IPL 2021: RCB ತಂಡಕ್ಕೆ ಇಂಗ್ಲೆಂಡ್ನ ಎಡಗೈ ವೇಗಿ..?
TV9 Web | Updated By: ಝಾಹಿರ್ ಯೂಸುಫ್
Updated on:
Aug 23, 2021 | 2:34 PM
IPL 2021 Schedule: ಕೊರೋನಾ ಕಾರಣದಿಂದ ಮೊಟಕುಗೊಂಡಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ನ ಮೊದಲಾರ್ಧದಲ್ಲಿ 29 ಪಂದ್ಯಗಳನ್ನು ಆಡಲಾಗಿತ್ತು. ಇದೀಗ ಉಳಿದ ಪಂದ್ಯಗಳನ್ನು ಯುಎಇಗೆ ಸ್ಥಳಾಂತರಿಸಲಾಗಿದ್ದು, ಅದರಂತೆ ಉಳಿದಿರುವ 31 ಪಂದ್ಯಗಳು ಶಾರ್ಜಾ, ಅಬುಧಾಬಿ ಮತ್ತು ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 15 ರವರೆಗೆ ನಡೆಯಲಿದೆ.
1 / 7
ಬಿಸಿಸಿಐ ಮೂಲಗಳ ಮಾಹಿತಿ ಪ್ರಕಾರ, 2 ತಂಡಗಳ ಫ್ರಾಂಚೈಸಿಗಾಗಿ ಒಟ್ಟು 6 ನಗರಗಳನ್ನು ಆಯ್ಕೆ ಮಾಡಲಾಗಿದೆ. ಈ ನಗರಗಳ ಸ್ಟೇಡಿಯಂಗಳನ್ನು ಕೇಂದ್ರೀಕರಿಸಿ ತಂಡಗಳ ಬಿಡ್ಡಿಂಗ್ ನಡೆಯಲಿದೆ. ಅದರಂತೆ ಹೊಸ 2 ತಂಡಗಳ ಕೇಂದ್ರಗಳಾಗಿ ಲಕ್ನೋ, ಅಹಮದಾಬಾದ್, ರಾಂಚಿ, ಕಟಕ್, ಗುವಾಹಟಿ ಮತ್ತು ಧರ್ಮಶಾಲಾ ನಗರಗಳ ಸ್ಟೇಡಿಯಂಗಳನ್ನು ಆಯ್ಕೆ ಮಾಡಲಾಗಿದೆ.
2 / 7
ಇನ್ನು ಸ್ಪಿನ್ ಆಲ್ ರೌಂಡರ್ ಆಗಿ ಶಹಬಾಜ್ ಅಹ್ಮದ್ ಮತ್ತು ನ್ಯೂಜಿಲ್ಯಾಂಡ್ ವೇಗಿ ಕೈಲ್ ಜೇಮೀಸನ್ ಅವರನ್ನು ಕ್ರಮವಾಗಿ ನಂ .6 ಮತ್ತು ನಂ .7 ರಲ್ಲಿ ಆಯ್ಕೆ ಮಾಡಿದ್ದಾರೆ. ಹಾಗೆಯೇ ಬೌಲರುಗಳಾಗಿ ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್ ಹಾಗೂ ದುಷ್ಮಂತ ಚಮೀರಾಗೆ ಸ್ಥಾನ ನೀಡಿದ್ದಾರೆ. ಇದಾಗ್ಯೂ 11ನೇ ಆಟಗಾರ ಯಾರು ಎಂಬುದನ್ನು ಹೆಸರಿಸಲು ಚೋಪ್ರಾ ಮರೆತಿದ್ದು, ಹೀಗಾಗಿ ಟೀಮ್ ಇಂಡಿಯಾ ಮಾಜಿ ಆಟಗಾರರನ್ನು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ.
3 / 7
ಅತ್ತ ಮೊದಲಾರ್ಧದಲ್ಲಿ ಅರ್ಧದಲ್ಲೇ ಟೂರ್ನಿ ತೊರೆದಿದ್ದ ಆರ್ಸಿಬಿ ವೇಗಿ ಕೇನ್ ರಿಚರ್ಡ್ಸನ್ ಕೂಡ ಉಳಿದ ಪಂದ್ಯಗಳಿಗೆ ಲಭ್ಯರಿಲ್ಲ ಎಂದು ವರದಿಯಾಗಿದೆ. ಹೀಗಾಗಿಯೇ ಆಸೀಸ್ ವೇಗಿಯ ಸ್ಥಾನಕ್ಕೆ ಮತ್ತೋರ್ವ ಆಟಗಾರನನ್ನು ಆಯ್ಕೆ ಮಾಡಲು ಆರ್ಸಿಬಿ ಫ್ರಾಂಚೈಸಿ ಮುಂದಾಗಿದೆ ಎಂದು ಕೆಲ ಮೂಲಗಳಿಂದ ತಿಳಿದು ಬಂದಿದೆ.
4 / 7
ವರದಿಗಳ ಪ್ರಕಾರ, ಕೇನ್ ರಿಚರ್ಡ್ಸನ್ ಸ್ಥಾನಕ್ಕೆ ಆರ್ಸಿಬಿ ಇಂಗ್ಲೆಂಡ್ ಎಡಗೈ ವೇಗಿ ಜಾರ್ಜ್ ಗಾರ್ಟನ್ ಜೊತೆ ಮಾತುಕತೆ ನಡೆಸಿದೆ ಎಂದು ಹೇಳಲಾಗಿದೆ. ಇತ್ತೀಚೆಗೆ ನಡೆದ ದಿ ಹಂಡ್ರೆಡ್ ಲೀಗ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಗಾರ್ಟನ್ ಆಯ್ಕೆಯಿಂದ ಆರ್ಸಿಬಿ ತಂಡದ ಎಡಗೈ ವೇಗಿಯ ಕೊರತೆಯನ್ನು ನೀಗಿಸಿಕೊಳ್ಳುವ ಪ್ಲ್ಯಾನ್ ರೂಪಿಸಿದೆ.
5 / 7
ಈ ಹಿಂದೆ ತಂಡದಲ್ಲಿದ್ದ ಎಡಗೈ ವೇಗಿ ಡೇನಿಯಲ್ ಸ್ಯಾಮ್ಸ್ ಉಳಿದ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಹೀಗಾಗಿ ಎಡಗೈ ವೇಗಿ ಜಾರ್ಜ್ ಗಾರ್ಟನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಆರ್ಸಿಬಿ ಫ್ರಾಂಚೈಸಿ ಉತ್ಸುಕರಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
6 / 7
ಇದಾಗ್ಯೂ ಆರ್ಸಿಬಿ ತಂಡ ಜಾರ್ಜ್ ಗಾರ್ಟನ್ ಆಯ್ಕೆ ಬಗ್ಗೆ ಇನ್ನೂ ಕೂಡ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಹೀಗಾಗಿ ಕೇನ್ ರಿಚರ್ಡ್ಸನ್ ಸ್ಥಾನ ಯಾರಿಗೆ ಸಿಗಲಿದೆ ಎಂಬುದನ್ನು ತಿಳಿಯಲು ಕೆಲ ದಿನಗಳವರೆಗೆ ಕಾಯಬೇಕಿದೆ.
7 / 7
IPL 2021ರ ದ್ವಿತಿಯಾರ್ಧ ಸೆಪ್ಟೆಂಬರ್ 19 ರಂದು ಶುರುವಾಗಲಿದ್ದು, ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ - ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಹಾಗೆಯೇ ಫೈನಲ್ ಪಂದ್ಯವು ಅಕ್ಟೋಬರ್ 15 ರಂದು ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿದೆ.