IPL 2021: ಫೈನಲ್ ಆಯ್ತು ಆರ್​ಸಿಬಿ ತಂಡ: ಎರಡನೇ ಚರಣಕ್ಕೆ ಕೊಹ್ಲಿ ಸೈನ್ಯ ಹೀಗಿದೆ ನೋಡಿ

RCB 2021: ಈಗಾಗಲೇ ಆರ್​ಸಿಬಿ ತಂಡದಲ್ಲಿನ ಸದಸ್ಯರು ಬೆಂಗಳೂರಿಗೆ ಬಂದಿದ್ದು, ಇಲ್ಲಿ ಏಳು ದಿನಗಳ ಕ್ವಾರಂಟೈನ್​ನಲ್ಲಿ ಇರಬೇಕಿದೆ. ನಂತರ ಕೋವಿಡ್ ಟೆಸ್ಟ್ ನಡೆಸಿ ವರದಿ ನೆಗೆಟಿವ್ ಬಂದ ಮೇಲೆ ಯುಎಇಗೆ ತೆರಳಲಿದ್ದಾರೆ.

IPL 2021: ಫೈನಲ್ ಆಯ್ತು ಆರ್​ಸಿಬಿ ತಂಡ: ಎರಡನೇ ಚರಣಕ್ಕೆ ಕೊಹ್ಲಿ ಸೈನ್ಯ ಹೀಗಿದೆ ನೋಡಿ
ಇನ್ನು ಸ್ಪಿನ್ ಆಲ್ ರೌಂಡರ್ ಆಗಿ ಶಹಬಾಜ್ ಅಹ್ಮದ್ ಮತ್ತು ನ್ಯೂಜಿಲ್ಯಾಂಡ್ ವೇಗಿ ಕೈಲ್ ಜೇಮೀಸನ್ ಅವರನ್ನು ಕ್ರಮವಾಗಿ ನಂ .6 ಮತ್ತು ನಂ .7 ರಲ್ಲಿ ಆಯ್ಕೆ ಮಾಡಿದ್ದಾರೆ. ಹಾಗೆಯೇ ಬೌಲರುಗಳಾಗಿ ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್ ಹಾಗೂ ದುಷ್ಮಂತ ಚಮೀರಾಗೆ ಸ್ಥಾನ ನೀಡಿದ್ದಾರೆ. ಇದಾಗ್ಯೂ 11ನೇ ಆಟಗಾರ ಯಾರು ಎಂಬುದನ್ನು ಹೆಸರಿಸಲು ಚೋಪ್ರಾ ಮರೆತಿದ್ದು, ಹೀಗಾಗಿ ಟೀಮ್ ಇಂಡಿಯಾ ಮಾಜಿ ಆಟಗಾರರನ್ನು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ.
Follow us
| Updated By: Vinay Bhat

Updated on:Aug 23, 2021 | 10:09 AM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) 14ನೇ ಆವೃತ್ತಿಯ ಎರಡನೇ ಚರಣ ಆರಂಭಕ್ಕೆ ದಿನಗಣನೆ ಶುರುವಾಗಲಿದೆ. ಮುಂದಿನ ತಿಂಗಳು ಸೆಪ್ಟೆಂಬರ್ 19 ರಂದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ (CSK vs MI) ತಂಡಗಳು ಮುಖಾಮುಖಿ ಆಗುವ ಮೂಲಕ ಯುಎಇನಲ್ಲಿ (UAE) ಐಪಿಎಲ್ 2021ಕ್ಕೆ ಮತ್ತೆ ಚಾಲನೆ ಸಿಗಲಿದೆ. ಈಗಾಗಲೇ ಸಿಎಸ್​ಕೆ, ಮುಂಬೈ, ಡೆಲ್ಲಿ ಸೇರಿದಂತೆ ಕೆಲ ತಂಡಗಳು ದುಬೈಗೆ ತೆರಳಿದೆ. ಈ ಬಾರಿ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ತಿಂಗಳಾಂತ್ಯದಲ್ಲಿ ದುಬೈ ಫ್ಲೈಟ್ ಏರಲಿದೆ.

ಈಗಾಗಲೇ ಆರ್​ಸಿಬಿ ತಂಡದಲ್ಲಿನ ಸದಸ್ಯರು ಬೆಂಗಳೂರಿಗೆ ಬಂದಿದ್ದು, ಇಲ್ಲಿ ಏಳು ದಿನಗಳ ಕ್ವಾರಂಟೈನ್​ನಲ್ಲಿ ಇರಬೇಕಿದೆ. ನಂತರ ಕೋವಿಡ್ ಟೆಸ್ಟ್ ನಡೆಸಿ ವರದಿ ನೆಗೆಟಿವ್ ಬಂದ ಮೇಲೆ ಯುಎಇಗೆ ತೆರಳಲಿದ್ದಾರೆ. ಎರಡನನೇ ಚರಣಕ್ಕೆ ಆರ್​ಸಿಬಿ ತಂಡದಲ್ಲಿ ಪ್ರಮುಖ ಬದಲಾವಣೆಯಾಗಿದ್ದು ಇದೀಗ ಅಂತಿಮವಾಗಿದೆ. ಮೂರು ಬದಲಿ ಆಟಗಾರರನ್ನು ಕೊಹ್ಲಿ ಪಡೆ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.

ಆ್ಯಡಂ ಝಂಪಾ ಬದಲು ವಾನಿಂದು ಹಸರಂಗ, ಡ್ಯಾನಿಯಲ್ ಸ್ಯಾಮ್ಸ್ ಬದಲು ದುಶ್ಮಂತ ಚಮೀರಾ ಹಾಗೂ ಫಿನ್ ಅಲೆನ್ ಬದಲು ಟಿಮ್ ಡೇವಿಡ್ ತಂಡ ಸೇರಿಕೊಂಡಿದ್ದಾರೆ. ಇದರ ನಡುವೆ ಮತ್ತೊಬ್ಬ ಆಸ್ಟ್ರೇಲಿಯಾದ ಬೌಲರ್ ಕೇನ್ ರಿಚರ್ಡ್​ಸನ್ ಲಭ್ಯತೆ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಐಪಿಎಲ್ 2021 ಎರಡನೇ ಚರಣಕ್ಕೆ ಆರ್​ಸಿಬಿ ತಂಡ ಇಲ್ಲಿದೆ ನೋಡಿ.

ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್, ದೇವದತ್ ಪಡಿಕ್ಕಲ್, ಮೊಹಮ್ಮದ್ ಸಿರಾಜ್, ನವ್​ದೀಪ್ ಸೈನಿ, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಹಾಲ್, ಜೊಷ್ ಫಿಲಿಪ್, ಸಚಿನ್ ಬೇಬಿ, ಹರ್ಷಲ್ ಪಟೇಲ್, ರಜತ್ ಪಟಿದರ್, ಮೊಹಮ್ಮದ್ ಅಜರುದ್ದೀನ್, ಕೈಲ್ ಜಿಮಿಸನ್, ಶ್ರೀಕರ್ ಭರತ್, ಸುಯೇಶ್ ಪ್ರಭುದೇಸಾಯ್, ಡೆನಿಯಲ್ ಕ್ರಿಸ್ಟಿಯನ್, ಶಹ್ಬಾಜ್ ಅಹ್ಮದ್, ಕೇನ್ ರಿಚರ್ಡ್​ಸನ್, ಗ್ಲೆನ್ ಮ್ಯಾಕ್ಸ್​ವೆಲ್, ವಾನಿಂದು ಹಸರಂಗ, ದುಶ್ಮಂತ ಚಮೀರಾ, ಟಿಮ್ ಡೇವಿಡ್.

ಇತ್ತ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಬದಲಿ ಆಟಗಾರರ ಹುಡುಕಾಟದಲ್ಲಿ ನಿರತವಾಗಿದೆ. ಪಂಜಾಬ್ ಕಿಂಗ್ಸ್ ಪರ ರಿಲೆ ಮೆರಡಿತ್ ಹಾಗೂ ಜೇ ರಿಚರ್ಡ್​ಸನ್ ಲಭ್ಯರಿಲ್ಲ. ಇದರ ಜಾಗಕ್ಕೆ ನೇಥನ್ ಎಲಿಸ್ ಮಾತ್ರ ಆಯ್ಕೆಯಾಗಿದ್ದಾರೆ. ಇತ್ತ ಕೆಕೆಆರ್ 15.5 ಕೋಟಿ ಕೊಟ್ಟು ಖರೀದಿ ಮಾಡಿದ ಪ್ಯಾಟ್ ಕಮಿನ್ಸ್ ಹೊರಗುಳಿದಿದ್ದಾರೆ. ಇವರ ಜಾಗಕ್ಕೆ ಬದಲಿ ಆಟಗಾರನನ್ನು ಇನ್ನೂ ಪ್ರಕಟಿಸಿಲ್ಲ.

ಆರ್​ಸಿಬಿ ಪಂದ್ಯಗಳ ವೇಳಾಪಟ್ಟಿ:

ಸೆಪ್ಟೆಂಬರ್ 20- KKR vs RCB- ಅಬುಧಾಬಿ (ರಾತ್ರಿ 7.30ಕ್ಕೆ)

ಸೆಪ್ಟೆಂಬರ್ 24- RCB vs CSK- ಶಾರ್ಜಾ (ರಾತ್ರಿ 7.30ಕ್ಕೆ)

ಸೆಪ್ಟೆಂಬರ್ 26- RCB vs MI- ದುಬೈ ( ರಾತ್ರಿ 7. 30ಕ್ಕೆ)

ಸೆಪ್ಟೆಂಬರ್ 29- RR vs RCB- ದುಬೈ ( ರಾತ್ರಿ 7. 30ಕ್ಕೆ)

ಅಕ್ಟೋಬರ್-3 RCB vs PBKS – ಶಾರ್ಜಾ ( ಸಂಜೆ 3.30ಕ್ಕೆ)

ಅಕ್ಟೋಬರ್-6 RCB vs SRH – ಅಬುಧಾಬಿ (ರಾತ್ರಿ 7.30ಕ್ಕೆ)

ಅಕ್ಟೋಬರ್-8 RCB vs DC – ದುಬೈ ( ರಾತ್ರಿ 7. 30ಕ್ಕೆ)

India vs England: 3ನೇ ಟೆಸ್ಟ್​ಗೆ ಸಜ್ಜಾಗುತ್ತಿರುವ ಟೀಮ್ ಇಂಡಿಯಾ: ಲೀಡ್ಸ್​ನಲ್ಲಿ ಭರ್ಜರಿ ಅಭ್ಯಾಸ

Virat Kohli: ಕೊಹ್ಲಿಯ ಆ ವರ್ತನೆ ಮಿತಿಯಲ್ಲಿರಬೇಕು: ವಿರಾಟ್​ಗೆ ಕ್ಲಾಸ್ ತೆಗೆದುಕೊಂಡ ಭಾರತದ ಮಾಜಿ ಆಟಗಾರ

(IPL 2021 Virat Kohli RCB finalise squad KKR and Punjab Kings looking for replacements from Phase 2 in UAE)

Published On - 9:57 am, Mon, 23 August 21

ತಾಜಾ ಸುದ್ದಿ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!
ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್
ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್
ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ
ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ