ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (MI vs CSK) ತಂಡ 7 ವಿಕೆಟ್ಗಳ ಅಮೋಘ ಗೆಲುವು ಕಂಡಿತು. ಸಾಕಷ್ಟು ರೋಚಕತೆಯಿಂದ ಕೂಡಿದ್ದ ಪಂದ್ಯ ಅಭಿಮಾನಿಗಳಿಗೆ ನಿರಾಸೆ ಮೂಡಿಸಲಿಲ್ಲ. ಅಜಿಂಕ್ಯಾ ರಹಾನೆ (Ajinkya Rahane) ಬ್ಯಾಟಿಂಗ್ನಲ್ಲಿ ಭರಪೂರ ಮನೋರಂಜನೆ ನೀಡಿದರೆ, ರವೀಂದ್ರ ಜಡೇಜಾ ವಿಕೆಟ್ ಕೀಳುವ ಜೊತೆಗೆ ಫೀಲ್ಡಿಂಗ್ನಲ್ಲೂ ಕಮಾಲ್ ಮಾಡಿ ಫ್ಯಾನ್ಸ್ಗೆ ಸಂತಸ ನೀಡಿದರು. ಅದರಲ್ಲೂ ಜಡೇಜಾ (Ravindra Jadeja) ತಾನೊಬ್ಬ ಶ್ರೇಷ್ಠ ಫೀಲ್ಡರ್ ಎಂಬುದನ್ನು ಮತ್ತೊಮ್ಮೆ ಸಾಭೀತು ಪಡಿಸಿದರು. ವೇಗವಾಗಿ ಬಂದ ಚೆಂಡನ್ನು ಅದ್ಭುತವಾಗಿ ಹಿಡಿಯುವ ಮೂಲಕ ವಾಂಖೆಡೆಯಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ಶಾಕ್ ನೀಡಿದರು.
ಮುಂಬೈ ಬ್ಯಾಟಿಂಗ್ ಇನ್ನಿಂಗ್ಸ್ನ 9ನೇ ಓವರ್ ಅನ್ನು ರವೀಂದ್ರ ಜಡೇಜಾ ಮಾಡಿದರು. ಈ ಓವರ್ನ ಎರಡನೇ ಎಸೆತದಲ್ಲಿ ಬ್ಯಾಟರ್ ಕ್ಯಾಮ್ರೋನ್ ಗ್ರೀನ್ ನೇರವಾಗಿ ಚೆಂಡನ್ನು ಹೊಡೆಯಲು ವೇಗವಾಗಿ ಬ್ಯಾಟ್ ಬೀಸಿದರು. ಆದರೆ, ಚೆಂಡು ಮೇಲಕ್ಕೆ ಹೋಗದೆ ನೇರವಾಗಿ ಜಡೇಜಾ ಕಡೆ ಬಂತು. ಜಡ್ಡು ಊಹಿಸಲಾಗದ ರೀತಿಯಲ್ಲಿ ಕ್ಯಾಚ್ ಹಿಡಿದು ಎಲ್ಲರನ್ನು ದಂಗಾಗಿಸಿದರು. ಅತ್ತ ಅಂಪೈರ್ ಕೂಡ ಚೆಂಡು ನೇರವಾಗಿ ಬರಬಹುದು ಎಂದು ನೆಲದ ಮೇಲೆ ಕೂತುಬಿಟ್ಟಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
Sensational catch ??@imjadeja grabs a RIPPER off his own bowling!
Follow the match ▶️ https://t.co/rSxD0lf5zJ#TATAIPL | #MIvCSK pic.twitter.com/HjnXep6tXF
— IndianPremierLeague (@IPL) April 8, 2023
IPL ನಲ್ಲಿಲ್ಲ ಚಾನ್ಸ್, ವಿದೇಶದಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ ಪೂಜಾರ
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 157 ರನ್ ಗಳಿಸಿತು. ನಾಯಕ ರೋಹಿತ್ ಶರ್ಮಾ (21 ರನ್) ಹಾಗೂ ಇಶಾನ್ ಕಿಶನ್ (32 ರನ್) ಉತ್ತಮ ಆರಂಭ ನೀಡಿದರು. ಆದರೆ, ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಸಂಪೂರ್ಣ ವೈಫಲ್ಯ ಅನುಭವಿಸಿತು.
ಕ್ಯಾಮರಾನ್ ಗ್ರೀನ್ (12) ಹಾಗೂ ತಿಲಕ್ ವರ್ಮಾ (22 ರನ್), ಸೂರ್ಯಕುಮಾರ್ ಯಾದವ್ (1) ಬೇಗನೆ ಔಟಾದರು. ಟಿಮ್ ಡೇವಿಡ್ (31 ರನ್) ಹಾಗೂ ಕೊನೆಯಲ್ಲಿ ಮಿಂಚಿದ ಹೃತಿಕ್ ಶೋಕೀನ್ (ಔಟಾಗದೆ 18) ಅವರಿಂದಾಗಿ ಮುಂಬೈ ತಂಡವು 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 157ರನ್ ಗಳಿಸಿತು. ಚೆನ್ನೈ ಪರ ಜಡೇಜಾ 3, ತುಷಾರ್ ದೇಶಪಾಂಡೆ ಹಾಗೂ ಸ್ಯಾಂಟನರ್ ತಲಾ ಎರಡು ವಿಕೆಟ್ ಗಳಿಸಿದರು.
ಟಾರ್ಗೆಟ್ ಬೆನ್ನಟ್ಟಿದ ಚೆನ್ನೈ ಮೊದಲ ಓವರ್ನಲ್ಲಿ ಡ್ವೇನ್ ಕಾನ್ವೇ ವಿಕೆಟ್ ಕಳೆದುಕೊಂಡರೂ ರಹಾನೆ ಹಾಗೂ ರುತುರಾಜ್ ಗಾಯಕ್ವಾಡ್ ಗೆಲುವಿಗೆ ಕಾರಣರಾದರು. ರಹಾನೆ ಕೇವಲ 27 ಎಸೆತಗಳಲ್ಲಿ 7 ಫೋರ್, 3 ಸಿಕ್ಸರ್ ಸಿಡಿಸಿ 61 ರನ್ ಚಚ್ಚಿದ ರಹಾನೆ ವೇಗದ ಅರ್ಧಶತಕ ಕೂಡ ಬಾರಿಸಿದರು.
ರಹಾನೆ ನಿರ್ಗಮನದ ಬಳಿಕ ಕ್ರೀಸ್ಗೆ ಬಂದ ಶಿವಂ ದುಬೆ 26 ಎಸೆತಗಳಲ್ಲಿ 28 ರನ್ ಗಳಿಸಿದರು. ತಂಡವನ್ನು ಗೆಲುವಿನ ದಡ ಸೇರಿಸಿದ ರುತುರಾಜ್ ಗಾಯಕ್ವಾಡ್ ಅಜೇಯ 40 ರನ್ ಗಳಿಸಿದರೆ ಅಂಬಟಿ ರಾಯುಡು ಅಜೇಯ 20 ರನ್ ಬಾರಿಸಿದರು. ಸಿಎಸ್ಕೆ 18.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 159 ರನ್ ಸಿಡಿಸಿ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:25 am, Sun, 9 April 23