- Kannada News Photo gallery Cricket photos Ajinkya rahane is back with a bang in MI vs CSK IPL 2023 Match Selection concerns Team India Kannada News
Ajinkya Rahane: 27 ಎಸೆತ, 61 ರನ್: ಅಜಿಂಕ್ಯಾ ರಹಾನೆ ಸ್ಫೋಟಕ ಬ್ಯಾಟಿಂಗ್ ಕಂಡು ದಂಗಾದ ಕ್ರಿಕೆಟ್ ಜಗತ್ತು
MI vs CSK, IPL 2023: ಕೇವಲ 27 ಎಸೆತಗಳಲ್ಲಿ 7 ಫೋರ್, 3 ಸಿಕ್ಸರ್ ಸಿಡಿಸಿ 61 ರನ್ ಚಚ್ಚಿದ ಅಜಿಂಕ್ಯಾ ರಹಾನೆ ವೇಗದ ಅರ್ಧಶತಕ ಕೂಡ ಬಾರಿಸಿದರು. ಡೆವೋನ್ ಕಾನ್ವೆ ಮೊದಲ ಓವರ್ನಲ್ಲೇ ಔಟಾದ ಪರಿಣಾಮ ಕ್ರೀಸ್ಗೆ ಬಂದ ರಹಾನೆ ಮನಬಂದಂತೆ ಬ್ಯಾಟ್ ಬೀಸಿದರು.
Updated on: Apr 09, 2023 | 7:46 AM

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯ ರೋಚಕತೆಯಿಂದ ಕೂಡಿತ್ತು. ಸಿಎಸ್ಕೆ ತಂಡದ ಅಜಿಂಕ್ಯಾ ರಹಾನೆ ಸ್ಫೋಟಕ ಬ್ಯಾಟಿಂಗ್ ಇಡೀ ಪಂದ್ಯದ ಪ್ರಮುಖ ಹೈಲೇಟ್ ಆಯಿತು.

ಕೇವಲ 27 ಎಸೆತಗಳಲ್ಲಿ 7 ಫೋರ್, 3 ಸಿಕ್ಸರ್ ಸಿಡಿಸಿ 61 ರನ್ ಚಚ್ಚಿದ ರಹಾನೆ ವೇಗದ ಅರ್ಧಶತಕ ಕೂಡ ಬಾರಿಸಿದರು. ಡೆವೋನ್ ಕಾನ್ವೆ ಮೊದಲ ಓವರ್ನಲ್ಲೇ ಔಟಾದ ಪರಿಣಾಮ ಕ್ರೀಸ್ಗೆ ಬಂದ ರಹಾನೆ ಮನಬಂದಂತೆ ಬ್ಯಾಟ್ ಬೀಸಿದರು.

ಮುಂಬೈ ಬೌಲರ್ಗಳ ಬೆವರಿಳಿಸಿದ ರಹಾನೆ 7.6 ಓವರ್‌ನಲ್ಲಿ ತಂಡದ ಮೊತ್ತವನ್ನು 82ಕ್ಕೆ ತಂದಿಟ್ಟರು. ಈ ಮೂಲಕ ತನ್ನ ವೃತ್ತಿ ಜೀವನ ಮುಗಿಯಿತು ಎಂದವರಿಗೆ ಸ್ಫೋಟಕ ಬ್ಯಾಟಿಂಗ್ ನಡೆಸಿ ತಕ್ಕ ಉತ್ತರ ಕೊಟ್ಟಿದ್ದಾರೆ.

ರಹಾನೆ ನಿರ್ಗಮನದ ಬಳಿಕ ಕ್ರೀಸ್ಗೆ ಬಂದ ಶಿವಂ ದುಬೆ 26 ಎಸೆತಗಳಲ್ಲಿ 28 ರನ್ ಗಳಿಸಿದರು. ತಂಡವನ್ನು ಗೆಲುವಿನ ದಡ ಸೇರಿಸಿದ ರುತುರಾಜ್ ಗಾಯಕ್ವಾಡ್ ಅಜೇಯ 40 ರನ್ ಗಳಿಸಿದರೆ ಅಂಬಟಿ ರಾಯುಡು ಅಜೇಯ 20 ರನ್ ಬಾರಿಸಿದರು.

ಸಿಎಸ್ಕೆ 18.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 159 ರನ್ ಸಿಡಿಸಿ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಚೆನ್ನೈ ಆಡಿದ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆಲುವು ಸಾಧಿಸಿ 4 ಅಂಕದೊಂದಿಗೆ ಪಾಯಿಂಟ್ ಟೇಬಲ್ನಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಮುಂಬೈ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 157 ರನ್ ಗಳಿಸಿತು. ನಾಯಕ ರೋಹಿತ್ ಶರ್ಮಾ (21 ರನ್) ಹಾಗೂ ಇಶಾನ್ ಕಿಶನ್ (32 ರನ್) ಉತ್ತಮ ಆರಂಭ ನೀಡಿದರು. ಆದರೆ, ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಸಂಪೂರ್ಣ ವೈಫಲ್ಯ ಅನುಭವಿಸಿದರು.

ಕ್ಯಾಮರಾನ್ ಗ್ರೀನ್ (12) ಹಾಗೂ ತಿಲಕ್ ವರ್ಮಾ (22 ರನ್) ಅವರ ವಿಕೆಟ್ ಜಡೇಜ ಪಡೆದರು. ಸೂರ್ಯಕುಮಾರ್ ಯಾದವ್ (1) ಕಳಪೆ ಫಾರ್ಮ್ ಈ ಪಂದ್ಯದಲ್ಲೂ ಮುಂದುವರೆಯಿತು.

ಟಿಮ್ ಡೇವಿಡ್ (31 ರನ್) ಹಾಗೂ ಕೊನೆಯಲ್ಲಿ ಮಿಂಚಿದ ಹೃತಿಕ್ ಶೋಕೀನ್ (ಔಟಾಗದೆ 18) ಅವರಿಂದಾಗಿ ಮುಂಬೈ ತಂಡವು 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 157ರನ್ ಗಳಿಸಿತು. ಚೆನ್ನೈ ಪರ ಜಡೇಜಾ 3, ತುಷಾರ್ ದೇಶಪಾಂಡೆ ಹಾಗೂ ಸ್ಯಾಂಟನರ್ ತಲಾ ಎರಡು ವಿಕೆಟ್ ಗಳಿಸಿದರು.









