
ಐಪಿಎಲ್ 17ನೇ ಸೀಸನ್ನ 30ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 25 ರನ್ಗಳಿಂದ ಮಣಿಸಿದ ಸನ್ ರೈಸರ್ಸ್ ಹೈದರಾಬಾದ್ ತಂಡ ತನ್ನ ಗೆಲುವಿನ ಸರಣಿ ಮುಂದುವರೆಸಿದೆ. ಹಲವು ಇತಿಹಾಸ ಸೃಷ್ಟಿಸಿದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 287 ರನ್ ಗಳಿಸಿತು. ಇದು ಐಪಿಎಲ್ ಇತಿಹಾಸದಲ್ಲಿ ಅತಿ ದೊಡ್ಡ ಸ್ಕೋರ್ ಆಗಿದ್ದು, ಈ ಬೃಹತ್ ಮೊತ್ತ ಕಲೆಹಾಕುವ ಮೂಲಕ ಸನ್ ರೈಸರ್ಸ್ ಹೈದರಾಬಾದ್ ತನ್ನದೇ ದಾಖಲೆಯನ್ನು ಮುರಿಯಿತು. ಇದಕ್ಕೂ ಮುನ್ನ ಇದೇ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಹೈದರಾಬಾದ್ 277 ರನ್ ಗಳಿಸಿತ್ತು. ಈ ಗುರಿಗೆ ಉತ್ತರವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ 200ಕ್ಕೂ ಹೆಚ್ಚು ರನ್ ಗಳಿಸಿದರಾದರೂ ತಂಡಕ್ಕೆ ಗೆಲುವಿನ ದಡ ಮುಟ್ಟಲು ಸಾಧ್ಯವಾಗಲಿಲ್ಲ. ಆರ್‌ಸಿಬಿ ಪರ ನಾಯಕ ಫಾಫ್ ಡುಪ್ಲೆಸಿಸ್ 62 ರನ್‌ಗಳ ಇನ್ನಿಂಗ್ಸ್ ಆಡಿದರೆ, ಕೊನೆಯಲ್ಲಿ ಆರ್‌ಸಿಬಿ ಪರ ಏಕಾಂಗಿ ಹೋರಾಟ ನೀಡಿ ಇಡೀ ಮೈದಾನವೇ ಹುಚ್ಚೆದ್ದು ಕುಣಿಯುವಂತ ಇನ್ನಿಂಗ್ಸ್ ಆಡಿದ ದಿನೇಶ್ ಕಾರ್ತಿಕ್ 35 ಎಸೆತಗಳಲ್ಲಿ 83 ರನ್ ಬಾರಿಸಿದರು.
ನಾಯಕ ಫಾಫ್ ಡುಪ್ಲೆಸಿಸ್ ಮತ್ತು ದಿನೇಶ್ ಕಾರ್ತಿಕ್ ಅವರ ಅದ್ಭುತ ಇನ್ನಿಂಗ್ಸ್‌ನ ಹೊರತಾಗಿಯೂ ಆರ್‌ಸಿಬಿ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಗೆಲುವು ದಾಖಲಿಸಲು ಸಾಧ್ಯವಾಗಲಿಲ್ಲ. ಹೈದರಾಬಾದ್ ನೀಡಿದ 288 ರನ್‌ಗಳ ಗುರಿ ಬೆನ್ನಟ್ಟಿದ ಆರ್‌ಸಿಬಿ 20 ಓವರ್‌ಗಳಲ್ಲಿ ಏಳು ವಿಕೆಟ್‌ಗೆ 262 ರನ್ ಗಳಿಸಲಷ್ಟೇ ಶಕ್ತವಾಯಿತು.
ಆರ್‌ಸಿಬಿ ಪರ ಏಕಾಂಗಿ ಹೋರಾಟ ನಡೆಸಿದ ಕಾರ್ತಿಕ್ 35 ಎಸೆತಗಳಲ್ಲಿ ಐದು ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ 83 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದ್ದಾರೆ. ಆರ್‌ಸಿಬಿ ಗೆಲ್ಲಲು ಆರು ಎಸೆತಗಳಲ್ಲಿ 44 ರನ್ ಗಳಿಸಬೇಕಿದೆ.
ಹೈದರಾಬಾದ್ ವಿರುದ್ಧ ದಿನೇಶ್ ಕಾರ್ತಿಕ್ ಅದ್ಭುತ ಬ್ಯಾಟಿಂಗ್ ಮುಂದುವರಿಸಿದ್ದಾರೆ. ಆರ್‌ಸಿಬಿ ಗೆಲ್ಲಲು 11 ಎಸೆತಗಳಲ್ಲಿ 52 ರನ್ ಅಗತ್ಯವಿದೆ. ಕಾರ್ತಿಕ್ ಜೊತೆಗೆ ಅನುಜ್ ರಾವತ್ ಕೂಡ ಕ್ರೀಸ್‌ನಲ್ಲಿದ್ದಾರೆ.
ಆರ್‌ಸಿಬಿ ಪರ ಏಕಾಂಗಿ ಹೋರಾಟ ನಡೆಸುತ್ತಿರುವ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ 23 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರ್ಣಗೊಳಿಸಿದರು. ಇದರೊಂದಿಗೆ ಆರ್‌ಸಿಬಿ 16.3 ಓವರ್‌ಗಳಲ್ಲಿ ಆರು ವಿಕೆಟ್‌ಗೆ 207 ರನ್ ಗಳಿಸಿದೆ.
ಹೈದರಾಬಾದ್ ನಾಯಕ ಪ್ಯಾಟ್ ಕಮ್ಮಿನ್ಸ್ ಅದ್ಭುತ ಬೌಲಿಂಗ್ ಮಾಡಿ ಮಹಿಪಾಲ್ ಲೊಮ್ರೋರ್ ಅವರ ವಿಕೆಟ್ ಉರುಳಿಸಿದ್ದಾರೆ.
ದಿನೇಶ್ ಕಾರ್ತಿಕ್ ಮತ್ತು ಮಹಿಪಾಲ್ ಲೊಮ್ರೋರ್ ಆರ್‌ಸಿಬಿ ಇನ್ನಿಂಗ್ಸ್ ನಿಭಾಯಿಸಿದ್ದಾರೆ. ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು 13ನೇ ಓವರ್ ಬೌಲ್ ಮಾಡಲು ಬಂದ ಮಯಾಂಕ್ ಮಾರ್ಕಂಡೆ ಅವರ ಓವರ್‌ನಿಂದ 25 ರನ್ ಕಲೆಹಾಕಿದರು. ಆರ್‌ಸಿಬಿ 13 ಓವರ್‌ಗಳ ಅಂತ್ಯಕ್ಕೆ ಐದು ವಿಕೆಟ್‌ಗೆ 160 ರನ್ ಗಳಿಸಿದೆ. ಲೊಮ್ರೋರ್ ಒಂಬತ್ತು ಎಸೆತಗಳಲ್ಲಿ 18 ರನ್ ಹಾಗೂ ದಿನೇಶ್ ಕಾರ್ತಿಕ್ 11 ಎಸೆತಗಳಲ್ಲಿ 16 ರನ್ ಗಳಿಸಿ ಆಡುತ್ತಿದ್ದಾರೆ.
ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಎಸೆತದಲ್ಲಿ ಖಾತೆ ತೆರೆಯದೆ ಸೌರವ್ ಚೌಹಾಣ್ ಔಟಾಗಿದ್ದಾರೆ. ಕಮ್ಮಿನ್ಸ್ ಅದೇ ಓವರ್‌ನಲ್ಲಿ ಡುಪ್ಲೆಸಿಸ್ ಅವರನ್ನು ಔಟ್ ಮಾಡಿದರು ಮತ್ತು ಕೊನೆಯ ಎಸೆತದಲ್ಲಿ ಸೌರವ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಸದ್ಯ ದಿನೇಶ್ ಕಾರ್ತಿಕ್ ಜೊತೆಗೆ ಮಹಿಪಾಲ್ ಲೊಮ್ರೋರ್ ಕ್ರೀಸ್‌ನಲ್ಲಿದ್ದಾರೆ.
ಫಾಫ್ ಡುಪ್ಲೆಸಿಸ್ ಅವರನ್ನು ಔಟ್ ಮಾಡುವ ಮೂಲಕ ಪ್ಯಾಟ್ ಕಮಿನ್ಸ್ ಆರ್‌ಸಿಬಿಗೆ ನಾಲ್ಕನೇ ಹೊಡೆತ ನೀಡಿದರು. ಅಮೋಘ ಫಾರ್ಮ್ ನಲ್ಲಿದ್ದ ಡುಪ್ಲೆಸಿಸ್ 28 ಎಸೆತಗಳಲ್ಲಿ 7 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 62 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. ಹೈದರಾಬಾದ್ ವೇಗಿ ಪ್ಯಾಟ್ ಕಮ್ಮಿನ್ಸ್ ಡುಪ್ಲೆಸಿಸ್ ಗೆ ಪೆವಿಲಿಯನ್ ಹಾದಿ ತೋರಿಸಿದರು.
ಉತ್ತಮ ಆರಂಭದ ನಂತರ ಆರ್‌ಸಿಬಿ ಇನ್ನಿಂಗ್ಸ್ ತತ್ತರಿಸಿ ರಜತ್ ಪಾಟಿದಾರ್ ರೂಪದಲ್ಲಿ ಮೂರನೇ ವಿಕೆಟ್ ಕಳೆದುಕೊಂಡಿದೆ. ಪಾಟಿದಾರ್ ಐದು ಎಸೆತಗಳಲ್ಲಿ ಒಂಬತ್ತು ರನ್ ಗಳಿಸಿ ಔಟಾದರು.
ವಿಲ್ ಜಾಕ್ವೆಸ್ ದುರಾದೃಷ್ಟಕರ ರೀತಿಯಲ್ಲಿ ರನೌಟ್ಗೆ ಬಲಿಯಾಗಿದ್ದಾರೆ. ಉನದ್ಕತ್ ಎಸೆತದಲ್ಲಿ ಡುಪ್ಲೆಸಿಸ್ ಶಾಟ್ ಹೊಡೆದರು, ಆದರೆ ಚೆಂಡು ಉನದ್ಕಟ್ ಅವರ ಬೆರಳಿಗೆ ತಾಗಿ ವಿಕೆಟ್‌ಗೆ ಬಡಿದು ಜಾಕ್ವೆಸ್ ಪೆವಿಲಿಯನ್‌ಗೆ ಮರಳಬೇಕಾಯಿತು. ಇದಕ್ಕೂ ಮುನ್ನ ಆರ್‌ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಅರ್ಧಶತಕ ಬಾರಿಸಿದ್ದರು. ಎಂಟನೇ ಓವರ್‌ನ ಅಂತ್ಯಕ್ಕೆ ಆರ್‌ಸಿಬಿ ಸ್ಕೋರ್ 100ರ ಗಡಿ ದಾಟಿದೆ.
ಮಯಾಂಕ್ ಮಾರ್ಕಂಡೆ ವಿರಾಟ್ ಕೊಹ್ಲಿಯನ್ನು ಔಟ್ ಮಾಡುವ ಮೂಲಕ ಹೈದರಾಬಾದ್‌ಗೆ ಮೊದಲ ಯಶಸ್ಸು ನೀಡಿದರು. ಅಮೋಘ ಫಾರ್ಮ್‌ನಲ್ಲಿದ್ದ ಕೊಹ್ಲಿ ಪವರ್‌ಪ್ಲೇ ಮುಗಿದ ಕೂಡಲೇ ವಿಕೆಟ್ ಕಳೆದುಕೊಂಡರು. ಕೊಹ್ಲಿ 20 ಎಸೆತಗಳಲ್ಲಿ 42 ರನ್ ಗಳಿಸಿ ಔಟಾದರು.
ಆರ್‌ಸಿಬಿ ನಾಯಕ ಡುಪ್ಲೆಸಿಸ್ ಮತ್ತು ಕೊಹ್ಲಿ ಪವರ್‌ಪ್ಲೇಯಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಹೀಗಾಗಿ ಆರು ಓವರ್‌ಗಳ ಅಂತ್ಯದ ನಂತರ ಸ್ಕೋರ್ ಯಾವುದೇ ನಷ್ಟವಿಲ್ಲದೆ 79 ರನ್‌ಗಳಿಗೆ ತಲುಪಿದೆ.
ಆರಂಭಿಕ ಜೋಡಿ ಫಾಫ್ ಡುಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಬಿರುಸಿನ ಬ್ಯಾಟಿಂಗ್‌ನೊಂದಿಗೆ ಆರ್‌ಸಿಬಿಗೆ ವೇಗದ ಆರಂಭ ನೀಡಿದರು. ನಾಲ್ಕು ಓವರ್‌ಗಳ ಅಂತ್ಯಕ್ಕೆ ಸ್ಕೋರ್ 50 ರನ್ ದಾಟಿದೆ. ನಾಲ್ಕು ಓವರ್‌ಗಳ ನಂತರ ಆರ್‌ಸಿಬಿ ಸ್ಕೋರ್ ಯಾವುದೇ ವಿಕೆಟ್ ನಷ್ಟವಿಲ್ಲದೆ 56 ರನ್ ಆಗಿದೆ.
ಹೈದರಾಬಾದ್ ನೀಡಿದ 288 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ಕೂಡ ವೇಗದ ಆರಂಭ ಪಡೆದಿದೆ. ನಾಯಕ ಫಾಫ್ ಡುಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಬಿರುಸಿನ ಆಟವಾಡಿ ಮೂರು ಓವರ್‌ಗಳ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 39 ರನ್ ಗಳಿಸಿದರು. ಡುಪ್ಲೆಸಿಸ್ ಒಂಬತ್ತು ಎಸೆತಗಳಲ್ಲಿ 23 ರನ್ ಹಾಗೂ ಕೊಹ್ಲಿ ಒಂಬತ್ತು ಎಸೆತಗಳಲ್ಲಿ 16 ರನ್ ಗಳಿಸಿ ಆಡುತ್ತಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 287 ರನ್ ಗಳಿಸಿದೆ. ಈ ಪಂದ್ಯವನ್ನು ಗೆಲ್ಲಲು ರಾಯಲ್ ಚಾಲೆಂಜರ್ಸ್ ಬೆಂಗಳೂರು 120 ಎಸೆತಗಳಲ್ಲಿ 288 ರನ್ ಗಳಿಸಬೇಕಾಗಿದೆ.
ಸನ್ ರೈಸರ್ಸ್ ಹೈದರಾಬಾದ್ ತಂಡದ ಅಮೋಘ ಬ್ಯಾಟಿಂಗ್ ಮುಂದುವರಿದಿದ್ದು, 19ನೇ ಓವರ್ ಬೌಲ್ ಮಾಡಲು ಬಂದ ರೀಸ್ ಟೋಪ್ಲೆ ಮೇಲೆ ಅಬ್ದುಲ್ ಸಮದ್ 25 ರನ್ ಬಾರಿಸಿದರು. ಹೈದರಾಬಾದ್ 19 ಓವರ್‌ಗಳ ಅಂತ್ಯಕ್ಕೆ ಮೂರು ವಿಕೆಟ್‌ಗೆ 266 ರನ್ ಗಳಿಸಿದೆ ಮತ್ತು ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ತನ್ನ ದಾಖಲೆಯನ್ನು ಮುರಿಯಲು 11 ರನ್ ದೂರದಲ್ಲಿದೆ.
ವೇಗಿ ಫರ್ಗುಸನ್ ಎಸೆತದಲ್ಲಿ ಹೆನ್ರಿಚ್ ಕ್ಲಾಸೆನ್ ಕ್ಯಾಚಿತ್ತು ಔಟಾದರು. ಕ್ಲಾಸೆನ್ 31 ಎಸೆತಗಳಲ್ಲಿ 67 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಇದು ಈ ಪಂದ್ಯದ ಫರ್ಗುಸನ್ ಅವರ ಎರಡನೇ ವಿಕೆಟ್ ಆಗಿದೆ. ಅಬ್ದುಲ್ ಸಮದ್ ಅವರು ಏಡೆನ್ ಮಾರ್ಕ್ರಾಮ್ ಅವರೊಂದಿಗೆ ಕ್ರೀಸ್‌ನಲ್ಲಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ ಕೇವಲ 15 ಓವರ್‌ಗಳಲ್ಲಿ 200 ರನ್‌ಗಳ ಗಡಿ ದಾಟಿದೆ. ತಂಡದ ಬ್ಯಾಟ್ಸ್‌ಮನ್ ಹೆನ್ರಿಚ್ ಕ್ಲಾಸೆನ್ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದಾರೆ. 15 ಓವರ್‌ಗಳ ಅಂತ್ಯಕ್ಕೆ ಹೈದರಾಬಾದ್ ಸ್ಕೋರ್ ಎರಡು ವಿಕೆಟ್‌ಗೆ 205 ರನ್ ಆಗಿದೆ.
ಸನ್‌ರೈಸರ್ಸ್ ಹೈದರಾಬಾದ್ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ ತಮ್ಮ ಅದ್ಭುತ ಇನ್ನಿಂಗ್ಸ್ ಮುಂದುವರಿಸಿ ಆರ್‌ಸಿಬಿ ವಿರುದ್ಧ 39 ಎಸೆತಗಳಲ್ಲಿ ಶತಕ ಗಳಿಸಿದರು. ಇದು ಐಪಿಎಲ್ ಇತಿಹಾಸದಲ್ಲಿ ನಾಲ್ಕನೇ ವೇಗದ ಶತಕವಾಗಿದೆ. ಹೈದರಾಬಾದ್ ಕೇವಲ 68 ಎಸೆತಗಳಲ್ಲಿ 150 ರನ್ ಪೂರೈಸಿದೆ. 12ನೇ ಓವರ್ ಅಂತ್ಯಕ್ಕೆ ಹೈದರಾಬಾದ್ ಸ್ಕೋರ್ ಒಂದು ವಿಕೆಟ್ ಗೆ 158 ರನ್ ಆಗಿದೆ. ಅಂತಿಮವಾಗಿ ಹೆಡ್ 41 ಎಸೆತಗಳಲ್ಲಿ 102 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಸನ್ ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಅಮೋಘ ಬ್ಯಾಟಿಂಗ್ ಮುಂದುವರಿಸಿದ್ದು, ಶತಕದ ಸನಿಹದಲ್ಲಿದ್ದಾರೆ. 10 ಓವರ್‌ಗಳ ಅಂತ್ಯಕ್ಕೆ ಹೈದರಾಬಾದ್ ಒಂದು ವಿಕೆಟ್‌ಗೆ 128 ರನ್ ಗಳಿಸಿದೆ. ಹೆಡ್ 33 ಎಸೆತಗಳಲ್ಲಿ 86 ರನ್ ಗಳಿಸಿ ಆಡುತ್ತಿದ್ದಾರೆ ಮತ್ತು ಹೆನ್ರಿಕ್ ಕ್ಲಾಸೆನ್ ಐದು ಎಸೆತಗಳಲ್ಲಿ ಮೂರು ರನ್ ಗಳಿಸಿ ಅವರೊಂದಿಗೆ ಕ್ರೀಸ್‌ನಲ್ಲಿದ್ದಾರೆ.
108 ರನ್‌ಗಳಿಗೆ ಹೈದರಾಬಾದ್ ಮೊದಲ ವಿಕೆಟ್ ಕಳೆದುಕೊಂಡಿದೆ. ಆರಂಭಿಕ ಅಭಿಷೇಕ್ 34 ರನ್ ಬಾರಿಸಿ ಟೋಪ್ಲಿಗೆ ಬಲಿಯಾದರು.
ಸನ್‌ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಆರ್‌ಸಿಬಿ ವಿರುದ್ಧ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಹೈದರಾಬಾದ್ ಪವರ್‌ಪ್ಲೇ ಅಂತ್ಯದ ನಂತರ ಯಾವುದೇ ನಷ್ಟವಿಲ್ಲದೆ 76 ರನ್ ಗಳಿಸಿದೆ. ಸದ್ಯ ಹೆಡ್ 21 ಎಸೆತಗಳಲ್ಲಿ 52 ರನ್ ಹಾಗೂ ಅಭಿಷೇಕ್ ಶರ್ಮಾ 15 ಎಸೆತಗಳಲ್ಲಿ 23 ರನ್ ಗಳಿಸಿ ಆಡುತ್ತಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ ವೇಗದ ಆರಂಭವನ್ನು ಮಾಡಿದೆ. ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಮೂರು ಓವರ್‌ಗಳ ಅಂತ್ಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೆ 31 ರನ್ ಕಲೆ ಹಾಕಿದರು.
ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್ (ನಾಯಕ), ವಿಲ್ ಜಾಕ್ವೆಸ್, ರಜತ್ ಪಾಟಿದಾರ್, ಸೌರವ್ ಚೌಹಾಣ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಮಹಿಪಾಲ್ ಲೊಮ್ರೋರ್, ವಿಜಯ್‌ಕುಮಾರ್ ವೈಶಾಕ್, ರೀಸ್ ಟೋಪ್ಲಿ, ಲಾಕಿ ಫರ್ಗುಸನ್, ಯಶ್ ದಯಾಳ್.
ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಏಡೆನ್ ಮಾರ್ಕ್‌ರಾಮ್, ನಿತೀಶ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಜಯದೇವ್ ಉನದ್ಕಟ್, ಟಿ.ನಟರಾಜನ್.
ಟಾಸ್ ಗೆದ್ದ ಆರ್‌ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
ಐಪಿಎಲ್ 17ನೇ ಸೀಸನ್ನ 30ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸುತ್ತಿದೆ. ಈ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.
Published On - 6:33 pm, Mon, 15 April 24