ಟಿ20 ವಿಶ್ವಕಪ್ (T20 World Cup 2024) ಆರಂಭಕ್ಕೆ ಇನ್ನು ತಿಂಗಳುಗಳು ಮಾತ್ರ ಬಾಕಿಯಿವೆ. ಆದರೆ ಈ ತಿಂಗಳುಗಳ ಅಂತರದಲ್ಲಿ ಟೀಮ್ ಇಂಡಿಯಾ ಮುಂದಿರುವುದು ಕೇವಲ 4 ಟಿ20 ಪಂದ್ಯಗಳು ಮಾತ್ರ. ಹೀಗಾಗಿಯೇ ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಮೂಲಕ ಭಾರತ ತಂಡವು ಪ್ರಯೋಗಕ್ಕೆ ಕೈ ಹಾಕಿದೆ. ಅದು ಕೂಡ ಎಡ-ಬಲ ಬ್ಯಾಟರ್ಗಳ ಮಾಸ್ಟರ್ಪ್ಲ್ಯಾನ್.
ಸೌತ್ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 7 ಬ್ಯಾಟರ್ಗಳನ್ನು ಕಣಕ್ಕಿಳಿಸಿತ್ತು. ಈ ಏಳು ಬ್ಯಾಟರ್ಗಳಲ್ಲಿ ನಾಲ್ವರು ಎಡಗೈ ದಾಂಡಿಗರು ಎಂಬುದು ವಿಶೇಷ.
ಅಂದರೆ ಪ್ಲೇಯಿಂಗ್ ಇಲೆವೆನ್ನಲ್ಲಿ ಎಡಗೈ ದಾಂಡಿಗರ ಕೊರತೆ ಅನುಭವಿಸುತ್ತಿದ್ದ ಟೀಮ್ ಇಂಡಿಯಾ ಇದೀಗ ಒಮ್ಮೆಲೆ ನಾಲ್ವರು ಎಡಗೈ ಬ್ಯಾಟ್ಸ್ಮನ್ಗಳನ್ನು ಕಣಕ್ಕಿಳಿಸಿವೆ. ಈ ಮೂಲಕ ರೈಟ್-ಲೆಫ್ಟ್ ಕಾಂಬಿನೇಷನ್ ರೂಪಿಸಿದ್ದಾರೆ.
ಸೌತ್ ಆಫ್ರಿಕಾ ವಿರುದ್ಧದ ಈ ಪಂದ್ಯದಲ್ಲಿ ಆರಂಭಿಕರಾಗಿ ಬಲಗೈ ದಾಂಡಿಗ ಶುಭ್ಮನ್ ಗಿಲ್ ಜೊತೆ ಎಡಗೈ ದಾಂಡಿಗ ಯಶಸ್ವಿ ಜೈಸ್ವಾಲ್ ಕಣಕ್ಕಿಳಿದಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಲೆಫ್ಟ್ ಹ್ಯಾಂಡ್ ಬ್ಯಾಟರ್ ತಿಲಕ್ ವರ್ಮಾ ಆಡಿದ್ದರು. ಇನ್ನು 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದದ್ದು ಬಲಗೈ ಬ್ಯಾಟರ್ ಸೂರ್ಯಕುಮಾರ್ ಯಾದವ್.
ಇನ್ನು ಐದನೇ ಕ್ರಮಾಂಕದಲ್ಲಿ ಮತ್ತೆ ಎಡಗೈ ದಾಂಡಿಗನಾಗಿ ರಿಂಕು ಸಿಂಗ್ ಬ್ಯಾಟ್ ಬೀಸಿದ್ದರು. 6ನೇ ಕ್ರಮಾಂಕದಲ್ಲಿ ರೈಟ್ ಹ್ಯಾಂಡ್ ಬ್ಯಾಟರ್ ಜಿತೇಶ್ ಶರ್ಮಾ ಅವಕಾಶ ಪಡೆದಿದ್ದರು. ಹಾಗೆಯೇ 7ನೇ ಕ್ರಮಾಂಕದಲ್ಲಿ ಎಡಗೈ ದಾಂಡಿಗ ರವೀಂದ್ರ ಜಡೇಜಾ ಕಾಣಿಸಿಕೊಂಡಿದ್ದರು.
ವಿಶೇಷ ಎಂದರೆ ಈ ಎಡಗೈ-ಬಲಗೈ ಕಾಂಬಿನೇಷನ್ನಲ್ಲಿ ಬದಲಾವಣೆ ತರಬೇಕಿದ್ದರೂ ಟೀಮ್ ಇಂಡಿಯಾ ಮುಂದೆ ಉತ್ತಮ ಆಯ್ಕೆಗಳಿವೆ. ಏಕೆಂದರೆ ಈ ಪಂದ್ಯದಲ್ಲಿ ಬಲಗೈ ಬ್ಯಾಟರ್ ರುತುರಾಜ್ ಗಾಯಕ್ವಾಡ್ ಹಾಗೂ ಎಡಗೈ ಬ್ಯಾಟರ್ ಇಶಾನ್ ಕಿಶನ್ ಕಣಕ್ಕಿಳಿದಿರಲಿಲ್ಲ. ಹೀಗಾಗಿ ರೈಟ್-ಲೆಫ್ಟ್ ಕಾಂಬಿನೇಷನ್ನಲ್ಲೂ ಬದಲಾವಣೆ ಮಾಡಿಕೊಳ್ಳಲು ಟೀಮ್ ಇಂಡಿಯಾ ಮುಂದೆ ಉತ್ತಮ ಆಯ್ಕೆಗಳಿವೆ.
ಟಿ20 ವಿಶ್ವಕಪ್ ಜೂನ್ 4 ರಿಂದ ಶುರುವಾಗಲಿದೆ. ಆದರೆ ಅದಕ್ಕೂ ಮುನ್ನ ಟೀಮ್ ಇಂಡಿಯಾ ಮುಂದಿರುವುದು ಕೇವಲ 4 ಟಿ20 ಪಂದ್ಯಗಳು ಮಾತ್ರ. ಕೇವಲ ನಾಲ್ಕು ಪಂದ್ಯಗಳಿರುವಾಗ ಭಾರತ ತಂಡವು ರೈಟ್ ಅ್ಯಂಡ್ ಲೆಫ್ಟ್ ಕಾಂಬಿನೇಷನ್ನ ಪ್ರಯೋಗಕ್ಕೆ ಕೈಹಾಕಿರುವುದು ಟಿ20 ವಿಶ್ವಕಪ್ನ ಪೂರ್ವ ತಯಾರಿ ಎಂದು ವಿಶ್ಲೇಷಿಸಲಾಗುತ್ತಿದೆ.
ಹೀಗಾಗಿ ಮುಂದಿನ ಪಂದ್ಯಗಳಲ್ಲೂ ಪ್ಲೇಯಿಂಗ್ ಇಲೆವೆನ್ನಲ್ಲಿ ಕನಿಷ್ಠ ಮೂವರು ಎಡಗೈ ದಾಂಡಿಗರನ್ನು ನಿರೀಕ್ಷಿಸಬಹುದು. ಈ ಮೂಲಕ ಟಿ20 ವಿಶ್ವಕಪ್ಗೂ ಮುನ್ನ ಭಾರತ ತಂಡವು ಬಲಿಷ್ಠ ಬ್ಯಾಟಿಂಗ್ ಲೈನಪ್ ಅನ್ನು ರೂಪಿಸಿಕೊಳ್ಳಲು ಮುಂದಾಗಿದೆ.
ಇದನ್ನೂ ಓದಿ: T20 World Cup 2024: ಟಿ20 ವಿಶ್ವಕಪ್ ಲೋಗೊ ಅನಾವರಣ