AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

U19 Asia Cup 2025: ಪಾಕಿಸ್ತಾನದ ವಿರುದ್ಧ ಏಷ್ಯಾಕಪ್ ಫೈನಲ್ ಸೋತ ಟೀಂ ಇಂಡಿಯಾ

U19 Asia Cup Final 2025: 2025 ಅಂಡರ್-19 ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನ ಭಾರತವನ್ನು 191 ರನ್‌ಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದಿದೆ. ಸಮೀರ್ ಮಿನ್ಹಾಸ್ ಅವರ ಭರ್ಜರಿ 172 ರನ್‌ಗಳ ನೆರವಿನಿಂದ ಪಾಕಿಸ್ತಾನ ಬೃಹತ್ ಮೊತ್ತ ಗಳಿಸಿತು. ದುಬೈನಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ಕೇವಲ 156 ರನ್‌ಗಳಿಗೆ ಆಲೌಟ್ ಆಗಿ ಹೀನಾಯ ಸೋಲು ಅನುಭವಿಸಿತು. ಇದು ಪಾಕಿಸ್ತಾನದ ಮೊದಲ ಅಂಡರ್-19 ಏಷ್ಯಾಕಪ್ ಟ್ರೋಫಿಯಾಗಿದೆ.

U19 Asia Cup 2025: ಪಾಕಿಸ್ತಾನದ ವಿರುದ್ಧ ಏಷ್ಯಾಕಪ್ ಫೈನಲ್ ಸೋತ ಟೀಂ ಇಂಡಿಯಾ
Team India
ಪೃಥ್ವಿಶಂಕರ
|

Updated on:Dec 21, 2025 | 6:24 PM

Share

2025 ರ ಅಂಡರ್-19 ಏಷ್ಯಾಕಪ್ ಟ್ರೋಫಿ (U19 Asia Cup 2025) ಪಾಕಿಸ್ತಾನದ ಪಾಲಾಗಿದೆ. ದುಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆಯುಷ್ ಮ್ಹಾತ್ರೆ ನಾಯಕತ್ವದ ಟೀಂ ಇಂಡಿಯಾ ಕೇವಲ 156 ರನ್​ಗಳಿಗೆ ಆಲೌಟ್ ಆಗುವ ಮೂಲಕ 191 ರನ್‌ಗಳ ಭಾರಿ ಅಂತರದ ಸೋಲು ಅನುಭವಿಸಿತು. ಇತ್ತ ಟೀಂ ಇಂಡಿಯಾವನ್ನು ಮಣಿಸಿದ ಪಾಕಿಸ್ತಾನ (India vs Pakistan) ಮೊಟ್ಟ ಮೊದಲ ಅಂಡರ್-19 ಏಷ್ಯಾಕಪ್ ಟ್ರೋಫಿಯನ್ನು ಪ್ರಶಸ್ತಿಯನ್ನು ಎತ್ತಿಹಿಡಿದಿದೆ. ವಾಸ್ತವವಾಗಿ 2012 ರಲ್ಲಿ ನಡೆದಿದ್ದ ಈ ಟೂರ್ನಿಯ ಫೈನಲ್ ಪಂದ್ಯದಲ್ಲಿ ಇದೇ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಆದರೆ ಪಂದ್ಯವು ಟೈ ಆಗಿತ್ತು. ಹೀಗಾಗಿ ಎರಡೂ ತಂಡಗಳನ್ನು ಜಂಟಿ ವಿಜೇತರು ಎಂದು ಘೋಷಿಸಲಾಯಿತು. ಇದೀಗ ಪಾಕಿಸ್ತಾನ ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.

2025 ರ ಸೀನಿಯರ್ ಪುರುಷರ ಏಷ್ಯಾಕಪ್ ಮುಗಿದ ಸುಮಾರು ಮೂರು ತಿಂಗಳ ನಂತರ, ಎರಡು ದೇಶಗಳ ಅಂಡರ್-19 ತಂಡಗಳು ಏಷ್ಯಾಕಪ್ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿದ್ದ ಕಾರಣ ಪಂದ್ಯದಲ್ಲಿ ಜಿದ್ದಾಜಿದ್ದಿನ ಹೋರಾಟವನ್ನು ನಿರೀಕ್ಷಿಸಲಾಗಿತ್ತು. ಅಲ್ಲದೆ ಗುಂಪು ಹಂತದ ಪಂದ್ಯದಲ್ಲಿ ಇದೇ ಪಾಕಿಸ್ತಾನವನ್ನು ಭಾರತ ಸೋಲಿಸಿದ್ದ ಕಾರಣ, ಈ ಪಂದ್ಯದಲ್ಲೂ ಭಾರತಕ್ಕೆ ಜಯ ಖಚಿತ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಫೈನಲ್​ನಲ್ಲಿ ಭಾರತದ ಬೌಲಿಂಗ್ ಹಾಗೂ ಬ್ಯಾಟಿಂಗ್‌ ಎರಡೂ ಕಳಪೆಯಾಗಿತ್ತು. ಹೀಗಾಗಿ ಪಂದ್ಯ ಏಕಪಕ್ಷೀಯವಾಗಿ ಅಂತ್ಯವಾಯಿತು.

ಸಮೀರ್ ಮಿನ್ಹಾಸ್ ಸ್ಫೋಟಕ ಶತಕ

ಈ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಆದರೆ ನಾಯಕನ ಈ ನಿರ್ಧಾರ ಸಂಪೂರ್ಣವಾಗಿ ತಪ್ಪೆಂದು ಸಾಬೀತಾಯಿತು. ಈಗಾಗಲೇ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದ ಪಾಕಿಸ್ತಾನದ ಆರಂಭಿಕ ಆಟಗಾರ ಸಮೀರ್ ಮಿನ್ಹಾಸ್ ಮತ್ತೊಂದು ಅದ್ಭುತ ಇನ್ನಿಂಗ್ಸ್ ಆಡಿದರು, ಕೇವಲ 71 ಎಸೆತಗಳಲ್ಲಿ ಶತಕ ಗಳಿಸಿದರು. ಕೇವಲ 113 ಎಸೆತಗಳಲ್ಲಿ 17 ಬೌಂಡರಿ ಮತ್ತು 9 ಸಿಕ್ಸರ್‌ಗಳನ್ನು ಒಳಗೊಂಡ 172 ರನ್ ಬಾರಿಸಿ ಔಟಾದರು. ಮಿನ್ಹಾಸ್ ಔಟಾದ ನಂತರ ಭಾರತ ತಂಡವು ಚೇತರಿಸಿಕೊಂಡರೂ, ಇತ್ತ ಪಾಕಿಸ್ತಾನ ಕೂಡ 8 ವಿಕೆಟ್‌ಗೆ 347 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಿತು.

ಕೈಕೊಟ್ಟ ಭಾರತದ ಬ್ಯಾಟಿಂಗ್ ವಿಭಾಗ

ಗುರಿ ದೊಡ್ಡದಿದ್ದರಿಂದ ಟೀಂ ಇಂಡಿಯಾದ ಗಮನ ವೈಭವ್ ಸೂರ್ಯವಂಶಿ ಮೇಲೆ ಕೇಂದ್ರೀಕೃತವಾಗಿತ್ತು. ಇದಕ್ಕೆ ಪೂರಕವಾಗಿ ವೈಭವ್ ಕೂಡ ಸ್ಫೋಟಕ ಆರಂಭವನ್ನು ನೀಡಿದರು.ಬಂದ ತಕ್ಷಣ ಸಿಕ್ಸರ್‌ಗಳನ್ನು ಸಿಡಿಸಲು ಪ್ರಾರಂಭಿಸಿದರು. ಆದರೆ ನಾಯಕ ಆಯುಷ್ ಮ್ಹಾತ್ರೆ ಇಡೀ ಟೂರ್ನಿಯಲ್ಲಿ ನೀಡಿದ್ದ ಕಳಪೆ ಪ್ರದರ್ಶನವನ್ನು ಫೈನಲ್​ನಲ್ಲಿಯೂ ಮುಂದುವರೆಸಿ, ಕೇವಲ ಎರಡು ರನ್‌ಗಳಿಸಿ ಔಟಾದರು. ಇದಾದ ನಂತರ, ಆರನ್ ಜಾರ್ಜ್ ಕೂಡ ನಾಲ್ಕನೇ ಓವರ್‌ನಲ್ಲಿ ಔಟಾದರು. ಐದನೇ ಓವರ್‌ನ ಮೊದಲ ಎಸೆತದಲ್ಲಿ ವೈಭವ್ (26 ರನ್, 10 ಎಸೆತ) ಔಟಾದಾಗ ಭಾರತ ತಂಡವು ತನ್ನ ಅತಿದೊಡ್ಡ ಹೊಡೆತವನ್ನು ಅನುಭವಿಸಿತು. ಹೀಗಾಗಿ ಭಾರತವು ಕೇವಲ 49 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

156 ರನ್​ಗಳಿಗೆ ಭಾರತ ಆಲೌಟ್

ಆಗಲೂ, ಪಂದ್ಯಾವಳಿಯಲ್ಲಿ ಈಗಾಗಲೇ ಉತ್ತಮ ಇನ್ನಿಂಗ್ಸ್ ಆಡಿದ್ದ ವಿಹಾನ್ ಮಲ್ಹೋತ್ರಾ ಮತ್ತು ಅಭಿಗ್ಯಾನ್ ಕುಂಡು ಅವರಂತಹ ಬ್ಯಾಟ್ಸ್‌ಮನ್‌ಗಳ ಮೇಲೆ ಭರವಸೆ ಹೆಚ್ಚಿತ್ತು. ಆದರೆ ಈ ಬಾರಿ, ಅವರಿಗೂ ಕೂಡ ಪಾಕಿಸ್ತಾನದ ಬೌಲಿಂಗ್ ದಾಳಿಯನ್ನು ಎದುರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಭಾರತ ತಂಡವು ಕೇವಲ 94 ರನ್‌ಗಳಿಗೆ ಏಳು ವಿಕೆಟ್‌ಗಳನ್ನು ಕಳೆದುಕೊಂಡಿತು. 10 ನೇ ಕ್ರಮಾಂಕದಲ್ಲಿ ಬಂದ ದೀಪೇಶ್ ದೇವೇಂದ್ರನ್ ಕೇವಲ 16 ಎಸೆತಗಳಲ್ಲಿ 36 ರನ್ ಗಳಿಸಿ ತಂಡವನ್ನು 156 ಕ್ಕೆ ಕೊಂಡೊಯ್ದರು, ಇದು ಅಂತಿಮ ಸ್ಕೋರ್ ಆಗಿತ್ತು. ಪಾಕಿಸ್ತಾನ ಪರ, ವೇಗಿ ಅಲಿ ರಜಾ ವೈಭವ್ ಸೇರಿದಂತೆ ನಾಲ್ಕು ವಿಕೆಟ್‌ಗಳನ್ನು ಪಡೆದರು.

Published On - 5:24 pm, Sun, 21 December 25

ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ