ಮಹೇಂದ್ರ ಸಿಂಗ್ ಧೋನಿಯನ್ನು ವಿಶ್ವದ ಶ್ರೇಷ್ಠ ನಾಯಕರಲ್ಲಿ ಒಬ್ಬರೆಂಡು ಪರಿಗಣಿಸಲಾಗಿದೆ. ಧೋನಿ ದೀರ್ಘಕಾಲದವರೆಗೆ ತಂಡದ ನಾಯಕತ್ವ ವಹಿಸಿದ್ದರು. ಆದರೆ 2014-15 ಆಸ್ಟ್ರೇಲಿಯಾ ಪ್ರವಾಸದಲ್ಲಿ, ಅವರು ಇದ್ದಕ್ಕಿದ್ದಂತೆ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರು. ಧೋನಿಯ ಈ ನಿರ್ಧಾರದಿಂದ ಎಲ್ಲರೂ ಆಶ್ಚರ್ಯಚಕಿತರಾದರು ಏಕೆಂದರೆ ಧೋನಿ ಆ ಸಮಯದಲ್ಲಿ ಚೆನ್ನಾಗಿ ಆಡುತ್ತಿದ್ದರು ಮತ್ತು ಫಿಟ್ ಆಗಿದ್ದರು. ಅವರು ತಮ್ಮ ವೃತ್ತಿಜೀವನದ ಉನ್ನತ ಹಂತದಲ್ಲಿದ್ದರು. ಧೋನಿ ಈ ನಿರ್ಧಾರವನ್ನು ಏಕೆ ತೆಗೆದುಕೊಂಡರು ಎಂಬುದು ಇನ್ನೂ ರಹಸ್ಯವಾಗಿ ಉಳಿದಿದೆ. ಆ ಸಮಯದಲ್ಲಿ ಭಾರತೀಯ ತಂಡದ ಮುಖ್ಯ ತರಬೇತುದಾರರಾದ ರವಿಶಾಸ್ತ್ರಿ ಕೂಡ ತಂಡದ ಜೊತೆಗಿದ್ದರು, ಅದೂ ಸಹ ತಂಡದ ನಿರ್ದೇಶಕರಾಗಿ. ಧೋನಿಯ ನಿರ್ಧಾರದ ಏಳು ವರ್ಷಗಳ ನಂತರ, ಶಾಸ್ತ್ರಿ ಅವರು ಮಾಜಿ ನಾಯಕನ ನಿರ್ಧಾರದ ಬಗ್ಗೆ ಹೇಗೆ ಭಾವಿಸಿದ್ದರು ಎಂದು ಹೇಳಿದ್ದಾರೆ.
ಧೋನಿಯ ನಿರ್ಧಾರ ತಮಗೆ ಇಷ್ಟವಾಗಲಿಲ್ಲ ಎಂದು ಶಾಸ್ತ್ರಿ ಹೇಳಿದ್ದಾರೆ. ಧೋನಿ ತಮ್ಮ 100 ಟೆಸ್ಟ್ ಪಂದ್ಯಗಳಿಂದ ಕೇವಲ 10 ಪಂದ್ಯಗಳ ಅಂತರದಲ್ಲಿದ್ದರು. ಹಿಂದೂಸ್ತಾನ್ ಟೈಮ್ಸ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಶಾಸ್ತ್ರಿ ತಮ್ಮ ಪುಸ್ತಕದಲ್ಲಿ ಈ ಬಗ್ಗೆ ಬರೆದಿದ್ದಾರೆ. ಆ ಸಮಯದಲ್ಲಿ ಎಂಎಸ್ ಧೋನಿ ಭಾರತ ಮಾತ್ರವಲ್ಲ ವಿಶ್ವದ ಅತಿದೊಡ್ಡ ಆಟಗಾರ. ಅವರು ಮೂರು ಐಸಿಸಿ ಟ್ರೋಫಿಗಳನ್ನು ಹೊಂದಿದ್ದರು ಇದರಲ್ಲಿ ಎರಡು ವಿಶ್ವಕಪ್ ಟ್ರೋಫಿ ಸೇರಿದ್ದವು. ಅಲ್ಲದೆ ಐಪಿಎಲ್ ಟ್ರೋಫಿಗಳನ್ನು ಕೂಡ ಗೆದ್ದಿದ್ದರು. ಅವರ ಫಾರ್ಮ್ ಕೂಡ ಚೆನ್ನಾಗಿ ಹೋಗುತ್ತಿತ್ತು ಮತ್ತು ಅವರು 100 ಟೆಸ್ಟ್ ಪಂದ್ಯಗಳನ್ನು ಆಡಲು ಕೇವಲ 10 ಪಂದ್ಯಗಳ ಅಂತರದಲ್ಲಿದ್ದರು.
ಅಷ್ಟು ವಯಸ್ಸಾಗಿರಲಿಲ್ಲ
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ನಂತರ ಧೋನಿ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರು. ಬಿಸಿಸಿಐ ಹೊರಡಿಸಿದ ಹೇಳಿಕೆಯಲ್ಲಿ, ಎಲ್ಲಾ ಮೂರು ಸ್ವರೂಪಗಳಲ್ಲಿ ಆಡುವ ಒತ್ತಡದಿಂದಾಗಿ ಧೋನಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಮಾತನಾಡಿದ ಶಾಸ್ತ್ರಿ, ಅವರು ಇನ್ನೂ ತಂಡದಲ್ಲಿ ಮೂವರು ಆಟಗಾರರಲ್ಲಿ ಒಬ್ಬರಾಗಿದ್ದರು. ಅವರ ವೃತ್ತಿಜೀವನದ ಅಂಕಿಅಂಶಗಳನ್ನು ಸುಧಾರಿಸುವ ಅವಕಾಶವನ್ನು ಹೊರತುಪಡಿಸಿ ಅವರಿಗೆ ಬೇರೆ ಏನೂ ಇರಲಿಲ್ಲ. ಹೌದು, ಯುವಕರೇ ಇಲ್ಲ ಎಂಬುದು ನಿಜ, ಆದರೆ ಅವರಿಗೆ ಅಷ್ಟು ವಯಸ್ಸಾಗಿರಲಿಲ್ಲ. ಅವರ ನಿರ್ಧಾರಕ್ಕೆ ಯಾವುದೇ ಅರ್ಥವಿಲ್ಲ ಎಂದಿದ್ದಾರೆ.
ಧೋನಿಯೊಂದಿಗೆ ಮಾತನಾಡಬೇಕೆಂದವನು ಸುಮ್ಮನಾದೆ
ಆ ಸಮಯದಲ್ಲಿ ಶಾಸ್ತ್ರಿಯವರು ತಂಡದ ನಿರ್ದೇಶಕರಾಗಿದ್ದರು. ಆ ಸಮಯದಲ್ಲಿ ಧೋನಿಯೊಂದಿಗೆ ಮಾತನಾಡಲು ಯೋಚಿಸುತ್ತಿದ್ದೆ ಎಂದು ಶಾಸ್ತ್ರಿ ಹೇಳಿದ್ದರು. ಆದರೆ ಧೋನಿಯ ಧ್ವನಿಯಲ್ಲಿನ ದೃಢತೆಯನ್ನು ನೋಡಿದಾಗ ಅವರು ಮತ್ತೆ ಮಾತನಾಡಲಿಲ್ಲ. ಈಗ ನಾನು ಹಿಂತಿರುಗಿ ನೋಡಿದಾಗ, ಅವರ ನಿರ್ಧಾರ ಸರಿಯಾಗಿದೆ ಎಂದು ನಾನು ಭಾವಿಸುತ್ತೇನೆ – ಅದೇ ಸಮಯದಲ್ಲಿ ಅವರ ನಿರ್ಧಾರ ಧೈರ್ಯಶಾಲಿ ಮತ್ತು ಸ್ವಾರ್ಥದಿಂದ ದೂರವಿದೆ ಎಂದಿದ್ದಾರೆ.