ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಆರ್‌ಸಿಬಿ ಸತತ ಎರಡನೇ ಸೋಲು ಅನುಭವಿಸಿದೆ. ಲಕ್ನೋ ವಿರುದ್ಧ ನಡೆದ ಈ ಪಂದ್ಯದ ಕೊನೆಯ ಎಸೆತದವರೆಗೂ ತುಂಬಾ ರೋಮಾಂಚನಕಾರಿಯಾಗಿತ್ತು. ಅಂತಿಮವಾಗಿ ಕೊನೆಯ ಎಸೆತದಲ್ಲಿ ಲಕ್ನೋ ತಂಡ ಗೆಲುವು ಸಾಧಿಸಿತು. ಲಕ್ನೋ ಪರ ಸ್ಫೋಟಕ ಬ್ಯಾಟಿಂಗ್ ಮಾಡಿದ ಸ್ಟೋಯ್ನಿಸ್ ಹಾಗೂ ಪೂರನ್ ತಂಡದ ಗೆಲುವಿನ ಹೀರೋ ಎನಿಸಿಕೊಂಡರು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಅರ್ಧಶತಕ ನೆರವಿನಿಂದ 213 ರನ್ಗಳ ಬೃಹತ್ ಟಾರ್ಗೆಟ್ ಸೆಟ್ ಮಾಡಿತು. ಈ ಗುರಿ ಬೆನ್ನಟ್ಟಿದ ಲಕ್ನೋ ಆರಂಭಿಕ ಆಘಾತದ ಹೊರತಾಗಿಯೂ ಸ್ಟೋಯ್ನಿಸ್ ಹಾಗೂ ಪೂರನ್ ಅವರ ಅರ್ಧಶತಕದ ಆಧಾರದ ಮೇಲೆ 1 ವಿಕೆಟ್ನಿಂದ ಗೆಲುವು ಸಾಧಿಸಿತು.
ಕೊನೆಯ ಓವರ್‌ನ 5ನೇ ಎಸೆತದಲ್ಲಿ ಜಯವ್‌ದೇವ್ ಉನದ್ಕಟ್ ಅವರನ್ನು ಹರ್ಷಲ್ ಪಟೇಲ್ ಔಟ್ ಮಾಡಿದರು. ಇದಾದ ಬಳಿಕ ಲಕ್ನೋಗೆ ಕೊನೆಯ ಎಸೆತದಲ್ಲಿ 1 ರನ್ ಅಗತ್ಯವಿದ್ದು, ಕೊನೆಯ ಎಸೆತದಲ್ಲಿ ಅವೇಶ್ ಖಾನ್ ಸಿಂಗಲ್ ರನ್ ಗಳಿಸಿ ಲಕ್ನೋಗೆ ಜಯ ತಂದುಕೊಟ್ಟರು.
ಹರ್ಷಲ್ ಪಟೇಲ್ 20ನೇ ಓವರ್‌ನ ಎರಡನೇ ಎಸೆತದಲ್ಲಿ ಮಾರ್ಕ್ ವುಡ್ ಅವರನ್ನು ಬೌಲ್ಡ್ ಮಾಡಿದರು. ಕೊನೆಯ ಓವರ್ ತುಂಬಾ ರೋಮಾಂಚನಕಾರಿಯಾಗಿದೆ.
19ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಆಯುಷ್ ಬಡೋನಿ ಸಿಕ್ಸರ್ ಬಾರಿಸಿದರು. ಆದರೆ ಆ ಬಳಿಕ ಹಿಟ್ ವಿಕೆಟ್ ಆದರು. ಬದೋನಿ 30 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು.
17ನೇ ಓವರ್ ಎಸೆದ ಸಿರಾಜ್, ಪೂರನ್ ವಿಕೆಟ್ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಆರ್‌ಸಿಬಿ ಗೆಲುವನ್ನು ನಿಕೋಲಸ್ ಪೂರನ್ ಕಸಿದುಕೊಳ್ಳುತ್ತಿದ್ದಾರೆ. 16ನೇ ಓವರ್‌ನ ಕೊನೆಯ ಎಸೆತದಲ್ಲೂ ಸಿಕ್ಸರ್ ಬಾರಿಸಿದ ಪೂರನ್ ಲಕ್ನೋ ತಂಡವನ್ನು ಗೆಲುವಿನ ಸಮೀಪ ತಂದಿದ್ದಾರೆ.
ಪೂರನ್ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದಾರೆ. 14ನೇ ಓವರ್ನಲ್ಲಿ ಹರ್ಷಲ್ 2 ಸಿಕ್ಸ್ ಹಾಗೂ 1 ಬೌಂಡರಿ ನೀಡದರೆ, 15ನೇ ಓವರ್ನಲ್ಲಿ ಪರ್ನೆಲ್ 1 ಸಿಕ್ಸರ್ ಹಾಗೂ 2 ಬೌಂಡರಿ ನೀಡಿದರು.
12ನೇ ಓವರ್ನಲ್ಲಿ ರಾಹುಲ್ ವಿಕೆಟ್ ತೆಗೆದ ಸಿರಾಜ್ 2 ಬೌಂಡರಿ ನೀಡಿ ದುಬಾರಿಯಾದರು. 3ನೇ ಎಸೆತದಲ್ಲಿ ಬದೋನಿ ಬೌಂಡರಿ ಬಾರಿಸಿದರೆ, ಕೊನೆಯ ಎಸೆತದಲ್ಲಿ ಪೂರನ್ ಬೌಂಡರಿ ಬಾರಿಸಿದರು.
12ನೇ ಓವರ್ ಬೌಲ್ ಮಾಡಲು ಬಂದ ಸಿರಾಜ್ ಕೊನೆಗೂ ನಾಯಕ ರಾಹುಲ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 11ನೇ ಓವರ್ 6ನೇ ಎಸೆತದಲ್ಲಿ ಪೂರನ್ ಭರ್ಜರಿ ಸಿಕ್ಸರ್ ಕೂಡ ಬಾರಿಸಿದರು.
30 ಎಸೆತಗಳಲ್ಲಿ 65 ರನ್ ಗಳಿಸಿ ಅಬ್ಬರಿಸುತ್ತಿದ್ದ ಸ್ಟೋಯ್ನಿಸ್ ಕೊನೆಗೂ ಕರಣ್ ಶರ್ಮಾ ಬೌಲಿಂಗ್ನಲ್ಲಿ ಕ್ಯಾಚಿತ್ತು ಔಟಾಗಿದ್ದಾರೆ.
10ನೇ ಓವರ್ನಲ್ಲೂ ಸ್ಟೋಯ್ನಿಸ್ 2 ಸಿಕ್ಸರ್ ಬಾರಿಸಿದರು. ಇದರೊಂದಿಗೆ ಲಕ್ನೋ ಸ್ಕೋರ್ 90 ರ ಗಡಿ ದಾಟಿದೆ.
9ನೇ ಓವರ್ ಎಸೆಯಲು ಬಂದ ಕರಣ್ ಶರ್ಮಾ ಕೂಡ ದುಬಾರಿಯಾದರು. ಈ ಓವರ್ನಲ್ಲಿ ಮತ್ತೆ ಅಬ್ಬರಿಸಿದ ಸ್ಟೋಯ್ನಿಸ್ 1 ಸಿಕ್ಸರ್ ಹಾಗೂ 2 ಬೌಂಡರಿ ಬಾರಿಸಿದರು.
ಹರ್ಷಲ್ ಪಟೇಲ್ ಎಸೆದ 8ನೇ ಓವರ್ನಲ್ಲಿ ಸ್ಟೋಯ್ನಿಸ್ 1 ಸಿಕ್ಸರ್ ಹಾಗೂ 2 ಬೌಂಡರಿ ಬಾರಿಸಿದರು. ತತ್ತರಿಸಿದ ಲಕ್ನೋ ಇನ್ನಿಂಗ್ಸ್ಗೆ ಸ್ಟೋಯ್ನಿಸ್ ಜೀವ ತುಂಬಿದ್ದಾರೆ.
ಪವರ್ ಪ್ಲೇನ ಕೊನೆಯ ಎಸೆತದಲ್ಲಿ ಸ್ಟೋಯ್ನಿಸ್, ಪರ್ನೆಲ್ಗೆ ಬೌಂಡರಿ ಬಾರಿಸಿದರು. 6 ಓವರ್ ಅಂತ್ಯಕ್ಕೆ ಲಕ್ನೋ 3 ವಿಕೆಟ್ ಕಳೆದುಕೊಂಡು 37 ರನ್ ಗಳಿಸಿದೆ.
4ನೇ ಓವರ್‌ನ ಕೊನೆಯ ಎಸೆತದಲ್ಲಿ ಪರ್ನೆಲ್ ಇನ್ನೊಂದು ವಿಕೆಟ್ ಪಡೆದರು. ಹೂಡಾ ವಿಕೆಟ್ ಬಳಿಕ ಬಂದ ಕೃನಾಲ್ ಕೀಪರ್ ಕೈಗೆ ಕ್ಯಾಚಿತ್ತು ಶೂನ್ಯಕ್ಕೆ ಔಟಾದರು.
4ನೇ ಓವರ್ ಎಸೆಯಲು ಬಂದ ಪರ್ನೆಲ್ಗೆ ಹೂಡಾ 3ನೇ ಎಸೆತದಲ್ಲಿ ಬೌಂಡರಿ ಬಾರಿಸಿದರು. ಆದರೆ 5ನೇ ಎಸೆತದಲ್ಲಿ ಕೀಪರ್ ಕೈಗೆ ಕ್ಯಾಚಿತ್ತು ಔಟಾದರು.
ಸಿರಾಜ್ ಎಸೆದ 3ನೇ ಓವರ್ನಲ್ಲಿ ರಾಹುಲ್ ಡೀಪ್ ಮಿಡ್ ವಿಕೆಟ್ನಲ್ಲಿ ಬೌಂಡರಿ ಬಾರಿಸಿದರು. ಈ ಓವರ್ನಲ್ಲಿ 6 ರನ್ ಬಂದವು.
ಡೇವಿಡ್ ವಿಲ್ಲಿ ಎಸೆದ ಈ ಓವರ್ನಲ್ಲಿ ಯಾವುದೇ ಬೌಂಡರಿ ಬರಲಿಲ್ಲ. 2 ಓವರ್ ಅಂತ್ಯಕ್ಕೆ ಲಕ್ನೋ 10 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದೆ.
ಲಕ್ನೋ ಪರ ಬ್ಯಾಟಿಂಗ್ ಆರಂಭಿಸಿದ ಮೇಯರ್ಸ್ ಯಾವುದೇ ರನ್ ಗಳಿಸದೆ ಸಿರಾಜ್ ಎಸೆತದ 3ನೇ ಎಸೆತದಲ್ಲಿ ಬೌಲ್ಡ್ ಆಗಿದ್ದಾರೆ.
ಮಾರ್ಕ್ವುಡ್ ಎಸೆದ 20ನೇ ಓವರ್ನಲ್ಲಿ ಮ್ಯಾಕ್ಸ್‌ವೆಲ್ 1 ಸಿಕ್ಸರ್ ಬಾರಿಸಿದರು. ಅಂತಿಮವಾಗಿ ಆರ್‌ಸಿಬಿ 1 ವಿಕೆಟ್ ಕಳೆದುಕೊಂಡು 213 ರನ್ ಕಲೆಹಾಕಿತು. ತಂಡದ ಪರ ಮೂವರು ಟಾಪ್ ಆರ್ಡರ್ ಬ್ಯಾಟರ್ಗಳು ಅರ್ಧಶತಕ ಬಾರಿಸಿದರು.
ಅವೇಶ್ ಖಾನ್ ಎಸೆದ 19ನೇ ಓವರ್‌ನ ಮೊದಲೆರಡು ಎಸೆತಗಳನ್ನು ಸಿಕ್ಸರ್ಗಟ್ಟಿದ ಮ್ಯಾಕ್ಸ್‌ವೆಲ್ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದರು. ಈ ಓವರ್ನಲ್ಲಿ 19 ರನ್ ಬಂದವು.
18ನೇ ಓವರ್ ಎಸೆದ ಜಯದೇವ್ ದುಬಾರಿಯಾದರು., ಈ ಓವರ್‌ನ ಮೊದಲ ಎಸೆತದಲ್ಲಿ ಗ್ಲೆನ್ ಬೌಂಡರಿ ಬಾರಿಸಿದರೆ, 4 ಮತ್ತು 5ನೇ ಎಸೆತದಲ್ಲಿ ಫಾಫ್ ಸಿಕ್ಸರ್ ಬಾರಿಸಿದರೆ, ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿದರು.
17ನೇ ಓವರ್ನಲ್ಲೂ ಆರ್ಸಿಬಿಗೆ ರನ್ ಬಂತು. ಈ ಓವರ್‌ನ ಮೊದಲ ಎಸೆತವನ್ನು ಸಿಕ್ಸರ್ಗಟ್ಟಿದ ಮ್ಯಾಕ್ಸ್‌ವೆಲ್ 5ನೇ ಎಸೆತದಲ್ಲಿ ಬೌಂಡರಿ ಬಾರಿಸಿದರು.
ಮಾರ್ಕ್ವುಡ್ ಎಸೆದ 16ನೇ ಓವರ್‌ನ ಮೊದಲ ಎಸೆತವನ್ನು ಲಾಂಗ್ ಆಫ್ನಲ್ಲಿ ಸಿಕ್ಸರ್ಗಟ್ಟಿದ ನಾಯಕ ಫಾಫ್ ಡುಪ್ಲೆಸಿಸ್ 35 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು.
15ನೇ ಓವರ್ ಎಸೆದ ಬಿಷ್ಣೋಯಿ ಕೊಂಚ ದುಬಾರಿಯಾದರು. ಈ ಓವರ್‌ನ 3ನೇ ಮತ್ತು 4ನೇ ಎಸೆತವನ್ನು ಫಾಫ್ ಸಿಕ್ಸರ್ಗಟ್ಟಿದರೆ, 6ನೇ ಎಸೆತವನ್ನು ಮ್ಯಾಕ್ಸ್‌ವೆಲ್ ಸಿಕ್ಸರ್ ಬಾರಿಸಿದರು.
ಅಮಿತ್ ಮಿಶ್ರಾ ಎಸೆದ 14ನೇ ಓವರ್‌ನ ಮೂರನೇ ಎಸೆತದಲ್ಲಿ ಬೌಂಡರಿ ಬಾರಿಸಿದ ಮ್ಯಾಕ್ಸ್‌ವೆಲ್ ಅದರ ನಂತರದ ಎಸೆತದಲ್ಲಿ ಸಿಕ್ಸರ್ ಬಾರಿಸಿದರು.
12ನೇ ಓವರ್‌ನ 3 ಎಸೆತದಲ್ಲಿ ಬಿಗ್ ಶಾಟ್ ಆಡಲು ಯತ್ನಿಸಿದ ಕೊಹ್ಲಿ ಡೀಪ್ ಮಿಡ್ ವಿಕೆಟ್ನಲ್ಲಿ ಕ್ಯಾಚ್ ನೀಡಿ ಔಟಾದರು.
ಕೃನಾಲ್ ಎಸೆದ 10ನೇ ಓವರ್ನಲ್ಲಿ ಅಂತಿಮವಾಗಿ ಬೌಂಡರಿ ಬಂತು. ಈ ಓವರ್‌ನ 2ನೇ ಎಸೆತವನ್ನು ಲಾಂಗ್ ಆನ್ನಲ್ಲಿ ಕೊಹ್ಲಿ ಸಿಕ್ಸರ್ಗಟ್ಟಿದರೆ, ಫಾಫ್ ಕೂಡ ಬೌಂಡರಿ ಬಾರಿಸಿದರು.
ಬಿಷ್ಣೋಯಿ ಎಸೆದ 9ನೇ ಓವರ್ ಕೂಡ ಕೇವಲ ಸಿಂಗಲ್ಗೆ ಸೀಮಿತವಾಗಿತ್ತು. ಈ ಓವರನ್ನಲ್ಲಿ ಲಾಂಗ್ ಆನ್ನಲ್ಲಿ 1 ಸಿಂಗಲ್ ಕದ್ದ ಕೊಹ್ಲಿ 35 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು.
ಪವರ್ ಪ್ಲೇ ಮುಗಿದ ನಂತರ ಆರ್‌ಸಿಬಿ ಪಾಳಯದ ಬ್ಯಾಟಿಂಗ್ ನಿಧಾನವಾಗಿದೆ. 7 ಮತ್ತು 8ನೇ ಓವರ್ನಲ್ಲಿ ಯಾವುದೇ ಬೌಂಡರಿ ಬರಲಿಲ್ಲ. ಆರ್‌ಸಿಬಿ 68/0
ಮಾರ್ಕ್ವುಡ್ ಎಸೆದ 6ನೇ ಓವರ್ನಲ್ಲಿ ಕೊಹ್ಲಿ ಸ್ಟ್ರೈಟ್ ಹಿಟ್ ಮಾಡಿ ಬೌಂಡರಿ ಬಾರಿಸಿದರೆ, ಅದರ ನಂತರದ ಎಸೆತದಲ್ಲಿ ಮಿಡ್ ವಿಕೆಟ್ ತಲೆಯ ಮೇಲೆ ಸಿಕ್ಸರ್ ಬಾರಿಸಿದರು.
ಕೃನಾಲ್ ಎಸೆದ 5ನೇ ಓವರ್ನಲ್ಲಿ ಕೊಹ್ಲಿ 3ನೇ ಎಸೆತವನ್ನು ಲಾಂಗ್ ಆನ್ನಲ್ಲಿ ಸಿಕ್ಸರ್ಗೆ ಕಳುಹಿಸಿದರು. ಈ ಓವರ್ನಲ್ಲಿ 8 ರನ್ ಬಂದವು.
ಅವೇಶ್ ಖಾನ್ ಎಸೆದ 4ನೇ ಓವರ್‌ನ ಮೊದಲನೇ ಮತ್ತು 3ನೇ ಎಸೆತದಲ್ಲಿ ಕೊಹ್ಲಿ ಬೌಂಡರಿ ಬಾರಿಸಿದರು.
ಕೃನಾಲ್ ಎಸೆದ 3ನೇ ಓವರ್ನಲ್ಲಿ ಫಾಫ್ ಲಾಂಗ್ ಆನ್ನಲ್ಲಿ ಬೌಂಡರಿ ಬಾರಿಸಿದರು. 3 ಓವರ್ ಅಂತ್ಯಕ್ಕೆ ಆರ್‌ಸಿಬಿ 25/0
ಅವೇಶ್ ಖಾನ್ ಎಸೆದ ಎರಡನೇ ಓವರ್ನಲ್ಲಿ ಕೊಹ್ಲಿ 1 ಸಿಕ್ಸರ್ ಹಾಗೂ 1 ಬೌಂಡರಿ ಬಾರಿಸಿದರು.
ಆರ್‌ಸಿಬಿ ಬ್ಯಾಟಿಂಗ್ ಆರಂಭಿಸಿದ್ದು, ತಂಡದ ಪರ ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ಬ್ಯಾಟಿಂಗ್ ಆರಂಭಿಸಿದ್ದಾರೆ. ಉನದ್ಕಟ್ ಎಸೆದ ಈ ಓವರ್ನಲ್ಲಿ 4 ರನ್ ಬಂದವು
ಕೆಎಲ್ ರಾಹುಲ್ (ನಾಯಕ), ಕೈಲ್ ಮೇಯರ್ಸ್, ದೀಪಕ್ ಹೂಡಾ, ಮಾರ್ಕಸ್ ಸ್ಟೊಯಿನಿಸ್, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್, ಜಯದೇವ್ ಉನದ್ಕಟ್, ಅಮಿತ್ ಮಿಶ್ರಾ, ಅವೇಶ್ ಖಾನ್, ಮಾರ್ಕ್ ವುಡ್ ಮತ್ತು ರವಿ ಬಿಷ್ಣೋಯ್.
ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಶಹಬಾಜ್ ಅಹ್ಮದ್, ವೇಯ್ನ್ ಪಾರ್ನೆಲ್, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್.
ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡಲಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ಮುಖಾಮುಖಿಯಾಗಲಿವೆ.
Published On - 6:51 pm, Mon, 10 April 23