Updated on: Apr 08, 2023 | 9:12 PM
IPL 2023: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ನ 12ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಿದೆ. ಐಪಿಎಲ್ನ ಎಲ್ ಕ್ಲಾಸಿಕೊ ಪಂದ್ಯವೆಂದೇ ಗುರುತಿಸಿಕೊಂಡಿರುವ ಈ ಮ್ಯಾಚ್ನಿಂದ ಇಂಗ್ಲೆಂಡ್ನ ಮೂವರು ಆಟಗಾರರು ಹೊರಗುಳಿದಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿರುವ ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಮೊಣಕಾಲಿನ ನೋವಿನ ಕಾರಣ ಈ ಪಂದ್ಯದಿಂದ ಹೊರಗುಳಿದಿದ್ದಾರೆ. ಹೀಗಾಗಿ ಅವರ ಬದಲಿಗೆ ಡ್ವೈನ್ ಪ್ರಿಟೋರಿಯಸ್ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಹಾಗೆಯೇ ಮುಂಬೈ ಇಂಡಿಯನ್ಸ್ ತಂಡದಲ್ಲಿರುವ ಇಂಗ್ಲೆಂಡ್ನ ವೇಗದ ಬೌಲರ್ ಜೋಫ್ರಾ ಆರ್ಚರ್ ಕೂಡ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮುನ್ನೆಚ್ಚರಿಕೆಯ ಸಲುವಾಗಿ ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ನಾಯಕ ರೋಹಿತ್ ಶರ್ಮಾ ತಿಳಿಸಿದ್ದಾರೆ. ಅಲ್ಲದೆ ಆರ್ಚರ್ ಬದಲಿಗೆ ಜೇಸನ್ ಬೆಹ್ರೆನ್ಡಾರ್ಫ್ ಕಣಕ್ಕಿಳಿದಿದ್ದಾರೆ.
ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಲ್ರೌಂಡರ್ ಮೊಯೀನ್ ಅಲಿ ಕೂಡ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಮೊಣಕಾಲಿನ ನೋವಿನ ಸಮಸ್ಯೆಯ ಕಾರಣ ಇಂಗ್ಲೆಂಡ್ ಕ್ರಿಕೆಟಿಗ ಈ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದಾರೆ. ಹೀಗಾಗಿ ಮೊಯೀನ್ ಅಲಿ ಬದಲಿಗೆ ಸಿಸಂದ ಮಗಲಾ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆದಿದ್ದಾರೆ. ಅದರಂತೆ ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿದೆ...
ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ (ನಾಯಕ) , ಇಶಾನ್ ಕಿಶನ್ (ವಿಕೆಟ್ ಕೀಪರ್) , ಕ್ಯಾಮೆರೊನ್ ಗ್ರೀನ್ , ಸೂರ್ಯಕುಮಾರ್ ಯಾದವ್ , ತಿಲಕ್ ವರ್ಮಾ , ಟಿಮ್ ಡೇವಿಡ್ , ಟ್ರಿಸ್ಟಾನ್ ಸ್ಟಬ್ಸ್ , ಅರ್ಷದ್ ಖಾನ್ , ಹೃತಿಕ್ ಶೋಕೀನ್ , ಪಿಯೂಷ್ ಚಾವ್ಲಾ , ಜೇಸನ್ ಬೆಹ್ರೆನ್ಡಾರ್ಫ್.
ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್: ಡೆವೊನ್ ಕಾನ್ವೇ , ರುತುರಾಜ್ ಗಾಯಕ್ವಾಡ್ , ಅಜಿಂಕ್ಯ ರಹಾನೆ , ರವೀಂದ್ರ ಜಡೇಜಾ , ಎಂಎಸ್ ಧೋನಿ (ನಾಯಕ) , ಶಿವಂ ದುಬೆ , ಡ್ವೈನ್ ಪ್ರಿಟೋರಿಯಸ್ , ದೀಪಕ್ ಚಾಹರ್ , ಮಿಚೆಲ್ ಸ್ಯಾಂಟ್ನರ್ , ಸಿಸಂದಾ ಮಗಳ , ತುಷಾರ್ ದೇಶಪಾಂಡೆ.