AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL Retention: ನಾಯಕ ಕೇನ್‌ ವಿಲಿಯಮ್ಸನ್​ ಜತೆ ಮೂವರು ಕನ್ನಡಿಗರಿಗೆ ಗೇಟ್‌ಪಾಸ್‌ ನೀಡಿದ ಸನ್‌ರೈಸರ್ಸ್‌ ಹೈದರಾಬಾದ್

ಮಿನಿ ಹರಾಜು ಪ್ರಕ್ರಿಯೆ ಮುನ್ನ ಸನ್‌ ರೈಸರ್ಸ್‌ ಹೈದರಾಬಾದ್‌, ನಾಯಕ ಕೇನ್ ವಿಲಿಯಮ್ಸನ್ ಸೇರಿದಂತೆ ಮೂವರು ಕನ್ನಡಿಗರನ್ನು ತಂಡದಿಂದ ಬಿಡುಗಡೆಗೊಳಿಸಿದೆ.

IPL Retention: ನಾಯಕ ಕೇನ್‌ ವಿಲಿಯಮ್ಸನ್​ ಜತೆ ಮೂವರು ಕನ್ನಡಿಗರಿಗೆ ಗೇಟ್‌ಪಾಸ್‌ ನೀಡಿದ ಸನ್‌ರೈಸರ್ಸ್‌ ಹೈದರಾಬಾದ್
kane williamson
TV9 Web
| Updated By: ರಮೇಶ್ ಬಿ. ಜವಳಗೇರಾ|

Updated on:Nov 15, 2022 | 8:41 PM

Share

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ 2023ಕ್ಕೆ (IPL 2023) ಎಲ್ಲಾ 10 ಫ್ರಾಂಚೈಸಿಗಳು ಭರ್ಜರಿ ಸಿದ್ಧತೆ ಶುರುಮಾಡಿಕೊಂಡಿದೆ. ಇದೇ ಡಿಸೆಂಬರ್ 23 ರಂದು ಕೇರಳದ ಕೊಚ್ಚಿಯಲ್ಲಿ ಮಿನಿ ಹರಾಜು ಪ್ರಕ್ರಿಯೆ ಏರ್ಪಡಿಸಲಾಗಿದ್ದು ಇದಕ್ಕೂ ಮುನ್ನ ಬಿಸಿಸಿಐ (BCCI) ಎಲ್ಲಾ ತಂಡಗಳಿಗೆ ತಮಗೆ ಅಗತ್ಯವಿಲ್ಲದ ಆಟಗಾರರನ್ನು ಬಿಡುಗಡೆ ಮಾಡಲು ಹೇಳಿದೆ. ಅದರಂತೆ ಸನ್‌ರೈಸರ್ಸ್‌ ಹೈದರಾಬಾದ್ (Sunrisers Hyderabad), ಕ್ಯಾಪ್ಟನ್​ ಕೇನ್​ ವಿಲಿಯಮ್ಸನ್(kane williamson)​ ಸೇರಿದಂತೆ ಮೂವರು ಕನ್ನಡಿಗರನ್ನು ತಂಡದಿಂದ ಬಿಡುಗಡೆಗೊಳಿಸಿದೆ.

RCB 2023: ಐಪಿಎಲ್ 2023 ಹರಾಜಿಗೂ ಮುನ್ನ 4 ಆಟಗಾರರನ್ನು ರಿಲೀಸ್ ಮಾಡಿದ ಆರ್​ಸಿಬಿ: ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಕ್ಯಾಪ್ಟನ್‌ ಕೂಡ ಆಗಿದ್ದ ಕೇನ್‌ ವಿಲಿಯಮ್ಸನ್‌ ಹಾಗೂ ವೆಸ್ಟ್‌ ಇಂಡೀಸ್‌ ಟಿ20 ತಂಡದ ನಾಯಕನಾಗಿರುವ ಸ್ಫೋಟಕ ಬ್ಯಾಟ್ಸ್‌ಮನ್‌ ನಿಕೋಲಸ್‌ ಪೂರನ್‌ ಅವರನ್ನು ತಂಡದಿಂದ ಗೇಟ್​ ಪಾಸ್ ನೀಡಲಾಗಿದೆ. ಇವರ ಜೊತೆಗೆ ಫ್ರಾಂಚೈಸಿಯಲ್ಲಿದ್ದ ಮೂವರು ಕರ್ನಾಟಕ ಆಟಗಾರರಾದ ಶ್ರೇಯಸ್‌ ಗೋಪಾಲ್‌, ಜೆ.ಸುಚಿತ್‌ ಹಾಗೂ ರವಿಕುಮಾರ್‌ ಸಮರ್ಥ್‌ ಅವರನ್ನೂ ಸಹ ತಂಡದಿಂದ ರಿಲೀಸ್ ಮಾಡಿದೆ

ಅಚ್ಚರಿ ನಿರ್ಧಾರ ಕೈಗೊಂಡ ಸನ್‌ರೈಸರ್ಸ್‌

ಕೇನ್‌ ವಿಲಿಯಮ್ಸ್‌ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಅತ್ಯಂತ ದುಬಾರಿ ಆಟಗಾರನಾಗಿದ್ದರು. ಬರೋಬ್ಬರಿ 14 ಕೋಟಿ ರೂಪಾಯಿ ಮೊತ್ತವನ್ನು ಕೇನ್‌ ವಿಲಿಯಮ್ಸನ್‌ಗೆ ನೀಡಿತ್ತು. 8 ವರ್ಷಗಳ ತಂಡದಲ್ಲಿ ಸ್ಥಾನಪಡೆದಿದ್ದ ಕೇನ್ ಸನ್‌ರೈಸರ್ಸ್‌ ಹೈದರಾಬಾದ್‌ ಪರವಾಗಿ 76 ಪಂದ್ಯಗಳನ್ನು ಆಡಿದ್ದು, 46 ಪಂದ್ಯಗಳಲ್ಲಿ ನಾಯಕರಾಗಿದ್ದರು. ಅಲ್ಲದೇ 36.22ರ ಸರಾಸರಿಯಲ್ಲಿ 126.03 ಸ್ಟ್ರೈಕ್‌ರೇಟ್‌ನಲ್ಲಿ 2101 ರನ್‌ ಬಾರಿಸಿದ್ದರು. ಆದ್ರೆ, ಇದೀಗ ತಂಡದ ನಾಯಕನನ್ನೇ ಬಿಡುಗಡೆಗೊಳಿಸಿರುವುದು ಅಚ್ಚರಿಗೆ ಕಾರಣವಾಗಿದೆ.

ಈಗ ವಿಲಿಯಮ್ಸನ್‌ ಅವರನ್ನು ತಂಡದಿಂದ ಕೈಬಿಟ್ಟಿರುವ ಕಾರಣ, ಸನ್‌ರೈಸರ್ಸ್‌ ತಂಡದಲ್ಲಿ ಹೆಚ್ಚಿನ ಹಣ ಹರಾಜಿಗೆ ಉಳಿಯಲಿದೆ. ಅದಲ್ಲದೆ, 10.75 ಕೋಟಿ ರೂಪಾಯಿಗೆ ಖರೀದಿಸಿದ್ದ ಪೂರನ್‌ ಅವರನ್ನು ಹೊರಹಾಕಿದೆ. ಕೇವಲ ಎರಡೇ ಆಟಗಾರರನ್ನು ಹೊರಹಾಕುವ ಮೂಲಕ 24.75 ಕೋಟಿ ರೂಪಾಯಿ ಉಳಿಸಿಕೊಂಡಿದ್ದು, ಮಿನಿ ಹರಾಜಿನಲ್ಲಿ ಬೇರೆ ಆಟಗಾರರನ್ನು ಖರೀದಿಸಲು ಪ್ಲಾನ್ ಮಾಡಿದೆ.

ಸನ್‌ ರೈಸರ್ಸ್‌ ಹೈದರಾಬಾದ್‌ ತಂಡ:

ಬಿಡುಗಡೆಯಾದ ಆಟಗಾರರು: ಕೇನ್ ವಿಲಿಯಮ್ಸನ್, ನಿಕೋಲಸ್ ಪೂರನ್, ಜಗದೀಶ ಸುಚಿತ್, ಪ್ರಿಯಮ್ ಗಾರ್ಗ್, ರವಿಕುಮಾರ್ ಸಮರ್ಥ್, ರೊಮಾರಿಯೋ ಶೆಫರ್ಡ್, ಸೌರಭ್ ದುಬೆ, ಸೀನ್ ಅಬಾಟ್, ಶಶಾಂಕ್ ಸಿಂಗ್, ಶ್ರೇಯಸ್ ಗೋಪಾಲ್, ಸುಶಾಂತ್ ಮಿಶ್ರಾ, ವಿಷ್ಣು ವಿನೋದ್.

ಟ್ರೇಡಿಂಗ್‌ ಮೂಲಕ ಆಟಗಾರರ ಆಯ್ಕೆ: ಯಾರೂ ಇಲ್ಲ

ತಂಡದಲ್ಲಿ ಇರುವ ಒಟ್ಟ ಮೊತ್ತ: 42.25 ಕೋಟಿ ರೂಪಾಯಿ.

ವಿದೇಶಿ ಆಟಗಾರರ ಕೋಟಾ ಬಾಕಿ: 4

ಸದ್ಯದ ತಂಡದಲ್ಲಿ ಉಳಿದುಕೊಂಡಿರುವ ಆಟಗಾರರು: ಅಬ್ದುಲ್ ಸಮದ್, ಐಡೆನ್ ಮಾರ್ಕ್ರಾಮ್, ರಾಹುಲ್ ತ್ರಿಪಾಠಿ, ಗ್ಲೆನ್ ಫಿಲಿಪ್ಸ್, ಅಭಿಷೇಕ್ ಶರ್ಮಾ, ಮಾರ್ಕೊ ಜಾನ್ಸೆನ್, ವಾಷಿಂಗ್ಟನ್ ಸುಂದರ್, ಫಜಲ್ಹಕ್ ಫಾರೂಕಿ, ಕಾರ್ತಿಕ್ ತ್ಯಾಗಿ, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಉಮ್ರಾನ್ ಮಲಿಕ್

Published On - 8:30 pm, Tue, 15 November 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ