Virat Kohli: ಕೊಹ್ಲಿಯ ಆ ವರ್ತನೆ ಮಿತಿಯಲ್ಲಿರಬೇಕು: ವಿರಾಟ್​ಗೆ ಕ್ಲಾಸ್ ತೆಗೆದುಕೊಂಡ ಭಾರತದ ಮಾಜಿ ಆಟಗಾರ

83 ವರ್ಷದ ಫಾರೂಖ್, ಭಾರತ ತಂಡದ ನಾಯಕ ಕೊಹ್ಲಿ ವಿರೋಧಿಗಳೊಂದಿಗೆ ಮಾತಿನ ಚಕಮಕಿಯಲ್ಲಿ ತೊಡಗಿಕೊಳ್ಳುವಾಗ ಎಚ್ಚರಿಕೆ ವಹಿಸಬೇಕೆಂದು ಹೇಳಿದ್ದಾರೆ.

Virat Kohli: ಕೊಹ್ಲಿಯ ಆ ವರ್ತನೆ ಮಿತಿಯಲ್ಲಿರಬೇಕು: ವಿರಾಟ್​ಗೆ ಕ್ಲಾಸ್ ತೆಗೆದುಕೊಂಡ ಭಾರತದ ಮಾಜಿ ಆಟಗಾರ
Virat Kohli
Follow us
TV9 Web
| Updated By: Vinay Bhat

Updated on: Aug 23, 2021 | 8:12 AM

ಆಂಗ್ಲರ ನಾಡಿನಲ್ಲಿ ಬೀಡುಬಿಟ್ಟಿರುವ ಭಾರತ ತಂಡ ಇಂಗ್ಲೆಂಡ್ (India vs England) ವಿರುದ್ಧದ ಮೂರನೇ ಟೆಸ್ಟ್​ಗೆ ಸಜ್ಜಾಗುತ್ತಿದೆ. ಆಗಸ್ಟ್ 25 ಬುಧವಾರದಿಂದ ಲೀಡ್ಸ್​ನಲ್ಲಿ ಮೂರನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಮೊದಲ ಟೆಸ್ಟ್ ಡ್ರಾನಲ್ಲಿ ಅಂತ್ಯಕಂಡರೆ, ಎರಡನೇ ಟೆಸ್ಟ್​ನಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಕೊಹ್ಲಿ ಪಡೆ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇದರ ನಡುವೆ ಟೀಮ್ ಇಂಡಿಯಾದ ಮಾಜಿ ಆಟಗಾರ ಫಾರೂಖ್‌ ಇಂಜಿನಿಯರ್‌ ನಾಯಕ ವಿರಾಟ್ ಕೊಹ್ಲಿ (Virat Kohli) ವರ್ತನೆ ಬಗ್ಗೆ ಮಾತನಾಡಿದ್ದಾರೆ.

ಎದುರಾಳಿಯ ವಿರುದ್ಧ ವಿರಾಟ್ ಕೊಹ್ಲಿ ಕೆಚ್ಚೆಗೆಯ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಕ್ಕೆ ಪ್ರಶಂಸೆ ವ್ಯಕ್ತಪಡಿಸಿದ ಇವರು ಭಾರತ ಅದ್ಭುತವಾದ ಹೋರಾಟದ ಮನೋಭಾವ ಪ್ರದರ್ಶಿಸುವ ಮೂಲಕ ಸಾಧಿಸಿದ ಐತಿಹಾಸಿಕ ಜಯವನ್ನು ಫಾರೂಕ್ ಇಂಜೀನಿಯರ್ ಉಲ್ಲೇಖಿಸಿದ್ದಾರೆ.

ಇದೇವೇಳೆ 83 ವರ್ಷದ ಫಾರೂಖ್, ಭಾರತ ತಂಡದ ನಾಯಕ ಕೊಹ್ಲಿ ವಿರೋಧಿಗಳೊಂದಿಗೆ ಮಾತಿನ ಚಕಮಕಿಯಲ್ಲಿ ತೊಡಗಿಕೊಳ್ಳುವಾಗ ಎಚ್ಚರಿಕೆ ವಹಿಸಬೇಕೆಂದು ಹೇಳಿದ್ದಾರೆ. ”ಆತ ಆಕ್ರಮಣಕಾರಿ ನಾಯಕನಾಗಿದ್ದಾನೆ. ಇದು ಒಳ್ಳೆಯದು. ಅದಕ್ಕಾಗಿ ನಾನು ವಿರಾಟ್ ಅನ್ನು ಮೆಚ್ಚುತ್ತೇನೆ. ಆದರೆ ಇದು ಮಿತಿಯಲ್ಲಿರಬೇಕು. ಇಲ್ಲದಿದ್ದರೆ ಅಂಪೈರ್ ಅಥವಾ ಮ್ಯಾಚ್ ರೆಫರಿ ಮಧ್ಯಪ್ರವೇಶಿಸಬಹುದು“ ಎಂದು ಎಂಜಿನಿಯರ್ ಹೇಳಿದರು.

“ಅಲ್ಲದೆ, ಎದುರಾಳಿಗಳು ಸ್ಲೆಡ್ಜಿಂಗ್ ಮಾಡುತ್ತಾರೆ, ಇದರಿಂದ ನಿಮ್ಮ ಬ್ಯಾಟ್ಸ್‌ಮನ್ ಆತ್ಮವಿಶ್ವಾಸ ಕಳೆದುಕೊಳ್ಳುತ್ತಾರೆ. ಆದರೆ ಬುಮ್ರಾ ಮತ್ತು ಶಮಿ, ಅವರು ತಮ್ಮದೇ ರೀತಿಯಲ್ಲಿ ಉತ್ತರಿಸಿದರು. ಇದರ ಮೂಲಕ ಅವರು ವಿರಾಟ್ ಇನ್ನಿಂಗ್ಸ್ ಡಿಕ್ಲೇರ್ ಮಾಡಲು ಅನುವು ಮಾಡಿಕೊಡುವಲ್ಲಿ ಬಹಳಷ್ಟು ರನ್ ಗಳನ್ನು ನೀಡಿದರು. ಇದು ಮಹತ್ವದ್ದಾಗಿತ್ತು ಎಂದು ಫಾರೂಖ್ ಇಂಜಿನಿಯರ್ ಹೇಳಿದರು.

ಇನ್ನೂ ಇದೇವೇಳೆ ಪೂಜಾರ ಅಥವಾ ರಹಾನೆ ಅವರ ಬದಲು ಸೂರ್ಯಕುಮಾರ್‌ಗೆ ಸ್ಥಾನ ಕಲ್ಪಿಸಬೇಕೆಂದು ಅಭಿಪ್ರಾಯ ಪಟ್ಟಿದ್ದಾರೆ. “ಮೊದಲನೇಯದಾಗಿ ನಾನು ಸೂರ್ಯಕುಮಾರ್‌ ಯಾದವ್‌ರ ಅಭಿಮಾನಿ. ನನಗೆ ಅನಿಸಿದ ಹಾಗೆ ಆತ ಕ್ಲಾಸ್‌ ಆಟಗಾರ. ಈ ಹಿನ್ನೆಲೆಯಲ್ಲಿ ಪೂಜಾರ ಅಥವಾ ರಹಾನೆ ಅವರಲ್ಲಿ ಒಬ್ಬರ ಸ್ಥಾನಕ್ಕೆ ಸೂರ್ಯಕುಮಾರ್‌ ಯಾದವ್‌ರನ್ನು ಆಯ್ಕೆ ಮಾಡುತ್ತೇನೆ. ಈ ಇಬ್ಬರೂ ಕ್ಲಾಸ್ ಆಟಗಾರರು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಸೂರ್ಯ ಮ್ಯಾಚ್‌-ವಿನ್ನರ್‌,” ಎಂದು ತಿಳಿಸಿದ್ದಾರೆ.

“ಅಷ್ಟೇ ಅಲ್ಲದೆ, ಸೂರ್ಯಕುಮಾರ್ ಯಾದವ್‌ ಆಕ್ರಮಣಕಾರಿ ಆಟಗಾರ. ಅವರು ಬೇಕಾದರೆ, 70 ರಿಂದ 80 ಎಸೆತಗಳಲ್ಲಿ ಶತಕ ಸಿಡಿಸಬಲ್ಲರು. ಜತೆಗೆ ಅವರು ಅದ್ಭುತ ಬ್ಯಾಟ್ಸ್‌ಮನ್‌, ಅದ್ಭುತ ಫೀಲ್ಡರ್‌ ಹಾಗೂ ಅದ್ಭುತ ಮಾನವೀಯ ಗುಣಗಳನ್ನು ಹೊಂದಿದ್ದಾರೆ,” ಎಂದು ಫಾರೂಖ್ ಇಂಜಿನಿಯರ್‌ ಹೇಳಿದ್ದಾರೆ.

Wanindu Hasaranga: ಹಸರಂಗರನ್ನು ಆರ್​ಸಿಬಿ ಖರೀದಿಸಲು ನಿಜವಾದ ಕಾರಣ ಬಹಿರಂಗ

IPL 2021: ಆರ್​ಸಿಬಿ ಸೇರಿದ ಹಸರಂಗ, ಚಮೀರಾ; ಇದರ ಬಗ್ಗೆ ಮಾಹಿತಿ ಇಲ್ಲ ಎಂದ ಶ್ರೀಲಂಕಾ ಕ್ರಿಕೆಟ್ ಮಂಡಳಿ

(India vs England Admire Virat Kohli but his aggression should be within limits says Farokh Engineer)

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ