- Kannada News Photo gallery Cricket photos IPL 2023: David Warner becomes Fastest batter to reach 6000 runs in IPL
IPL 2023: ಡೇವಿಡ್ ವಾರ್ನರ್ ಅಬ್ಬರಕ್ಕೆ ವಿರಾಟ್ ಕೊಹ್ಲಿಯ ದಾಖಲೆ ಧೂಳೀಪಟ
IPL 2023 Kannada: ಐಪಿಎಲ್ ಇತಿಹಾಸದಲ್ಲಿ 6 ಸಾವಿರ ರನ್ಗಳ ಗಡಿದಾಟಿದ ಮೂರನೇ ಬ್ಯಾಟರ್ ಎಂಬ ದಾಖಲೆಯನ್ನು ಡೇವಿಡ್ ವಾರ್ನರ್ ನಿರ್ಮಿಸಿದ್ದಾರೆ.
Updated on: Apr 08, 2023 | 11:53 PM

IPL 2023: ಗುವಾಹಟಿ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದ ಮೂಲಕ ಡೇವಿಡ್ ವಾರ್ನರ್ ಐಪಿಎಲ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ 26 ರನ್ಗಳಿಸುವುದರೊಂದಿಗೆ ಐಪಿಎಲ್ನಲ್ಲಿ 6 ಸಾವಿರ ರನ್ ಕಲೆಹಾಕಿದ ಮೊದಲ ವಿದೇಶಿ ಆಟಗಾರ ಎನಿಸಿಕೊಂಡಿದ್ದಾರೆ.

ಅಲ್ಲದೆ ಐಪಿಎಲ್ ಇತಿಹಾಸದಲ್ಲಿ 6 ಸಾವಿರ ರನ್ಗಳ ಗಡಿದಾಟಿದ ಮೂರನೇ ಬ್ಯಾಟರ್ ಎಂಬ ದಾಖಲೆಯನ್ನು ಕೂಡ ನಿರ್ಮಿಸಿದ್ದಾರೆ. ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್ ಮಾತ್ರ ಈ ಸಾಧನೆ ಮಾಡಿದ್ದರು.

ಇದೀಗ 165 ಐಪಿಎಲ್ ಇನಿಂಗ್ಸ್ ಮೂಲಕ ಡೇವಿಡ್ ವಾರ್ನರ್ 6 ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ್ದಾರೆ. ವಿಶೇಷ ಎಂದರೆ ಈ ದಾಖಲೆಯೊಂದಿಗೆ ವಾರ್ನರ್ ಕಿಂಗ್ ಕೊಹ್ಲಿ ಹೆಸರಿನಲ್ಲಿದ್ದ ವಿಶೇಷ ದಾಖಲೆಯೊಂದನ್ನು ಕೂಡ ಮುರಿದಿದ್ದಾರೆ.

ಅಂದರೆ ಐಪಿಎಲ್ನಲ್ಲಿ ಅತೀ ವೇಗವಾಗಿ 6000 ರನ್ ಕಲೆಹಾಕಿದ ದಾಖಲೆ ಈ ಹಿಂದೆ ವಿರಾಟ್ ಕೊಹ್ಲಿಯ ಹೆಸರಿನಲ್ಲಿತ್ತು. ಕಿಂಗ್ ಕೊಹ್ಲಿ 188 ಇನಿಂಗ್ಸ್ಗಳ ಮೂಲಕ ಈ ಸಾಧನೆ ಮಾಡಿದ್ದರು.

ಇದೀಗ ಕೇವಲ 165 ಇನಿಂಗ್ಸ್ಗಳ ಮೂಲಕ ಡೇವಿಡ್ ವಾರ್ನರ್ 6000 ರನ್ ಪೂರೈಸಿದ್ದಾರೆ. ಈ ಮೂಲಕ ಕೊಹ್ಲಿಯ ಹೆಸರಿನಲ್ಲಿದ್ದ ವೇಗದ ಆರು ಸಾವಿರ ರನ್ ಸರದಾರ ದಾಖಲೆಯನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಮುರಿದಿದ್ದಾರೆ.

ಇನ್ನು ಐಪಿಎಲ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಟಾಪ್-5 ಬ್ಯಾಟರ್ಗಳ ಪಟ್ಟಿ ಈ ಕೆಳಗಿನಂತಿದೆ...

1- ವಿರಾಟ್ ಕೊಹ್ಲಿ: 217 ಇನಿಂಗ್ಸ್ ಮೂಲಕ ವಿರಾಟ್ ಕೊಹ್ಲಿ ಒಟ್ಟು 6727 ರನ್ ಕಲೆಹಾಕಿದ್ದಾರೆ. ಈ ಮೂಲಕ ಐಪಿಎಲ್ನಲ್ಲಿ ಅತ್ಯಧಿಕ ರನ್ ಪೇರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

2- ಶಿಖರ್ ಧವನ್: ಐಪಿಎಲ್ನಲ್ಲಿ 207 ಇನಿಂಗ್ಸ್ ಆಡಿರುವ ಶಿಖರ್ ಧವನ್ 6370 ರನ್ಗಳಿಸಿದ್ದಾರೆ.

3- ಡೇವಿಡ್ ವಾರ್ನರ್: 165 ಇನಿಂಗ್ಸ್ಗಳಲ್ಲಿ 6028 ಬಾರಿಸುವ ಮೂಲಕ ಡೇವಿಡ್ ವಾರ್ನರ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

4- ರೋಹಿತ್ ಶರ್ಮಾ: ಐಪಿಎಲ್ನಲ್ಲಿ 223 ಇನಿಂಗ್ಸ್ ಆಡಿರುವ ರೋಹಿತ್ ಶರ್ಮಾ ಒಟ್ಟು 5880 ರನ್ ಕಲೆಹಾಕಿದ್ದಾರೆ.

5- ಸುರೇಶ್ ರೈನಾ: 200 ಇನಿಂಗ್ಸ್ ಮೂಲಕ 5528 ರನ್ ಕಲೆಹಾಕಿರುವ ಸುರೇಶ್ ರೈನಾ ಈ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ.



















