RCB Retained Players: 18 ಆಟಗಾರರನ್ನು ಉಳಿಸಿಕೊಂಡ ಆರ್​ಸಿಬಿ; ಯಾರ್ಯಾರಿಗೆ ತಂಡದಿಂದ ಕೋಕ್..?

| Updated By: ಪೃಥ್ವಿಶಂಕರ

Updated on: Nov 16, 2022 | 11:30 AM

IPL 2023 Royal Challengers Bangalore Retained and Released Players List: ಕಳೆದ ವರ್ಷ, ಕೊಹ್ಲಿ ತಂಡದ ನಾಯಕತ್ವವನ್ನು ತ್ಯಜಿಸಲು ನಿರ್ಧರಿಸಿದರು. ಹೀಗಾಗಿ ಫ್ರಾಂಚೈಸಿ ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ಫಾಫ್ ಡು ಪ್ಲೆಸಿಸ್ ಅವರನ್ನು ಖರೀದಿಸಿ ಅವರಿಗೆ ನಾಯಕತ್ವ ನೀಡಿತ್ತು.

RCB Retained Players: 18 ಆಟಗಾರರನ್ನು ಉಳಿಸಿಕೊಂಡ ಆರ್​ಸಿಬಿ; ಯಾರ್ಯಾರಿಗೆ ತಂಡದಿಂದ ಕೋಕ್..?
ಆರ್​ಸಿಬಿ ಹಾಲಿ ತಂಡ
Image Credit source: rcb twitter
Follow us on

RCB Players List 2023: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪ್ರಶಸ್ತಿಯನ್ನು ಒಮ್ಮೆಯೂ ಗೆಲ್ಲಲು ಸಾಧ್ಯವಾಗದ ತಂಡಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ( Royal Challengers Bangalore) ಕೂಡ ಒಂದಾಗಿದೆ. ಆದರೆ ಈ ತಂಡವು ಮೂರು ಬಾರಿ ಫೈನಲ್‌ನಲ್ಲಿ ಆಡಿದೆ. 2016 ರಲ್ಲಿ ವಿರಾಟ್ ಕೊಹ್ಲಿ (Virat Kohli) ನಾಯಕತ್ವದಲ್ಲಿ ಈ ತಂಡ ಕೊನೆಯ ಬಾರಿಗೆ ಐಪಿಎಲ್ ಫೈನಲ್ ಆಡಿತ್ತು. ಕಳೆದ ವರ್ಷ, ಕೊಹ್ಲಿ ತಂಡದ ನಾಯಕತ್ವವನ್ನು ತ್ಯಜಿಸಲು ನಿರ್ಧರಿಸಿದರು. ಹೀಗಾಗಿ ಫ್ರಾಂಚೈಸಿಯು ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಪರ ಹಲವು ಸೀಸನ್​ಗಳನ್ನು ಆಡಿದ್ದ ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್ (Faf du Plessis) ಅವರನ್ನು ಖರೀದಿಸಿ, ಅವರಿಗೆ ತಂಡದ ನಾಯಕತ್ವ ನೀಡಿತ್ತು. ಡು ಪ್ಲೆಸಿಸ್ ನಾಯಕತ್ವದಲ್ಲಿ ತಂಡವು ಪ್ಲೇ ಆಫ್‌ಗೆ ತಲುಪಿತ್ತಾದರೂ ಫೈನಲ್‌ನಲ್ಲಿ ಆಡಲು ಸಾಧ್ಯವಾಗಲಿಲ್ಲ.

ಪ್ರತಿ ಬಾರಿಯಂತೆ ಈ ಬಾರಿಯೂ ಪ್ರಶಸ್ತಿ ಬರ ನೀಗಿಸಲು ಬೆಂಗಳೂರು ತಂಡ ಪ್ರಯತ್ನಿಸಲಿದ್ದು, ಇದಕ್ಕಾಗಿ ಸಿದ್ಧತೆ ಆರಂಭಿಸಿದೆ. ಎಲ್ಲಾ ಫ್ರಾಂಚೈಸಿಗಳೊಂದಿಗೆ ತಂಡವು ತನ್ನ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್ ಅವರಂತಹ ಸ್ಟಾರ್ ಆಟಗಾರರನ್ನು ತಂಡ ತನ್ನಲ್ಲಿಯೇ ಉಳಿಸಿಕೊಂಡಿದೆ. ಯಾವ ಆಟಗಾರರನ್ನು ತಂಡವು ಉಳಿಸಿಕೊಂಡಿದೆ ಮತ್ತು ಯಾರನ್ನು ಬಿಡುಗಡೆ ಮಾಡಿದೆ ಎಂಬುದರ ವಿವರ ಇಲ್ಲಿದೆ.

ಆರ್‌ಸಿಬಿ ಈ ಆಟಗಾರರನ್ನು ಉಳಿಸಿಕೊಂಡಿದೆ

ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಅಲೆನ್, ಗ್ಲೆನ್ ಮ್ಯಾಕ್ಸ್‌ವೆಲ್, ವನಿಂದು ಹಸರಂಗ, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ಡೇವಿಡ್ ವಿಲ್ಲಿ, ಕರಣ್ ಶರ್ಮಾ, ಮಹಿಪಾಲ್ ಲೊಮ್ರೋರ್, ಮೊಹಮ್ಮದ್ ಸಿರಾಜ್, ಜೋಶ್ ಹೇಜಲ್​ವುಡ್, ಸಿದ್ಧಾರ್ಥ್​ ಕೌಲ್, ಆಕಾಶ್ ದೀಪ್.

ಇದನ್ನೂ ಓದಿ:  IPL 2023 Retention ಕ್ಯಾಪ್ಟೆನ್ಸಿ ಕಳೆದುಕೊಂಡ ಬೆನ್ನಲ್ಲೇ ಕನ್ನಡಿಗ ಮಯಾಂಕ್‌ ಅಗರ್ವಾಲ್‌ ಪಂಜಾಬ್‌ ಕಿಂಗ್ಸ್‌ ತಂಡದಿಂದ ಔಟ್

ತಂಡದಿಂದ ಹೊರಹೋದ ಆಟಗಾರರು

ಜೇಸನ್ ಬೆಹ್ರೆಂಡಾರ್ಫ್, ಅನೀಶ್ವರ್ ಗೌತಮ್, ಚಾಮಾ ಮಿಲಿಂದ್, ಲವ್ನಿತ್ ಸಿಸೋಡಿಯಾ, ಶೆರ್ಫೇನ್ ರುದರ್‌ಫೋರ್ಡ್.

ಹೆಚ್ಚಿನ ಬದಲಾವಣೆ ಮಾಡದ ಆರ್​ಸಿಬಿ

ಹೊಸ ನಾಯಕ ಫಾಫ್ ನಾಯಕತ್ವದಲ್ಲಿ ಬೆಂಗಳೂರು ಕಳೆದ ಸೀಸನ್​ನಲ್ಲಿ ಉತ್ತಮ ಪ್ರದರ್ಶನ ನೀಡಿತು. ಆದ್ದರಿಂದ ಈ ವರ್ಷ ಫ್ರಾಂಚೈಸಿ ಹೆಚ್ಚಿನ ಬದಲಾವಣೆ ಮಾಡಿಲ್ಲ. ಕಳೆದ ಸೀಸನ್​ನಲ್ಲಿ ತಂಡದಲ್ಲಿ ಇದ್ದ ಹೆಚ್ಚಿನ ಆಟಗಾರರನ್ನು ಫ್ರಾಂಚೈಸಿ ಉಳಿಸಿಕೊಂಡಿದೆ. ತಂಡವು ಕೇವಲ ಐದು ಆಟಗಾರರನ್ನು ಮಾತ್ರ ಬಿಡುಗಡೆ ಮಾಡಿದೆ. ಈ ಮೊದಲು ಸಿದ್ಧಾರ್ಥ್ ಕೌಲ್ ಅವರನ್ನು ತಂಡ ಬಿಡುಗಡೆ ಮಾಡಬಹುದು ಎಂಬ ವರದಿಗಳು ಬಂದಿದ್ದವು. ಈ ವೇಗದ ಬೌಲರ್ ಕಳೆದ ವರ್ಷ RCB ಪರ ಹೆಚ್ಚು ಪಂದ್ಯಗಳನ್ನು ಆಡಿರಲಿಲ್ಲ. ಆದರೆ ಫ್ರಾಂಚೈಸಿ ಸಿದ್ಧಾರ್ಥ್ ಮೇಲೆ ನಂಬಿಕೆ ಇಟ್ಟುಕೊಂಡು ಅವರನ್ನು ಉಳಿಸಿಕೊಂಡಿದೆ. ಹಾಗೆಯೇ ಡೇವಿಡ್ ವಿಲ್ಲಿ ಅವರನ್ನು ಸಹ ತಂಡದಿಂದ ಬಿಡುಗಡೆ ಮಾಡುವ ವರದಿಗಳು ಇದ್ದವು. ಆದರೆ ಫ್ರಾಂಚೈಸಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಡೇವಿಡ್ ವಿಲ್ಲಿ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:27 am, Wed, 16 November 22