IPL 2021: ದುಬೈನಲ್ಲಿ ಉತ್ತಪ್ಪ, ರೈನಾ ಮಕ್ಕಳ ಜೊತೆ ಝೀವಾ ಧೋನಿ ಫುಲ್ ಚಿಲ್

Ziva Dhoni: ಇತ್ತ ಸಿಎಸ್​ಕೆ ತಂಡದ ಆಟಗಾರರು ಮೈದಾನದಲ್ಲಿ ಬೆವರು ಹರಿಸುತ್ತಿದ್ದರೆ, ಅವರ ಕುಟುಂಬ ದುಬೈನಲ್ಲಿ ಸಖತ್ ಎಂಜಾಯ್ ಮಾಡುತ್ತಿದೆ. ಅದರಲ್ಲೂ ಧೋನಿ ಮಗಳು ಝೀವಾ ಫುಲ್ ಜಾಲಿ ಮೂಡ್​ನಲ್ಲಿದ್ದಾರೆ.

IPL 2021: ದುಬೈನಲ್ಲಿ ಉತ್ತಪ್ಪ, ರೈನಾ ಮಕ್ಕಳ ಜೊತೆ ಝೀವಾ ಧೋನಿ ಫುಲ್ ಚಿಲ್
Ziva Dhoni
Follow us
TV9 Web
| Updated By: Vinay Bhat

Updated on:Aug 23, 2021 | 11:13 AM

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) ಭಾಗ-2 ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇದೆ. ಈಗಾಗಲೇ ಯುಎಇಗೆ ತಲುಪಿರುವ ಮೂರು ಬಾರಿಯ ಐಪಿಎಲ್ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್‌ (CSK) ತಂಡವು ಉಳಿದೆಲ್ಲಾ ತಂಡಗಳಿಗಿಂತ ಮೊದಲು ಒಟ್ಟಾಗಿ ಅಭ್ಯಾಸ ಆರಂಭಿಸಿದೆ. ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ತನ್ನ ಸಾಂಪ್ರದಾಯಿಕ ಎದುರಾಳಿ ಮುಂಬೈ ಇಂಡಿಯನ್ಸ್‌ ಎದುರು ಸೆಪ್ಟೆಂಬರ್ 19ರಂದು ಮೊದಲ ಪಂದ್ಯವನ್ನು ಆಡಲಿದೆ.

ಇತ್ತ ಸಿಎಸ್​ಕೆ ತಂಡದ ಆಟಗಾರರು ಮೈದಾನದಲ್ಲಿ ಬೆವರು ಹರಿಸುತ್ತಿದ್ದರೆ, ಅವರ ಕುಟುಂಬ ದುಬೈನಲ್ಲಿ ಸಖತ್ ಎಂಜಾಯ್ ಮಾಡುತ್ತಿದೆ. ಅದರಲ್ಲೂ ಧೋನಿ ಮಗಳು ಝೀವಾ ಫುಲ್ ಜಾಲಿ ಮೂಡ್​ನಲ್ಲಿದ್ದಾರೆ. ರಾಬಿನ್ ಉತ್ತಪ್ಪ ಹಾಗೂ ಸುರೇಶ್ ರೈನಾ ಮಕ್ಕಳ ಜೊತೆ ಝೀವಾ ಧೋನಿ ಸ್ವಿಮ್ಮಿಂಗ್ ಪೂಲ್​ನಲ್ಲಿ ಈಜಾಡುತ್ತಾ ಸಮಯ ಕಳೆಯುತ್ತಿದ್ದಾರೆ.

ಎಲ್ಲರಿಗಿಂತ ಮೊದಲೇ ಐಪಿಎಲ್‌ ಭಾಗ-2ಕ್ಕೆ ಸಿದ್ದತೆ ನಡೆಸಿರುವ ಧೋನಿ ತಂಡವು ಇದೀಗ ಒಟ್ಟಾಗಿ ಮೈದಾನಕ್ಕಿಳಿದಿದೆ. ಧೋನಿ ಬ್ಯಾಟ್‌ ಹಿಡಿದು ಮೈದಾನಕ್ಕಿಳಿದ ಫೋಟೋಗಳು ಹಾಗೂ ಇತರ ಆಟಗಾರರೊಂದಿಗೆ ಸಮಾಲೋಚಿಸುತ್ತಿರುವ ಫೋಟೋಗಳನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ಫ್ರಾಂಚೈಸಿ ತನ್ನ ಅಧಿಕೃತ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೆ ಯುವ ಆಟಗಾರರಿಗೆ ಧೋನಿ ಬ್ಯಾಟಿಂಗ್ ಟ್ರಿಕ್ಸ್ ಹೇಳಿಕೊಡುತ್ತಿದ್ದಾರೆ.

ಸಿಎಸ್ ಕೆ ತಂಡದ ಪ್ರಮುಖ ಸದಸ್ಯರಾದ ಮಹೇಂದ್ರ ಸಿಂಗ್ ಧೋನಿ, ಸುರೇಶ್ ರೈನಾ, ರಾಬಿನ್ ಉತ್ತಪ್ಪ, ದೀಪಕ್ ಚಾಹರ್, ಋತುರಾಜ್ ಗಾಯಕ್ವಾಡ್ ಮುಂತಾದವರು ದುಬೈನ ಐಸಿಸಿ ಕ್ರಿಕೆಟ್ ಅಕಾಡಮೆ ಮೈದಾನದಲ್ಲಿ ಅಭ್ಯಾಸದಲ್ಲಿ ತೊಡಗಿದರು.

ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್‌ 7 ಪಂದ್ಯಗಳನ್ನಾಡಿ 5 ಗೆಲುವು ಹಾಗೂ 2 ಸೋಲಿನೊಂದಿಗೆ 10 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದು, ಐಪಿಎಲ್‌ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಕಳೆದ ಮೇ ತಿಂಗಳಿನಲ್ಲಿ ಟೂರ್ನಿಯ ಮಧ್ಯ ಭಾಗದಲ್ಲಿದ್ದಾಗ ಕೊರೊನಾವೈರಸ್‌ನ ಕಾರಣದಿಂದಾಗಿ ಮುಂದೂಡಲ್ಪಟ್ಟಿತ್ತು. ಹೀಗಾಗಿ ಟೂರ್ನಮೆಂಟ್‌ನ ಉಳಿದ ಪಂದ್ಯಗಳನ್ನು ಯುಎಇನಲ್ಲಿ ಸೆಪ್ಟೆಂಬರ್ 19ರಿಂದ ಆಯೋಜನೆ ಮಾಡಲು ನಿರ್ಧರಿಸಲಾಗಿದೆ. ಎರಡನೇ ಚರಣದ ಈ ಪಂದ್ಯಾವಳಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಕದನದ ಮೂಲಕ ಆರಂಭವಾಗಲಿದೆ.

ಒಟ್ಟು ಮೂರು ತಾಣಗಳಲ್ಲಿ ಇನ್ನುಳಿದ ಪಂದ್ಯಗಳು ನಡೆಯಲಿದೆ. ದುಬೈ, ಅಬುದಾಬಿ ಹಾಗೂ ಶಾರ್ಜಾ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯುತ್ತವೆ. ಅಬುದಾಬಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಪಂದ್ಯಗಳಿಗೆ ಚಾಲನೆ ನೀಡಲಿದೆ. 13 ಪಂದ್ಯಗಳು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಯೋಜನೆಯಾದರೆ ಶಾರ್ಜಾ ಕ್ರೀಡಾಂಗಣದಲ್ಲಿ 10 ಪಂದ್ಯಗಳು ನಡೆಯುತ್ತವೆ. 8 ಪಂದ್ಯಗಳಿಗೆ ಅಬುದಾಬಿ ಆತಿಥ್ಯ ವಹಿಸಲಿದೆ.

IPL 2021: ಫೈನಲ್ ಆಯ್ತು ಆರ್​ಸಿಬಿ ತಂಡ: ಎರಡನೇ ಚರಣಕ್ಕೆ ಕೊಹ್ಲಿ ಸೈನ್ಯ ಹೀಗಿದೆ ನೋಡಿ

India vs England: 3ನೇ ಟೆಸ್ಟ್​ಗೆ ಸಜ್ಜಾಗುತ್ತಿರುವ ಟೀಮ್ ಇಂಡಿಯಾ: ಲೀಡ್ಸ್​ನಲ್ಲಿ ಭರ್ಜರಿ ಅಭ್ಯಾಸ

(IPL 2021 MS Dhoni daughter Ziva plays with Suresh Raina and Robin Uthappa kids Viral Video)

Published On - 11:13 am, Mon, 23 August 21