Ranji Trophy: 21 ರನ್​ಗಳಿಗೆ 6 ವಿಕೆಟ್; ಶಾರ್ದೂಲ್ ಸುನಾಮಿಗೆ ತತ್ತರಿಸಿದ ಅಸ್ಸಾಂ..!

Ranji Trophy 2024: ಭಾರತ ತಂಡದಿಂದ ಹೊರಗುಳಿದಿರುವ ವೇಗದ ಬೌಲರ್ ಶಾರ್ದೂಲ್ ಠಾಕೂರ್ ಮುಂಬೈನ ಶರದ್ ಪವಾರ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆಯುತ್ತಿರುವ ಅಸ್ಸಾಂ ವಿರುದ್ಧದ ರಣಜಿ ಪಂದ್ಯದಲ್ಲಿ ಕೇವಲ 21 ರನ್ ನೀಡಿ 6 ವಿಕೆಟ್ ಪಡೆದಿದ್ದಾರೆ. ಶಾರ್ದಲ್ ದಾಳಿಗೆ ತತ್ತರಿಸಿದ ಅಸ್ಸಾಂನ ಮೊದಲ ಇನ್ನಿಂಗ್ಸ್ ಕೇವಲ 84 ರನ್‌ಗಳಿಗೆ ಕುಸಿದಿದೆ.

Ranji Trophy: 21 ರನ್​ಗಳಿಗೆ 6 ವಿಕೆಟ್; ಶಾರ್ದೂಲ್ ಸುನಾಮಿಗೆ ತತ್ತರಿಸಿದ ಅಸ್ಸಾಂ..!
ಶಾರ್ದೂಲ್ ಠಾಕೂರ್
Follow us
ಪೃಥ್ವಿಶಂಕರ
|

Updated on:Feb 16, 2024 | 8:00 PM

ಭಾರತ ತಂಡದಿಂದ ಹೊರಗುಳಿದಿರುವ ಶಾರ್ದೂಲ್ ಠಾಕೂರ್ (Shardul Thakur) ಪ್ರಸ್ತುತ 2024 ರ ರಣಜಿ ಟ್ರೋಫಿಯಲ್ಲಿ (Ranji Trophy 2024) ಸದ್ದು ಮಾಡುತ್ತಿದ್ದಾರೆ. ಮುಂಬೈ ಪರ ಆಡುತ್ತಿರುವ ಶಾರ್ದೂಲ್ ಠಾಕೂರ್ ಅಸ್ಸಾಂ ವಿರುದ್ಧ (Assam vs Mumbai) ನಡೆಯುತ್ತಿರುವ ಪಂದ್ಯದಲ್ಲಿ 10 ಓವರ್‌ ಬೌಲ್ ಮಾಡಿ ಕೇವಲ 21 ರನ್ ನೀಡಿ ಬರೋಬ್ಬರಿ 6 ವಿಕೆಟ್ ಪಡೆದರು. ಶಾರ್ದೂಲ್ ಅವರ ಈ ಮಾರಕ ಬೌಲಿಂಗ್ ಮುಂದೆ ಅಸ್ಸಾಂನ ಆರು ಬ್ಯಾಟ್ಸ್‌ಮನ್‌ಗಳು ಎರಡಂಕಿ ದಾಟಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಅಸ್ಸಾಂನ ಮೊದಲ ಇನಿಂಗ್ಸ್ ಕೇವಲ 84 ರನ್‌ಗಳಿಗೆ ಕುಸಿಯಿತು.

21 ರನ್ ನೀಡಿ 6 ವಿಕೆಟ್

ಮೊದಲ ಇನ್ನಿಂಗ್ಸ್​ನಲ್ಲಿ ಅಸ್ಸಾಂ ತಂಡವನ್ನು 84 ರನ್‌ಗಳಿಗೆ ಕಟ್ಟಿಹಾಕಿ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಮುಂಬೈ 6 ವಿಕೆಟ್ ನಷ್ಟಕ್ಕೆ 217 ರನ್ ಗಳಿಸಿದೆ. ಇನ್ನು ಬೌಲಿಂಗ್​ನಲ್ಲಿ ಅಸ್ಸಾಂ ವಿರುದ್ಧ ಬಿರುಸಿನ ಬೌಲಿಂಗ್ ಮಾಡಿದ ಶಾರ್ದೂಲ್ ಕೇವಲ 21 ರನ್ ನೀಡಿ 6 ವಿಕೆಟ್ ಪಡೆದರು. ಅಸ್ಸಾಂ ತಂಡದ ಪರ್ವೇಜ್ ಮುಸ್ರಫ್, ಎಸ್‌ಸಿ ಘಡಿಗಾಂವ್ಕರ್, ಡ್ಯಾನಿಶ್ ದಾಸ್, ಕುನಾಲ್ ಶರ್ಮಾ, ಸುನೀತ್ ಲಚಿತ್ ಮತ್ತು ದಿಬಾಕರ್ ಜೊಹೊರಿ ಅವರಿಗೆ ಎರಡಂಕಿ ದಾಟಲು ಶಾರ್ದೂಲ್ ಅವಕಾಶ ನೀಡಲಿಲ್ಲ. ಶಾರ್ದೂಲ್ ಮಾರಕ ದಾಳಿಯಿಂದಾಗಿ ಮುಂಬೈ ತಂಡ ಅಸ್ಸಾಂ ತಂಡವನ್ನು ಕೇವಲ 84 ರನ್‌ಗಳಿಗೆ ಆಲೌಟ್ ಮಾಡಿತು.

250 ವಿಕೆಟ್ ಪೂರೈಸಿದ ಶಾರ್ದೂಲ್

ಅಸ್ಸಾಂ ತಂಡದ ಮೂರನೇ ವಿಕೆಟ್‌ ಪಡೆಯುವ ಶಾರ್ದೂಲ್ ಠಾಕೂರ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 250 ವಿಕೆಟ್‌ಗಳನ್ನು ಪೂರೈಸಿದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 79 ಪಂದ್ಯಗಳನ್ನಾಡಿರುವ ಶಾರ್ದೂಲ್ ಈ ಮಾದರಿಯಲ್ಲಿ 14ನೇ ಬಾರಿಗೆ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದಿದ್ದಾರೆ. ಹಾಗೆಯೇ ಭಾರತ ಪರ 11 ಟೆಸ್ಟ್ ಪಂದ್ಯಗಳನ್ನು ಆಡಿರುವ ಠಾಕೂರ್ 28.38ರ ಸರಾಸರಿಯಲ್ಲಿ 31 ವಿಕೆಟ್ ಪಡೆದಿದ್ದಾರೆ.

ಇಂಜುರಿಯಿಂದಾಗಿ ಟೀಂ ಇಂಡಿಯಾದಿಂದ ಔಟ್

ಭಾರತದ ಪರ ಕೊನೆಯದಾಗಿ ದಕ್ಷಿಣ ಆಫ್ರಿಕಾ ಪ್ರವಾಸ ಮಾಡಿದ ಶಾರ್ದೂಲ್, ಈ ಪ್ರವಾಸದ ವೇಳೆ ಪಾದದ ಗಾಯಕ್ಕೆ ತುತ್ತಾದರು. ಆ ಬಳಿಕ ಟೀಂ ಇಂಡಿಯಾದಿಂದ ಹೊರಬಿದ್ದಿರುವ ಶಾರ್ದೂಲ್ ಠಾಕೂರ್ ಕಳೆದ ವಾರ ರಾಯ್‌ಪುರದಲ್ಲಿ ಛತ್ತೀಸ್‌ಗಢ ವಿರುದ್ಧ ರಣಜಿ ಅಖಾಡಕ್ಕಿಳಿದರು. ಮೊದಲ ಪಂದ್ಯದಲ್ಲಿ ಅವರ ಪ್ರದರ್ಶನ ವಿಶೇಷವೇನೂ ಆಗಿರಲಿಲ್ಲ. ಆದರೆ ಎರಡನೇ ಪಂದ್ಯದಲ್ಲಿ 6 ವಿಕೆಟ್ ಪಡೆಯುವ ಮೂಲಕ ನಾಕೌಟ್ ಪಂದ್ಯಗಳಿಗೆ ಮುನ್ನವೇ ಎದುರಾಳಿ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ.

ಸಿಎಸ್​ಕೆ ತಂಡದಲ್ಲಿ ಶಾರ್ದೂಲ್

ಈ ಬಾರಿ ಶಾರ್ದೂಲ್ ಠಾಕೂರ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 4 ಕೋಟಿ ರೂ.ಗಳ ಬೃಹತ್ ಮೊತ್ತ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ. ಶಾರ್ದೂಲ್ ಠಾಕೂರ್ ಈ ಹಿಂದೆ 2018 ಮತ್ತು 2021 ರ ನಡುವೆ ಧೋನಿ ನಾಯಕತ್ವದಲ್ಲಿ ಆಡಿದ್ದರು. ಶಾರ್ದೂಲ್ ಠಾಕೂರ್ ಈ ಅವಧಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ 48 ಪಂದ್ಯಗಳಲ್ಲಿ 55 ವಿಕೆಟ್ ಪಡೆದಿದ್ದರು. ನಂತರ 2021 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಶಾರ್ದೂಲ್ ಠಾಕೂರ್ ಅವರನ್ನು ಬಿಡುಗಡೆ ಮಾಡಿತು. ನಂತರ 2022 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಪರ ಆಡಿದ್ದ ಶಾರ್ದೂಲ್​ರನ್ನು 2023 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡ ಖರೀದಿಸಿತ್ತು. ಇದೀಗ ಮತ್ತೊಮ್ಮೆ ಶಾರ್ದೂಲ್ ತನ್ನ ಹಳೆಯ ತಂಡವಾದ ಚೆನ್ನೈ ಸೂಪರ್ ಕಿಂಗ್ಸ್ ಜೊತೆ ಆಡಲಿದ್ದಾರೆ.

Published On - 7:48 pm, Fri, 16 February 24

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್