Ranji Trophy 2025: ಇಂದಿನಿಂದ ರಣಜಿ ಟೂರ್ನಿ ಶುರು: ಇಲ್ಲಿದೆ ವೇಳಾಪಟ್ಟಿ

Ranji Trophy 2025-26: ಈ ಬಾರಿಯ ರಣಜಿ ಟೂರ್ನಿಯಲ್ಲಿ ಒಟ್ಟು 38 ತಂಡಗಳು ಕಣಕ್ಕಿಳಿಯಲಿವೆ. ಇದರಲ್ಲಿ 32 ತಂಡಗಳು ಎಲೈಟ್ ಗ್ರೂಪ್​ನಲ್ಲಿ ಕಣಕ್ಕಿಳಿದರೆ, 6 ತಂಡಗಳು ಪ್ಲೇಟ್ ಗ್ರೂಪ್​ನಲ್ಲಿ ಆಡಲಿದೆ. ಇಲ್ಲಿ ಪ್ಲೇಟ್ ಗ್ರೂಪ್​ನಲ್ಲಿ ಕಣಕ್ಕಿಳಿಯಲಿರುವ ತಂಡಗಳೆಂದರೆ ಬಿಹಾರ, ಅರುಣಾಚಲ ಪ್ರದೇಶ, ಸಿಕ್ಕಿಂ, ಮಣಿಪುರ, ಮೇಘಾಲಯ ಮತ್ತು ಮಿಜೋರಾಂ.

Ranji Trophy 2025: ಇಂದಿನಿಂದ ರಣಜಿ ಟೂರ್ನಿ ಶುರು: ಇಲ್ಲಿದೆ ವೇಳಾಪಟ್ಟಿ
Ranji Trophy 2025

Updated on: Oct 15, 2025 | 9:31 AM

ದೇಶೀಯ ಅಂಗಳದ ಟೆಸ್ಟ್ ಪಂದ್ಯಾವಳಿ ರಣಜಿ ಟೂರ್ನಿಯು (Ranji Trophy 2025) ಇಂದಿನಿಂದ (ಅ.15) ಶುರುವಾಗಲಿದೆ. ಕರ್ನಾಟಕ ತಂಡವು ತನ್ನ ಮೊದಲ ಪಂದ್ಯದಲ್ಲಿ ಸೌರಾಷ್ಟ್ರ ತಂಡವನ್ನು ಎದುರಿಸಲಿದೆ. ರಾಜ್​ಕೋಟ್​ನ ನಿರಂಜನ್ ಶಾ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದೊಂದಿಗೆ ಕರ್ನಾಟಕ ತಂಡ ರಣಜಿ ಅಭಿಯಾನ ಆರಂಭಿಸಲಿದೆ.

ಕರ್ನಾಟಕ ರಣಜಿ ತಂಡ: ಮಯಾಂಕ್ ಅಗರ್ವಾಲ್ (ನಾಯಕ), ಕರುಣ್ ನಾಯರ್, ಆರ್. ಸ್ಮರಣ್, ಕೆಎಲ್ ಶ್ರೀಜಿತ್ (ವಿಕೆಟ್ ಕೀಪರ್), ಕೆವಿ ಅನೀಶ್, ಅಭಿನವ್ ಮನೋಹರ್, ನಿಕಿನ್ ಜೋಸ್, ವಿಜಯಕುಮಾರ್ ವೈಶಾಕ್, ವಿಧ್ವತ್ ಕಾವೇರಪ್ಪ, ಶ್ರೇಯಸ್ ಗೋಪಾಲ್, ಕೃತಿಕ್ ಕೃಷ್ಣ (ವಿಕೆಟ್ ಕೀಪರ್), ಶಿಖರ್ ಶೆಟ್ಟಿ, ಮೊಹ್ಸಿನ್ ಖಾನ್, ಅಭಿಲಾಷ್ ಶೆಟ್ಟಿ, ಎಂ. ವೆಂಕಟೇಶ್.

ರಣಜಿ ಟ್ರೋಫಿ 2025-26 ವೇಳಾಪಟ್ಟಿ – ಸುತ್ತು 1 (ಎಲೈಟ್):

  • ಗ್ರೂಪ್- A
  • ಉತ್ತರ ಪ್ರದೇಶ vs ಆಂಧ್ರ ಪ್ರದೇಶ್ – ಬೆಳಿಗ್ಗೆ 9:30 IST – ಗ್ರೀನ್ ಪಾರ್ಕ್, ಕಾನ್ಪುರ
  • ತಮಿಳುನಾಡು vs ಜಾರ್ಖಂಡ್ – ಬೆಳಿಗ್ಗೆ 9:30 IST – ಶ್ರೀ ರಾಮಕೃಷ್ಣ ಕಲಾ ಮತ್ತು ವಿಜ್ಞಾನ ಕಾಲೇಜು ಮೈದಾನ, ಕೊಯಮತ್ತೂರು
  • ಒಡಿಶಾ vs ಬರೋಡಾ – ಬೆಳಿಗ್ಗೆ 9:30 IST – ಬಾರಾಬತಿ ಕ್ರೀಡಾಂಗಣ, ಕಟಕ್
  • ನಾಗಾಲ್ಯಾಂಡ್ vs ವಿದರ್ಭ – ಬೆಳಿಗ್ಗೆ 9:30 IST – ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನ 1, ಬೆಂಗಳೂರು

 

  • ಗ್ರೂಪ್- B
  • ಸೌರಾಷ್ಟ್ರ vs ಕರ್ನಾಟಕ – 9:30 AM IST – ನಿರಂಜನ್ ಶಾ ಸ್ಟೇಡಿಯಂ, ಖಂಡೇರಿ, ರಾಜ್‌ಕೋಟ್
  • ಕೇರಳ vs ಮಹಾರಾಷ್ಟ್ರ – ಬೆಳಿಗ್ಗೆ 9:30 IST – ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣ, ತಿರುವನಂತಪುರಂ.
  • ಗೋವಾ vs ಚಂಡೀಗಢ – ಬೆಳಿಗ್ಗೆ 9:30 IST – ಗೋವಾ ಕ್ರಿಕೆಟ್ ಅಸೋಸಿಯೇಷನ್ ​​ಅಕಾಡೆಮಿ ಮೈದಾನ, ಪೊರ್ವೊರಿಮ್.
  • ಮಧ್ಯಪ್ರದೇಶ vs ಪಂಜಾಬ್ – ಬೆಳಿಗ್ಗೆ 9:30 IST – ಎಮರಾಲ್ಡ್ ಹೈಸ್ಕೂಲ್ ಮೈದಾನ, ಇಂದೋರ್.

 

  • ಗ್ರೂಪ್- C
  • ರೈಲ್ವೇಸ್ vs ಹರಿಯಾಣ – 9:30 AM IST – ಪಿಥ್ವಾಲಾ ಕ್ರೀಡಾಂಗಣ, ಭೀಮ್‌ಪೋರ್, ಸೂರತ್
  • ಬಂಗಾಳ vs ಉತ್ತರಾಖಂಡ – 9:30 AM IST – ಈಡನ್ ಗಾರ್ಡನ್ಸ್, ಕೋಲ್ಕತ್ತಾ
  • ಗುಜರಾತ್ vs ಅಸ್ಸಾಂ – ಬೆಳಿಗ್ಗೆ 9:30 IST – ನರೇಂದ್ರ ಮೋದಿ ಕ್ರೀಡಾಂಗಣ ಎ ಮೈದಾನ, ಅಹಮದಾಬಾದ್.
  • ಸರ್ವಿಸಸ್ vs ತ್ರಿಪುರ – ಬೆಳಿಗ್ಗೆ 9:30 IST – ಪಾಲಂ ಎ ಕ್ರೀಡಾಂಗಣ, ದೆಹಲಿ

 

  • ಗ್ರೂಪ್- D
  • ಹೈದರಾಬಾದ್ vs ದೆಹಲಿ – ಬೆಳಿಗ್ಗೆ 9:30 IST – ನೆಕ್ಸ್‌ಜೆನ್ ಕ್ರಿಕೆಟ್ ಮೈದಾನ, ಹೈದರಾಬಾದ್
  • ರಾಜಸ್ಥಾನ vs ಛತ್ತೀಸ್‌ಗಢ – 9:30 AM IST – ಮದನ್ ಪಲಿವಾಲ್ ಮಿರಾಜ್ ಕ್ರೀಡಾ ಕೇಂದ್ರ, ರಾಜಸಮಂದ್, ರಾಜಸ್ಥಾನ
  • ಜಮ್ಮು ಮತ್ತು ಕಾಶ್ಮೀರ vs ಮುಂಬೈ – 9:30 AM IST – ಶೇರ್-ಇ-ಕಾಶ್ಮೀರ ಕ್ರೀಡಾಂಗಣ, ಶ್ರೀನಗರ
  • ಪುದುಚೇರಿ vs ಹಿಮಾಚಲ ಪ್ರದೇಶ – ಬೆಳಿಗ್ಗೆ 9:30 IST – ಕ್ರಿಕೆಟ್ ಅಸೋಸಿಯೇಷನ್ ​​ಪುದುಚೇರಿ ಸೀಚೆಮ್ ಮೈದಾನ, ಪುದುಚೇರಿ

ಇದನ್ನೂ ಓದಿ: ಅಶ್ವಿನ್ ವಿಶ್ವ ದಾಖಲೆ ಅಳಿಸಿ ಹಾಕಿದ ನೊಮಾನ್ ಅಲಿ

ರಣಜಿ ಟ್ರೋಫಿ 2025-26 ವೇಳಾಪಟ್ಟಿ – ಸುತ್ತು 1 (ಪ್ಲೇಟ್):

  • ಬಿಹಾರ vs ಅರುಣಾಚಲ ಪ್ರದೇಶ – 9:30 AM IST – ಮೊಯಿನ್-ಉಲ್-ಹಕ್ ಸ್ಟೇಡಿಯಂ, ಪಾಟ್ನಾ
  • ಸಿಕ್ಕಿಂ vs ಮಣಿಪುರ – ಬೆಳಿಗ್ಗೆ 9:30 IST – SICA ಮೈದಾನ, ರಂಗ್ಪೋ
  • ಮೇಘಾಲಯ vs ಮಿಜೋರಾಂ – ಬೆಳಿಗ್ಗೆ 9:30 IST – ಮೇಘಾಲಯ ಕ್ರಿಕೆಟ್ ಅಸೋಸಿಯೇಷನ್ ​​ಕ್ರಿಕೆಟ್ ಮೈದಾನ, ಶಿಲ್ಲಾಂಗ್.