿತ್ತು ಜಿತೇಶ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.
-
ಜೈಸ್ವಾಲ್ ಔಟ್
ಯಶಸ್ವಿ ಜೈಸ್ವಾಲ್ ಔಟ್ ಆಗಿದ್ದಾರೆ. 13ನೇ ಓವರ್‌ನ ಎರಡನೇ ಎಸೆತದಲ್ಲಿ ಕರೀಂ ಜನತ್ ಅವರ ಬೌಲಿಂಗ್ನಲ್ಲಿ ಜೈಸ್ವಾಲ್ ಕೀಪರ್ ಕೈಗೆ ಕ್ಯಾಚ್ ನೀಡಿದರು. ಇದರೊಂದಿಗೆ ಭಾರತದ ಮೂರನೇ ವಿಕೆಟ್ ಪತನವಾಯಿತು.
ದುಬೆ ಅರ್ಧಶತಕ
ದುಬೆ ಕೇವಲ 22 ಎಸೆತಗಳಲ್ಲಿ 50 ರನ್ ಪೂರೈಸಿದರು. ನವೀನ್ ಎಸೆದ 12ನೇ ಓವರ್‌ನ ಕೊನೆಯ ಎಸೆತದಲ್ಲಿ ದುಬೆ ಒಂದು ರನ್ ಗಳಿಸುವ ಮೂಲಕ ಅರ್ಧಶತಕ ಪೂರೈಸಿದರು.
ಭಾರತದ ಶತಕ ಪೂರ್ಣ
ಟೀಂ ಇಂಡಿಯಾ ಕೇವಲ 10 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 112 ರನ್ ಕಲೆಹಾಕಿದೆ. ಇದರಲ್ಲಿ ಜೈಸ್ವಾಲ್ ಅರ್ಧಶತಕ ಸಿಡಿಸಿ ಆಡುತ್ತಿದ್ದರೆ, ದುಬೆ 32 ರನ್ ಸಿಡಿಸಿ ಬ್ಯಾಟಿಂಗ್ನಲ್ಲಿದ್ದಾರೆ.
ಅರ್ಧಶತಕ ಸಿಡಿಸಿದ ಜೈಸ್ವಾಲ್
ಟೀಂ ಇಂಡಿಯಾದ ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅಫ್ಘಾನಿಸ್ತಾನದ ವಿರುದ್ಧ ಕೇವಲ 27 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದ್ದಾರೆ.
ಕೊಹ್ಲಿ ಔಟ್
ವಿರಾಟ್ ಕೊಹ್ಲಿ ಔಟಾಗಿದ್ದಾರೆ. ಇದರೊಂದಿಗೆ ಭಾರತಕ್ಕೆ ಎರಡನೇ ಹೊಡೆತ ಬಿದ್ದಿದೆ. ಆರನೇ ಓವರ್‌ನ ಮೂರನೇ ಎಸೆತದಲ್ಲಿ ನವೀನ್ ಅವರನ್ನು ಔಟ್ ಮಾಡಿದರು. ನವೀನ್ ಅವರ ಚೆಂಡನ್ನು ಮಿಡ್ ಆಫ್ ಮೇಲೆ ಹೊಡೆಯಲು ಕೊಹ್ಲಿ ಪ್ರಯತ್ನಿಸಿ, ಇಬ್ರಾಹಿಂ ಜದ್ರಾನ್ಗೆ ಕ್ಯಾಚ್ ನೀಡಿದರು.
ರೋಹಿತ್ ಶೂನ್ಯಕ್ಕೆ ಔಟ್
ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ರನೌಟ್ ಆಗಿದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಎರಡನೇ ಪಂದ್ಯದಲ್ಲಿ ಶೂನ್ಯಕ್ಕೆ ಕ್ಲೀನ್ ಬೌಲ್ಡ್ ಆಗಿದ್ದಾರೆ.
ಭಾರತದ ಇನ್ನಿಂಗ್ಸ್ ಆರಂಭ
ಭಾರತದ ಇನ್ನಿಂಗ್ಸ್ ಆರಂಭವಾಗಿದೆ. ಯಶಸ್ವಿ ಜೈಸ್ವಾಲ್ ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸಲು ಬಂದಿದ್ದಾರೆ. ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿದರು.
ಭಾರತಕ್ಕೆ 173 ರನ್ ಟಾರ್ಗೆಟ್
ಅಫ್ಘಾನಿಸ್ತಾನ ತಂಡ ಭಾರತಕ್ಕೆ 173 ರನ್ ಟಾರ್ಗೆಟ್ ನೀಡಿದೆ.
ನೂರ್ ಅಹಮದ್ ಔಟ್
20ನೇ ಓವರ್‌ನ ಐದನೇ ಎಸೆತದಲ್ಲಿ ಅರ್ಷದೀಪ್ ಸಿಂಗ್ ನೂರ್ ಅಹ್ಮದ್ ಅವರನ್ನು ಔಟ್ ಮಾಡಿದರು. ವಿರಾಟ್ ಕೊಹ್ಲಿ ಅವರಿಗೆ ಡೀಪ್ ಮಿಡ್ ವಿಕೆಟ್‌ನಲ್ಲಿ ಕ್ಯಾಚ್ ನೀಡಿದರು.
ಜನತ್ ಔಟ್
ಅಫ್ಘಾನಿಸ್ತಾನಕ್ಕೆ ಮತ್ತೊಂದು ಹೊಡೆತ ಬಿದ್ದಿದೆ. 20ನೇ ಓವರ್‌ನ ಮೊದಲ ಎಸೆತದಲ್ಲಿ ಕರಿನ್ ಜನತ್ ಅವರನ್ನು ಅರ್ಷದೀಪ್ ಔಟ್ ಮಾಡಿದರು.
6ನೇ ವಿಕೆಟ್ ಪತನ
ಅಫ್ಘಾನಿಸ್ತಾನಕ್ಕೆ ಆರನೇ ಹೊಡೆತ ಬಿದ್ದಿದೆ. ಭಾರತದ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅಫ್ಘಾನಿಸ್ತಾನದ ಸ್ಫೋಟಕ ಬ್ಯಾಟ್ಸ್‌ಮನ್ ನಜಿಬುಲ್ಲಾ ಜರ್ದಾನ್ ಅವರನ್ನು ಬೌಲ್ಡ್ ಮಾಡಿದ್ದಾರೆ. ಜರ್ದಾನ್ 21 ಎಸೆತಗಳಲ್ಲಿ 23 ರನ್‌ಗಳ ಇನ್ನಿಂಗ್ಸ್ ಆಡಿದ್ದಾರೆ.
ನಬಿ ಔಟ್
ಮೊಹಮ್ಮದ್ ನಬಿ ಔಟಾಗಿದ್ದಾರೆ. 15ನೇ ಓವರ್‌ನ ಎರಡನೇ ಎಸೆತದಲ್ಲಿ ರವಿ ಬಿಷ್ಣೋಯ್ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು. ನಬಿ ದೊಡ್ಡ ಹೊಡೆತವನ್ನು ಆಡಲು ಪ್ರಯತ್ನಿಸಿದರು ಆದರೆ ರಿಂಕು ಸಿಂಗ್ ಲಾಂಗ್ ಆಫ್‌ನಲ್ಲಿ ಬೌಂಡರಿ ಬಳಿ ಉತ್ತಮ ಕ್ಯಾಚ್ ಪಡೆದರು.
ಗುಲ್ಬದಿನ್ ಔಟ್
ಅಫ್ಘಾನಿಸ್ತಾನ ಪ್ರಮುಖ ವಿಕೆಟ್ ಕಳೆದುಕೊಂಡಿದೆ. ಅಕ್ಷರ್ ಪಟೇಲ್ ಬಾಲ್‌ನಲ್ಲಿ ಅರ್ಧಶತಕ ಸಿಡಿಸಿದ್ದ ಗುಲ್ಬ್ದಿನ್ ಕ್ಯಾಚಿತ್ತು ಔಟಾಗಿದ್ದಾರೆ.
ಗುಲ್ಬದಿನ್ ನೈಬ್ ಅರ್ಧಶತಕ
ಅಫ್ಘಾನಿಸ್ತಾನದ ಆಟಗಾರ ಗುಲ್ಬದಿನ್ ನೈಬ್ ಅರ್ಧಶತಕ ಗಳಿಸಿದ್ದಾರೆ. ಕೇವಲ 28 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದಾರೆ.
ದುಬೆಗೆ ಮೊದಲ ವಿಕೆಟ್
ಭಾರತದ ಆಲ್ ರೌಂಡರ್ ಆಟಗಾರ ಶಿವಂ ದುಬೆ ಅಫ್ಘಾನಿಸ್ತಾನಕ್ಕೆ ಮೂರನೇ ಹೊಡೆತ ನೀಡಿದ್ದಾರೆ. ದುಬೆ ಬೌಲಿಂಗ್ನಲ್ಲಿ ಒಮರ್ಜಾಯ್ ಬೌಲ್ಡ್ ಆಗಿದ್ದಾರೆ.
7 ಓವರ್‌ಗಳ ನಂತರ ಅಫ್ಘಾನಿಸ್ತಾನದ ಸ್ಕೋರ್ 60/3
2ನೇ ವಿಕೆಟ್ ಪತನ
ಅಫ್ಘಾನಿಸ್ತಾನಕ್ಕೆ ಎರಡನೇ ಹೊಡೆತ ಬಿದ್ದಿದೆ. 53 ರನ್ ಗಳಿಸಿದ್ದಾಗ ಅಫ್ಘಾನಿಸ್ತಾನದ ಎರಡನೇ ವಿಕೆಟ್ ಪತನವಾಗಿದೆ. ಈ ಪಂದ್ಯದಲ್ಲಿ ಸ್ಪಿನ್ ಬೌಲರ್ಗಳ ಪ್ರಾಬಲ್ಯ ಎದ್ದು ಕಾಣುತ್ತಿದೆ. ರವಿ ವಿಷ್ಣೋಯ್ ಮೊದಲ ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ ಎರಡನೇ ವಿಕೆಟ್ ಪಡೆದರು.
50 ರನ್ ಪೂರ್ಣ
ಅಫ್ಘಾನಿಸ್ತಾನ 5 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 50 ರನ್ ಗಳಿಸಿದೆ.
ಗುರ್ಬಾಝ್ ಔಟ್
ಅಫ್ಘಾನಿಸ್ತಾನ ತಂಡದ ಮೊದಲ ವಿಕೆಟ್ ಪತನವಾಗಿದೆ. ನಾಯಕ ಗುರ್ಬಾಝ್ ಮೂರನೇ ಓವರ್‌ನ ಮೊದಲ ಎಸೆತದಲ್ಲಿ ದುಬೆಗೆ ಕ್ಯಾಚಿತ್ತು ಔಟಾದರು.
ಅಫ್ಘಾನ್- 20/1
ಅಫ್ಘಾನಿಸ್ತಾನದ ಬ್ಯಾಟಿಂಗ್ ಆರಂಭ
ಅಫ್ಘಾನಿಸ್ತಾನದ ಬ್ಯಾಟಿಂಗ್ ಶುರುವಾಗಿದೆ. ಆರಂಭಿಕ ಜೋಡಿ ಇಬ್ರಾಹಿಂ ಝದ್ರಾನ್ ಮತ್ತು ರಹಮಾನುಲ್ಲಾ ಗುರ್ಬಾಜ್ ಕ್ರೀಸ್ ಪ್ರವೇಶಿಸಿದ್ದಾರೆ. ಭಾರತದ ಪರ ವೇಗಿ ಅರ್ಷದೀಪ್ ಸಿಂಗ್ ಮೊದಲ ಓವರ್ ಬೌಲಿಂಗ್ ಮಾಡಿ 9 ರನ್ ನೀಡಿದರು.
ತಂಡದಲ್ಲಿ 2 ಬದಲಾವಣೆ
ಅಫ್ಘಾನಿಸ್ತಾನ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡ 2 ಬದಲಾವಣೆ ಮಾಡಿದೆ. ಭಾರತದ ಸ್ಫೋಟಕ ಆಟಗಾರರಾದ ಶುಭ್‌ಮನ್ ಗಿಲ್ ಮತ್ತು ತಿಲಕ್ ವರ್ಮಾ ಅವರನ್ನು ತಂಡದಿಂದ ಕೈಬಿಡಲಾಗಿದೆ. ಅವರ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಮತ್ತು ಯಶಸ್ವಿ ಜೈಸ್ವಾಲ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.
ಅಫ್ಘಾನಿಸ್ತಾನ ತಂಡ
ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಝದ್ರಾನ್ (ನಾಯಕ), ಅಜ್ಮತುಲ್ಲಾ ಉಮರ್ಜಾಯ್, ಮೊಹಮ್ಮದ್ ನಬಿ, ನಜಿಬುಲ್ಲಾ ಝದ್ರಾನ್, ಕರೀಂ ಜನತ್, ಗುಲ್ಬದಿನ್ ನೈಬ್, ನೂರ್ ಅಹ್ಮದ್, ಫಜಲ್ಹಕ್ ಫಾರೂಕಿ, ನವೀನ್-ಉಲ್-ಹಕೀಬ್.
ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶಿವಂ ದುಬೆ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರಿಂಕು ಸಿಂಗ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್.
ಟಾಸ್ ಗೆದ್ದ ಭಾರತ
ಅಫ್ಘಾನಿಸ್ತಾನ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ ಟಾಸ್ ಗೆದ್ದಿದೆ. ಭಾರತ ತಂಡ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ.
ಟಾಸ್ ಯಾವಾಗ?
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಎರಡನೇ ಟಿ20 ಪಂದ್ಯದ ಟಾಸ್ ಸಂಜೆ 6:30ಕ್ಕೆ ನಿಗದಿಯಾಗಿದೆ.
Published On - Jan 14,2024 6:22 PM